ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನಿದ್ದರೇನು ಈ ಮಾನವನಿಗೆ ಜಗದಲ್ಲಿ ದಾನವಾಂತಕನ ಗುಣಜ್ಞಾನವನು ಪೊಂದದಲೆ ಪ ಕಾನನದಿ ಬೆಳಗುತಿಹ ಬೆಳದಿಂಗಳಂದದಲಿ ಜ್ಞಾನ ಹೀನನಿಗೆ ಈ ಮಾನವನ ಜನುಮ ಅ.ಪ ದಾನ ಮಾಡಿದರೇನು ಧರ್ಮ ಮಾಡಿದರೇನು ಸ್ನಾನ ಮಾಡಿದರೇನು ನದಿನದದಲಿ ಜ್ಞಾನವಿಲ್ಲದ ಕರ್ಮಗಳ ರಚಿಸಲೇನುಂಟು ವಾನರಗೆ ಕರದೊಳಿಹ ಮಣಿಗಳಿಂದೇನು ಫಲ 1 ಯಾತ್ರೆ ಮಾಡಿದರೇನು ಕಾಶಿ ರಾಮೇಶ್ವರದ ಕ್ಷೇತ್ರಗಳ ವಾಸದಿಂದೇನು ಫಲವು ಚಿತ್ರ ಚರಿತನಲಿ ದೃಢಭಕುತಿಯನು ಪೊಂದದಿರೆ ನೇತ್ರರಹಿತನಿಗುಂಟೆ ಚಿತ್ರಗಳ ಫಲವು 2 ಹೊನ್ನಿನ ಮದದಿಂದ ಹೆಮ್ಮೆಗೋಸುಗ ಬಹಳ ಅನ್ನಛತ್ರಗಳ ರಚಿಸಿದರೇನು ಫಲವು ತನ್ನವರ ದೃಢಭಕುತಿಯನ್ನರಿವ ಸತತ ಪ್ರ ಸನ್ನ ಹರಿದಾಸರಿಗೆ ಇನ್ನೇನು ಬೇಕು 3
--------------
ವಿದ್ಯಾಪ್ರಸನ್ನತೀರ್ಥರು