ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥಾತ ಎಂಥಾತನೋ ನಮ್ಮಯ ರಂಗ ಎಂಥಾತ ಎಂಥಾತನೋ ಪ ಎಂಥಾತ ಎಂಥಾತ ಚಿಂತಾಯಕ ಭಕ್ತ ರಂತರಾತ್ಮಕ ಲಕ್ಷ್ಮೀಕಾಂತ ತ್ರಿಲೋಕ ಕರ್ತ ಅ.ಪ ದಿವನಿಶಿಯಾಗಿಹ್ಯನೋ ತಾನೆ ತ್ರಿ ಭುವನವ ಬೆಳಗುವನೋ ಸವಿಯದ ಮಹಿಮರಲವಬಿಡದ್ವೇದ ಒಂದೇ ಸಮನೆ ಪೊಗಳುತಿರೆ ಇವನು ಕಾಣದಲಿಹ್ಯ 1 ತಿಥಿ ವಾರ ಪಕ್ಷ ತಾನೇ ತಾನೆ ಮಾಸ ನಿತ್ಯ ತಾನೇ ಶ್ರುತಿತತಿ ಯತಿಗಳು ಸತತ ಪೊಗಳುತಿರೆ ಮತಿಗೆ ನಿಲುಕದಂಥ ಅತಿ ಚರಿತ್ರನಿವ 2 ನಗುವಳುವರಲಿ ಈತನೇ ನಿಂತುಕೊಂಡು ಸಿಗಿವ ಬಗಿವರಲೀತನೇ ನಿಗಮಾತೀತನ ಮಹಿಮದ್ಹಗರಣ ತಿಳಿಯದು ಸುಗುಣ ಸಂತರೊಶ ಜಗದಯ್ಯ ಶ್ರೀರಾಮ 3
--------------
ರಾಮದಾಸರು
ಬೇಡುವೆನು ಶ್ರೀಕೃಷ್ಣ | ಕಾಡುತಿಹ ಭವರೋಗಓಡಿಸುವುದು ತಡೆಯದೇ ಪ ನಾಡಾಡಿ ದೈವಗಳ | ಬೇಡ್ವನಲ್ಲವೊ ಕೃಷ್ಣನೋಡೆನ್ನ ದಯದಿಂದ | ಸಾರ್ವಭೌಮಾ ಅ.ಪ. ಪರ ಕಂಬು ಚಕ್ರಾಂಕಿತನೆನಂಬಿಹೆನೊ ನಿನ್ನ ಪದವ ||ಕುಂಭಿಣಿಯ ಪರಿಪಾಲ | ಅಂಭ್ರಣಿಯ ಸುವಿಲೋಲಇಂಬಿಟ್ಟು ವದಗಿಸುತ | ಸಂಭ್ರಮದಿ ಕಾಯೋ | ಕರುಣೀ 1 ಪ್ರೇರ್ಯ ಪ್ರೇರಕ ನೀನೆ | ಬಾಧ್ಯ ಬಾಧಕ ನೀನೆಸೇವ್ಯ ಸೇವಕನೆ ಹರಿಯೇ ||ವಾಪ್ಯ ವ್ಯಾಪಕ ಸ್ವಾಮಿ | ಪೋಷ್ಯ ಪೋಷಕ ರೂಪಿಕಾರ್ಯ ಕಾರಣ ರೂಪನೇ ||ಭಾವ್ಯನೇ ನಿನ್ನಿಂದ | ಧಾರ್ಯ ಈ ಜಗವೆಲ್ಲವೀರ್ಯ ಔದಾರ್ಯ ಶೌರ್ಯ ||ಪೂಜ್ಯ ಪೂಜಕನೆನಿಪ | ಬಹಿರಂತರಾತ್ಮಕನೆಪ್ರಾಪ್ಯ ಪ್ರಾಪಕ ನಿನ್ನ | ಪ್ರಾಪ್ತಿಯನೆ ತಿಳಿಸೋ | ಸ್ವಾಮಿ 2 ತಾರತಮ್ಯ ಜ್ಞಾನ ಸದ್ | ವೈರಾಗ್ಯ ಹರಿ ಭಕುತಿಬಾರಿ ಬಾರಿಗೆ ಬೇಡುವೇ ||ಸೂರಿ ಸಂಗವ ನೀಯೊ | ದೂರಗೈ ದುಸ್ಸಂಗಮಾರಪಿತ ದಯಾಪಾಂಗನೆ ||ಕಾರುಣಿಕ ನೀನೆಂದು | ಸಾರಿರುವ ತವಪಾದದೂರ ಮಾಡಲಿ ಬೇಡವೊ ||ಆರು ಕಾಯುವರಿಲ್ಲ | ವಾರೀಜ ಜಾಂಡದೊಳುಧೀರ ಗುರು ಗೋವಿಂದ | ವಿಠಲ ಬಹು ಆಪ್ತಾ | ಗೋಪ್ತಾ 3
