ಒಟ್ಟು 12 ಕಡೆಗಳಲ್ಲಿ , 9 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸು ರಘುನಂದನ ರಾಮಾ ನಿರುತವು ನಿನ್ನನೆ ಸ್ಮರಿಸುವ ಭಾಗ್ಯವ ಪ ಪರಮಮಂಗಳನಾಮಾ ದುರಿತಭಂಜನ ನಾಮ ಗಿರಿಜೆಪಾಡುವ ನಾಮಾ | ಜಾನಕೀರಾಮ ಅ.ಪ ರಾಮನೆನೆ ಪಾಪವು ಲಯವಹುದಂತೆ ರಾಮಾಯೆನೆ ಭಯಗಳು ಪರಿಹರವಂತೆ 1 ರಾಮನೆನೆ ಮಾಯೆಯು ಹರವಂತೆ ರಾಮನ ನುತಿಸೆ ಮನ ಪರವಶವಂತೆ2 ಜಯರಾಮ ಜಯರಾಮ ಎನುತಿರುವಂತೆ] ದಯಮಾಡೊ ಮಾಂಗಿರಿರಂಗ ನೀನಂತೆ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪ್ರಾಣರಾಯನೆ ನಿನಗೆಣೆಯುಂಟೆ ಪಾಲಿಪ ಕ ರುಣಾಶಾಲಿಗಳನ್ನು ಪಣೆಗಣ್ಣ ಮೊದಲಾದಮರ ಗಣದೊಳು ಇನ್ನು ನಾ ಕಾಣೆ ಮುನ್ನ ಪ ಗುಣನಿಧಿಯೆ ಎಣಿಯಿಲ್ಲ ನಿನ್ನಯ ಅಣು ಮಹಘನರೂಪ ಕ್ರಿಯಗಳು ಕ್ಷಣಬಿಡದೆ ನೀನಖಿಳಜೀವರ ತ್ರಿ- ಗುಣ ಕಾರ್ಯವ ಗೈವೆ ಮುಖ್ಯ ಅ.ಪ ಕರ್ಮ ಜೀವರೊಳು ನೀನೆಸಗಿ ತೋರ್ಪುದೆ ಧರ್ಮ ನಾನರಿಯೆ ಪ್ರತಿ ಕರ್ಮ ಎನ್ನನುಭವಕೆ ತಂದಿಡುವುದೇ ನಿನ್ನ ಧರ್ಮ ನಾ ಕಾಣೆ ಮರ್ಮ ಜನುಮ ಕೋಟಿಗಳಿಂದಲಿ ಅನುಸರಿಸಿ ಬಂದಿಹ ಎನ್ನ ಕರ್ಮವ ಅನಿಲದೇವ ನಿನ್ನಿಂದ ಅಲ್ಲದೆ ಎನಿತು ಇತರನಿಮಿಷರು ಮಾಳ್ವರು ಜ್ಞಾನದಾಯಕ ನೀನೆ ಎನ್ನಯ ಮನದಲಿಹ ಜಂಜಡವ ಕಳೆದು ಹೀನಕರ್ತನು ತಾನು ಅಲ್ಲದೆ ನೀನೆ ಸರ್ವರ ಕರ್ತನೆಂಬುವ ಜ್ಞಾನಿ ಧ್ಯಾನ ಸ್ಮರಣೆಯನು ಸಾನುರಾಗದಿ ಇತ್ತು ನಿನ್ನ ಮತಾನುಗರಲ್ಲನವರತ ಇಡು ಅನೇಕ ಜನುಮಜನುಮಾಂತರದೊಳು 1 ಶ್ವಾಸನಾಮಕ ನೀನು ಜಗದೀಶ ನೀ ಜೀ- ವೇಶ ಸರ್ವಶಕ್ತಾನು ನೀ ತಾಸಿಗೊಂಭೈನೂರು ಶ್ವಾಸಗಳನ್ನು ಈ ಶರೀರದಿ ಜೀವರಿಂ ದೆಸಗುವೆಯೊ ನೀನು ಉಸುರಲೇನಿನ್ನು ವಾಸುದೇವಗೆ ಪ್ರೀತನಾಗಿ ಅ- ಶೇಷತತ್ತ್ವಕ್ಕೀಶನಾಗಿಹೆ ವಾಸವಾದಿಗಳೆಲ್ಲರೊಳು ಇನ್ನು ಈಸುಭಾಗ್ಯವು ಕಾಣಲಿಲ್ಲ ಏಸುಕಾಲಕು ನೀನೇ ಗತಿಯೆಂದು ಈಶ ಶೇಷ ಖಗೇಶ ಪ್ರಮುಖರು ದಾಸರಾಗಿಹಗರಯ್ಯ ಬಿಡದೆ ದೇಶಕಾಲಗಳಲ್ಲಿ ನಿನ್ನೊಳು ಸೂಸುವಾ ಅತಿಭಕುತಿಯಿಂದಲಿ ಈಶ ತಪದಲಿ ನಿನ್ನ ಮೆಚ್ಚಿಸೆ ಶೇಷಪದವಿಯ ಕೊಟ್ಟು ಶ್ರೀಶ- ನ ಶಯನಸೇವೆ ಸಂಪದವನಿತ್ತೆ 2 ಭಕುತ ಜನರ ಬಂಧೂ ಶ್ರೀಹರಿಗೆ ನೀ ಪ್ರಥ- ಮಾಂಗನಹುದೆಂದೂ ಈ ಸಕಲ ಜಗದಾ ಚೇಷ್ಟಪ್ರದನೆಂತೆಂದೂ ನೀನೆ ಭಗವತ್ಕಾರ್ಯಸಾಧಕನೆಂದೂ ಸಾರುತಿದೆ ಶ್ರುತಿ ಇಂದೂ ಲೋಕಮಾತೆಗೆ ನಮಿಸಿ ದಶಶಿರ ನಂದನನ ಸಂಹರಿಸಿ ಮಹದಾನಂದ ನೀ ವನವ ಭಂಗಿಸಿ ರಘುನಂದನಗೆ ಮುದದಿಂದ ವಂದಿಸಿ ನೊಂದ ದೃ- ಪದನಂದನೇಯಳಾ- ನಂದಪಡಿಸಲು ಕೊಂದೆ ಕೌರವ ವೃಂದವೆಲ್ಲವ ಸವರಿ ನಂದನಂದನಿಗಾನಂದ ಪಡಿಸಿದೆ ಇಂದಿರೇಶ ಶ್ರೀ ವೇಂಕಟೇಶನೆ ಎಂದಿಗೂ ಪರದೈವವೆಂದು ಬಂದು ಬೋಧೆಯನಿತ್ತ ಆ- ನಂದತೀರ್ಥ ನೀ ಸಮರ್ಥಾ3
