ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾಟ್ಯವಾಡಿದನು ರಂಗ ಮಂಗಳಾಂಗ ಪ. ನಾಟ್ಯವಾಡಿ ಶಕಟಾಂತಕ ಕೃಷ್ಣ ನೋಟಕರಿಗೆ ತನ್ನಾಟ ತೋರಿ ಭಂಗ ಜಗದಂಗ ಧಿಕಿಟದಿಂ ತದಾಗಿಣ ತೋಂ ತರನಾನಂದದಿ ಸುಂದರನಾಟ್ಯ ಅ.ಪ. ಅಪ್ರಮೇಯ ಹರಿ ತನುಭವ ಬಲರಾಮರ ಜತೆ ಸೇರಿ ಅನುನಯದಲಿ ಗೋವನು ಕಾಯುತಲಿರೆ ಪೀತಾಂಬರಧರನಾಟವ ನೋಡುವೆನೆಂದು ಸಾಟಿಯಿಲ್ಲದ ವಿಷಮಡುವಿಲಿ ಕಾಳಿಂಗ ನೀಟಿಲಿ ಕುಳ್ಳಿರೆ ಓಟದಿ ಪಶುಗಳು ನೀರಾಟದಿ ಕುಡಿಯಲು ನಾಟಿ ಗಾರಾದ ನೆಲಕುರುಳಲು ರಂಗ ಕೋಟಿಪ್ರಕಾಶ ಕಾಳಿಂಗನಾಟ ತೋರುವೆನೆಂದೂ ಧಿಕಿಟ1 ದುಷ್ಟನ ವಿಷಮಯ ನೀರನು ಕುಡಿದು ಉತ್ಕøಷ್ಟ ಗೋವು ಮೂರ್ಛೆಯ ಪೊಂದೆ ಪುಟ್ಟ ಬಾಲಕರು ಕೃಷ್ಣಗೆ ಪೇಳಲಾ ತಟ್ಟನೆ ಕಡಹದ ಮರವೇರುತ ಧುಮುಕೆ ಪುಟ್ಟ ರಂಗನೆಂದು ಬಿಟ್ಟನೆ ದುಷ್ಟನು ಸುತ್ತಿ ಬಾಲ ಕುಟ್ಟುಪ್ಪಳಿಶಿದನು ಕಷ್ಟವೆ ರಂಗಗೆ ನಿಷ್ಟುರ ಭಕ್ತರು ಶಿಷ್ಟಾಚಾರದಿ ಮೆಟ್ಟಿ ಬಾಲ ಕೈಗಿಟ್ಟು ತವಕದಿ ದಿಟ್ಟ ಶ್ರೀ ಕೃಷ್ಣ ಥಕಥೈ ತದಿಗಿಣಝಂ ಆನಂದ ನಾಟ್ಯ 2 ಅಂಬುಜೋದ್ಭವನ ನಾಟ್ಯವ ನೋಡೆ ಕುಂಭಿಣಿ ತಳದಾಕಾಶದಿ ಸುರರು ತುಂಬುರು ನಾರದ ಸಂಭ್ರಮಗಾನ ರಂಭಾದ್ಯಪ್ಸರ ಸ್ತ್ರೀರಂಭರ ನಾಟ್ಯ ಅಂಬರದಿಂ ಪೂಮಳೆ ರಂಗಗೆರೆಯೆ ಜಗಂಗಳು ನೋಡೆ ಶ್ರಿಂಗರ ಶ್ರೀ ಶ್ರೀನಿವಾಸಗೆ ಗೋಪಿ ರಂಗ ಬಾರೆನುತಲೆ ಮಂಗಳಾರುತಿ ಮೂರ್ತಿ ಕಾಳಿಂಗಭಂಗ ನಾಟ್ಯ 3
--------------
ಸರಸ್ವತಿ ಬಾಯಿ
ಬಾರಯ್ಯ ಬಾರಯ್ಯ ಭಕ್ತವತ್ಸಲ ಹರಿ ಶ್ರೀಕೃಷ್ಣ ಪ ಭಕ್ತರು ಬಂದು ದ್ವಾರದಿ ನಿಂದು ಭಕ್ತಿಲಿ ಹಾಡುತ ಪಾಡುತಲಿರುವರು ಮುಕ್ತಿದಾತ ನೀನಲ್ಲದೆ ಸರ್ವ- ಶಕ್ತರಿನ್ಯಾರಿಹರೈ ಎನ್ನುತ ಪೊಗಳ್ವರು 1 ತಾಳಮೇಳದವರೆಲ್ಲರು