ಒಟ್ಟು 10 ಕಡೆಗಳಲ್ಲಿ , 8 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನಾರಿಗುಸುರುವೆ ಇನ್ನಾರ ಬಳಲಿಸುವೆನಿನ್ನ ಚಿತ್ತಬಂದಂತೆ ನೀನೆ ಕಾಯಯ್ಯ ಪ. ಅನ್ನಾಥರೊಡೆಯ ಎನ್ನ ಮುನ್ನ ಮಾಡಿದ ಪಾಪತÀನ್ನ ಫಲವಾಯಿತೆಂದು ಇನ್ನುಬ್ಬಿ ಕೊಬ್ಬುತಿದೆಎನ್ನುದರದಿ ಅನುದಿನ್ನ ಕೂಡಿಘನ್ನಪಿತ್ತವೆಂಬ ಬಲುಕಿಚ್ಚು ಹೆಚ್ಚುತಿದೆ 1 ದ್ರೌಣ್ಯಸ್ತ್ರದಿಂದ ಬೆಂದ ನಿನ್ನ ತಂಗಿಯ ಮೊಮ್ಮಗಸನಕಾದಿಗಳರ್ಚಿಸುವ ಸೌಮ್ಯಪಾದದಕೊನೆಯನ್ನೆ ಮುಟ್ಟಿಸಿ ಪೆಣನಾಗಿರ್ದ ಹಸುಳೆಯ ಜನರು ಜಯಜಯವೆನೆ ಜೀವಂತನ್ನ ಮಾಡಿದೆ 2 ನಿತ್ಯ ಮೃತನು ನಾನುಭೃತ್ಯನು ಪಾಪವ ಕಿತ್ತು ಎತ್ತಿಕೋ ತಂದೆ 3 ಅಂಜಿದ ಕಪಿಕಟಕ ಸಭೆಯ ಪಂಜರ ಬಸಿವುತಿದೆ ನಿನ್ನಕಂಜಾಕ್ಷದಿಂದ ನೋಡಿದರವರಂಜಿಪೋಗದೆಅಂಜನಾದೇವಿಯ ಸುತನಾಳಿದ ರಘುರಾಯಅಂಜಿಸಬೇಡ ತಂದೆ ನಿನ್ನ ಕಂದನ ರಕ್ಷಿಸಿಕೊ 4 ವನ್ನದ ಹರಿಣನಂತೆ ಸುತ್ತ ಮುನ್ನ ಬರಲು ಕೃಷ್ಣಎನ್ನ ತಾಪವು ಅನುದಿನ್ನ ತಟ್ಟದುಇನ್ನೊಬ್ಬ ಮದ್ದನೀಯೆ ಅದು ಉನ್ನತವಾಗುತಿದೆ ತಂದೆಎನ್ನಾಳು ಹಯವದನ ಇನ್ನಾದರೆ ಸಲಹೊ 5
--------------
ವಾದಿರಾಜ
ತಂದೆ ನೀನಹುದೆಂಬುದೆಂದಿಗು ದಿಟವಯ್ಯ ಇಂದಿರೆಯರಸ ಜೀಯಾ ಕುಂದುಕೊರತೆಗಳನೊಂದು ನೋಡದೆ ಕೃಪೆ ಯಿಂದ ನಿನ್ನಂತೆ ರಕ್ಷಿಪರುಂಟೆ ರಘುರಾಯ ಪ. ತನಗನುವಾಗಿರೆ ತೋಷಬಡುವ ತಾತ ಕೊನರಿಕೊಂಬುವ ಕಷ್ಟಕಾಲದಲಿ ವನರುಹದಳನೇತ್ರ ವಾರ್ಧಿಬಂಧನ ನೀನು ನೆನೆದಬೀಷ್ಟವ ಕೊಟ್ಟು ನಿರ್ಮಲ ಪದವೀವಿ 1 