--------------
ಗುರುಗೋವಿಂದವಿಠಲರು
ರಮಾವಿನುತ ವಿಠಲ ಪೊರೆಯಬೇಕೊ ಇವಳ ಪ ಕ್ರಮಾನುಸಾರ ತವದಾಸ್ಯ ಕಾಂಕ್ಷಿಪಳ ಅ.ಪ. ಪತಿಸುತರು ಹಿತರಲ್ಲಿ ವ್ಯತಿರೇಕ ಮತಿ ಕೊಡದೆಅತುಳ ಪ್ರೀತಿಯಲಿ ಅವರಂತರಾತ್ಮಕನಾ |ಹಿತ ಸೇವೆಯೆಂಬ ಸನ್ಮತಿಯನೇ ಕರುಣಿಸುತಕೃತ ಕಾರ್ಯಳೆಂದೆನಿಸೊ ಕ್ಷಿತಿರಮಣ ಹರಿಯೇ 1 ಭವಶರಧಿ ದಾಟಿಸುವ ಪ್ಲವವೆನಿಪ ತವನಾಮಸ್ತವನಗಳ ಸರ್ವತ್ರ ಸರ್ವಕಾರ್ಯದಲಿಹವಣಿಸುತ ನೀನಾಗಿ ಪ್ರವರ ಸಾಧನಗೈಸೊಪವಮಾನ ಸನ್ನಿಹಿತ ಭುವನ ಮೋಹನನೇ 2 ಪ್ರಾಚೀನ ಕರ್ಮಗಳ ಯೋಚಿಸಲು ಎನ್ನಳವೇಕೀಚಕಾರಿಪ್ರೀಯ ಮೋಚಕೇಚ್ಛೆಯನುಸೂಚಿಸುವುದೋ ಸವ್ಯಸಾಚಿಸಖ ಶ್ರೀಹರಿಯೆನೀಚೋಚ್ಚ ತರತಮವ ತಿಳಿಸಿ ಪೊರೆ ಇವಳಾ 3 ನಂದ ಗೋಪನ ಕಂದ ಇಂದಿರೇಶನೆ ಹೃದಯಮಂದಿರದಿ ತವರೂಪ ಸಂದರುಶನಾ |ನಂದವನೆ ಇತ್ತಿವಳ ಅಂದದಲಿ ಸಲಹೆಂದುಕಂದರ್ಪಪಿತ ನಿನ್ನ ವಂದಿಸುತ ಬೇಡ್ವೆ4 ಅನಿರುದ್ಧ ರೂಪಾತ್ಮಮಧ್ವಗುರು ಗೋವಿಂದ ವಿಠಲ ಪ್ರಾರ್ಥಿಸುವೆ 5
--------------
ಗುರುಗೋವಿಂದವಿಠಲರು
ಮಧ್ವರಾಯರ ನೆನೆದು ಶುದ್ಧರಾಗಿರೊ |ಹೊದ್ದಿ ವೈಷ್ಣವ ಮತಭವಾಬ್ಧಿದಾಟಿರೋಪಉದಯದಲಿ ಏಳುವಾಗ ನದಿಯ ಸ್ನಾನ ಮಾಡುವಾಗಒದಗಿನಿತ್ಯಕರ್ಮಗಳನು ನಡೆಸುವಾಗ ||ಹೃದಯದಲಿ ಬೀಜಾಕ್ಷರ ಮಂತ್ರಗಳನು ಜಪಿಸುವಾಗಸದಮಲಾನಂದ ಹನುಮನನ್ನು ನೆನೆಯಿರೊ 1ಕಾಮವಿಲ್ಲದ ಹರಿಯ ಪೂಜೆ ವೈಶ್ವದೇವ ಮಾಡುವಾಗಪ್ರೇಮದಿಂದ ವೈಷ್ಣವರು ಅರ್ಚಿಸುವಾಗ ||ಆ ಮಹಾ ಭಕ್ಷ್ಯಭೋಜ್ಯ ಆರೋಗಣೆ ಮಾಡುವಾಗನೇಮದಿಂದ ಕೌರವಾಂತಕ ಭೀಮಸೇನನ ನೆನೆಯಿರೊ 2ಕರಗಳನ್ನು ತೊಳೆದು ತೀರ್ಥ ತುಳಸೀದಳವ ಮೆಲ್ಲುವಾಗಪರಿಪರಿಯ ಪುಷ್ಪವೀಳ್ಯ ಅರ್ಪಿಸುವಾಗಸರುವಾಂತರ್ಯಾಮಿ ಗುರುಮಧ್ವರಂತರಾತ್ಮಕಪುರಂದರವಿಠಲಗೆ ಸಮರ್ಪಣೆ ಮಾಡಿರೊ3
--------------
ಪುರಂದರದಾಸರು