ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಂತ ಭಾವದ ಬಗೆಯನೆಂತು ಬಣ್ಣಿಪೆನುಚಿಂತಾಯಕನೆ ನೀನು ಚಿತ್ಸ್ವರೂಪದಲಿ ಪಸಕಲ ಲೋಕವ ಸೃಜಿಸಿ ಸಕಲದೊಳು ನೀ ನೆಲಸಿಸಕಲವನು ನಿನ್ನೊಳಗೆ ಸಲೆ ಸೇರಿಸಿಪ್ರಕಟಿಸಿದ ಜಗವೆಲ್ಲ ಪರಿಪರಿಯ ಕಲ್ಪದಲಿಪ್ರಕೃತಿಯಲಿ ಲಯವಾಗೆ ಪರಮ ಸದ್ರೂಪದಲಿ 1ಚಿತ್ರಕರ್ಮಗಳಿಂದ ಚರಿಸಿ ನಾನಾತ್ವದಲಿಚಿತ್ರದಂದದಿ ತೋರಿ ಚೈತನ್ಯವಾಗಿಕರ್ತೃಭೋಕ್ತøತ್ವದಲಿ ಕರಣಾದಿ ರೂಪದಲಿಚಿತ್ರರಚನೆಗೆ ಸಾಕ್ಷಿ ಚಿತ್ಸ್ವರೂಪದಲಿ 2ಹರಿ ಹರ ಬ್ರಹ್ಮ ಯಮ ಹರಿ ವರುಣ ಧನದಾದಿಸುರಮುನಿಗಳೊಳಗಿರುವ ಸುಖವೆಲ್ಲ ನಿನ್ನನಿರತಿಶಯ ಸುಖದಲ್ಲಿ ಲೇಶನೀನಿತ್ತವರವರದರವರೆಂದೆನಿಸಿ ಮೆರೆದು ಸುಖರೂಪದಲಿ 3ಈ ವಿಧದ ದೇವತೆಗಳಿರವ ನೋಡಿದರವರುದೇವ ನೀನೊಲಿದು ದಯಮಾಡಿದವರುಭಾವಿಸುತ ನಿನ್ನಂಘ್ರಿಕಮಲವನು ಭಕ್ತಿಯಲಿಭಾವ ನಿನ್ನೊಳು ನಿಲಲು ಭುವನೇಶ ನಿತ್ಯದಲಿ 4ಪರಿಪೂರ್ಣ ಪರಮೇಶ ಪರಮ ಮಂಗಳರೂಪಪರನೆನಿಸಿ ದೇಶಕಾಲಾದಿಗಳಿಗೆಗುರುಮೂರ್ತಿ ಶ್ರೀ ವಾಸುದೇವಾರ್ಯರೆಂದೆನೆಸಿತಿರುಪತಿಯ ವೆಂಕಟನೆ ಹೃದಯಕಮಲದಲಿ 5ಓಂ ಸರ್ವತೀರ್ಥಾತ್ಮಕಾಯ ನಮಃ
--------------
ತಿಮ್ಮಪ್ಪದಾಸರು
ಸರಳಕವಿ ರಾಮಾರ್ಯ ಹರುಷದಿ ವಿರಚಿಸಿದ ವರವೆಂಕಟೇಶನ ಪರಮಲೀಲೆಯ ಚರಿತೆಯುನ್ನತ ಕೀರ್ತಿಯಾಂತಿಹುದು ನರರ ಭಕ್ತಿಯ ಪೆರ್ಚಿಸಲ್ಕಿದು ಕರದ ದಿವ್ಯಜ್ಯೋತಿಯಪ್ಪುದು ಬರೆದಕವಿಯಾಸೂರಿವಂಶದ ಶರಧಿಚಂದಿರನು 1 ಭರತಭಕ್ತಿ ಯೆನಿಪ್ಪ ಚರಿತೆಯ ಬರೆದು ತಾನೇ ಭರತನಾಗಿಹ ಪರಿಯ ತೋರುವ ಭಕ್ತಿಬೋಧಕ ಭಾವಭಂಗಿಯಲಿ ಸರಸ ಸರಳತೆ ಲಲಿತಪದಗಳ ಶರಧಿಯಪ್ಪುದು ಕಾವ್ಯಮಿದನಾ ದರದಿ ಮುದ್ರಣಗೊಳಿಸಿ ಹಂಚಿದ ಕವಿಯು ಧನ್ಯನಲೇ 2 ಕವಿ ವಿಶಿಷ್ಠಾದ್ವೈತತತ್ವೋ ದ್ಭವನು ಹರಿಹರ ಭೇದರಹಿತನು ನವರಸಾಲಂಕೃತಯುತ ಗೋಕರ್ಣ ಮಹಿಮೆಯನು ಶಿವನ ಸನ್ನುತಿಗೈದು ರಚಿಸುತೆ ಭುವಿಯ ರಕ್ಷಣೆಗೈವ ಶಿವಕೇ ಶವರ ನಾಮವನೇಕ ವೊಬ್ಬನೆ ದೈವತಾನೆಂಬ 3 ಭಕ್ತಿಕಾವ್ಯಂಗಳನು ರಚಿಸಿಹ ಭಕ್ತನೀತನ ವಹ್ನಿಪುರಕಾ ಸಕ್ತಿಯಾಂತೈತರ್ಪುದೆಂದೆವು ವೇಂಕಟೇಶ್ವರನ ಭಕ್ತಿಬೋಧಕ ಕೃತಿಗೆ ಮಂಗಳ ದುಕ್ತಿಯುತ್ಸವಕಾಗಿ ನಾವತಿ ಭಕ್ತಿ ಸುಸ್ವಾಗತವನೀವೆವು ಕೈಗಳಂ ಮುಗಿದು 4 ಕೃತಿಯ ರಚನೆಗೆ ಮೋಹಗೊಂಡೆವು ಕೃತಿಯನೋದಿಸಿ ಕೇಳಿ ನಲಿದೆವು ಕೃತಿಯ ಬರೆದಾ ಕವಿಯ ಭಕ್ತಿಗೆ ಮನವ ತೆತ್ತಿಹೆವು ಕೃತಿಯ ಕರ್ತಗೆ ಮಣಿದು ಮಹದುಪ ಕೃತಿಯ ಗೈದಿಹಿರೆಂಬುದಲ್ಲದೆ ಕೃತಿಯ ಬರೆದವಗಾವಭಾಗ್ಯವನಿತ್ತು ತಣಿಸುವೆವು5 ಪರಮಭಕ್ತನಿಗಿಂದು ವಂದಿಸಿ ನೆರೆದ ಪಂಡಿತ ಪೌರಸಭಿಕರ ನೇಮಗಳಪೊತ್ತು ಹರಿಯ ಪಾದಂಗಳಿಗೆ ವಂದಿಸಿ ವರಕವಿಗೆ 'ಕವಿರತ್ನ’ ನೆನ್ನುವ ಬಿರುದನೀವೆವು ಸರಳಕವಿವರನಿದನು ಕೈಗೊಳಲಿ 6 ಗಮಕಕೋಕಿಲನೆನಿಪ ಕೌಶಿಕ ನಮಲಕೃತಿವಾಚನವಗೈಯಲು ಅಮಿತಸಂತಸದಿಂದ ವಿವರಿಸುತಂತರಾರ್ಥಗಳ ಕ್ರಮದಿ ಪೇಳಲು ಸೂರ್ಯನಾರಣ ನಮಿತ ಹರ್ಷಾಂಬುಧಿಯೊಳಿಳಿಯುತೆ ರಮೆಯ ರಮಣನ ಪಾದಕೆರಗಿದ ಸರಳಕವಿರತ್ನ7 ಆ ಮಹಾಮುನಿ ಸೂತನಂದದಿ ರಾಮಚರಿತಾಮೃತವ ರಚಿಸುತೆ ಆ ಮಹೇಶ್ವರನಾತ್ಮಲಿಂಗವು ಭೂಮಿಗಿಳಿದಾಕಥೆಯ ಕಾವ್ಯವ ನೀ ಮಹಾಮತಿ ರಚಿಸಿ ಮುಕ್ತಿಯ ಮಾರ್ಗವಿಡಿದಿಹನು8 ಸರಳಕವಿರತ್ನನಾಸೂರಿ ರಾಮಾರ್ಯತಾಂ ವಿರಚಿಸಲಿ ಸದ್ಭಕ್ತಿ ಕಾವ್ಯಗಳನೋರಂತೆ ಸಿರಿಕಾಂತನೀತಂಗೆ ದೀರ್ಘಾಯುರಾರೋಗ್ಯಗಳ ಕುಡಲಿ ಕಡುಕೈಪೆಯೊಳು ನೆರೆ ಗಮಕ ಕಲೆಯ ಸತ್ಕೀರ್ತಿ ವಿಸ್ತರಗೊಳಲಿ ಸಿರಿಗನ್ನಡಂ ಚಿರಂ ಬಾಳ್ಗೆ ಸುಕ್ಷೇಮದಿಂ ವರವಹ್ನಿಪುರದರಸನೆಲ್ಲರಂ ರಕ್ಷಿಸಲಿ ಭದ್ರಂ ಶುಭಂ ಮಂಗಳಂ9
--------------
ಪರಿಶಿಷ್ಟಂ