ತುಂಗಾತೀರದಿ ನೆಲಸಿಹಗೆ |
ಮಂಗಳ ಗುರು ರಾಘವೇಂದ್ರನಿಗೆ |
ಗಂಗಾಜನಕನ ಭಕುತ ಶ್ರೇಷ್ಠ ಯತಿ |
ಪುಂಗವನೆನಿಸುತೆ ಮೆರೆವವಗೆ ||ಮಂಗಳಂ ಜಯ ಮಂಗಳಂ|| ಪ
ದಾವಣಗೆರೆಯೊಳು ನಿಂದವಗೆ|
ಕೋವಿದ ಭೂಸುರ ಸೇವ್ಯನಿಗೆ|
ಧಾವಿಸಿ ಬರುತಿಹ ದೀನಜನಾಳಿಗೆ|
ದೇವ ತರುವಿನಂತೀವನಿಗೆ ||ಮಂಗಳಂ ಜಯ ಮಂಗಳಂ|| 1
ಶುದ್ಧ ಟೀಕೆಗಳ ರಚಿಸಿದಗೆ|
ಪರಿ |
ಮೂರ್ತಿ ರಾಘವೇಂದ್ರನಿಗೆ ||ಮಂಗಳಂ ಜಯ ಮಂಗಳಂ|| 2
ಭಾಸುರ ರಘುವೀರಾರ್ಚಿಪಗೆ|
ಶ್ರೀಶಕೇಶವ ಪಾದಾರಾಧಕಗೆ ಸುರ|
ರೀಶನೆನಿಪ ರಂಗನಾಥನಿಗೆ | ಮಂಗಳಂ ಜಯ ಮಂಗಳಂ||3