ಒಟ್ಟು 10 ಕಡೆಗಳಲ್ಲಿ , 8 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಮಾಡಲಯ್ಯ ಬಯಲಾಸೆ ಬಿಡದು ಪ ಮಾನವ ಮೃಗೇಂದ್ರ ರಾಮಚಂದ್ರ ರಕ್ಷಿಸಯ್ಯ ಅ ಜ್ಯೋತಿರ್ಮಯವಾದ ದೀಪದ ಬೆಳಕಿಗೆ ತಾನುಕಾತರಿಸಿ ಬೀಳುವ ಪತಂಗದಂದದಲಿಧಾತುಗೆಟ್ಟು ಬೆಳ್ಳಿ ಬಂಗಾರದಲಿ ಮೆರೆವಧೂರ್ತೆಯರ ನೋಡುವೀ ಚಕ್ಷುರಿಂದ್ರಿಯಕೆ 1 ಅಂದವಹ ಸಂಪಗೆಯ ಅರಳ ಪರಿಮಳವುಂಡುಮುಂದುವರಿಯದೆ ಬೀಳ್ವ ಮಧುಪನಂತೆಸಿಂಧೂರ ಗಮನೆಯರ ಸಿರಿಮುಡಿಯೊಳಿಪ್ಪ ಪೂಗಂಧ ವಾಸಿಸುವ ಘ್ರಾಣೇಂದ್ರಿಯಕೆ 2 ಗಾಣದ ತುದಿಯೊಳಿಪ್ಪ ಭೂನಾಗನಂ ಕಂಡುಪ್ರಾಣಾಹುತಿಯೆಂದು ಸವಿವ ಮೀನಿನಂತೆಏಣಾಕ್ಷಿಯರ ಚೆಂದುಟಿಯ ಸವಿಯ ಸವಿಸವಿದುಜಾಣತನದಲಿ ನಲಿವ ಜಿಹ್ವೇಂದ್ರಿಯಕೆ 3 ದಿಮಿದಿಮ್ಮಿ ಘಣಘಣಾ ಎಂಬ ಘಂಟೆಯ ರವಕೆಜುಮುಜುಮನೆ ಬೆಮೆಗೊಳ್ಳುವ ಹರಿಣದಂತೆರಮಣಿಯರ ರಂಜಕದ ನುಡಿಗಳನು ಕೇಳಿ ಪ್ರ-ಣಮವೆಂದು ತೋಷಿಸುವ ಕರ್ಣೇಂದ್ರಿಯಕೆ 4 ತ್ವಕ್ಕು ಮೊದಲಾದ ಪಂಚೇಂದ್ರಿಯಗಳೊಳು ಸಿಕ್ಕಿಕಕ್ಕುಲಿತೆಗೊಂಬುದಿದ ನೀನು ಬಿಡಿಸೊಸಿಕ್ಕಿಸದಿರು ಸಿಕ್ಕಿಗೆ ಆದಿಕೇಶವರಾಯದಿಕ್ಕಾಗಿ ನಿನ್ನಂಘ್ರಿಯೊಳೆನ್ನ ಮನವನಿರಿಸೊ 5
--------------
ಕನಕದಾಸ
ಏನೆಂದರಿಬೇಕೀ ಆಟಾ ಘನಗುರು ಮಾಡಿದ ಮಾಟ ಅನುಮಾನಳಿಸಿದ ನೋಟ ಅನುಭವಕಾಯಿತು ನೀಟ ಧ್ರುವ ರಂಜಕ ಬಲುಕೊಂಡಿತು ನೋಡಿ ಅಂಜಿಕಿ ಭವಭಯ ಈಡ್ಯಾಡಿ ಪ್ರಾಂಜಲ ಸದ್ಗುರು ದಯಮಾಡಿ ಅಂಜನ ಹಚ್ಚಿದ ದುವುಡಿ 1 ಕಾಣದ ಕಂಡೆವು ಕಣ್ಣಿಲಿ ಖೂನಕ ಬಾರದು ಘನಲೀಲೆ ಜಾಣರು ಬಲ್ಲರು ಮನದಲಿ ನೆನದರು ತಾಂ ವರಿಕಿಲೆ 2 ಆಶ್ವರ್ಯವು ತಾನಾಗ್ಯದೆ ನಿಶ್ಚಯದೋರುತಲ್ಯದೆ ಪಶ್ಚಿಮಕೆ ಭಾಸುತದೆ ಸ್ವಚ್ಛವು ನೋಡಿದರದೆ 3 ರಚ್ಚಿಗೆ ತಾಂ ಬಾಹುದೆಲ್ಲ ಮುಚ್ಚಿಟ್ಟಡೆÉ ಬಾಳು ಸವಿಬೆಲ್ಲ ಅಚ್ಚಳಿಯದ ಭಕ್ತನೆ ಬಲ್ಲ ನೆಚ್ಚಿದ ಮಹಿಪತಿ ಸೊಲ್ಲ4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುವಿಗೆ ಒಂದು ಶರಣಾರ್ಥಿ ಗುರು ಭಕ್ತರಿಗೊಂದು ಶರಣಾರ್ಥಿ ಪ ಸಾಧನ ನಾಲ್ಕನು ಸಾಧಿಸುತಿರುತಿಹ ಸಾಧಕರಿಗೆ ಒಂದು ಶರಣಾರ್ಥಿವಾದವ ವರ್ಜಿಸಿ ವಸ್ತುವ ಧ್ಯಾನಿಪ ಉತ್ತಮರಿಗೆ ಒಂದು ಶರಣಾರ್ಥಿ1 ಯೋಗಗಳಿಂದಲೆ ಯೋಗ್ಯರಾಗಿಹ ಯೋಗೀಶರಿಗೊಂದು ಶರಣಾರ್ಥಿರಾಗ ಪೋಗಿ ರಂಜಿಸುತಿರುತಿಹ ರಂಜಕರಿಗೆ ಒಂದು ಶರಣಾರ್ಥಿ 2 ದೂಷಣ ಭೂಷಣ ದೂರ ಮಾಡಿಹ ದೃಢವಂತರಿಗೆ ಒಂದು ಶರಣಾರ್ಥಿಆಸೆಗಳೆಂಬ ಅಳಿದು ಇರುತಿಹ ಆನಂದರಿಗೊಂದು ಶರಣಾರ್ಥಿ3 ಪ್ರಪಂಚವೆಲ್ಲವ ಪರಮಾರ್ಥ ಮಾಡಿಹ ಪಂಡಿತರಿಗೆ ಒಂದು ಶರಣಾರ್ಥಿತಾಪವನೀಗಿ ತಮ್ಮನೆ ಮರೆತಿಹ ತಾಪಸರಿಗೆ ಒಂದು ಶರಣಾರ್ಥಿ4 ಜನನ ಮರಣಗಳ ಜಡರನೆ ಕಳೆದಿಹ ಜನಪತಿಗಳಿಗೊಂದು ಶರಣಾರ್ಥಿಚಿನುಮಯಾತ್ಮಕ ಚಿದಾನಂದನ ಬೆರೆದಿಹ ಚಿದ್ರೂಪರಿಗೆ ಒಂದು ಶರಣಾರ್ಥಿ 5
--------------
ಚಿದಾನಂದ ಅವಧೂತರು
ತುಪಾಕಿ ಸಾಧನವನು ತ್ವರಿಯ ಬಿದ್ದು ಮಾಡುತಿರುವೆಶಾಬಾಸು ಶಿವನೇ ನೀನಣ್ಣ ಪೇಳುವೆನಣ್ಣ ಪ ಮೌನವೆಂದೆನಿಪ ಮುಸೈದೆ ಸಹಿತಾಗಿಜ್ಞಾನ ಪಡೆದಳವ ಬಗಿಯಣ್ಣಾ ಸಾಧಿಸು ಅಣ್ಣಧ್ಯಾನವೆಂದೆನಿಪ ತಲೆಕಟ್ಟನೆ ಕಟ್ಟಿಆನಂದವನೆ ಆಡಣ್ಣ ಸಾಧಿಸು ಅಣ್ಣ 1 ಆರು ಚಕ್ರವೆಂಬ ಆರು ಕಟ್ಟಿನ ತುಪಾಕಿಧೀರತನದಿಂದ ಪಿಡಿಯಣ್ಣಾ ಸಾಧಿಸು ಅಣ್ಣಮೂರಾವಸ್ಥೆಯೆಂಬ ಮೂವೆರಳ ಮದ್ದ ಹೊಯ್ದಪೂರಾಯದವನ ಮಾಡಣ್ಣ ಸಾಧಿಸು ಅಣ್ಣ2 ಇಡಾಪಿಂಗಳವೆಂಬ ಎರಡು ಗುಂಡನೆ ಹಾಕಿರೂಢಿ ಎಂಬ ಗಜವ ಜಡಿಯಣ್ಣ ಸಾಧಿಸು ಅಣ್ಣಕೂಡಿಹ ಸತ್ವನೆಂಬ ಕೂರಿ ರಂಜಕವರೆದುಗೂಡು ಗುರು ಜಾವಿಗೆ ಒತ್ತಣ್ಣ ಸಾಧಿಸು ಅಣ್ಣ 3 ಆಸನ ನಳಿಕೆಯೆಂಬ ಆಧಾರವನೆ ಆಂತುವಾಸರ ಹೊಗ್ಗೊಡಬೇಡಣ್ಣ ಸಾಧಿಸು ಅಣ್ಣನಾಸಿಕಾಗ್ರವು ಎಂಬ ನೊಣನ ದಿಟ್ಟಿಸಿ ನೋಡಿಸೂಸದೆ ಏರಿಸಿ ನಿಲ್ಲಣ್ಣ ಸಾಧಿಸು ಅಣ್ಣ4 ಬರಿಯ ಪ್ರಣವವೆ ಎಂಬ ಬೆರಳ ಬೊಬ್ಬೆಯನಿಟ್ಟುಭರದಿ ಭೀತಿಯನಳಿಯಣ್ಣಾ ಸಾಧಿಸು ಅಣ್ಣಗುರು ಚಿದಾನಂದನು ಎಂಬ ಗುರಿ ಭ್ರೂಮಧ್ಯವೆ ಇರೆಗುರಿಯ ತಾಗುವಂತೆ ಇಡಣ್ಣ ಸಾಧಿಸು ಅಣ್ಣ5
--------------
ಚಿದಾನಂದ ಅವಧೂತರು
ಪ್ರಾರ್ಥಿಸುವೆ ರಘುನಾಥತೀರ್ಥರ ಪ್ರಾರ್ಥಿಸುವೆ ಪುರುಷಾರ್ಥಪ್ರದರ ಪ ಸಾರ್ಥಕವಾಗಲು ಪಾರ್ಥಿವ ದೇಹವು ಜಗದಲಿ ಕೀರ್ತಿಗಳಿಸಿದವರ ಅ.