ಒಟ್ಟು 6 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವ ಸಿರಿಯಲಿ ನೀನು ಎನ್ನ ಮರೆತೆದೇವ ಜಾನಕೀರಮಣ ಪೇಳು ರಘುಪತಿಯೆ ಪ ಸುರರ ಸೆರೆಯನು ಬಿಡಿಸಿ ಬಂದೆನೆಂಬಾ ಸಿರಿಯೆಕರಿ ಮೊರೆಯ ಲಾಲಿಸಿದೆನೆಂಬ ಸಿರಿಯೆಶರಧಿಗೆ ಸೇತುವೆಗಟ್ಟಿದೆನೆನ್ನುವಾ ಸಿರಿಯೆಸ್ಥಿರವಾಗಿ ಹೇಳೆನಗೆ ಹೇಳು ರಘುಪತಿಯೆ 1 ಕಡಲೊಳಗೆ ಮನೆಮಾಡಿ ಮಲಗಿದೆನೆಂಬಾ ಸಿರಿಯೆಮೃಢ ನಿನ್ನ ಸಖನಾದನೆಂಬ ಸಿರಿಯೆಬಿಡದೆ ದ್ರೌಪದಿ ಮಾನ ಕಾಯ್ದೆನೆಂಬಾ ಸಿರಿಯೆದೃಢವಾಗಿ ಹೇಳೆನಗೆ ದೇವಕೀ ಸುತನೆ2 ಭೂಮಿಯನು ಮೂರಡಿಯ ಮಾಡಿದೆನೆಂಬ ಸಿರಿಯೆಕಾಮ ನಿನ್ನ ಸುತನಾದನೆಂಬ ಸಿರಿಯೆಆ ಮಹಾಲಕುಮಿ ನಿನ್ನ ಸತಿಯಾದಳೆಂಬ ಸಿರಿಯೆಪ್ರೇಮದಲಿ ಹೇಳೆನಗೆ ಸ್ವಾಮಿ ಅಚ್ಯುತನೆ 3 ಮನುಜರೆಲ್ಲರು ನಿನ್ನ ಸ್ತುತಿಸುವರೆಂಬ ಸಿರಿಯೆಹನುಮ ನಿನ್ನ ಬಂಟನಾದನೆಂಬ ಸಿರಿಯೆಬಿನುಗು ದೈವಗಳು ನಿನಗೆಣೆಯಿಲ್ಲವೆಂಬ ಸಿರಿಯೆಅನುಮಾನ ಮಾಡದೆ ಪೇಳೊ ನರಹರಿಯೆ 4 ಇಂತು ಸಿರಿಯಲಿ ನೀನು ಎನ್ನ ಮರೆತರೆ ಸ್ವಾಮಿಪಂಥವೇ ನಿನಗಿಚಿದು ಆವ ನಡತೆಕಂತುಪಿತ ಕಾಗಿನೆಲೆಯಾದಿಕೇಶವ ರಂಗಚಿಂತೆಯನು ಬಿಡಿಸಿ ಸಂತೋಷವನು ಪಡಿಸೊ5ಚಿ
--------------
ಕನಕದಾಸ
ಕೇಶವನೆಂದು ಕ್ಲೇಶವ ನೀಗಿರಿ ಕೇಶವನೆಂದು ಭವವನ್ನು ಪ ಮಾಧವನೆಂದು ಪಾಪವ ಕಳೆಯಿರಿ ಶ್ರೀಧರನೆಂದು ಶ್ರಮವನ್ನು 1 ರಘುಪತಿಯೆಂದು ಪಾಶವ ಕಡಿಯಿರಿ ನಗಧರನೆಂದು ಭಯವನ್ನು 2 ಶ್ರೀಪತಿಯೆಂದು ಮತ್ಸರ ತ್ಯಜಿಸಿರಿ ಮಾಪತಿಯೆಂದು ಖಲರನ್ನು 3 ವಾಮನನೆಂದು ಕಾಮವ ತ್ಯಜಿಸಿರಿ ರಾಮಯೆಂದು ಸುಳ್ಳನ್ನು 4 ದಾಶರಥೇಯಂದು ಮುಕ್ತಿಯನು 5