ಅಘಟಿತಾಘಟಕನೆ ಆದಿ ಪರುಷಮಹ- ದಘನಿವಾರಣ ಶಕ್ತ ಗುಣವಾರಿಧೆ ಸ್ವಗತ ಮಾನಸ ಶಬರಿಯ ಸಲಹಿದ ನಮ್ಮ ರಘುಕುಲತಿಲಕ ರಾವಣವೈರಿ ಸುಖಕಾರಿ 2 ಮುಪ್ಪುರ ಹರ ಜಪಿಸುವ ಮೂಲ ಮಂತ್ರೇಶ ಅಪ್ಪ ನೀನಹುದೆಂಬ ನಿರ್ಣಯವ ತಪ್ಪದೆ ಬಿನ್ನಹ ಒಪ್ಪಿಲ್ಲಿ ನೆಲೆಯಾಗು ಸರ್ಪಾದ್ರಿನಿಲಯಾ ತಿಮ್ಮಪ್ಪ ಚಿಂತಿತದಾತ 3
--------------
ತುಪಾಕಿ ವೆಂಕಟರಮಣಾಚಾರ್ಯ
ದಾಸನಾಗೋ ಭವಪಾಶನೀಗೋ - ವಿಶೇಷನಾಗೋ ಪ ಏಸೊ ಕಾಯಂಗಳ ಕಳೆದು ಎಂಬತ್ತ್ನಾಲ್ಕು ಲಕ್ಷ ಜೀವರಾಶಿಯನ್ನು ದಾಟಿ ಬಂದೆ ಈ ಶರೀರ ತಾನಲ್ಲ ತನ್ನದಲ್ಲಆಶೆಯು ತರವಲ್ಲ ಸ್ಥಿರವಲ್ಲ ಮುಂದೆ ಬಾಹೋದಲ್ಲಆಶಾಕ್ಲೇಶ ದೋಷವೆಂಬ ಅಬ್ಧಿಯೊಳು ಮುಳುಗಿ ಯಮನಪಾಶಕ್ಕೊಳಗಾಗದೆ ನಿರ್ದೋಷಿಯಾಗೊ - ಸಂತೋಷಿಯಾಗೊಅ ಕಾಶಿ ವಾರಣಾಸಿ ಕಂಚಿ ಕಾಳಹಸ್ತಿ ರಾಮೇಶ್ವರಏಸು ದೇಶ ತಿರುಗಿದರೆ ಬಾಹೋದೇನೊ - ಅಲ್ಲಿ ಆಹೋದೇನೊದೋಷನಾಶೆ ಕೃಷ್ಣವೇಣಿ ಗಂಗೆ ಗೋದಾವರಿ ಭವನಾಶಿ ತುಂಗಭದ್ರೆ ಯಮುನೆ ವಾಸದಲ್ಲಿ - ಉಪವಾಸದಲ್ಲಿಮೀಸಲಾಗಿ ಮಿಂದು ಜಪತಪ ಹೋಮನೇಮಗಳಏಸು ಬಾರಿ ಮಾಡಿದರೂ ಫಲವೇನೊ - ಇದು ಚೆಲುವೇನೊವಾಸುದೇವನೆಂಬ ಒಳಗಿಹ ಹಂಸನ ಸೇರಿಲೇಸನುಂಡು ಮೋಸಗೊಳದೆ ಮುಕ್ತನಾಗೊ - ನೀ ಶಕ್ತನಾಗೊ1 ಅತ್ತಲೋ ಇತ್ತಲೋ - ಎತ್ತಲೋ ಈ ಸಂಸಾರಬತ್ತಲೆಗೆ ಬತ್ತಲೆ ನಿತ್ಯವಲ್ಲ - ಪರಿಮಿತಿ ಇಲ್ಲಕತ್ತಲೆ ಕಾವಳದೊಳು ಕಾಣಲಾರದೆ ನೀನುಸತ್ಯವೆಂಬ ದಾರಿಯನು ಸೇರಲಿಲ್ಲ - ಲೇಸು ತೋರಲಿಲ್ಲಉತ್ತಮ ಅ ಉ ಮ ಎಂಬ ಓಂಕಾರ ಬೀಜಾಕ್ಷರಚಿತ್ತದಲಿ ಗ್ರಹಿಸು ನೀ ಬಿಡಬೇಡ - ಬಿಟ್ಟು ಕೆಡಬೇಡಹೊತ್ತಾರೆಯಲೊ ಬೈಗಿನಲೊ ಆಗಲೊ ಈಗಲೊ ಕಾಯನಿತ್ಯವೆಂದು ಸ್ಥಿರವೆಂದು ನಂಬಬೇಡ - ನಿನಗೆ ಡಂಬ ಬೇಡ 2 ಆಯಿತೊ ಹೋಯಿತೊ ಏನಾಯಿತೊ ಈ ದೇಹಕ್ಕೆತಾಯಿ ಯಾರೊ ತಂದೆ ಯಾರೊ ಮಡದಿ ಯಾರೊ ಮಕ್ಕಳ್ಯಾರೊಮಾಯದೊಳು ಸಿಲುಕಿ ಬಲು ಕಾಲದಿಂದ ಶ್ರೀರಘುರಾಯನೆಂಬ ವಸ್ತುವಿನ ಸ್ಮರಣೆ ಬಿಟ್ಟು - ಭವದಿ ಮಮತೆ ಇಟ್ಟುನಾಯ ಬಾಯ ಅರಿವೆಯಂತೆ ನಾನಾ ಕೋಟಲೆಯಲಿ ಬಿದ್ದುಬಾಯಿ ಬಾಯಿ ಬಿಡುತಲಿ ಸಾವುದೇನೊ - ನೀ ನೋವುದೇನೊತ್ರಾಯಿ ತ್ರಾಯಿ ತ್ರಾಯಿಯೆಂದು ತ್ರೈಲೋಕ್ಯದೊಡೆಯ ಪುಣ್ಯದಾಯಕನ ಹೊಂದಿ ನೀ ಧನ್ಯನಾಗೊ - ಮುಕ್ತ ಮಾನ್ಯನಾಗೊ 3 ಸಿರಿ ಕಮಲೇಶನನ್ನುಒಂದು ಬಾರಿ ಅರುಹಿಂದ ನೆನೆಯಲಿಲ್ಲ - ಮನ ತಣಿಯಲಿಲ್ಲಬಂದು ಬಂದು ಭ್ರಮೆಗೊಂಡು ಮಾಯಾಮೋಹಕೆ ಸಿಕ್ಕಿನೊಂದು ಬೆಂದು ಒಂದರಿಂದ ಉಳಿಯಲಿಲ್ಲ - ಬಂಧ ಕಳೆಯಲಿಲ್ಲಸಂದೇಹವ ಮಾಡದಿರು ಅರಿವು ಎಂಬ ದೀಪ ಹಿಡಿದುಇಂದು ಕಾಣು ದೇಹದಲಿ ಪಿಂಡಾಂಡ - ಹಾಗೆ ಬ್ರಹ್ಮಾಂಡಇಂದಿರಾ ರಮಣನ ಧ್ಯಾನವನ್ನು ಮಾಡಿ ವಿವೇಕದಿ ಮುಕುಂದನಿಂದ ಮುಕುತಿಯ ಬೇಡು ಕಂಡ್ಯ - ನೀ ನೋಡು ಕಂಡ್ಯ 4 ತುಂಬಿ ಲಂಡ
--------------
ಕನಕದಾಸ
ಪಾಲಿಸೋ ರಘುರಾಯಾ ಪ ಜಾನಕಿ ಮನೋಹರಾ| ಇನಕುಲ ಶೇಖರಾ 1 ಭರತಾಗ್ರಜವರ| ಸುರಸಂಕಟ ಹರ 2 ದಶರಥ ನಂದನ| ಋಷಿಮುಖ ಪಾಲನಾ 3 ಪ್ರಮಥಾಧೀಪ ಧ್ಯೇಯ| ವಿಮಲ ಗುಣಾಲಯಾ 4 ತಂದೆ ಮಹಿಪತಿ| ನಂದನ ಸಾರಥಿ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಾರ ಕೋಟಿ ಸುಂದರ ಪ ಸೋಮಶೇಖರಾದಿ ಸುರ ಸ್ತೋಮನುತ ನಾಮ ಅ.ಪ ಸಾಯಕ ಶ್ರೀದಾಯಕ ನಿರ್ಮಾಯ ರಘುರಾಯ 1 ಅಪ್ರಾಕೃತ ಶರೀರ ಗೋ ವಿಪ್ರಜನ ಪಾಲ ನಿನ್ನ ಸುಪ್ರಭಾವ ಪೊಗಳಲು ಸರ್ಪಾಧಿಪಗಳವೇ 2 ದೇವ ಗುರುರಾಮ ವಿಠಲಾ ವನಜನೇತ್ರ ನೂತ- ನಾವರಣ ಪುರಿವಾಸ ಕಾವುದೆಮ್ಮನು ಸರ್ವೇಶಾ 3
--------------
ಗುರುರಾಮವಿಠಲ
ರಘುರಾಯ ಯನ್ನಮನವ ನಿಲಿಸಲಾಗದೇ ನಿನ್ನ ಚರಣ ಕಮಲಲಿದ್ದು ತನ್ನ ಹರಿ ಬೀಳದಂತೆ ಪ ಹನುಮನೊಡನೇ ಕಾಂತ ಮಾತ ಅನುವರದಲಿ ಆಡುತಿರಲು ವನಧಿ ಘೋಷವನ್ನೆ ಕಂಡು ವನಜ ಕರವನೆತ್ತಿಕೊಂಡು ನಿಲ್ಲಲು ಎನಲು ತ್ಯಜಿಸಿ ತನ್ನದರ್ಪನು ಆಸ್ಥಳದಿ ಧರೆಯದೋರಿ ಸುಮ್ಮನಿಪ್ಪನು ಆಂದಿಗಿಂದಿಗಿನಿತು ವಾಕ್ಯ ಮೆರೆದಪ್ಪನು 1 ಶರಧಿ ಮಥನದಲ್ಲಿ ಮುಣುಗು ತಿರಲು ಗಿಲಿಯನೆತ್ತಿ ನಿಳಹಿ | ಹೊರೆದೆ ಸುರರ ಬಳಿಕಧರಣಿ ಹಿರಣ್ಯಾಕ್ಷ ವಯ್ಯಲಾಗ ವರಹರೂಪದಿಂದ ಮೂಡಿದೇ ಈ ಜಗವ ಕೊರೆದಾಡಿ ಲೆತ್ತಿ ಆಡಿದ ಅಧೃವನ ತಿರಗದಂತೆ ಅಢಳ ನೀಡಿದೆ 2 ನಿನ್ನ ಕಥೆಯ ಶ್ರವಣಮಾಡಿ ನಿನ್ನ ನೋಡಿ ಕೂಡಿ ಪಾಡಿ ನಿನ್ನ ನಿರ್ಮಾಲ್ಯ ಘ್ರಾಣಿಸುತಲಿ ನಿನ್ನದಾಸ ನೆನಿಸಿ ಧನ್ಯಗತಿಯ ಪಡೆವ ತೆರದಲಿ ನಿಲಿಸಬೇಕು ಎನ್ನ ಮನವ ಕರುಣದಿಂದಲಿ ಮಹಿಪತಿಸುತನ್ನ ಸ್ವಾಮಿ ಸಲಹು ಜಗದಲಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ಸತ್ಯಧೀರರು ಚಾರು ಚರಣಗಳಿಗೆರಗುವೆನು ಪ ವರಮತಿಗುಣಗನ ಮಣಿಯೆ ಅ.