ಪ ನೇದೃಶಂ ಸ್ಥಲಿಮಲಂ ಶಮಲಘ್ನಂ ನಾಸ್ಯತೀರ್ಥಂ ಸಲಿಲಸ್ಯಸಮಂ ವಾಃ ನಾಸ್ತಿ ವಿಷ್ಣುಂ ಸದೃಶಂ ನನುದೈವಂ ಸತ್ಯ ವಚನಗಳಿವೆಂದು ಸೂಚಿಸುತ ಆಸ್ತಿಕ ಜನಮನ ರಂಜಕ ತ್ರಿಮಕುಟ ಕ್ಷೇತ್ರನಿವಾಸ ಪವಿತ್ರತಮ ಚರಿತರ 1 ವ್ಯಾಸರಾಜ ಗುರುವರ್ಯ ರಚಿತ ತಾ ತ್ಪರ್ಯ ಚಂದ್ರಿಕಾ ಗ್ರಂಥವನು ವಾಸುದೇವ ನರಹರ್ಯನುಗ್ರಹದಿ ಉರ್ವರಿತವ ವಿರಚಿಸಿ ಮೆರೆದ ಶೇಷಚಂದ್ರಿಕಾಚಾರ್ಯರೆಂಬೊ ಗುರು ವ್ಯಾಸರಾಜರ ಪರಾವತಾರರ 2 ರಾಗ ದ್ವೇಷಗಳ ತೊರೆಯುತ ತ ನ್ನನು ರಾಗದಿಂದ ಭಜಿಸುವ ಜನಕೆ ಭೂಗಕಲ್ಪ ತರುವಂತೆ ಅರಿಷ್ಠವ ನೀಗಿ ಸಾಧು ಭೋಗಗಳೀವ ಯೋಗಿಜನ ಮನೋನಯನ ಪ್ರಸನ್ನ ಶ್ರೀ ರಾಘವೇಂದ್ರರಪರಾವತಾರರ 3
--------------
ವಿದ್ಯಾಪ್ರಸನ್ನತೀರ್ಥರು
ಬೆಜ್ಜರವಿಡಿಯಲು ಗುರುಭಕ್ತಿಗೆ ತಾ ಹೆಜ್ಜೆಜ್ಜಿಗೆ ನಿಧಾನ ಸಜ್ಜನರನುದಿನ ಕೊಡುವರು ಸುಖ ಸಾಮ್ರಾಜ್ಯದ ಸುಸನ್ಮಾನ ಧ್ರುವ ಅಂಜಿಕೆಂಬುದು ಅಂಜನ ಕಣ್ಣಿಗೆ ಕಂಜನಾಭನ ಖೂನ ರಂಜಕವೆಂಬುದು ಇದೇ ಭಕ್ತರಿಗೆ ನಿಜತತ್ವದ ಸಾಧನ ರಂಜನೆದೋಲು ಒಣ ಭಂಜನೆ ತಾ ಪ್ರಾಂಜಳಾಗುರು ಙÁ್ಞನ ನಿರಂಜನ ಸೇವೆಯ ಮಾಡುದೆ ಪೂರ್ಣ 1 ಭಕ್ತಿಗೆ ಸಲಿಗಿ ಕೆಲಸಕೆ ಬಾರದು ಯುಕ್ತಿವಂತರು ನೋಡಿ ಶಕ್ತನಾದರೆ ಬಾಗಿರಬೇಕು ಅಹಂ ಭ್ರಮ ಈ ಡ್ಯಾಡಿ ಯುಕ್ತಿಗಿದೊಂದೇ ಕೀಲು ದೃಢ ಭಕ್ತಾಶ್ರಯ ಮಾಡಿ ಭೋಕ್ತಭಾವದ ಸದ್ಗುರುರಾಯ ತಾ ಬಾಹನು ಕೈ ಗೂಡಿ 2 ಅಂಜಂಜಿ ನಡೆದಮ್ಯಾಲೆ ಮಹಿಪತಿ ನಿಶ್ಯಂಕ ನೀನಾಗೊ ಅಂಜುವ ಭವಭಯ ನೀಗೊ ಗುಂಜಾಗಿಹ ಕರ್ಮದ ಬಾಧಿಯೊಳು ಸಿಲಕುವದೆಲ್ಲ ಸೋಂಗೊ ರಂಜಿಸುತಿ ಹ್ಯ ಸದ್ಗುರು ಪಾದಕೆ ನೀ ವಾಜಿಲಿ ಶರಣ್ಹೋಗೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಾವನೆ ಬಲಿದನಕಾ ಒಣಭಕ್ತಿಯ ಮಾಡಿದರೇನು | ದೇವದೇವೋತ್ತಮನಾಪಾದ ಸುಮ್ಮನೆ ಸಿಲ್ಕುವದೇನು ಪ ಸಂಜಿವನಿಲ್ಲದಲೇ ಸಾವಿರ ಗಿಡ ಮೂಲಿಕಿದ್ದೇನು | ರಂಜಕ ತಾನಿಡದೇ ಯಂತ್ರದಿಗುರಿವಡ್ಡಿರಲೇನು 1 ಸೂರಿಯನುದಯಿಸದೇ ಕನ್ನಡಿ ಕಣ್ಣುಗಳಿದ್ದೇನು | ಗುರುರಾಯನ ಕರುಣಾ ಪಡಿಯದೆ ಮಂತ್ರ ಕಲಿತೇನು 2 ಅನುಭವಿಸದೇ ಸುಖವಾ ಜ್ಞಾನದ ಮಾತಾಡಿದರೇನು | ಘನಗುರು ಮಹಿಪತಿ ಸ್ವಾಮಿಯ ನೆನಯದೆ ಜನುಮವೇನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಯಚ್ಚರಿಕೆ ಯಚ್ಚರಿಕೆ ಶ್ರೀ ಸೋದೆಪುರಯಚ್ಚರಿಕೆ ಯಚ್ಚರಿಕೆ ಶ್ರೀ ಸೋದೆಪುರವಾಸಿ ಗುರುಪಾದ ಯಚ್ಚರಿಕೆ ಯಚ್ಚರಿಕೆ ಪ ಶ್ರೀ ತ್ರಿವಿಕ್ರಮ ಲೋಕನಾಥನ ತಂದೆ ಶ್ರೀಪಾದಯಚ್ಚರಿಕೆ ಯಚ್ಚರಿಕೆ ಅ.ಪ. ಗುರುಹಯವದನ ಮನಮುಟ್ಟಿ ಸ್ಮರಿಸಿ ಪೂಜಿಪಶ್ರೀ ಗುರುಪಾದ ಯಚ್ಚರಿಕೆ ಯಚ್ಚರಿಕೆ 1 ಶತಷಣ್ಣವತಿ ಸಪ್ತ ಬ್ರಹ್ಮ ಕಲ್ಪಗಳಲ್ಲಿ ಶ್ರೀಹರಿಯೆ ಮಹ ಮಾರೆತವ ಚರಿಸಿದ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 2 ತಪಚರಿನಿಯರ ಡೃವತ್ತೂ ಷಣ್ಣವತಿ ಲಿಷ್ಟನೇ ಕಲ್ಪದ-ಲಿಲಾತವ್ಯ ವಾಯುಸಾಧನ ಮಾಡುವಾನಂದ ಜ್ಞಾನ ಯೋಗ ಸಿದ್ಧಿಸಿ ಕೊಡುವ ಉದಾರ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 3 ಪ್ರಧಾನ ವಾಯು ಪದ ಸ್ವೀಕರಿಪ ಹಂಸವಾಹನ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ4 ಹಿಂದೆ ವಿರಜಸ್ನಾನದಿ ಅಜ್ಞಾನಾತ್ಮಕ ಲಿಂಗದೋಷನಿಶ್ಶೇಷ ಹೊಂದಿದ ಗುರುವಿರಾಜರ ವಾದದ್ವಯ ಯಚ್ಚರಿಕೆ ಯಚ್ಚರಿಕೆ 5 ನಿರ್ಜೀವ ನಿಷ್ಕ್ರಿಯಾ ದಗ್ಧಪಟದಪ್ಪಂತಿರುವ ದೇಹ ಲಿಂಗವ ನಿಮಿತ್ತ ಮಾತ್ರಕೆ ಹರಿಯಿಭಯಿಂ ಧರಿಸಿರುವ ಲಾತವ್ಯ ಗುರುಪಾದ ಯಚ್ಚರಿಕೆ ಯಚ್ಚರಿಕೆ6 ಮುಕ್ತ ಅಮುಕ್ತಿ ಭೇದ ತೋರ್ಪದಕೆ ಶಿರಿಯಿಂದನದಿ ಶಾಲ್ಮಲ ವಾಸಿಯ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 7 ದ್ವಸ್ತ ದುರಾಗಮಿ ಶ್ರೀರಾಜಗುರು ಪಾದಕೆಚ್ಚರಿಕೆ 8 ಅಜ್ಞಾನ ಅಹಂಕಾರ ಭಯ ಮೋಹ ವಿಸ್ಮøತಿ ದುಃಖಾದಿಬಂಧನ ಕಳೆವ ಪ್ರಭುವಾದಕೆಚ್ಚರಿಕೆ 9 ಪತಿ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 10 ತ್ರಿವಿಧ ಜೀವರ ಚತುರ್ವಿಧಶರೀರದಿಯಿದ್ದವರ ಸಾಧನವಾ ಮಾಡಿಸಿ ಜೀವರ ಸುಖದುಃಖಗಳಿಂತಾ ಬದ್ಧರಾಗದೆ ಪೂರ್ಣ ನಿರ್ಲಿಪ್ತರಾಗಿರುವಶ್ರೀಪಾದ ಯಚ್ಚರಿಕೆ ಯಚ್ಚರಿಕೆ11 ತ್ರಿವಾರ ವಿರಜ ಸ್ನಾನವ ಮಾಡ್ವ ಸೌಭಾಗ್ಯ ಪ್ರಾರಬ್ಧಪೊಂದಿರುವ ಗುರು ವಾದಿರಾಜರ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 12 ಸತ್ವ ಜೀವರ ಮೋಕ್ಷ ಪ್ರಾಪ್ತಿಗೆ ವಿರಜ ನದಿಯಲಿಸ್ನಾನ ಮಾಡಿಸಿ ಜೀವಸತ್ವರ ಮೋಕ್ಷಕ್ಕಿಡುವ ನಿವ್ರ್ಯಾಜ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 13 ಸುಜೀವರ ಅನಾದಿ ಲಿಂಗ ಅಜ್ಞಾನ ಸ್ವರೂಪ ದೇಹ-ಭಂಗಿಸುವ ಶ್ರೀರಮಾತ್ಮಕ ವಿರಜ ನದಿಯಲಿ ಸ್ನಾನ-ಮಾಡಿ ಸ್ವಲಿಂಗ ವಿಶಿಷ್ಟವಾದ ಅಜ್ಞಾನದಿಂ-ವಿರಹಿತರಾದವರ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 14 ಆನಂದವ ವೃಷಭಾವಿ ಆನಂದ ತೀರ್ಥ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 15 ತ್ರಿವಿಧ ಜೀವರಲಿಯಿದ್ದು ತ್ರಿವಿಧಸಾಧನ ಮಾಡಿಸುವ ಭಾವಿ ವಾಯುನಾಮಕ ನತ್ತಾ ಪ್ರದ ಲಾತವ್ಯವಾಯು ವಾದಿರಾಜ ಮಧ್ವ ಮುನಿ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 16 ಆಯಾಯರ ಜೀವರ ಚಲನವಲನಾದಿ ವ್ಯಾಪಾರ ಮಾಡಿಸುವ ಭಾವಿ ಪ್ರಾಣನಾಮಕ ಭೀಷ್ಟಾಪ್ರದ ವಾದಿರಾಜಗುರುಪಾದಯಚ್ಚರಿಕೆ ಯಚ್ಚರಿಕೆ 17 ಚತುರ್ವಿದ ಶರೀರಗಳಲಿದ್ದು ಸಂರಕ್ಷಿಸುವ ಭಾವಿ ಧರ್ಮನಾಯಕಧಾರಣಪ್ರದ ಶ್ರೀ ಗುರುರಾಜರಶ್ರೀಪಾದ ಯಚ್ಚರಿಕೆ ಯಚ್ಚರಿಕೆ 18 ಪ್ರಭುತ್ವವಾರ್ತೈಸಿಜೀರರ ಅವರವರ ಸ್ವರೂಪಯೋಗ್ಯಗತಿ ಕೊಡುವ ಭಕ್ತಿ ಮುಕ್ತಿ ಪ್ರದ ಭಾವಿ ಭಾರತೀ ರಮಣ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 19 ದೇವೋತ್ತಮ ಲಾತ ವಾಯುಸ್ವನಾಮಕೆ ಭಗವಂತಗೇ ನಿತ್ಯನ್ವ ಭಕ್ತರ ಪಾಪ ಮನ್ನಿಸುವಂತೆ ಪ್ರಾರ್ಥಿಸಿ ತಾವು ಮನ್ನಿಸಿ ಕ್ಷಮಿಸುವಲ್ಲಿ ಕ್ಷಮಾ ಸಮುದ್ರರಾದ ಶ್ರೀಗುರುಪಾದಯಚ್ಚರಿಕೆ ಯಚ್ಚರಿಕೆ 20 ಪುಣ್ಯ ಪ್ರದಾನ ಮಾಡುವಲ್ಲಿ ಜೀವರಿಗೆ ಪರಮ ದಯಾಳು ಆರ್ತರಿಗೆ ದಯತೋರುವ ಕೃಪಾನಿಧಿ ಸಜ್ಜನರ ದೋಷ ವಿಚಾರದಿ ಮಹಾ ಸಹಿಷ್ಣುಗಳಾದವರ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 21 ಶಿಖಾಮಣಿ ಸಕಲ ತಾತ್ವಿಕ ದೇವತಾ ರಂಜಕ ಆಹ್ಲಾದಕರ ದಾನವ ಭಂಜಕ ಸಂಹಾರ ಕರ್ತರಾದ ಕಾರಣ ಭಾವಿ ಪ್ರಭಂಜನ ವರವಾಜ್ಯರಾದವರ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 22 ಸರ್ವದಾ ಅನ್ಯ ಜೀವರು ಕಾಣದಾ ಅಸಾಧಾರಣ ಗುಣ ಕ್ರಿಯಾ ಸ್ವರೂಪರಾದ ವೇದ ಪ್ರತಿಪಾದ್ಯರಾದುದರಿಂದ ಮಹಂತರೆಂದು ಕರೆಸುವ ಭಾವಿ ವಾಯುವಿನ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ23 ಅವರವರ ಸಾಧನಗಳ ಪೂರೈಸಿ ಕೊನೆಗವರ ನಿಜಗತಿ ಪ್ರವರಾದ ಸರ್ವ ಜೀವರಂತರ್ಯಾಮಿ ಸಕಲ ಗುಣ ಸದ್ಧಾಮ ಭಾವಿ ಮರುತ ಗುರುವಾದಿರಾಜರ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 24 ಬರುವ ಜಗತ್ತಿನ ಸರ್ವ ಜೀವರಿಗೆಲ್ಲ ಜೀವನ ಪ್ರಾಣ- ವಾಗಿರುವ ಜೀವೋತ್ತಮ ಶ್ರೀ ಭಾವಿ ಬ್ರಹ್ಮ ಮರುತ ವಾದಿರಾಜರ ಶ್ರೀಪಾದದ್ವಯ ಯಚ್ಚರಿಕೆ ಯಚ್ಚರಿಕೆ 25 ಸಕಲ ಜೀವರ ಸಂಜೀವರಾದ ಯಲ್ಲ ಜೀವರ ಜೀವ ಯಲ್ಲಪ್ರಾಣಿಗಳ ಪ್ರಾಣರಾಗಿ ಪ್ರಾಣೆಂದು ಕರೆಸುವ ಭಾವಿ ಮುಖ್ಯ ಪ್ರಾಣ ವಾದಿರಾಜರ ಗುರುಪಾದಕೆಚ್ಚರಿಕೆ 26 ಸದಾಸರ್ವತ್ರ ಭಗವದ್ರಷ್ಟøಗಳಾದ ಬ್ರಹ್ಮದೇವರ ಭೃತ್ಯಣ ಜೀವ ಪರ್ಯಂತ ವ್ಯಾಪ್ತರಾದ ಆಯಾ ಸ್ಥಳದಿದ್ದು ಆಯಾ ಜೀವರ ತಕ್ಕ ವ್ಯಾಪಾರ ಮಾಡುವ ಭಾವಿ ಪೂರ್ಣಪ್ರಜ್ಞರೆನಿಸಿರುವ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 27 ಸಾಕ್ಷಾತ್ರ್ಪತಿಬಿಂಬರಾದ ಕಾರಣ ಭಾವಿ ಮುಖ್ಯ ಪ್ರತಿಬಿಂಬ-ರೆಂದೆನಿಸಿಕೊಂಡ ಗುರುವಾದಿರಾಜ ವಿಭುಪಾದಕೆಯಚ್ಚರಿಕೆ ಯಚ್ಚರಿಕೆ 28 ನಿತ್ಯ ಸಾಯುಜ್ಯ ಸಹ ಭೋಜನದ ಭೋಗ ಹೊಂದುವ ಭಾವಿ ಮರುತ ಶ್ರೀಲಾತವ್ಯ ವಾಯು ಗುರು ಮಧ್ವ ಮುನಿಯ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 29 ಸದನ ಪೂರ್ಣ ಚಂದ್ರವದನರು ಮೋಕ್ಷ ಸಾಮ್ರಾಜ್ಯ ನಿರ್ದುಷ್ಟ ಆನಂದ ಸುಖಸ್ವರೂಪರು ಪರಮ ಪುರುಷಾರ್ಥ ಪಾತ್ರಗಳು ಪುಣ್ಯ ಸ್ವರೂಪ ಪಂಚ ರೂಪಾತ್ಮಕ ಹರಿಯೆ ಪಂಚ ವೃಂದಾವನ ಸ್ವರೂಪದಿಯಿರುವ ರಂಜಪುಣ್ಯ ವೃಂದಾವನದಿ ವಿರಾಜಿಸಿ ಪಂಚ ಪುಣ್ಯ ಧಾರೆಯೆರೆವ ಪಂಚಪ್ರಾಣರಾದ ವಾದಿಗಳ ಪಲ್ಮುರಿವ ವಾದಿರಾಜಮಧ್ವ ಮುನಿಯ ಶ್ರೀ ಭಾವೀ ಭಾರತೀದೇವಿ ತನ್ನ ಮೃದು ಕೋಮಲ ತೊಡೆಯ ಮೇಲೆ ಪತಿಯ ಶ್ರೀಪಾದಪದ್ಮದ್ವಯವಿಟ್ಟು ವತ್ತೂವ ಅಜ್ಞಾನ ತಿಮಿರಕೆ ಮಾರ್ತಾಂಡ ವಾದ ಜ್ಞಾನಾನಂದ ದಾಯಕ ಶ್ರೀಗುರುಪಾದ ಯಚ್ಚರಿಕೆ ಯಚ್ಚರಿಕೆ30 ಜಗಜ್ಜೀವನಗಳಿಗೆ ಮುಖ್ಯ ಕಾರಣ ಪ್ರಾಣ ಆ ಪ್ರಾಣವಿಲ್ಲದಿರೆ ಸ್ವತಃ ಚಲಿಸಲು ಅಸಮರ್ಥ ಸರ್ವ ಜಗತ್ತಿಗೆ ಪ್ರಾಣ ವಿಜ್ಞಾನ ಪ್ರಾಣಾಗ್ನಿ ಶಬ್ದವಾಜ್ಯ ಈ ಭಾವಿಮುಖ್ಯ ಪ್ರಾಣ ಜಗಜ್ಜೀವನಗಳಿಗೆ ತಾನೇ ಮುಖ್ಯ ಪ್ರಾಣರೂಪ ಹೀಗೆಂದು ಬಳಿತ್ಥಾ ಸೂಕ್ತ ಅಗ್ನಿ ಸೂಕ್ತದಲಿ ಉಕ್ತ ಈ ಸೂಕ್ತಿಗಳಿಂದ ಪ್ರತಿಪಾದ್ಯರಾದ ಜಗನ್ನೇತ್ರಜಗಜ್ಜೀವನರಾದ ಪಂಚಪ್ರಾಣ-ರೂಪಾತ್ಮಕ ಶ್ವಾಸನಿಯಾಮಕ ಸೋದೆಪುರವಾಸಿ ಭೂತರಾಜರ ಹೃನ್ಮಂದಿರ ವೇದ್ಯ ವೇದ್ಯನುತ ಅಹಿಪ ಖಗಪ ಉಮೇಶಾದಿ ಸುರರಿಗೆ ಚಿಂತಿಸಲು ಅಳವಲ್ಲದ ಅಗಮ್ಯ ಮಹಿಮ ಶ್ರೀ ಪ್ರಭು-ವಾದಿರಾಜರ ನಿರ್ದೋಷ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 31 ಜಿತಣಮ ಸರ್ವಜ್ಞ ಅಶೇಕ್ಷ ಸಂಪದ್ವಿಶಿಷ್ಟ ಸದ್ಗುಣ ಭರಿತ ಪೂರ್ಣ ತೃಪ್ತ ನಿಶ್ಚಲ ಭಕ್ತ ದೃಢವ್ಯೆರಾಗ್ಯಶಾಲಿಚಿರಂಜೀವಿ ಶ್ರೀ ಗುರುವಾದಿರಾಜರ ಶ್ರೀಪಾದ ಪದ್ಮ ನಖರೇಣುಗಳಿಗೆ ಯಚ್ಚರಿಕೆ ಯಚ್ಚರಿಕೆ 32 ಪರಿ ಪರಿ ಕ್ರೀಡೆ-ರಮಿಸಿ ಆ ಆನಂದ ಶ್ರೀ ಹರಿಗೆ ಅರ್ಪಿಪ ಗುರುವಾದಿರಾಜಶ್ರೀಪಾದಂಗಳ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 33 ನಿತ್ಯ ನಿತ್ಯ ಶ್ರೀವರ ಮಾಲೇಶೆಗೆ ಅರ್ಪಿಪ ಭಾವಿಲಾಳೂರ ಶ್ರೀ ಗುರುರಾಜರ ಪಾದಕೆ ಯಚ್ಚರಿಕೆ ಯಚ್ಚರಿಕೆ34 ತನ್ನ ಶ್ರೀಪಾದ ರಜ ಧೆಣಿಯಲಿ ಧರಿಸಿ ಜೀವಿವರ ಹಯವದನ ಪಾದಕರ್ಪಿಸುವೆನೆಂದು ಪಣತೊಟ್ಟು ಜೀವನ್ಮುಕ್ತರನು ಮಾಡಿ ಪರಿಪಾಲಿಪೆನೆಂದು ಧೀರ ವೃಂದಾವನದಿ ಮೆರೆವ ಶ್ರೀಗುರು-ವಾದಿರಾಜರ ಶ್ರೀಪಾದಕೆ ಯಚ್ಚರಿಕೆ ಯಚ್ಚರಿಕೆ 35 ಶ್ರೀ ತ್ರಿವಿಕ್ರಮನ ರಥೋತ್ಸವಕೆ ಬಂದವರಲಿ ಒಂದೊಂದಂಶ ಸುರರ ಪ್ರವೇಶಿಸಿ ಅವರಲ್ಲಿ ತನ್ನೊಂದಂಶದಿಂದ ಸುರರ ಸಾಧನ ಮಾಡಿ ಸುರನರರ ಕೃತ ಕೃತ್ಯರೆನಿಸಿ ಶಿರಿ ಹಯ-ವದನನ ಕಾಣ್ವ ಜ್ಞಾನ ಭಕುತಿ ವೈರಾಗ್ಯ ನಿಷ್ಠಿಯನಿತ್ತು ಬ್ರಹ್ಮ ನಿಷ್ಯ್ಠೆ ಕರೆನು ಮಾಳ್ವ ಶ್ರೀ ಗುರು ಶ್ರೀಪಾದಕೆಯಚ್ಚರಿಕೆ ಯಚ್ಚರಿಕೆ 36 ಶ್ರೀ ಧವಳ ಗಂಗೆಯ ಸ್ನಾನ ಮಾಡುವ ಜ್ಞಾನವೀವ ಶ್ರೀ ಗುರು-ಪಾದಕೆ ಯಚ್ಚರಿಕೆ ಯಚ್ಚರಿಕೆ 37 ವಾಸುದೇವ ಪರಿ ಸ್ತೋತ್ರ ಮಾಡಿರೈ ಜ್ಞಾನಿ-ಗಳಾದವರೆಲ್ಲ ಶ್ರೀ ಗುರುಪಾದದೆಚ್ಚರಿಕೆಯಲಿ ತಂದೆವರದಗೋಪಾಲವಿಠಲ 38
--------------
ಗುರುತಂದೆವರದಗೋಪಾಲವಿಠಲರು
