ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(1) ನಿಂದಾಸ್ತುತಿಗಳು ಏನುಂಟು ನಿನ್ನೊಳಗೆ ನಾ ಬೇಡಲು ಏನು ಕೊಡುವೆ ಎನಗೆ ಪ ಶ್ರೀನಿವಾಸನೇ ಬಲು ದೀನನೊಳವಲಕ್ಕಿ ಮಾನವ ನೋಡದೆಅ.ಪ ತಿರುಕನಾಗಿ ತಂದೆ ಧರೆಯ ಕಶ್ಯಪನೆಂಬ ತಿರುಕ ಹಾರುವನಿಗೆ ಗುರಿಮಾಡಿದೆ ಸಿರಿಯನು ರಜಕನ ಪರಿವಾರದಿ ಬಿಟ್ಟು ಗರಳ ಹಾಸಿನೊಳೊರಗಿದೆ ಕೃಷ್ಣ 1 ಧನಕನಕಂಗಳು ನಿನಗಿರೆ ಸತ್ರಾಜಿ ತನ ಮಣಿಯನು ನೀಗಣಿಸುವೆಯಾ ಅನುವಾದ ಮನೆಯಿರೆ ಮುನಿಮನವೇತಕೆ ಮನೆವಾರ್ತೆಯುಳ್ಳರೆ ವನವಾಸಬೇಕೆ 2 ಕಾಮಧೇನುವು ಕಲ್ಪನಾಮಕ ತರುವು ಚಿಂ ತಾಮಣಿಗಳನು ಸುತ್ರಾಮಗಿತ್ತು ಗೋಮಯರಸಗಳ ಕಾಮಿಸಿ ಕದ್ದು ನೀ ದಾಮೋದರನಾದೆ ತಾಮರಸಾಕ್ಷ 3 ಖ್ಯಾತಿ ನೋಡದೆ ರಣ ಭೀತಿಯೊಳೋಡಿದೆ ಜಾತಿ ನೋಡದೆ ಜಾಂಬವತಿಗೂಡಿದೆ ನೀತಿಯ ನೋಡದೆ ಕೋತಿಯೊಳಾಡಿದೆ ಮಾತು ನೋಡದೆ ಬರಿ ಮಾಯೆಯ ಪಿಡಿದೆ 4 ಗತಿಹೀನರಿಗೆ ವರ ಗತಿಯ ತೋರಿಪನಾಮ ಸ್ಮøತಿಯೊಂದಿತ್ತರೆ ಸಾಕೆನಗೆ ಅತಿಶಯವಿದು ಎನ್ನ ಮತಿಯೊಳು ನಿನ್ನಯ ರತಿಯನ್ನು ಪಾಲಿಸು ವರದವಿಠಲರಾಮ 5
--------------
ವೆಂಕಟವರದಾರ್ಯರು
ಉತ್ತೀರ್ಣವಾಗಲರಿಯರು | ತಮ್ಮ | ನಿತ್ಯನಿಂದಕ ದುರ್ಜನರಿಗೆ ಸುಜನರು ಪ ಕೂಲಿಯ ಕೊಂಡು ವಸ್ತ್ರಂಗಳ ರಜಕನು | ಇಳಯೊಳು ವಗೆವನು ಕೈಗಳಿಂದಲ್ಲದೇ | ಮಲಿನವಗುಣ ಮೈಲಿಗೆ ಕಾಸು ಕೊಳದೇ | ಚಲಿಸದೆ ನಾಲಿಗೆಯಿಂದ ತೊಳೆವರಾಗಿ 1 ತ್ರಯದ ಬಾಡಿಗಿಕೊಂಡು ಹೆಚ್ಚುಗಂಟವ ಕೊಳ್ಳ | ವೈವನು ಹೆಜ್ಜೆಯ ಪಯಣದ ಮುಂದಕ | ನಯದಿಂದಿವರ ನಿಂದೆ ದೋಷ ಭಾರವ ಹೊತ್ತು | ಭಯವಹಾನಂತ ಜನ್ಮವ ಸೋಸುವರಾಗಿ 2 ಧರೆಯೊಳು ತಮ್ಮನ್ನ ತಾ ಉಂಡು ಬುಧರಿಗೆ | ಪರಮಸುಖವ ಕೊಟ್ಟು ದುಃಖವ ಕೊಂಬರು | ಗುರು ಮಹಿಪತಿಸುತ ಪ್ರಭು ಸ್ಮರಣೆಯನು ಬಿಟ್ಟು | ಇರಳ್ಹಗಲುದ್ಯೋಗ ಇದೇ ಮಾಡುವರಾಗಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ತಿಳಿಯದೈ ಶ್ರೀ ಹರಿಯೆ ನಿನ್ನ ಮಹಿಮೆ ನಳಿನ ಸಂಭವ ಮುಖ್ಯನಿಗಮನಾಗ ಮಂಗಳಿಗೆ ಪ ಒಂದು ಯಜ್ಞಕೆ ಪೋಗಿ ಇರುಳ್ಹಗಲು ಕಾಯ್ದಿ ಮ ತ್ತೊಂದು ಯಜ್ಞಕೆ ಕರ್ತನಾಗಿ ಮಾಡಿ ಒಂದು ಯಜ್ಞಕೇ ಪೋಗಿ ವಿಧ್ವಂಸ ಮಾಡಿ ಮ ತ್ತೊಂದು ಯಜ್ಞವ ಕೆಡಸಿದನ ಮಿತ್ರನಾದೇ1 ಒಬ್ಬರಸನನ ಕುಲವ ಪರಿಪರಿ ಸಂಹರಿಸಿ ಒಬ್ಬರಸನನ ನೆಲಿಗೆ ನಿಲಿಸಿದೈಯ್ಯಾ ಒಬ್ಬರಸನನ ಕರಗಸದಿ ಕೊಯಿದು ಪರೀಕ್ಷಿಸಿದೆ ಒಬ್ಬರಸನನ ಸಭೆಯೊಳಗೆ ಶಿರವ ತರಿದೇ 2 ಒಂದಾನೆ ಏರಿದನು ಪಾಯದಲ್ಲಿ ಮರ್ದಿಸಿದೆ ಒಂದಾನೆ ಏರುವನ ಮಗನ ಕಾಯಿದೇ ಒಂದಾನೆಯನುಕೊಂದು ರಜಕನಸುವನು ತೆಗೆದೆ ಒಂದಾನೆಗೊಲಿದೆ ಮಹಿಪತಿನಂದ ನೋಡಿಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಧುರೆಗೆ ಪೋಗಬ್ಯಾಡಾ ರಂಗಯ್ಯ ರಂಗಾ ಪ. ಮಧುರೆಗೆ ಪೋದಾರೆ ಚದುರಿ ನಾರಿಯರು ಬೆದರುತಲಿರುವೆವು ಹರಿಯೇ ಎನ್ನಯ ದೊರೆಯೇ ಅ.ಪ. ಮಧುರಾಪುರದಿಂದ ಅಕ್ರೂರ ಕರಿಲಿಕ್ಕೆ ಬಂದಾನು ಮಲ್ಲನ ಕೊಂದನು ಕೃಷ್ಣ ರಜಕನ ಕೊಂದನು ರಕ್ತಾಲಂಕೃತನಾಗಿ ಕುಬಜಿಯಿಂದ ಗಂಧವಾ ಕೊಂಡನು ಡೊಂಕನು ತಿದ್ದಿದನು 1 ಚಾಣಿಕರ ಮುಷ್ಟಿಕರ ಕೂಡಾ ಮುಷ್ಟಿ ಯುದ್ಧವ ಮಾಡಿ ಕುಟಿಲರ ಕೊಂದು ರಂಗಮಂಟಪಕೆ ಬಂದು ನಾನಾಭರರಣ ಭೂಷಿತನಾಗಿ ರಾಜ ಬೀದಿಯೊಳು