ಸೂರ್ಯ ಯತಿವರ್ಯ | ಮ
ಧ್ವಾರ್ಯರ ಸುಮತ ಸರೋಜಕೆ ಸುಶೀಲೇಂದ್ರ ಪ
ಬುಧಜನ ವಂದಿತ ಸುಧಿ ಸುವೃತೀಂದ್ರರ
ಸದಮಲ ಘನ ಸದ್ ಹೃದಯಾ ಕಾಶಕೆ 1
ಧರಣಿ ಸುರಾಗ್ರಣಿ ಗುರು ಸುವೃತೀಂದ್ರರ
ಸುರಚಿರ ಸರಸಿಜಕರ ಪೂರ್ವಾದ್ರಿಗೆ 2
ಭೂಸುರ ಸೇವಿತ ಪೂಶರ ನಿರ್ಜಿತ
ಭಾಸುರ ವರ ಸನ್ಯಾಸ ಸುಚ್ಭಾಯಕೆ 3
ಬಗೆ ಬಗೆಯಿಂದಲಿ ನಿಗವೋಕ್ತಿಯಲಿ
ರಘುವರನರ್ಚಿಪ ಸುಗುಣವೆಂಬ್ಹಗಲಿಗೆ 4
ಶಾಮಸುಂದರನ ನಾಮ ಪೊಗಳಿದ
ಪಾಮರ ಮತಿ ಜನಸ್ತೊಮ ಯಾಮಿನಿಗೆ 5