ಶ್ರೀಮದನಂತನೀತಾ ಶ್ರೀಮದನಂತನೀತಾ | ಸೀಮರಹಿತಾ ಮಹಿಮನೀತಾ | ನಾಮ ನೆನೆಯೆ ಒಲಿದು ನಿಷ್ಕಾಮ ಫಲವ ನೀವಾನೀತ ಶ್ರೀಮದಾನಂತನೀತನು ಪ ಆದಿದೈವನೀತಾ ಜೀವಾದಿಗಳಿಗಭಯದಾನೀತಾ | ಶ್ರೀಧರಣಿ ದುರ್ಗಾರಮಣನಾದಾತನೊದಾನೀತಾ | ವೇದಪಾಲಕನೀತಾ ಸನಕಾದಿಗಳಿಗೆ ಪ್ರೀತಾನೀತಾ | ನಿತ್ಯ ಸಾಧುಗಳ ಕಾಯಿದನೀತಾ1 ಗಜವರದನೀತಾ ಗಂಗಜನ ಮನೋಭೀಷ್ಟನೀತಾ | ಗಜ ರಜಕ ಬಿಲ್ಲು ಮಲ್ಲರ ವ್ರಜನನಾಳಿದ ದಿಟ್ಟಿನೀತಾ | ತ್ರಿಜಗ ವಂದಿತಾನೀತಾ ಅಂಗಜನ ಪೆತ್ತ ಪ್ರೇಮನೀತಾ | ಪಂಕಜ ಬಾಂಧವನ ಭಾಸನೀತಾ2 ಕಪಟನಾಟಕನೀತಾ ಕರಡಿ ಕಪಿಗಳನಾಳಿದನೀತಾ | ಕಪಿಲಮುನಿಯಾಗಿ ತಾಯಿಗೆ ಉಪದೇಶವ ಪೇಳಿದನೀತಾ | ದ್ರುಪದಸುತೆಯ ಕಾಯದನೀತಾ ಸ್ವಪ್ನ ಸುಷುಪ್ತಿ ಜಾಗ್ರದಾವಸ್ಥೆಗೆ ಗುಪುತವ್ಯಾಪಕ ಗುಣನೀತಾ3 ಪರಮ ಪುರುಷನೀತಾ ದಶಶಿರನ ಕುಲವನಳಿದನೀತಾ | ಗಿರಿಯಲಿ ಧರಿಸಿ ಲೋಕವ ಪೊರೆವ ವಿಶ್ವಾಧಾರನೀತಾ | ಹರನ ವೈರಿಯ ಕೊಂದನೀತಾ | ನಿರುಪಮ ಮೂರುತಿನೀತಾ | ಸುರರಿಗೆ ಉಣಿಸಿದನೀತಾ | ತರಳ ಲೀಲೆಯ ತೋರಿದನೀತಾ4 ನಿತ್ಯ ಜಪತಪಾದಿಗೆ ನೇಮಪ್ರಕಾರ ಚೇಷ್ಟಕನೀತಾ | ಸಾಮ ಲೋಲ ವಿಜಯವಿಠ್ಠಲ ತಾಮರಸನಾಭನೀತಾ 5
--------------
ವಿಜಯದಾಸ
ಸುನಾಮ ಗುರುವಂದಿತ ಶ್ರೀರಾಮ ಪ ಅಹಿಭೂಷಣ ನುತರಾಮ | ಮಹಿಜಾಪ್ರಿಯ ಶ್ರೀರಾಮ ಅ.ಪ ದಶರಥೇಂದ್ರ ಸುಕುಮಾರ | ನಿಶಿಚರಾಳಿ ಸಂಹಾರ | ಕೌಶಿಕ ಭಯ ಪರಿಹಾರ | ಪರಮಶೂರ ಶ್ರೀರಾಮ 1 ಮುನಿಗೌತಮ ಸತಿಪಾವನ | ಜನಕಾತ್ಮಜ ಮನಮೋಹನ | ಮುನಿಸನ್ನುತ ಸುರಜೀವನ | ವನಜೇಕ್ಷಣ ಶ್ರೀರಾಮ 2 ಜನಕಜಾ ಸುಮಿತ್ರಜಾಯುತ | ವನವನಾಂತರ ಸಂಚರಿತ | ಸನಕಾನತ ಶ್ರೀರಾಮ 3 ಭರತಾನತ ಪೂಜ್ಯಪಾದ | ಪರಮಾದ್ಭುತ ಶರ ವಿನೋದ | ಸುರಭೀಕರ ದೈತ್ಯಸೂದ | ಅಭಯಪ್ರದ ಶ್ರೀರಾಮ 4 ಖಚರಾಧಿಪ ಪ್ಲವಗೇಶ್ವರರಾಮ ವರದಾಯಕ ಭಯಹಾರಕ ರಾಮ | ಶುಭಕಾರಕ ಶ್ರೀರಾಮ 5 ನಿಶಿಚರ ಕಾಲಾಂತಕ ರಣಭೀಮ | ಸನ್ನುತ ಶ್ರೀರಾಮ 6 ಭುವನೋದ್ಧಾರಣ ಕಂಕಣ ರಾಮಾ | ಭುವನಾನಂದದ ಶ್ರೀರಾಮಾ 7 ದಾವಾನಲ ಸಮರಂಜಕ ರಾಮಾ | ರಾವಣಕುಲ ವಿಧ್ವಂಸಕ ರಾಮಾ | ಸೀತಾನಾಯಕ ಶ್ರೀರಾಮಾ 8 ರಾಕಾಚಂದ್ರ ಸುಧಾಕರ ರಾಮಾ | ಏಕಚಕ್ರಾಧಿಪ ರಘುರಾಮ | ಲೋಕಸುಖಂಕರ ಶ್ರೀರಾಮ 9 ಅಂಗದ ಹನುಮತ್ಸೇವಿತರಾಮ | ಮಂಗಳಕರ ಸೀತಾರಾಮ | ಮಾಂಗಿರಿನಿಲಯ ಶುಭಾನ್ವಿತ ರಾಮ | ಜಗವಂದಿತ ಶ್ರೀರಾಮ10
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್