ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಂದು ಬೆಳಗಿರೆ ಛಂದದಿ ಕುಂದಣಾದಾರುತಿ | ನಂದಕುಮಾರ ಗೋವಿಂದಗೆ ಪ ಪಂಚಾಶ್ಯನಮಿತಗೆ | ಪಾಂಚಾಲಿ ವರದಗೆ ಪಂಚಬಾಣನಪಿತ ಶೌರಿಗೆ 1 ಕುಂಡಲಿ ಶಯನಗೆ ಪುಂಡರೀಕಾಕ್ಷಗೆ | ತೋಂಡವತ್ಸಲ ಪಾಂಡುರಂಗಗೆ ತಂದು ಬೆಳಗಿರೆ 2 ಯಾಮಿನಿಚರವೈರಿ ಶಾಮಸುಂದರನಿಗೆ | ಕಾಮಿನಿಯರು ರಘುರಾಮಗೆ ತಂದು ಬೆಳಗಿರೆ 3
--------------
ಶಾಮಸುಂದರ ವಿಠಲ
ಮಂಗಳಂ ರಘುರಾಮಗೆ ಜಯಮಂಗಳಂ ಗುಣಧಾಮಗೆ ಮಂಗಳಂ ಮದನಾರಿವಂದ್ಯಗೆ ಮಂಗಳಂ ಮನ್ನಾಥಗೆ ಪ. ರಾಮಗೆ ನತಕಾಮಗೆ ಘನಶ್ಯಾಮಗೆ ಸುಪ್ರೇಮಗೆ ಕಾಮಿತಾರ್ಥಪ್ರದಾತಗೆ ವರರಾಮಣೀಯಕ ರೂಪಗೆ 1 ಶ್ರೀಶಗೆ ಜಗದೀಶಗೆ ಭಯನಾಶಗೆ ಸರ್ವೇಶಗೆ ದಾಸಜನಮನೋಲ್ಲಾಸ ಲಕ್ಷ್ಮೀಶಕೇಶವ ಮೂರ್ತಿಗೆ 2 ಮಾರುತಾತ್ಮಜಪÀರಿಸೇವ್ಯಗೆ ನತಪಾರಿಜಾತ ಸಮಾನಗೆ ವಾರಿಜಾಯತನೇತ್ರ ಶ್ರೀಶೇಷಶೈಲ ನಿವಾಸಗೆ 3
--------------
ನಂಜನಗೂಡು ತಿರುಮಲಾಂಬಾ
ಮಂಗಳಂ ಶ್ರೀರಾಮಚಂದ್ರಗೆ ಜಯ ಮಂಗಳಂ ಸೀತಾಸಮೇತನಿಗೆ ಪ. ಮಚ್ಛಾವತಾರಗೆ ವೇದವ ತಂದಗೆ ಕೂರ್ಮರೂಪದಿ ಜಲದೊಳು ಪೊಕ್ಕವಗೆ ಹಿರಣ್ಯಾಕ್ಷಸುರನ ಗೆಲಿಯೆ ಬಂದು ಮೆಚ್ಚೆ ವರಹರೂಪ ತೋರಿದಗೆ 1 ಛತ್ರಿಯ ಪಿಡಿದು ಭರತ ನಿಂದಿರಲಾಗ ಶತ್ರುಘ್ನ ಚಾಮರವನು ಬೀಸಲು ಮತ್ತೆ ಲಕ್ಷ್ಮಣ ಮಡುದೆಲೆ ಕೊಡುತಿರಲಾಗಿ ವಿಸ್ತಾರ ವೈಭೋಗ ರಘುರಾಮಗೆ 2 ತಮ್ಮ ಲಕ್ಷ್ಮಣ ಸಹ ಒಲ್ಮೆಯಿಂದಲಿ ಬಂದ ನಮ್ಮ ಶ್ರೀರಘುರಾಮಚಂದ್ರನಿಗೆ ಸನ್ಮಾನದಲಿ ರಾಮ ಸಾಗರಶಯನಾಗೆ ಚೆನ್ನ ಚುಂಚನಕಟ್ಟೆಸ್ಥಿರವಾಸಿಗೆ 3 ಎಡದ ಕರದಿ ಬಿಲ್ಲು ಬಲದ ಕರದಿ ಬಾಣ ಕರದ ಕಮಲದೊಳಗಿಪ್ಪವನಿಗೆ ಸಿರಿ ಸೀತೆಯ ಧರಿಸಿದ ಚದುರ ಶ್ರೀ ಕಲ್ಯಾಣ ಚಂದ್ರನಿಗೆ 4 ಹರುಷದಿ ದೇವತೆಗಳಿಗೊರವಿತ್ತಗೆ ದುರುಳ ರಕ್ಕಸರ ಸಂಹರಿಸಿದಗೆ ಪರಮ ಭಕ್ತನಿಗೆ ಸ್ಥಿರರಾಜ್ಯವನೆ ಕೊಟ್ಟ ಹಯವದನಮೂರ್ತಿ ಎಂದೆನಿಸಿದಗೆ 5
--------------
ವಾದಿರಾಜ
ರಘುರಾಮಗೆ ಬೆಳೆಗಿರೆ ಬೇಗ ಆರತಿ ಪ. ಪಶುಪತಿ ಮಿತ್ರಗೆ ಋಷಿಗಳ್ಯಾಗವ ಕಾಯ್ದವಗೆ ಶಶಿಮುಖಿ ಅಹಲ್ಯೆ ಶಾಪವ ಕಳೆದ ಅತುಳ ಮಹಿಮ ಶ್ರೀಹರಿಗೆ 1 ಶಿವನ ಧನುವ ಮುರಿದವನಿಜೆಯಳ ತಂದು ಜವದಿ ಪರಶುರಾಮನಿಗೆ ತವಕದಿ ಗರ್ವವ ಮುರಿದವನೀಶಗೆ ಕಮಲಾಕ್ಷಿಯರೀಗ ಬೇಗಾ 2 ಅನುಜನವಡಗೂಡಿ ವನಿತೆ ಸಹಿತಲೀ ತನುಜನಗೂಡಿದನುಜನ ಮುರಿದ ಘನದ ಶ್ರೀ ಶ್ರೀನಿವಾಸನಿಗೆ 3
--------------
ಸರಸ್ವತಿ ಬಾಯಿ