--------------
ಉರಗಾದ್ರಿವಾಸವಿಠಲದಾಸರು
ರಘುನಂದನ ಬಾರೈ ಹಸೆಗೆ ನಿಗಮಾಗಮಾ ವಳಿಸನ್ನುತ ಪ ಶ್ರೀ ಜಾನಕಿ ಸಹಿತ ಅ.ಪ. ವೈರಿ ಕುಲಭಂಜನ ಪರಮೇಶವರ ಚಾಪಖಂಡನ ಕರುಣಾಕರ ಖರದೂಷಣಾದಿ ಹರನಾಶ್ರಿತ ವರ ಲೋಕಪಾಲ 1 ನವನೀರದಾಭ ನವಸುಂದರ ನವಮೀ ಸಂಜಾತ 2 ಶರಣಾಗತ ಭರಣಾಧೃತ ವರ ರಾಮಚಂದ್ರ 3
--------------
ಬೇಟೆರಾಯ ದೀಕ್ಷಿತರು
ರಘುನಂದನ ರಘುನಂದನ ರಘುನಂದನ ರಘುನಂದನ ಪಸುಖದಾಯಕ ಸಕಲಾಗಮ ನಿರುತಖಗವಾಹನ ಮಣಿಭೂಷಣ ಕರುಣಾಕರ ಚರಿತಕೌಸಲ್ಯ ವರನಂದನ ಘನಕುಂಡಲ ಮಣಿಮಂಡಲನಾರಾಯಣ ದಾಮೋದರ ಮಧುಸೂದನ ಕೃಷ್ಣ 1ಗೋ'ಂದ ಮುಕುಂದಾಚ್ಚುತ ಕೃಷ್ಣಾಂಬುಜನಾಥಲಕ್ಷ್ಮೀಶ ಕೃಪಾಳೋ, ಜಗದೀಶವಂದ್ಯ 'ಷ್ಣುಶ್ರೀ ರಾಘವ ರಾಮಾನುಜ ಪಾ' ಮುಕುಂದಸೀತಾರಮಣ ತ್ರಿನಯನ ಗೋಪಾಲ ಗಿರೀಶ 2ಗೋಪಾಲ ಗೋಪಾಲ ಗೋಪಾಲ ಗೋಪಾಲಭಕ್ತಪ್ರಿಯ ಗೋ'ಂದ ಮುಕುಂದ ಅತಿಭೀಷಣ ಕಟುಭಾಷಣ ಯಮಕಿಂಕರ ಪಠಳಂಕೃತತಾಡನ ಪರಪೀಡನ ಮರಣಾಗಮ ಸಮಯೇ 3ಶಿವ ಶಂಕರ ಶಿವ ಶಂಕರ ಶಿವ ಶಂಕರ ಶಿವ ಶಂಕರಉಮಯಾಸಾಮಮಪೇಕ್ಷಿತ ಯಮಶಾಶ್ವತ ಶೂಲಿಂಪರಮೇಶ್ವರ ಹರಗೌರಿರಮಣ * 4
--------------
ವೆಂಕಟದಾಸರು
ರಾಮ ಶ್ರೀ ರಘುನಂದನ ಶರಣು ಸಾರ್ವ- ಭೌಮ ಭೂಸುರವಂದ್ಯ ಸೋಮಶೇಖರಮಿತ್ರ ಕಾಮಿತ ಫಲದಾತ್ರ ಸನ್ನುತ ಸೀತಾ ಪ. ಕ್ರೂರ ದಾನವ ಸಂಹಾರ ಕೌಸಲ್ಯಾಕುಮಾರ ಭೂ- ಭಾರಹರ ಭಜಕÀಜನೋದ್ಧಾರ ವೇದಾಂತಸಾರ ಚಾರುವದನ ಮಣಿಹಾರ ಕುಂಡಲಧರ ವೀರರಾಘವ ವಿಶ್ವಾಧಾರ ಕರುಣಿಸು ಸೀತಾ 1 ಪಾಪರಹಿತ ಪಾವನ ಚರಿತ ಅಹಲ್ಯಾ ಹರಣ ದಿವ್ಯರೂಪ ರಮಾರಮಣ ತಾಪ ವಿಚ್ಛೇದನ ತಾಮಸ ಗುಣಹರಣ ದ- ಯಾಪರ ಬ್ರಹ್ಮಸ್ವರೂಪ ಮೂರುತಿ ಸೀತಾ 2 ಮಾಧವ ಪುಣ್ಯಚರಿತ ಕರುಣಾಪಾಂಗ ಹೆಳವನಕಟ್ಟೆ ರಂಗಯ್ಯ ಸದಾನಂದ ಸುಮತೀಂದ್ರ ಹೃದಯ ಪಂಕಜಭೃಂಗ ಕದನ ವಿಕ್ರಮ ಬಾಹು ಕೋದಂಡಧೃತ ಸೀತಾ 3
--------------
ಹೆಳವನಕಟ್ಟೆ ಗಿರಿಯಮ್ಮ
ಸ್ಮರಿಸಿವುದು ರಘುನಂದನನ ಪ ನಿರುತದಿ ಬೆಳಗಿನೊಳೆದ್ದು ಭಕುತಿಯಲಿ ಅ.ಪ. ಜನಪತಿ ದಶರಥನುದರದಿ ಜನಿಸಿದವನಿತೆ ಅಹಲ್ಯೆಯ ತಾನುದ್ಧರಿಸಿದಘನ ಶಂಕರ ಧನುವ ಭಂಗಿಸಿದಜನಕ ಸುತೆಯ ವರಿಸಿದ ಶ್ರೀರಾಮನ 1 ತಾಯಿ ಕೈಕೇಯಿಯ ಮಾತು ನಡೆಸಿದನೋಯದೆ ವನವನು ಸತಿಸಹ ಸೇರಿದಮಾಯಾಮೃಗದಾಶೆಗೆ ಸತಿಯನಗಲಿದರಾಯ ಲಕ್ಷ್ಮಣನಣ್ಣ ಶ್ರೀರಾಮನ 2 ದಂಡಕದೊಳು ಸತಿಯನು ಶೋಧಿಸಿದಚಂಡ ಹನುಮಗೆ ತಾ ದೊರೆಯಾದಪುಂಡ ಜಲಧಿಯ ದಾಟಿಸಿದಹೆಂಡತಿ ಇರವನು ತಿಳಿದ ಶ್ರೀರಾಮನ 3 ಜಲಧಿಗೆ ಸೇತುವೆ ನಿಂತು ಬಿಗಿಸಿದಖಲ ರಾವಣನ ರಣದೊಳು ಕೆಡಹಿದಒಲಿದು ವಿಭೀಷಣನನು ತಾ ಪೊರೆದನೆಲದೊಳು ಸುಖ ಬೀರಿದ ಶ್ರೀರಾಮನ 4 ಧರುಮವ ನೆಲಸಲು ದುಷ್ಟರ ತರಿದಾ ಧರೆಯೊಳು ಶಿಷ್ಟರ ಪೊರೆಯಲು ಬಯಸಿದಸಿರಿಪತಿ ಗದುಗಿನ ವೀರನಾರಾಯಣನರನಾಗವತರಿಸಿದ ಶ್ರೀ ರಾಮ 5
--------------
ವೀರನಾರಾಯಣ
ಸ್ಮರಿಸು ಗುರು ಸಂತತಿಯನು ಮನವೇ ಪ ಪೊರೆವ ಹರಿ ಚತುರವಿಧ ಪುರುಷಾರ್ಥಗಳನಿತ್ತು ಅ.ಪ. ಪರಮಹಂಸಾಖ್ಯ ಹರಿ ಗುರುತಮನೆನಿಸುತಿಪ್ಪ ಪರಮೇಷ್ಠಿ ತತ್ಸುತರು ಸನಕಾದ್ಯರಾ ಕರಕಮಲ ಸಂಜಾತ ಕೂರ್ಮಾಸ ಜ್ಞಾನನಿಧಿ ಕೈವಲ್ಯ ಯತಿವರರ 1 ಜ್ಞಾನೇಶ ಪರತೀರ್ಥ ಸತ್ಯ ಪ್ರಜ್ಞ ಪ್ರಾಜ್ಞ ಸೂನು ಸುತಪೋರಾಜ ವರಕುಮಾರಾ ಅಚ್ಯುತ ಪ್ರೇಕ್ಷರಂಘ್ರಿಗಳ ಆ ನಮಿಪೆನನವರತ ಭಕ್ತಿ ಪೂರ್ವಕದೀ 2 ಅಚ್ಛಿನ್ನ ಭಕ್ತ ಮರುತವತಾರ ಮಧ್ವಮುನಿ ಪ್ರೋಚ್ಚಾಬ್ಜನಾಭ ನರಹರಿ ಮಾಧವಾ ಸಚ್ಚರಿತ ಅಕ್ಷೋಭ್ಯ ಮುನಿಪ ಪ್ರತಿವಾದಿ ಭೂ ತೋಚ್ಛಾಟನವಗೈದ ಜಯತೀರ್ಥ ಗುರುವರರ 3 ವಿದ್ಯಾಧಿರಾಜ ರಾಜೇಂದ್ರ ಸುತಪೋನಿಧಿ ಜ ಯಧ್ವಜರ ಪುರುಷೋತ್ತಮ ಬ್ರಹ್ಮಣ್ಯರಾ ಮಧ್ವ ಸಿದ್ಧಾಂತ ಸ್ಥಾಪಕ ವ್ಯಾಸರಾಯ ಪ್ರ ಸಿದ್ಧ ಶ್ರೀನಿವಾಸಯತಿಗಳ ಪವಿತ್ರ ಪದ 4 ಲಕ್ಷ್ಮೀ ಕಾಂತರನ ಶ್ರೀಪತಿ ರಾಮಚಂದ್ರರನ ಲಕ್ಷ್ಮೀ ವಲ್ಲಭ ಲಕ್ಷ್ಮೀ ನಾಥಪತಿಯಾ ಲಕ್ಷ್ಮೀ ನಾರಾಯಣರ ಶ್ರೀ ರಘುನಾಥ ಸು ಭಿಕ್ಷುಗಳ ಜಗನ್ನಾಥ ಗುರುಗಳನಾ 5 ಮೂರ್ತಿ ವಿ ಶ್ರೀನಾಥ ಗುರುವರರ ಕರಕಮಲಜಾತ ವಿ ದ್ಯಾನಾಥ ಯತಿಗಳನು ಅನುದಿನದಿ ಮರೆಯದಲೆ 6 ವಿಧ್ಯಾಧಿರಾಜರ ಕವೀಂದ್ರ ವಾಗೀಶರ ಸ್ವ ಸಿದ್ಧಾಂತ ಸ್ಥಾಪಿಸಿದ ರಾಮ ಚಂದ್ರಾ ಅದ್ವೈತ ಕುಮುದ ದಿನಪ ವಿಬುಧೇಂದ್ರಾರ್ಯ ಸದ್ವೈಷ್ಣವಾಗ್ರಣಿ ಜಿತಾಮಿತ್ರ ಮುನಿವರರ 7 ರಘುನಂದನ ಸುರೇಂದ್ರ ವಿಜಯೀಂದ್ರ ಸುಧೀಂದ್ರ ವಾರಿಧಿ ರಾಘವೇಂದ್ರಾರ್ಯರಾ ನಿಗಮಾರ್ಥ ಕೋವಿದ ಸುಯೋಗೀಂದ್ರ ಸೂರೀಂದ್ರ ಜಗತೀತಳದಿ ಪ್ರಸಿದ್ಧ ಸುಮತೀಂದ್ರರ 8 ಸಾಧುಜನಸನ್ನುತ ಉಪೇಂದ್ರರಾಯರ ವೇದ ವೇದಾಂಗ ಚತುರ ವಾದೀಂದ್ರ ಯತಿಯಾ ದ್ಯಾದಾನಾಸಕ್ತ ವರದೇಂದ್ರ ಯತಿವರರ 9 ರಾಮವೇದವ್ಯಾಸರಂಘ್ರಿ ಕಮಲಗಳ ಹೃ ತ್ತಾಮರಸದೊಳು ಪೂಜಿಸಿದ ಬಗೆಯನ್ನು ಧೀಮಂತರಿಗೆ ತಿಳಿಸಲೋಸುಗದಿ ನವರತ್ನ ಹೇಮ ಮಂಟಪ ವಿರಚಿಸಿದ ಭುವನೇಂದ್ರರಾ 10 ಪವಮಾನ ಮತ ಪ್ರವರ್ತಕರೊಳುತ್ತಮರೆನಿಪ ಭವ ಗೆದ್ದಾ ಸುಬೋಧ ಸುಜನೇಂದ್ರರಾ ಅವನಿತ ದೊಳಗೆ ಅಭ್ಯಧಿಕರನ ಮಾಡಿ ಸ ತ್ಕವಿಗಳನೆ ಸಂತೈಸಲೆಂದು ಸ್ಥಾಪಿಸಿದವರಾ 11 ಹರಿಯ ಸಂಸ್ಮರಣೆ ಅಹರ್ನಿಶಿಗಳಲಿ ಮಹ ವಿಪ ತ್ಪರಿಹಾರಗೈಸುವುದು ಗುರುಗಳ ಸ್ಮರಣೇ ಪರಮ ಸೌಖ್ಯವನೀವದಾದಾವ ಕಾಲದಲಿ ಪೊರೆವ ಜಗನ್ನಾಥ ವಿಠ್ಠಲವೊಲಿದು ನಿರುತಾ12 ನವ ವೃಂದಾವನ
--------------
ಜಗನ್ನಾಥದಾಸರು
ರಾಮ ರಾಮ ಸೀತಾರಾಮ ರಘುರಾಮ ಪ.ರಾಮ ರಾಮ ರಘುನಂದನ ತೋಷನಆಮಿಷ ಪಾದಾಂಬುಜ ಪಾವನನಾಮ ವಿಮಲ ಕಮಲಾಯತ ಲೋಚನಭೂಮಿಜಾರಮಣ ಸದಾ ಶುಭಮಹಿಮನೆ 1ದಂಡ ಕುಖರಹರ ವಂದಿತ ಸುಜಟಾಮಂಡಿತಮೌಳಿಮುನೀಂದ್ರ ಕರಾರ್ಚಿತಚಂಡಕುಲೇಶಖಳನಿಶಾಚರದಂಡನವರಕೋದಂಡವಿದಾರಿ2ವಾರಿದಶಾಮ ದಯಾಂಬುಧಿ ಭಕ್ತ ಸಮೀರಜಸೇವ್ಯವಿಭೀಷಣವರದ ಸುಸ್ಮೇರವದನ ಸಾಮ್ರಾಜ್ಯ ಪಾರಾಯಣಭೂರಿಪ್ರಸನ್ವೆಂಕಟ ಕೃಷ್ಣ ನಮೊ3
--------------
ಪ್ರಸನ್ನವೆಂಕಟದಾಸರು
ಶ್ರೀ ವಿಜಯೀಂದ್ರ ತೀರ್ಥರ ಚರಿತೆ110ಪ್ರಥಮ ಕೀರ್ತನೆವಿಜಯೀಂದ್ರ ತೀರ್ಥರ ಪದಯುಗದಿನಿಜಭಕ್ತಿ ಯಿಂ ಶರಣಾದೆ ಸತತಅಬ್ಜಸಂಭವ ಜನಕ ಅಂಬುಜಾಲಯಪತಿರಾಜರಾಜೇಶ್ವರಗೆ ಪ್ರಿಯತಮ ಯತೀಂದ್ರ ಪಹಂಸ ಲಕ್ಷೀಮಶ ನಾಭಿಭವ ಸನಕಾದಿಮಹಂತರ ಸೂರಿಗಳಗುರುಪರಂಪರೆಯಮಹಾ ಪುರುಷೋತ್ತ ಮದಾಸ ಶ್ರೀಮಧ್ವವನದೃಹ ಪಾದಗಳಲ್ಲಿ ನಾ ಶರಾಣು ಶರಣಾದೆ 1ಅರವಿಂದನಾಭ ನರಹರಿ ಮಾಧವತೀರ್ಥಸೂರಿಕುಲ ತಿಲಕ ಅಕ್ಷೋಭ್ಯ ಜಯತೀರ್ಥಪರವಿದ್ಯಾಕುಶಲ ಶ್ರೀ ವಿದ್ಯಾದಿರಾಜರಜಯೀಂದ್ರರ ಚರಣಂಗಳಲಿ ನಾ ಶರಣು 2ಕೋವಿದಶಿರೋಮಣಿ ಕವೀಂದ್ರ ವಾಗೀಶರುಭಾವುಕಾಗ್ರಣಿ ರಾಮಚಂದ್ರ ವಿಭುದೇಂದ್ರದೇವ ಹರಿಪ್ರಿಯ ಜಿತಾಮಿತ್ರ ಯತಿವರರು ರಘುನಂದನದೇವಿ ತುಳಸೀಪತಿಯ ಒಲಿಸಿಕೊಂಡ ಸುರೀಂದ್ರರು 3ಈ ಸರ್ವ ಗುರುಗಳಚರಣಕಮಲಗಳಲ್ಲಿನಾ ಸರ್ವದಾ ಶರಣು ಶರಣೆಂಬೆ ಮುದದಿವ್ಯಾಸಮುನಿ ಪ್ರಿಯಮಿತ್ರ ಶ್ರೀಸುರೇಂದ್ರರಕರಸರಸಿಜದಿಜಾತ ವಿಜಯೀಂದ್ರರಲಿ ಶರಣು ನಾ 4ವಿದ್ಯಾಧಿರಾಜ ಸುತ ರಾಜೀಂದ್ರತೀರ್ಥರಪದ್ಮ ಕರದುದಯ ಜಯಧ್ವಜರಹಸ್ತವೃತತಿಜೋತ್ಪನ್ನ ಪುರುಷೋತ್ತಮ ಮಹಾಮಹಿಮಯತಿಕುವರ ಸೂರಿವತ ಬ್ರಹ್ಮಣ್ಯತೀರ್ಥ 5ಬ್ರಹ್ಮಣ್ಯತೀರ್ಥಾಖ್ಯ ಖಗಕರದಿ ಅರಳಿತುಮಹಿಯಲಿ ಪ್ರಖ್ಯಾತ ವ್ಯಾಸಮುನಿಅಬ್ಜಬಹುಮಂದಿ ಈ ಸುಮನ ಪರಿಮಾಳಾಕರ್ಷಿತರುಬ್ರಹ್ಮವಿದ್ಯಾ ಮಕರಂದದಿ ಮೋದಿಸಿದರು 6ಪೂರ್ವಜನ್ಮದಿ ನಾರದರಿಂದ ಉಪದಿಷ್ಟವ್ಯಾಸರಾಜರು ಶ್ರೀಪಾದರಾಜರಲಿಸರ್ವವಿದ್ಯಾ ಕಲಿತು ವಾದಿಗಜಹರಿ ಆಗಿತತ್ವ ಬೋಧಿಸಿ ಸಜ್ಜನರ ಕಾಯ್ದಿಹರು 7ಋಜುಮಾರ್ಗದಲಿ ಇರುವ ಯತಿವಟು ಗೃಹಸ್ಥರುನಿಜಭಕ್ತಿ ಶ್ರದ್ಧೆಯಿಂದಲಿ ಶ್ರೀವ್ಯಾಸ-ರಾಜರಲಿ ವಿದ್ಯಾಭ್ಯಾಸ ಮಾಡಲು ಆಗಪ್ರಜಾಪೇಕ್ಷೆ ಭಿನೈಸಿದ ವಿಪ್ರಶಿಷ್ಯ 8ಆವಿಪ್ರೋತ್ತಮನಿಗೆ ಪ್ರಜಾ ಅನುಗ್ರಹ ಮಾಡಿಪ್ರವರ ಪುತ್ರನ ತಮ್ಮ ಮಠಕ್ಕೆ ಕೊಡಬೇಕುಅವರಜರು ಸಂತತಿ ಅಭಿವೃದ್ಧಿಗೆ ಇರಲುಈ ವಿಧದಿ ಹೇಳಿದರು ಶ್ರೀ ವ್ಯಾಸಮುನಿಯು 9ಕೊಟ್ಟವರ ತಪ್ಪದೇ ವಿಪ್ರಪತ್ನಿಗೆ ಶಿಶುಹುಟ್ಟುವ ಸಮಯದಲಿ ಗುರುಗಳು ಕೌಶೇಯತಟ್ಟೆಯ ಕಳುಹಿಸಿ ಭೂಸ್ಪರ್ಶ ಇಲ್ಲದÀಲೇಹುಟ್ಟಿದ ಮಗುವನ್ನು ಹಿಡಿಯ ಹೇಳಿದÀರು 10ಶ್ರೀಮಠಕ್ಕೆ ವಿಪ್ರನು ಆ ಬಾಲಕನನ್ನುನೇಮಿಸಿದ ರೀತಿಯಲಿ ಒಪ್ಪಿಸಿ ಅಲ್ಲಿರುಕ್ಮಿಣಿನಾಥ ವಿಠಲನ ಪೆಸರಿಂದವಿಮಲವಟು ವಿದ್ಯಾರ್ಥಿ ಸನ್ಯಾಸಿ ಆದ 11ವಿಟ್ಠಲಾಚಾರ್ಯನು ಶ್ರೀ ವ್ಯಾಸರಾಜರಲಿಶಿಷ್ಠವಿಲ್ಲದೇ ಅಷ್ಟು ಶಾಸ್ತ್ರ ಕಲಿತು ಚತುಃಷಷ್ಟಿ ವಿದ್ಯಾದಲ್ಲಿ ಸಹನಿಪುಣನಾಗಿಅಷ್ಟ ದಿಕ್ಕುಗಳಲ್ಲಿ ಪ್ರಖ್ಯಾತನಾದ 12ಇದರಲ್ಲೇನು ಆಶ್ಚರ್ಯ ಇಲ್ಲ ಸ್ವಾಭಾವಿಕವುದೇವತೆಗಳು ಧರಣಿಯಲ್ಲಿ ಜನಿಸಿದರೂಶಕ್ಯಾತ್ಮನ ಸರ್ವ ಅಣಿಮಾದಿ ಐಶ್ವರ್ಯಇದ್ದು ಸುವ್ಯಕ್ತ ವಾಗುವವು ಗುರುಕೃಪದಿ 13ಈ ವಿಠಲನೇವೇ ವಿಜಯೀಂದ್ರ ನಾಮದಲಿಭುವಿಯಲ್ಲಿ ಬೆಳಗಿದನು ಸುರರಲ್ಲಿ ಶ್ರೇಷ್ಠದೇವತಾ ಕಕ್ಷದವರಾದ ಶ್ರೀವ್ಯಾಸಮುನಿಪ್ರವರ ಸುರಗಣ ವಾದಿರಾಜರ ಸಮೇತ 14ಸರಸಿಜಾಸನಪಿತ &ಟಜquo; ¥ಸÀನ್ನ ಶ್ರೀ ನಿವಾಸನು&ಡಿಜquo;ಬರೆಸಿದ ಶ್ರೀಪ್ರಸನ್ನ ರಾಘವೇಂದ್ರ ವಿಲಾಸತರುವಾಯ ಈ ಪರಮಗುರು ವಿಜಯೀಂದ್ರ ಗುರುಚರಿತೆಹರಿಸಿರಿವಾಯುಗುರುಪ್ರೀತಿಕರ ಶುಭದ15 ಪ-ಇತಿ ಪ್ರಥಮ ಕೀರ್ತನೆ ಸಂಪೂರ್ಣಂ-ದಿತೀಯ ಕೀರ್ತನೆವಿಜಯೀಂದ್ರ ತೀರ್ಥರ ಪದಯುಗದಿನಿಜಭಕ್ತಿಯಿಂದ ಶರಣಾದೆಸತತಅಬ್ಜಸಂಭವ ಜನಕ ಅಂಬುಜಾಲಯಪತಿರಾಜರಾಜೇಶ್ವರಗೆ ಪ್ರಿಯತಮ ಯತೀಂದ್ರ ಪಶ್ರೀಮನೋಹರ ರಂಗನಾಥನ ಸೇವಿಸಲುಶ್ರೀಮಠ ಜರುಗಿತು ರಂಗ ಕ್ಷೇತ್ರಕ್ಕೆಸೋಮಪುಷ್ಕರಿಣಿಯಲಿ ಕಾವೇರಿ ಮಧ್ಯದಲಿಕಾಮಿತಪ್ರದ ಶ್ರೀಶರಂಗ ಇರುತಿಹನು 1ಕಾವೇರಿ ತೀರದಲ್ಲಿ ಶ್ರೀತುಳಸಿವನ ಬೆಳಸೆಆವನಸಮೀಪದಲಿ ವ್ಯಾಸಮುನಿ ಮಠವುದುರ್ವಾದ ಖಂಡನ ಸಿದ್ಧ್ದಾಂತ ಸ್ಥಾಪನದೇವತಾರ್ಚನೆ ಹರಿಕೀರ್ತನೆ ವೈಭವವು 2ಒಂದು ದಿನ ಶ್ರೀ ವ್ಯಾಸರಾಯರು ನೋಡಿದರುತಂದು ಪೂಜೆಗೆ ಇಟ್ಟ ತುಳಸೀದಳಗಳುಇಂದಿರಾಪತಿಗರ್ಪಿತವಾದ ನಿರ್ಮಾಲ್ಯಎಂದು ತಿಳಕೊಂಡರು ವಿಚಾರ ಮಾಡಿದರು 3ತಿಳಿಯ ಬಂತು ಅಂದು ಪ್ರಾತಃಕಾಲದಲಿತುಳಸೀಗೆ ಬಂದುರು ಸುರೇಂದ್ರ ಮಠದವರುತುಳಸಿ ಕೊಡುವುದಿಲ್ಲ ಎನೆ ಪೋದರು ಆ ಬಾಹ್ಮಣರುಪೇಳಿದರುಗುರುಸುರೇಂದ್ರರಿಗೆವೃತ್ತಾಂತ4ಭಾವುಕ ಶಿರೋಮಣಿವಿಜ್ಞಾನಸೂರಿಗಳುತಾವು ಕುಳಿತಲ್ಲೇ ಸುರೇಂದ್ರ ಸ್ವಾಮಿಗಳುಭವಜನಯ್ಯನಿಗೆವನತುಳಸಿ ಪೂರಾವುಭಾವಶುದ್ಧದಿ ಅರ್ಪಿಸಲು ಹರಿಕೊಂಡ 5ಶ್ರೀ ಸುರೇಂದ್ರರ ಈ ಮಹಿಮೆಯ ಶ್ಲಾಘಿಸಿಬೇಗವ್ಯಾಸರಾಯರು ತಾವೇವೆ ಪೋಗಿಕುಶಲ ಸಂಭಾಷಿಸಿ ತಮ್ಮ ಮಠಕ್ಕೆ ಬಂದುಶ್ರೀಶಾರ್ಚನೆ ಚರಿಸಲು ಆಹ್ವಾನ ಮಾಡಿದರು 6ಸೂರಿವರ ರಾಜೇಂದ್ರ ರವೀಂದ್ರರುಎರಡು ಈ ಗುರುಗಳಿಂದಲಿ ಬಂದ ಮಠಗಳುಎರಡು ಸ್ವಾಮಿಗಳು ಶ್ರೀವ್ಯಾಸ ಸುರೇಂದ್ರರಹರಿಪೂಜೆ ವೈಭವವು ವರ್ಣಿಸಲು ಅಶಕ್ಯ 7ಥಳಥಳಿಪ ಬ್ರಹ್ಮವರ್ಚಸ್ಸು ಮುಖಕಾಂತಿಯುಎಲ್ಲ ಶಾಸ್ತ್ರಜ್ಞಾನ ಪ್ರವಚನ ಪಟುತ್ವಶೀಲತ್ವ ಸೌಲಭ್ಯ ಬಾಲ್ಯ ಚಟುವಟಿಕೆಯುಸೆಳೆದವು ಸುರೇಂದ್ರರ ವಿಠಲನ ಬಳಿಗೆ 8ರಮೆಯರಸನ ಪೂಜೆತತ್ವಬೋಧÀವು ಮಾಳ್ಪತಮ್ಮ ಸಂಸ್ಥಾನದ ಉನ್ನತ ಸ್ಥಾನಕ್ಕೆತಮ್ಮ ನಂತರ ವಿಜಯೀಂದ್ರರೇ ಸರಿ ಎಂದುನೇಮಿಸಿದರು ಮನದಿ ಸುರೇಂದ್ರ ಗುರುವು 9ಅಪರೋಕ್ಷದಲು ಈವಿಠಲನ ಯೋಗ್ಯತೆಆ ಪುಣ್ಯ ಶ್ಲೋಕರು ಅರಿತು ತಾವುಅಪೇಕ್ಷಿಸುವಂತ ವಸ್ತು ಬÉೀಕೆಂದರುಶ್ರೀಪನ ಇಚ್ಫೆಯನರಿತು ವ್ಯಾಸರಾಯರಲ್ಲಿ 10ಕೇಳುವ ವಸ್ತು ಬಿಟ್ಟು ಬೇರೆ ಏನೂ ಕೊಡುವೆಕೇಳÉಲಾರೆನು ಬೇರೆ ಕೊಳ್ಳೆನು ಬೇರೆಇಲ್ಲ ವೆಂದರೆ ಊಟ ಮಾಡಿಕೊಡುತ್ತÉೀನೆ ಈಲೀಲಾ ವಿನೋದ ಮಾತುಗಳು ಕ್ರೀಡಾರ್ಥ 11ವಿಮಲ ವಿರಜಾ ಸಮ ಕಾವೇರಿ ಮಧ್ಯದಲಿರಮಾಯುಕ್ ರಂಗನಾಥನು ಹನುಮಸೇವ್ಯರಾಮ ಪೂಜಿಸಿದಂಥ ರಾಮನು ಪಟ್ಟಾಭಿರಾಮ ಶ್ರೀ ಗೋಪಾಲಕೃಷ್ಣನ ಮುಂದೆ 12ಶ್ರೀಶನ ಈ ಬಹುರೂಪ ಸನ್ನಿಧಿಯಲ್ಲಿಭೂಸುರ ವಿದ್ವಾಂಸರ ಸಭೆ ಮಧ್ಯದಲಿವ್ಯಾಸಮುನಿದತ್ತ ವಿಠಲನ ಸುರೇಂದ್ರರುಸುಸ್ವಾಗತದಿಂದ ಸ್ವೀಕಾರ ಮಾಡಿದರು 13ವಿಜಯೀಂದ್ರ ತೀರ್ಥ ಶುಭತಮ ನಾಮವಿತ್ತರುವಿಜಯಶೀಲರಾಗಿ ವಿಜಯೀಂದ್ರರುನಿಜತತ್ವ ಸಿದ್ಧಾಂತ ಸ್ಥಾಪಿಸಿ ದುರ್ಮತದುರ್ಜನ ದುರ್ವಾದ ಚೂರ್ಣ ಮಾಡಿದರು 14ಬ್ರಹ್ಮ ದಶರಥ ರಾಮಚಂದ್ರನು ಅರ್ಚಿಸಿದಭೂಮಾದಿ ಗುಣಗಣಾರ್ಣವ ದಯಾನಿಧಿಯುಕಮಲೆ ಸೀತಾಸೇವ್ಯ ಮೂಲರಾಮನ್ನಸಮ್ಮುದದಿ ಶ್ರೀವಿಜಯೀಂದ್ರರು ಪೂಜಿಸಿದರು 15ಸರಸಿಜಾಸನಪಿತ &ಟಜquo; ಪ್ರಸÀನ್ನ ಶ್ರೀನಿವಾಸ&ಡಿಜquo; ನುಬರೆಸಿದ ಶ್ರೀಪ್ರಸನ್ನ ರಾಘವೇಂದ್ರ ವಿಲಾಸತರುವಾಯ ಈ ಪರಮಗುರು ವಿಜಯೀಂದ್ರ ಗುರುಚರಿತೆಹರಿಸಿರಿವಾಯುಗುರುಪ್ರೀತಿಕರ ಶುಭದ16-ಇತಿದ್ವಿತೀಯಕೀರ್ತನೆ ಸಂಪೂರ್ಣಂ-ವಿಜಯೀಂದ್ರ ತೀರ್ಥರ ಪದಯುಗದಿನಿಜಭಕ್ತಿಯಿಂಶರಣಾದೆ ಸತತಅಬ್ಜಸಂಭವ ಜನಕ ಅಂಬುಜಾಲಯಪತಿರಾಜರಾಜೇಶ್ವರಗೆ ಪ್ರಿಯತಮ ಯತೀಂದ್ರ ಪಧರೆಯೊಳುತ್ತಮ ಕುಂಭಕೋಣಾಖ್ಯ ನಗರದಿಹರಿದ್ವೇಷಿಯ ಗೆದ್ದು ಅವನ ಮಠ ತೋಟಸ್ಪರ್ಧೆ ಫಣವಾದ್ದವ ತಮ್ಮಲ್ಲಿ ಸೇರಿಸಿಕೊಂಡಧೀರ ವಿಜಯೀಂದ್ರರ ಚರಣಕಾನಮಿಪೆ 1ಸಾರಂಗಹಸ್ತವರಾಹಚಕ್ರಪಾಣಿ ರಾಮಮಂಗಳಾಂಬಿಕೆಯುತ ಕುಂಭೇಶ್ವರತುಂಗಮಹಿಮಳು ಕಾವೇರಿ ಸುಧಾಸರಸ್ಸುಈ ಕುಂಭಕೋಣದ ಮಹಿಮೆ ಏನೆಂಬೆ 2ಸಂಕ್ರಂದಸ್ಮರಮೊದಲಾದ ಜಗತ್ತಿಗೆ ಗುರುವಾದಮಂಗಳಾಂಬಿಕೆ ಕುಂಭೇಶ್ವರರ ನೃಹರಿ ಸಾನಿಧ್ಯರಭಂಗವಿಲ್ಲದೆ ಪ್ರತಿದಿನ ಸೇವಿಸುವರುಸುರೇಂದ್ರಮಠ ಗುರುವು ವಿಜಯೀಂದ್ರರು 3ಭಸ್ಮಧರನು ಸರ್ವೊತ್ತ ಮನೆಂದು ವ್ಯರ್ಥದಿದುಸ್ತರ್ಕ ಮಾಡಿದ ಜಗನ್ಮಿಥ್ಯಾವಾದಿಅಪ್ಪಯ್ಯನ ಮತವ ತೃಣದಂತೆ ಮಾಡಿದತತ್ವವಾದ ಅಸಿಯಿಂದ ವಿಜಯೀಂದ್ರ ಜಯಶೀಲ 4ಸ್ವಪಕ್ಷ ಪರಪಕ್ಷ ಸರ್ವವಿದ್ವಾಂಸರುಈ ಪುಣ್ಯಶ್ಲೋಕರ ಮಹಿಮೆ ಕೊಂಡಾಡಿತಪ್ಪದೇ ಆಗಾಗ ಬಂದು ಮರ್ಯಾದೆಅರ್ಪಿಸಿ ಪೋಗುವರು ಕೃತಕೃತ್ಯಮನದಿ 5ಬಾದರಾಯಣಿ ಮಾಧ್ವ ಗ್ರಂಥಗಳನುಸರಿಸಿವೇದ ವಿರುದ್ಧ ಮತ ಖಂಡನ ಗ್ರಂಥಗಳುಚತುರೋತ್ತರ ಶತಮೇಲ್ ತತ್ವ ಬೋಧಕವಾದಗ್ರಂಥಗಳ ರಚಿಸಿದರು ಉತ್ತಮ ರೀತಿಯಲಿ 6ಅಂಬುಶಾಯಿ ಸರ್ವ ಮುಕ್ತಾಮುಕ್ತ ಆಶ್ರಯನುಅಂಭ್ರಣೀಪತಿ ಶ್ರೀಮನ್ನಾರಾಯಣಗಂಭೀರ ಶಬ್ದಾರ್ಥ ನಿರ್ವಚನ ಮಾಡಿಹರುಅಂಬುಜನಾಭ ಒಲಿವ ಪಠಿಸಿದರೆ 7ಮಧ್ವಮತ ಪರಿಮಳ ಸುಗಂಧ ಭುವಿಯಲಿ ಹರಡೇಸುಧಾದಿ ಉದ್ಗ್ರಂಥ ಪ್ರವಚನದಿ ಪಟುವುಸುಧೀಂದ್ರ ಯತಿವರಗೆ ಸಂಸ್ಥಾನ ಕೊಟ್ಟರುಮಧ್ವಮತೋದ್ಧಾರ ವಿಜಯೀಂದ್ರ ಗುರುರಾಟ್ 8ಸದ್ಭಕ್ತಿಯಿಂಶುಚಿ ಅಧಿಕಾರಿ ಇವರ ನರಸಿಂಹಾಷ್ಟಕವಪಠಿಸೆ ಭೂತ ಪ್ರೇತ ಪಿಶಾಚಾದಿಗಳ ಉಚ್ಫಾಟನವುಚೋರ ವ್ಯಾಧಿ ಮಹಜ್ವರ ಭಯಾದಿ ಕಷ್ಟಗಳು ನಿವಾರಣಸಂಧ್ಯಾಕಾಲ ಪಠನದಿ ಸದ್ಭಕ್ತಿಗೆ ಒಲಿದು ಕಾಯ್ವ ಶ್ರೀ ನರಸಿಂಹ 9ಐವತ್ತು ಮೇಲೈದು ವರ್ಷ ಸಂಸ್ಥಾನದಿನಿರ್ವಿಘ್ನ ಪೂಜಾ ಶಿಷ್ಯೋ¥ದೇಶದೇವ ಲಕ್ಷೀಶಗೆ ತಮ್ಮ ಸೇವೆ ಸಮರ್ಪಣೆ ಮಾಡಿಪವಿತ್ರತಮ ಸುಸಮಾಧಿಯನ್ನು ಹೊಂದಿದರು 10ಶಾಲಿವಾಹನಶಕ ಹದಿನೈದು ನೂರು ಹದಿನಾಲ್ಕನೇ ವರ್ಷ ಜೇಷ್ಠಬಹುಳಶೀಲತಮ ಭವದಿತ್ರಯೋದಶಿ ದಿನದಿಮಾಲೋಲ ನಾರಾಯಣಪುರಯೈದಿದರು 11ಮತ್ತೊಂದು ಅಂಶದಲಿ ಕುಳಿತು ವೃಂದಾವನದಿಉತ್ತಮ ಶ್ಲೋಕ ನಾರಾಂiÀiಣನ ಧ್ಯಾನಿಸಿಒಲಿದು ಸೇವಿಸುವರಿಗೆ ಸÀತತ ಔದಾರ್ಯದಲ್ಲಿಇತ್ತು ವರಗಳ ಸದಾ ಸಂರಕ್ಷಿಸುತಿಹರು 12ಮೂಲರಾಮನ ವಿಮಲ ಭಾವದಲಿ ಅರ್ಚಿಸಿಕುಳಿತು ವೃಂದಾವನದಿ ಧ್ಯಾನಿಸುವ ಇವರುಮೂಲ ವೃಂದಾವನ ಮಾತ್ರದಿ ಅಲ್ಲದೇಅಲ್ಲಲ್ಲಿ ಇವರು ಮೃತಿಕೆಯಲ್ಲಿಯೂ ಇಹರು 13ವಿಜಯೀಂದ್ರರಾಯರ ವೃಂದಾವನದಲಿವಿಜಯಸಖ ಸರ್ವ ಜಗಜ್ಜನ್ಮಾದಿಕರ್ತಅಜಭವಾದಿಗಳಿಂದಸೇವ್ಯಶ್ರೀನರಹರಿ ಇಹನುವಿಜಯೀಂದ್ರಗುರುಅಂತರ್ಯಾಮಿವಾಂಛಿತಪ್ರದನು14ಶ್ರೀಶನ ಸಾನಿಧ್ಯ ಪೂರ್ಣ ಇರುವುದರಿಂದಶ್ರೀಶನೊಲಿಮೆ ಪೂರ್ಣಪಾತ್ರ ಇವರಲ್ಲಿಶ್ರೀ ಸುಧೀಂದ್ರಾದಿಗಳು ದೇವವೃಂದದ ಜನರುಭೂಸುರರು ಪ್ರತಿದಿನ ಬಂದು ವಂದಿಪರು 15ವೃಂದಾವನ ದರ್ಶನ ಸೇವೆ ಪಾದೋದಕಕುಂದುಕೊರತೆ ಇರುವ ಧಾರ್ಮಿಕ ಇಷ್ಟದವುಎಂದಿಗೂ ಎನ್ನ ಕುಂದುಗಳ ಎಣಿಸದೆಬಂದು ಪ್ರತಿಕ್ಷಣ ಕಾಯುತಿಹರು ಶರಣು ಶರಣಾದೆ 16ವಿ ಎಂದರೆ ವಿಠಲ ಜ್ಞಾನಮುದವೀವಜ ಎಂದರೆ ಜಯವು ಪುಟ್ಟು ಸಾವಿಲ್ಲಯೀ ಎಂದರೆ ಜ್ಞಾನಕರ್ಮ ಪೂಜಾಫಲವುಇಂದ್ರ ಎಂದರೆ ಐಶ್ಚರ್ಯ ಸುಖವೀವ 17ಸಿಂಧೂರವರದ ಶ್ರೀಕರ ಪುರುಷೋತ್ತಮಬಿಂದುಮಾಧವ ಶ್ರೀಧರ ರಾಮಚಂದ್ರಸೈಂಧವಾಸ್ಯನು ಅಚ್ಯುತಾನಂತ ಗೋವಿಂದಎಂದಿಗೂ ಎಮ್ಮನು ಕಾಯ್ವ ಗುರುಚರಿತೆ ಪಠಿಸೆ 18ಅಂಬರೀಷ ರಕ್ಷಕನು ಅಜಾಮಿಳ ವರದನುಕಂಬದಲಿ ತೋರಿ ಪ್ರಹ್ಲಾದನ್ನ ಕಾಯ್ವವನುಈ ವೃಂದಾವನ ಗುರುಚರಿತೆ ಪಠಿಸುವರಿಗೆಸೌಭಾಗ್ಯವೀವನು ಸುಧಾಮಗೊಲಿದವನು 19ನಾರಾಯಣವಾಸುದೇವ ಸಂಕರುಷಣಪ್ರದ್ಯುಮ್ನ ಅನಿರುದ್ಧ ಲಕ್ಷ್ಮೀ ಸಮೇತವರವಾಯು ಭಾರತೀ ಸುರವೃಂದ ಸಹಿತಇರುತಿಹ ವಿಜಯೀಂದ್ರರಲಿ ಅಭಯವರದ 20ಸೌಂದರ್ಯಸಾರ ಜಗದೇಕವಂದ್ಯನು ಭೈಷ್ಮೀಸತ್ಯಾಸಮೇತವರಅಭಯದ ಅಜಿತಇಂದಿರಾಪತಿ ಕೃಷ್ಣಗರ್ಪಿತ ಈ ಗುರುಚರಿತೆಸುದರ್ಶನ ಕಂಬುಧರ ಅಖಿಲಪ್ರದ ಹರಿಗೆ 21ಸರಸಿಜಾಸನಪಿತ &ಟಜquo; ಪ್ರಸನ್ನ ಶ್ರೀ ನಿವಾಸ &ಡಿಜquo; ನುಬರೆಸಿದ ಶ್ರೀ ಪ್ರಸನ್ನ ರಾಘವೇಂದ್ರ ವಿಲಾಸತರುವಾಯ ಈ ಪರಮಗುರು ವಿಜಯೀಂದ್ರ ಗುರುಚರಿತೆಹರಿಸಿರಿವಾಯುಗುರುಪ್ರೀತಿಕರ ಶುಭದ
--------------
ಪ್ರಸನ್ನ ಶ್ರೀನಿವಾಸದಾಸರು