ನಿನ್ನಯ ಊಳಿಗ ಮಾಡಬೇಕೆನುತಲಿ ಬಂದು ವೇಳೆ ವೇಳೆಗೆ ತಮ್ಮ ಸೇವೆಯ ಸಲಿಸುತ ಭಾಳ ಸಂಭ್ರಮದಿಂದ ಹಾರೈಪರೊ ಹರಿ 2 ತುಂಬುರು ನಾರದರ್ವೀಣೆಯ ನುಡಿಸಲು ರಂಭಾದ್ಯಪ್ಸರ ಸ್ತ್ರೀಯರು ನರ್ತಿಸೆ ವಿಶ್ವ ಕು- ಟುಂಬಿಯೆ ಬಾ ಬಾರೆನ್ನುತ ಸ್ತುತಿಪರು3 ಅಂಬರದಲಿ ದೇವತೆಗಳೆಲ್ಲರು ನೆರೆದು ತುಂಬಿ ಪುಷ್ಪವೃಷ್ಟಿಗಳನೆ ಮಾಡುತ ಕುಸುಮ ಮಳೆ ಗಂಭೀರದಿ ಸುರಿಸುತ ಪ್ರಾರ್ಥಿಸುವರು 4 ಅತ್ರಿ ವಸಿಷ್ಠ ಗೌತಮ ಮೊದಲಾಗಿ ರಾತ್ರಿಹಗಲು ಎಡೆಬಿಡದಲೆ ಸ್ತುತಿಸುತ ವೃತ್ರಾರಿಯ ಸುತನಿಗೆ ಸಾರಥಿಯೆ ವಿ- ಚಿತ್ರ ವ್ಯಾಪಾರಿ ಶ್ರೀಹರಿ ಎಂದು ಪೊಗಳ್ವರು 5 ಅಣುಮಹದ್ರೂಪನೆ ಘನಮಹಿಮನೆ ನಿನ್ನ ಮಣಿದು ಬೇಡಿ ಕೈಮುಗಿಯುತ ಸ್ತುತಿಪರು ಪ್ರಣವ ಪ್ರತಿಪಾದ್ಯನೆ ನಿನ್ನ ಗುಣಗಳ ಎಣಿಸಲಸಾಧ್ಯವೆನುತ ಕೊಂಡಾಡ್ವರು 6 ನವನವ ರೂಪದಿ ನಲಿಯುವ ದೇವನೆ ನವವಿಧ ಭಕುತರು ನಮಿಸುತ ಕರೆವರು ಭುವನ ಮೋಹನ ಸುಂದರಮೂರ್ತಿಯೆ ಎಂದು ಕವಿಗಳು ಪೊಗಳುತ ಕುಣಿಯುತಲಿರುವರು 7 ಎಡಬಲದಲಿ ಶ್ರೀ ಭೂದೇವಿಯರಿರೆ ಬಿಡದೆ ಛತ್ರಚಾಮರಗಳಿಂದೊಪ್ಪುತ ತಡಮಾಡದೆ ಬಾ ಮಡದಿಯರ ಸಹಿತದಿ ದಡ ದಡ ಬಾರೆಂದು ಬಡ ಬಡ ಕರೆವರು 8 ವಿಶ್ವರೂಪಕ ವಿಶ್ವನಾಮಕ ವಿಶ್ವತೋಮುಖ ವಿಶ್ವನಾಟಕ ವಿಶ್ವವ್ಯಾಪಕ ವಿಶ್ವಾಧಾರಕ ವಿಶ್ವ ಕುಟುಂಬಿಯೆ ವಿಶ್ವಾಸದಿ ಬಾ 9 ವಿರೋಧಿಕೃತು ಸಂವತ್ಸರ ಬರುತಿರೆ ಪರೋಪಕಾರವ ಮಾಡುತ ಸುಜನರು ವಿರೋಧಿಗಳ ದೂರಿಡುತಲಿ ಶ್ರೀ ಹರಿ ಸರೋಜದಳ ನೇತ್ರನÀ ಸ್ತುತಿಸುವರು 10 ಕಮಲಾಕ್ಷಿಯ ಒಡಗೂಡುತ ಬಾ ಬಾ ಕಮಲಾಸನ ಜನಕನೆ ಹರಿ ಬಾ ಬಾ ಕಮಲನಾಭ ವಿಠ್ಠಲ ಬೇಗ ಬಾರೆಂದು ಸುಮನಸ ವಂದ್ಯನ ಸ್ಮರಿಸುತ ಕರೆವರು11
--------------
ನಿಡಗುರುಕಿ ಜೀವೂಬಾಯಿ