ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಿಮಿಷ ರೂಪದಿಂದಾಗಮವನು ತಂದ ರಾಮಚಂದ್ರ ಘನಕೂರ್ಮರೂಪದಿಂ ಗಿರಿಯ ಬೆನ್ನೊಳಗಾಂತ ರಾಮಚಂದ್ರ ಕನಕಾಕ್ಷನನು ಕೊಂದ ಧರಿಣಿದೇವಿಯ ರಮಣ ರಾಮಚಂದ್ರ ಹಿರಣ್ಯಕನ ಕರುಳನು ಕೊರಳೊಳು ಧರಿಸಿದ ರಾಮಚಂದ್ರ ತರಳ ಪ್ರಹ್ಲಾದನ ಕರೆದಾದರಿಸಿದ ರಾಮಚಂದ್ರ ವಟುರೂಪದಿಂ ಬಂದು ವಸುಧೆಯ ಬೇಡಿದ ರಾಮಚಂದ್ರ ದಾನಕೊಟ್ಟವಗೆ ಪಾತಾಳ ಪಟ್ಟವ ಕಟ್ಟಿದ ರಾಮಚಂದ್ರ ಕ್ಷತ್ರಿಯರ ಕುಲಬೇರ ಕತ್ತರಿಸಿದ ದೇವ ರಾಮಚಂದ್ರ ಧರಿತ್ರಿಯ ಭಾರವ ಪರಿಹರಿಸಿದ ದೇವ ರಾಮಚಂದ್ರ ವಸುದೇವನಂದನನೆಂದೆನಿಸಿ ಮೆರೆದೆಯೋ ರಾಮಚಂದ್ರ ಮತ್ತೆಕಾಮಿನಿಯರ ಚಿತ್ತವ ಕಲಕಿದ ರಾಮಚಂದ್ರ ಉತ್ತಮಾಶ್ವವನೇರಿ ಕಲ್ಕಿಯೆನಿಸಿದ ರಾಮಚಂದ್ರ ಆದಿಮಧ್ಯಾಂತ ಸ್ವರೂಪ ಸುಂದರರೂಪ ರಾಮಚಂದ್ರ ವೇದವೇದ್ಯನೆ ನಿನ್ನ ಪಾದವೇ ಗತಿಯೆನಗೆ ರಾಮಚಂದ್ರ ರಘುಕುಲತಿಲಕನೆ ರಮ್ಯಚರಿತ್ರನೆ ರಾಮಚಂದ್ರ ಅಘಹರ ಪುರವೈರಿ ಸಂಸ್ತುತಿಪಾತ್ರನೆ ರಾಮಚಂದ್ರ ಮಾನಾಭಿಮಾನ ನಿನ್ನಾಧೀನಮೆಂಬೆನೈ ರಾಮಚಂದ್ರ ಏನೊಂದನರಿಯದ ಅಜ್ಞಾನಿ ನಾನಯ್ಯ ರಾಮಚಂದ್ರ ನೀನಲ್ಲದೆ ಮತ್ತನ್ಯರಾರಿಹರೈ ರಾಮಚಂದ್ರ ದೀನಪಾಲಕ ನಿನ್ನುಳಿದಾರ ನೆರೆಯೆ ರಾಮಚಂದ್ರ ವರಶೇಷಗಿರಿದೊರೆ ಮರೆಹೊಕ್ಕು ಬೇಡುವೆ ರಾಮಚಂದ್ರ ಕರುಣಾಳು ನೀನೆಂಬ ಬಿರುದುಳಿಸೆನ್ನುವೆ ರಾಮಚಂದ್ರ
--------------
ನಂಜನಗೂಡು ತಿರುಮಲಾಂಬಾ
ಜಯಾ ಜಯಾ ಪ ಈ ಮುದ್ದುಮುಖವೊ ಮತ್ತೆ ತನುವಿನ ಕಾಂತಿ ಈ ಬಿಲ್ಲು ಈ ಬಾಣ ನಿಂತಭಾವ 1 ಬಂಟ ಈ ಭಾಗ್ಯ ಆವ ದೇವರಿಗುಂಟು ಮೂಲೋಕದೊಳಗೆ 2 ಜಯ ಇನಕುಲೋದ್ಧರಣ ಜಯ ಮುನಿಕೃತ ಶರಣ ಜಯ ದನುಜವಿದಾರಣ ಜಯ ತಮಹರಣ 3 ಧರೆಯೊಳತಿಭಾರವನು ಇಳುಹಿ ಕಮಲಜ ಮುಖ್ಯ ಸುರರ ಮೊರೆಯನು ಕೇಳ್ದು ನರರೂಪ ತಾಳ್ದು 4 ದಶರಥನ ಗರ್ಭದಲಿ ಜನಿಸಿ ಮುನ್ನ ಮುನಿ ಮನೋರಥ ಕಾಯಿದ ಪುಣ್ಯಚರಿತ್ರ5 ಅಸುರರನು ಅಳಿದು ಅಹಲ್ಯಳಿಗಿತ್ತ ವರವಿತ್ತು ಮಿಥಿಳ ಪುರದಿ ಹರನ ಧನುವನುರೆ ಮುರಿದು 6 ಅತುಳ ಬಲದಲಿ ಸೀತೆಯ ಒಲಿಸಿದ ಭಾರ್ಗವ ಮ- ಹಿತÀಳ ಬಲವಂತ ದೇವೋತ್ತುಂಗ ಜಯತು 7 ಭರದಿಂದಲಯೋಧ್ಯಾಪುರವನು ಶೃಂಗರಿಸೆ ಹರುಷತನದಲಿ ರಾಮಗರಸುತನವೆನಲು 8 ಕಿರಿಯ ಮಾತೆಯು ಬಂದು ಭರತನಿಗೆ ಪಟ್ಟವೆನೆ ಸಿರಿಸಹಿತ ಹೊರಹೊಂಟ ಕರುಣಾಳು ಜಯತು 9 ಅನುಜ ಅವನಿಜೆ ಸಹಿತ ವನವಾಸವ ಮಾಡಿ ವನಜಾಕ್ಷ ಪತಿಯಾಗೆಂದು ರಾಕ್ಷಸಿಯು ಬರಲು 10 ಅನುವಾಯಿತೆಂದು ನಾಸಿಕವ ಹರಿದು ಭಂಗಿಸಿದೆ ಬಿನುಗು ಹೊಮ್ಮøಗವೆಚ್ಚ ಘನಮಹಿಮ ಜಯತು 11 ಜಕ್ಕಿದ ವಾಲಿಯನು ಕೊಂದು ಕುಲಸೈನ್ಯ ಸಹವಾಗಿ ನಿಲ್ಲದೆ ಸೇತುವೆಗಟ್ಟಿ ಅಸುರರೊಡಗೂಡಿ 12 ಖುಲ್ಲ ದಾನವ ಕುಂಭಕರ್ಣ ರಣಮುಟ್ಟಿ ಎಲ್ಲರನು ತರಿದಂಥ ಬಲ್ಲಿದನೆ ಜಯತು 13 ದÉೀವಕ್ಕಳು ಹರುಷದಲ್ಲಿ ಪೂಮಳೆಗರೆಯೆ ಭೂಮಿಜೆಯ ಸಹಿತ ಸೌಮಿತ್ರಿಯೊಡಗೂಡಿ 14 ಕ್ಷೇಮದಿಂದಯೋಧ್ಯಪುರದಿ ಸುಖದಲ್ಲಿರ್ದ ಸ್ವಾಮಿ ಶ್ರೀಹಯವದನ ರಘುಕುಲತಿಲಕನಲ್ಲವೆ 15
--------------
ವಾದಿರಾಜ
ಶ್ರೀ ಧೀರೇಂದ್ರರು ಚಾರು ನಿಮ್ಮಯ ಚರಣತೋರಿಸುದ್ಧರಿಸಬೇಕೊ ಪ. ಆರು ಇವನೆಂದು ನೀವ್ ಗಾರುಮಾಡದಲೆನ್ನ ಸಾನುರಾಗದಿ ಪೊರೆಯಬೇಕೊ ಸ್ವಾಮಿ ಅ.ಪ. ವರದಾ ತೀರದಿ ನಿಂದು ವರ ಕೊಡಿವೀಯೆಂದು ಘನಗರ್ವ ನಿನಗ್ಯಾತಕೊಸುರಪತಿಯ ಬಲದಲ್ಲಿ ಇಹೆನೆಂದು ನೀ ಬಲು ಜರಿದು ನೋಡಲಿ ಬ್ಯಾಡವೊಆರುಗತಿಯಿಲ್ಲವೆಂದೀರ ನಿನ್ನೆಡೆ ಬರಲು ಏರಿ ಕೂಡ್ರುವುದುಚಿತವೇಸಾರಿ ಹೇಳುವೆ ನಿನಗೆ ಚೋರದಾಸನು ನಾನು ಘೋರರೂಪದಿ ಬಂದು ತೋರೋ ಸ್ವಾಮಿ 1 ರಘುಕುಲತಿಲಕನ ಭಕ್ತಿಪಾಶದಿ ಕಟ್ಟಿಚಕ್ರವರ್ತಿಯೆನಿಸಿ ಗೋಕುಲದ ಗೊಲ್ಲನ ಯುಕುತಿಯಲಿ ನೀನೊಲಿಸಿದ್ಯೊಶಕ್ತಿಯಿಂ ಕಲಿಯುಗದಿ ಧೀರೇಂದ್ರ ಪೆಸರಿನಿಂ ದುರಿತಗಳ ಕಳೆಯುವಿಯೊಧಿಃಕರಿಸಿ ವಾದಿಗಳ ದೇಶದೊಳ್ ಚರಿಸಿದ ವಸುಧೀಂದ್ರ ಸಂಜಾತ ಪೊರೆಯೆ ಸ್ವಾಮೀ 2 ಹೆಣ್ಣಿನಾಶೆಗೆ ಬಿದ್ದು ಹೊನ್ನು ಸ್ಥಿರವೆಂದು ನಾ ಮಣ್ಣುಪಾಲಾದೆನೊತನುವು ತನ್ನದು ಎಂಬ ಭಿನ್ನ ಜ್ಞಾನವನೇ ಹೊಡೆದೋಡಿಸೆಮಾನ್ಯವಂತರ ಸಂಗ ಇನ್ನು ಮೇಲಾದರೂ ದಯಪಾಲಿಸೊಘನ್ನ ಮಹಿಮಾ ತಂದೆವರದವಿಠಲನಲ್ಲಿ ಜ್ಞಾನದಿಂ ಭಕ್ತಿ ವ್ಯೆರಾಗ್ಯವನೆ ಈಯೋಸ್ವಾಮಿ 3
--------------
ಸಿರಿಗುರುತಂದೆವರದವಿಠಲರು