ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾರ ಶಂಭೋ ಪಾಲಿಸಭವ ಧೀರ ಶ್ರೀಹರಿಸಖನೆ ಪರಶಿವ ಪ ಮೂರು ಪುರವ ಗೆಲಿದ ಮಹಿಮ ಮೂರು ಕರಣ ಶುದ್ಧನೆನಿಸಿ ಮೂರು ಗುಣಗಳ ಹಾರೈಸೆನಗೆ ಪಾದ ಭಕ್ತಿ 1 ಪಂಚಮುಖನೆ ಪದಕೆ ನಮಿಪೆ ಪಂಚಕ್ಲೇಶಗಳಳಿದು ಎನ್ನ ಪಂಚಕತ್ವ ನೀಗಿಸಿ ವಿ ರಂಚಿಪಿತನ ದಿವ್ಯಧ್ಯಾನ 2 ಕಾಮದಹನ ನೀಲಕಂಠ ಸ್ವಾಮಿ ನಿಮ್ಮನು ನಂಬಿ ಬೇಡ್ವೆ ಕ್ಷೇಮವಿತ್ತು ಪ್ರೇಮದೆನಗೆ ಭೂಮಿಪತಿ ಶ್ರೀರಾಮನೊಲುಮೆ 3
--------------
ರಾಮದಾಸರು
ಬಂತವ್ವಾ ತಂಗಿ ಬಂತವ್ವಾ ಈ ಗೊಂದು ಮಾತು ನೆನಪು ಬಂತವ್ವಾ ಪ ಅಂತರಂಗದೊಳು ಕಂತುಜನಕ ತನ್ನ ಚಿಂತಿಪರ್ಹಂತೆಲಿ ನಿಂತಿಹ್ಯನಂತೆ ಅ.ಪ ಮರುಳು ಬುದ್ಧಿಯನು ನೀಗವ್ವ ಬರೆ ತಿರುತಿರುಗಿ ಮರುಗಬೇಡವ್ವ ಕರಿರಾಜ ದ್ವರದನು ತರುಣಿಯ ಪೊರೆದನು ಸರಸದಿ ಪಾಂಡವರ ನೆರಳಾಗಿ ನಿಂತನು 1 ಹಂಚಿಕೆ ಪೇಳುವೆ ನಿನಗವ್ವ ನಿನ್ನ ವಾಂಛಲ್ಯ ಗುಣವೊಂದು ಕಳೆಯವ್ವ ಕಿಂಚಿತ್ತು ಮನದೊಳು ವಂಚನಿಲ್ಲದೆ ವಿ ರಂಚಿಪಿತನ ನಂಬಿ ಭಜಿಸವ್ವ 2 ಸುಳ್ಳೆ ಕಳವಳಿಸುವುದ್ಯಾಕವ್ವ ತಿಳಿ ನಳಿನಾಕ್ಷನ ಘನ ಮಹಿಮ್ಯವ್ವ ಹೊಲಸು ದೇಹದಾಸೆ ನೀಗಿದ ಭಕ್ತಗೆ ಸುಲಭನು ಶ್ರೀರಾಮ ಕೇಳವ್ವ 3
--------------
ರಾಮದಾಸರು