ಪ. ಯತಿ ಆಶ್ರಮದಿ ಸೀತಾ ಪತಿಯ ಪೂಜಿಸುತಿರೆ ಮತಿಹೀನರಪಹಾಸ್ಯ ಮಾಡಿದರೆ ಪರಿಯಂತ ಹರಿಸೇವೆಯಾ ಅತಿ ಭಕುತಿಯಿಂದಲಿ ಮಾಡಿದ್ಯೋ ಜೀಯಾ ಹಿತದಿಂದ ಕೈಗೊಂಡ ದಶರಥನಂದ ರಘುರಾಯ ಯತಿವರನೆ ನಿನ್ನಯ ಕ್ಷಿತಿಯೊಳಗೆ ಹರಿ ಪ್ರತಿ ದಿಗಂತ ಪರಿಹರಿಸಿದ ವರಕೀರ್ತಿ ಆಶ್ರಯದಿಂದ ಬಂದೆ 1 ವರಮಧ್ವಮತಾಭಿಮಾನಿಯೆ ನಿನ್ನಯ ದರುಶನದಿಂದ ಪಾವನನಾದೆನೋ ದೊರಕಾದೊ ಯಂದಿಗೆಲ್ಲರಿಗೆ ಈ ಗುರುಗಳ ವರಸೇವಾ ಸರ್ವಜ್ಞ ಪೀಠಕೆ ಸರಸ ಶೋಭಿಸುವಾ ಹರಿವಾಯುಗಳಲಿ ನಿಶ್ಚಯದ ಭಕುತಿಯನು ಪಾಲಿಸುವಾ ನಿರುತದಲಿ ಕಾವಾ ಪರಮಭಕ್ತರ ಭಾಗ್ಯನಿಧಿಯಂದರಿದು ಹಂಬಲಿಸುತಲಿ ನಿನ್ನಯ ಚರಣಕೆರಗಿದೆ ತ್ವರದಿ ಕರುಣಿಸಿ ಪೊರೆಯೊ ಶರಣರ ಸಂಜೀವಾ 2 ಆನಂದಜ್ಞಾನದಾಯಕನಾಜ್ಞೆಯಿಂ ಸತ್ಯಜ್ಞಾನಾ- ನಂದಗಿತ್ತಿ ಉತ್ತಮಪದವಾ ಗಾನಲೋಲನ ಜಗತ್ಪಾಲನ ಪ್ರಿಯನೇ ತವ ಸೇವಾ ತನುವನೊಪ್ಪಿಸಿ ಇಡುವೆ ನಿನ್ನಡಿಗಳ ಮೇಲೆ ಶಿರವಾ ಸೇವಕನೋ ಅನುಚಿತೋಚಿತಕರ್ಮ ಕೃಷ್ಣಾರ್ಪಣವೆನುವ ಸುಮನವ ಕೊಡು ನೀ 3
--------------
ಹನುಮೇಶವಿಠಲ
ಹರಿ ಶ್ರೀ ರಘುರಾಯಾ ಸಂಸಾರ ಮಾಯಾ ಭವ ಜೀಯಾ ತೋರೊ ನಿನ್ನಯ ದಿವ್ಯ ಕಾಯಾ ಕೊಡು ನೀ ಸುಮತಿಯಾ ಪ ಗರುಡವಾಹನಾ ಪರಮಪಾವನಾ ಶಿರಿಯ ಸುಖದಿ ಮರೆಯಬ್ಯಾಡೊ ಚರಣದಾಸನಾ 1 ಇಷ್ಟದಾಯಕಾ ಕಷ್ಟತಾರಕಾ ಸೃಷ್ಟಿ ಪತಿಯೆ ಕೊಟ್ಟು ಸಲಹೊ ಮೋಕ್ಷದಾಯಕಾ2 ನಾಶರಹಿತನೇ ವಾಸುದೇವನೇ ಪೋಷಿಸೊ ತವ ದಾಸನಾ ಹನುಮೇಶ ವಿಠಲನೇ3
--------------
ಹನುಮೇಶವಿಠಲ
ಹನುಮ ನಮ್ಮ ತಾಯಿ ತಂದೆಭೀಮ ನಮ್ಮ ಬಂಧು ಬಳಗಆನಂದತೀರ್ಥರೆ ನಮ್ಮ ಗತಿಗೋತ್ರರು ಪ.ತಾಯಿ ತಂದೆ ಹಸುಳೆಗಳಿಗೆ ರಸಾಯನುಣಿಸಿ ಸಾಕುವಂತೆಆಯಾಸವಿಲ್ಲದೆ ಸಂಜೀವನವ ತಂದುಗಾಯಗೊಂಡ ಕಪಿಗಣವಪ್ರಿಯದಿಂದ ಪೊರೆದ ರಘುರಾಯನಂಘ್ರಿಗಳೆ ಸಾಕ್ಷಿ ತ್ರೇತಾಯುಗದಿ 1ಬಂಧು ಬಳಗದಂತೆ ಆಪದ್ಬಾಂಧವನಾಗಿ ಪಾರ್ಥರಿಗೆಬಂದ ಬಂದ ದುರಿತಗಳ ಪರಿಹರಿಸಿಅಂಧಕಜಾತರ ಕೊಂದುಅಂದೆ ಕೃಷ್ಣಾರ್ಪಣವೆಂದಾ ಯದುಕುಲೇಂದ್ರನಂಘ್ರಿಗಳೆ ಸಾಕ್ಷಿ ದ್ವಾಪರಾಂತ್ಯದಿ 2ಗತಿಗೋತ್ರರಂತೆ ಸಾಧುತತಿಗಳಿಗೆ ಸುಜ್ಞಾನವಿತ್ತುಮತಿಗೆಟ್ಟ ಇಪ್ಪತ್ತೊಂದು ಕುಭಾಷ್ಯಂಗಳಗತಿಗೆಡಿಸಿ ವೈಷ್ಣವರಿಗೆ ಸದ್ಗತಿಯ ತೋರಿದ ಪ್ರಸನ್ವೆಂಕಟಪತಿವ್ಯಾಸಾಂಘ್ರಿಗಳೆ ಸಾಕ್ಷಿ ಕಲಿಯುಗದಿ3
--------------
ಪ್ರಸನ್ನವೆಂಕಟದಾಸರು
ಹನುಮ ನಮ್ಮ ತಾಯಿತಂದೆ-ಭೀಮನಮ್ಮ ಬಂಧು ಬಳಗ |ಆನಂದ ತೀರ್ಥರೆಮಗೆ ಗತಿಗೋತ್ರವಯ್ಯ ಪತಾಯಿ ತಂದೆ ಹಸುಳೆಗಾಗಿ ಸಾಯ ಮಾಡಿ ಸಾಕುವಂತೆಆಯಾಸವಿಲ್ಲದೆ ಸಂಜೀವನ ತಂದೆ ||ಗಾಯಗೊಂಡ ಕಪಿಗಳನ್ನು ಸಾಯದಂತೆ ಪೊರೆದೆ ರಘುರಾಯನಂಘ್ರಿಗಳೆ ಸಾಕ್ಷಿ ತ್ರೇತಾಯುಗದಲ್ಲಿ 1ಬಂಧು ಬಳಗದಂತೆ ಆಪ್ಪದ್ಬಂಧುವಾಗಿ ಪಾರ್ಥನಿಗೆಬಂದ ದುರಿತಂಗಳ ಪರಿಹರಿಸಿ ||ಅಂಧಕಜಾತಕ ಕೊಂದು ನಂದನಂದನಿಗರ್ಪಿಸಿದ ಗೋ-ವಿಂದನಂಘ್ರಗಳೆ ಸಾಕ್ಷಿ ದ್ವಾಪರಯುಗದೆ 2ಗತಿಗೋತ್ರರಂತೆ ಸಾಧುಮತಿಗಳಿಂಗೆ ಗತಿಯನಿತ್ತುಮತಿಗೆಟ್ಟ ಇಪ್ಪತ್ತೊಂದು ಮತವ ಖಂಡಿಸಿ |ಮತಗೆಟ್ಟ ವೈಷ್ಣವರಿಗೆ ಗತಿಯ ತೋರಿದೆ ಪರಮಾತ್ಮಗತಿಪುರಂದರವಿಠಲ ಸಾಕ್ಷಿ ಕಲಿಯುಗದಲ್ಲಿ3
--------------
ಪುರಂದರದಾಸರು