ಸಕಲ ಭೂತಗಣಕಧಿನಾಥ ನೀನೆ
ಪಥ ತೋರುವ ಮಹ ಮಹಿಮ ನೀನೆ ಪ
ಗರಳ ಕುಡಿದವ ನೀನೆ
ಸರಸಿಜಾಕ್ಷನ ಪರಮ ಸಖನು ನೀನೆ
ವರ ಭಗೀರಥನುತಿಸೆ ಸುರನದಿಯನು ನಿಜ
ಸಿರಿಮುಡಿಯೊಳ್ಧರಿಸಿದಾತನು ನೀನೆ 1
ಸಿರಿರಾಮ ಮಂತ್ರವನು ಗಿರಿಜೆಗುಸುರಿದವ ನೀನೆ
ವರ ಪಾಶುಪತ ಶರವ ನರನಿಗಿತ್ತವನು ನೀನೇ
ವರ ಮಾರ್ಕಂಡಗೆ ವರವನಿತ್ತವ ನೀನೆ
ಕರಿಚರ್ಮ ಧರಿಸಿರುವ ಪರಮ ವೈರಾಗಿಯೂ ನೀನೆ 2
ಕೋರಿದನು ಕೊಡಲುಳ್ಳ ಕರುಣಪೂರ್ಣನು ನೀನೆ
ಶ್ರೀ ರಜತಗಿರಿಯಲಿ ಮೆರೆಯುವಾತನು ನೀನೆ
ನೀರಜಾಕ್ಷ ಶ್ರೀ ರಂಗೇಶವಿಠಲ ಪರನೆಂದು
ಸಾರುತಲಿ ಪೊಗಳುವ ಪರಮ ಭಾಗವತನು ನೀನೆ 3