ಸಾಗಿ 2 ಮಧುರಾಪುರದ ನಾರಿಯರು ಬಲು ಚೆಲುವಿಯರು ನಿನ್ನನೆ ಮರುಳು ಮಾಡುವೋರು ಯಮ್ಮನಗಲಿಸುವೋರು ಇವರು 3 ಕನಿಕರವಿಲ್ಲವೆ ನಾವು ನಿನ್ನನು ಬಿಟ್ಟು ವೊಂದು ನಿಮಿಷವಾದರು ಕಾಲಹ್ಯಾಗ ಕಳಿಯೋಣ ಘನ ಮಹಿಮನ ಅಧರಾಮೃತ ಪರವಶವಾದೆವು 4 ಮಲ್ಲಯುದ್ಧವ ಮಾಡಿ ಮಾವ ಕಂಸನ ಕೊಂದು ಉಗ್ರಸೇನರಿಗೆ ಅನುಗ್ರಹವ ಮಾಡಿ ಶೀಘ್ರದಿ ಬರಬೇಕೆಂದು ಬೇಡುವೆ ನಾ ಬಂದು ಕಾಳಿಮರ್ಧನಕೃಷ್ಣ ನಿನಗಿಂದು 5
--------------
ಕಳಸದ ಸುಂದರಮ್ಮ
ಗುಮ್ಮನೆಲ್ಲಿಹ ತೋರಮ್ಮ-ನಮ್ಮಮ್ಮ-|ಸುಮ್ಮನಂಜಿಸಬೇಡಮ್ಮ ಪಪಂಚಾಶತ್ಕೋಟಿ ವಿಸ್ತೀರ್ಣದ ಭೂಮಿಯ |ವಂಚನೆಯಿಲ್ಲದೆ ತಿರುಗಿ ಬಂದೆನೆ ನಾನು ||ಹಂಚಿಸಿಕೊಟ್ಟೆನೆ ಅವರವರಿಗೆ ನಾ |ಅಂತು ನೋಡಿದರೂ ಕಾಣೆನೆ ಗುಮ್ಮನ 1ಈರೇಳು ಲೋಕವನುದರದೊಳಗೆ ಇಟ್ಟು |ತೋರಿದೆ ಬ್ರಹ್ಮಾಂಡ ಬಾಯೊಳಗೆ ||ಘೋರರೂಪದಿ ಬಂದ ಗಾಳಿಯ ಸುರನ ಕೊಂದೆ |ಅಲ್ಲಿ ನೋಡಿದರೂ ಕಾಣೆನೆ ಗುಮ್ಮನ 2ಕಾಳಿಯ ಮಡು ಧುಮುಕಿ ಕಾಳಿಂಗನ ಹೆಡೆ ತುಳಿದು |ಮೇಲೆ ನಾಟ್ಯಂಗಳ ನಾನಾಡುತಲಿದ್ದೆ ||ಓಲೆಯ ಭಾಗ್ಯವನಿತ್ತೆ ನಾಗಪತ್ನಿಯರಿಗೆ |ಅಲ್ಲಿ ನೋಡಿದರೂ ಕಾಣೆನೆ ಗುಮ್ಮನ 3ಅಕ್ರೂರನಿಗೆ ವಿಶ್ವರೂಪವ ತೋರಿದೆ |ಘಕ್ಕನೆ ರಥವೇರಿ ಮಥುರೆಗೆ ಪೋದೆ ||ಸೊಕ್ಕಿದ ರಜಕನ ಕೊಂದು ಮಡಿಯನುಟ್ಟೆ |ಹೊಕ್ಕು ನೋಡಿದರೂ ಕಾಣೆನೆ ಗುಮ್ಮನ 4ಬಿಲ್ಲು ಹಬ್ಬಕೆ ಹೋಗಿ ಮಲ್ಲರ ಮಡುಹಿದೆ |ಅಲ್ಲಿ ಮಾವನ ಕೊಂದು ಮುತ್ತಯ್ಯಗೊಲಿದೆ ||ಚೆಲ್ವಗೋಪಾಲ ಶ್ರೀ ಪುರಂದರವಿಠಲನ |ಸೊಲ್ಲು-ಸೊಲ್ಲಿಗೆ ನೀ ಬೆದರಿಸಬೇಡಮ್ಮ 5
--------------
ಪುರಂದರದಾಸರು