--------------
ಕರ್ಕಿ ಕೇಶವದಾಸ
ತಿಮಿರ ಭರದಿ ಬಿಟ್ಟೋಡಿತು ಪ ಶ್ರುತಿ ಶಾಸ್ತ್ರವೆಂಬ ಕಂಜಗಳತಿ ರಮ್ಯದಿಂದರಳಿದವುಕ್ಷಿತಿಯೋಳು ಕುಮುದದಂತೆ ದುರ್ಮತಗಳೆಲ್ಲ ಕುಗ್ಗಿದವು ||ಇತರ ದೇವಂಗಳಿಂತು ಭಜಿಸಿದೆ ರಘುಪತಿಯೆ ದೈವ ಮಧ್ವ ಮತವೆ ಸಿದ್ಧಾಂತವುಸತತವನು ಹರಿ ಸರ್ವೋತ್ತಮನೆಂದುತುತಿಸುವ ಕಾಂತಿಯು ತುಂಬಿತು ಜಗದೊಳು 1 ಚಕ್ರವಾಕ ಧ್ವನಿಗೈದವು ||ಸಾರಿ ಸಾರಿಗೆ ಹೊತ್ತು ಯೇರುವ ತೆರದಲಿಶ್ರೀರಮಣನ ಚರಣಾರವಿಂದವು ನಿತ್ಯಆರಾಧಿಸುವ ವಿಚಾರವಿದೆನುತಲಿತಾರತಮ್ಯ ಜ್ಞಾನ ತೋರಿದರಿಳಿಯೊಳು 2 ಅಂದವಾದಲಾದಿನ್ನೆ ಹನುಮಂತನೊಡೆಯ(ಮುಂದಿನ ಪಾದಗಳು ಸಿಕ್ಕಿಲ್ಲ)
--------------
ಮೋಹನದಾಸರು
ರಘುಪತಿಯೆ ನಿನ್ನನ್ನೆ ಪೊಗಳುವ ಪದಗಳನುಸೊಗಸಾಗಿ ರಚಿಪಂತೆ ಬಗೆಯನ್ನು ನೀಡೋ ಪ ಪರರ ಪೊಗಳಿಕೆ ಬೇಡ ಪರರ ತೆಗಳಿಕೆ ಬೇಡಪರಮಪಾವನ ನಿನ್ನ ಮಹಿಮೆಯನು ಬಣ್ಣಿಸುವಸರಸ ನುಡಿಗಳು ಬಾಯೆ ಬರುವಂತೆ ಮಾಡೊ 1 ಒಂದು ಲಕ್ಷದ ನಾಮದೊಂದು ಮಣಿಮಾಡಿಕುಂದದಿಹ ಭಕ್ತಿಗುಣದಿಂದ ಪೋಣಿಸಿ ಪದ್ಯದಂಥ ಹಾರವ ಮಾಡಿ ನಿನ್ನೆಡೆಗೆ ಅರ್ಪಿಸಲುಮಂದ ಬುದ್ಧಿಯ ನನಗೆ ಶಕ್ತಿಯನೀಡೋ 2 ರಾಗ ನಿನಗೆಯೆ ತಾಳ ನಿನಗೆಯೆ ಗೊತ್ತುರಾಗ ತಾಳಗಳ ಮೇಳ ನನಗೇನು ಗೊತ್ತುರಾಗತಾಳಗಳಲ್ಲಿ ಹಗುರಾಗಿ ಹಾಡಲಿಕೆತೂಗಿ ಶಬ್ದಗಳಿಡಲು ಸನ್ಮತಿಯ ನೀಡೋ 3 ಸುರವರನೆ ಬೇಕಯ್ಯ ನಿನ್ನ ಪ್ರೇರಣೆ ಇದಕೆವರಕವಿಯು ಸು ಕುಮಾರವ್ಯಾಸನಿಗೆ ವರವಿತ್ತುಉರುತರದ ಕನ್ನಡದಿ ಭಾರತವ ಬರೆಯಿಸಿದತೆರದಿ ಗದುಗಿನ ವೀರನಾರಾಯಣನೆ ಸಲಹೊ 4
--------------
ವೀರನಾರಾಯಣ
ವಾಸೂಕಿ ಶಯನ ಅಶೋಕ ಪರಾಕೂ |ವಾಸುದೇವಾನಿರುದ್ಧ ಶ್ರೀ ಕೃಷ್ಣ ಪರಾಕೂ ||ಸಾಸಿರನಾಮದ ಹರಿಯೆ ಪರಾಕೂ |ದೋಷರಹಿತ ರಘುಪತಿಯೆ ಪರಾಕೆಂದು ||ಮೀಸಲಾರುತಿಯಾ ಬೆಳಗೀರೆ ಪವೃಂದಾವನದೊಳಗಿಹನೆ ಪರಾಕೂ |ತಂದಿ ತಾಯ್ಗಳ ಬಿಡಿಸಿಹನೆ ಪರಾಕೂ ||ಸಿಂಧುರವರದ ಗೋಪಾಲ ಪರಾಕೂ ||ಸಿಂಧುಶಯನಪದ್ಮನಾಭಪರಾಕೆಂದು ||ಛಂದದಲಾರುತಿಯಾ ಬೆಳಗೀರೆ1ಸತ್ಯಾಭಾಮಿ ರುಗ್ಮಿಣಿ ರಮಣಾ ಪರಾಕೂ |ಮುತ್ಯಗ ಪಟ್ಟಗಟ್ಟಿದವನೆ ಪರಾಕೂ ||ಭಕ್ತ ಪೋಷಕ ತ್ರಿವಿಕ್ರಮನೆ ಪರಾಕೂ |ಸತ್ಯಸಂಕಲ್ಪಹೃಷಿಕೇಶ ಪರಾಕೆಂದು ||ಮುತ್ತಿನಾರುತಿಯಾ ಬೆಳಗೀರೆ 2ಮಾಧವಖರ ದೂಷಣಾರಿ ಪರಾಕೂ |ಬಾದರಾಯಣಪುರುಷೋತ್ತಮ ಪರಾಕೂ ||ಯಾದವರೊಳು ಪುಟ್ಟಿದನೆ ಪರಾಕೂ |ವೇದ ಉದ್ಧರ ಮತ್ಸ್ಯರೂಪಿ ಪರಾಕೆಂದು ||ಮೋದದಲಾರುತಿಯಾ ಬೆಳಗೀರೆ3ಇಂದ್ರ ಬಲಿಯನುಂಡಾ ಧೀರ ಪರಕೂ |ಕಂದಗೊಲಿದ ನರಸಿಂಹ ಪರಾಕೂ ||ನಂದನಂದನಶೌರಿಪರಾಕೂ |ಮಂದರಪರ್ವತ ಧರನೆ ಪರಾಕೆಂದು ||ಕುಂದಣದಾರುತಿಯಾ ಬೆಳಗೀರೆ 4ಜಟ್ಟೇರ ಹುಡಿಗುಟ್ಟೀದವನೆ ಪರಾಕೂ |ದುಷ್ಟ ಕಂಸನ ತರಿದವನೆ ಪರಾಕೂ ||ಕೆಟ್ಟಾಜಾಮಿಳಗೊಲಿದವನೆ ಪರಾಕೂ |ಅಷ್ಟು ಲೋಕವ ಸಲಹುವನೆ ಪರಾಕೆಂದು ||ತಟ್ಟಿಯೊಳಾರುತಿಯಾ ಬೆಳಗೀರೆ5ಮಾರನಯ್ಯಾ ಪ್ರಾಣೇಶ ವಿಠಲ ಪರಾಕೂ |ನೀರಜಾಂಬಕ ಶ್ರೀನಿವಾಸ ಪರಾಕೂ ||ದ್ವಾರಕಿನಿಲಯಮುರಾರೆ ಪರಾಕೂ |ಕ್ಷೀರಾಬ್ಧಿ ಸುತಿಯ ವಲ್ಲಭನೆ ಪರಾಕೆಂದು ||ನಾರಿಯರಾರುತಿಯಾ ಬೆಳಗೀರೆ 6
--------------
ಪ್ರಾಣೇಶದಾಸರು