ಒಟ್ಟು 70 ಕಡೆಗಳಲ್ಲಿ , 22 ದಾಸರು , 58 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಭಗವದ್ಭಕ್ತ ಸಂಮೋಹ ಪ್ರಾರ್ಥನೆ) ಗಜಮುಖನ ಪ್ರಪಿತಾಮಹನಹಿಮನ ಗಜೆಯರಸನ ಪಿತನ ಪೆತ್ತನ ಸಾರಥಿ ಪಾದ ಪಂಕಜವ ಭಜಿಸಿ ಭಾರತಿವರನ ನಮಿಸುವೆ ಅಜಭವಾದಿ ಗುರೂತ್ತಮರ ನಿಜ ವೃಜಿನಪಂಕ ನಿವೃತ್ತಿಗೊಳಿಸುವದೆಂದು ವಂದಿಸುವೆ 1 ಅವ್ಯವಹಿತಾಸದೃಶ ಭಕ್ತಿಯ ಸವ್ಯಸಾಚಿ ಸಹಾಯ ಸಲಿಸಾ ದಿವ್ಯ ಪದವಿಯ ಪಡೆವೆನೆಂದುಗತವ್ಯಳೀಕದಲಿ ಕಾವ್ಯ ವ್ಯಾಕರಣಗಳಿಂದ ವಹಿಸಿದ ಸೇವ್ಯ ಗುರು ಲಾ- ತವ್ಯ ಮುನಿವರರಂಘ್ರಿಕಮಲವ ನುತಿಸಿ ನಮಿಸುವೆನು 2 ಪುಂಡರೀಕ ದಲಾಯತಾಕ್ಷನೆ ಹಿಂಡು ದೈವದ ಗಂಡನೆಂದತಿ ಚಂಡ ಮೈಗಳ ಖಂಡಿಸಿದ ಯತಿಮಂಡಲೇಶ್ವರನ ಪಾಂಡ್ಯದೇಶದೊಳವತರಿಸಿದಾ ಖಂಡಲಾತ್ಮನ ನಮಿಪೆ ಮಮ ಹೃ- ನ್ಮಂಡಲದಿ ಪಾಲಿಸು ಸುಧಾರಸವುಂಡು ನಲಿವಂತೆ 3 ಮೋದತೀರ್ಥ ಮಹಾಬ್ಧಿಯನು ಕಡೆ- ದಾದಿಯಲಿ ನ್ಯಾಯಾಮೃತವ ತೆಗೆ- ದಾದರದಿ ಸಜ್ಜನರಿಗುಣಿಸಿದ ಗಾಢಮತಿಯುತನ ಮಾಧವನ ಗುಣತರ್ಕ ತಾಂಡವ ವೋದಿಸುತ ಚಂದ್ರಿಕೆಯ ತೋರಿದ ಬೋಧಕರ ಪ್ರಲ್ಹಾದಮುನಿ ಕರುಣದಲಿ ಸಲಹೆನ್ನ 4 ಮಂಗಳಾಂಬುತರಂಗ ತುಂಗಾ ಸಂಗಿ ಮಂತ್ರಾಲಯದಿ ನಿಂದು ಕು ರಂಗ ವೈರಿಯ ಪೂರ್ವ ಕರುಣಾಲಿಂಗನೋತ್ಸುಕನ ಪಂಗು ಬಧಿರಾದ್ಯಂಗ ಹೀನರ ಪಾಂಗ ನೋಟದಿ ಪಾಲಿಸುವ ಯತಿ ಪುಂಗವಾರ್ಜಿತ ರಾಘವೇಂದ್ರರ ನಮಿಪೆನನವರತ 5 ಜೋಲಿಸುವ ಕಂಠದಲಿ ತುಳಸೀ ಮಾಲೆಯನು ಕರಯುಗದಿ ವೀಣಾ ತಾಳಗಳ ಬಾರಿಸುತ ಸರ್ವತ್ರದಲಿ ಸಂಚರಿಸಿ ಶ್ರೀಲಲಾಮನ ಲೀಲೆಗಳಿಗನು- ಕೂಲರಾದ ಸುರರ್ಷಿ ನಾರದ ರಾಲಯಸಿ ತಪ್ಪುಗಳ ತಿದ್ದುವುದೆಂದು ನಮಿಸುವೆನು 6 ಸತ್ಯಭಾಮಾಕಾಂತನಿದಿರಲಿ ನಿತ್ಯ ನಡೆಸುವನೆಂಬ ಸೇವೆಗೆ ಒತ್ತಿಬಹ ವಿಘ್ನಗಳ ದೂರದಿ ಕಿತ್ತು ಬಿಸುಟುವರ ಹತ್ತು ದೆಶೆಯಲಿ ನಿಂತು ರಕ್ಷಿಪ ಕೃತ್ತಿವಾಸ ಸುರೇಶಮುಖ ದೇ- ವೋತ್ತುಮರ ನಾ ನಮಿಪೆ ತತ್ವದ ಭೃತ್ಯನಹುದೆಂದು 7 ಪಾವಮಾನ ಮತೀಯ ವೈಷ್ಣವ- ರಾವಳಿಗೆ ಶರಣೆಂಬೆ ನಿಮ್ಮ ಕೃ- ಪಾವಲಂಬನವಿತ್ತು ಕರುಣವ ಶುದ್ಧಿಕರಿಸುತಲಿ ದೇವ ದೇವವರೇಣ್ಯ ಭಕ್ತರ ಕಾವ ಶೇಷಗಿರೀಂದ್ರನಾಥನ ಸೇವಿಸುವ ಸುಖವಿತ್ತು ಸುಲಭದಿ ಸಲುಹಬೇಕೆಂದು 8
--------------
ತುಪಾಕಿ ವೆಂಕಟರಮಣಾಚಾರ್ಯ
ಅಂತರಾತ್ಮಕ ವಿಠಲ | ಪೊರೆಯ ಬೇಕಿವಳಾ ಪ ಶಾಂತಮೂರುತಿ ಹೃದಯ | ಚಿಂತನೆಗೆ ವದಗೀ ಅ.ಪ. ಪತಿಸುತರು ಹಿತರಲ್ಲಿ | ವ್ಯಾಪ್ತನಾಗಿಹ ನಿನ್ನಾವಿತತ ಮಂಗಳರೂಪ | ಚಿಂತನೆಗೆ ಬರುತಾಮತಿ ಮತಾಂವರರಂಘ್ರಿ | ಶತಪತ್ರ ಸೇವಿಸುತಕೃತಕಾರ್ಯಳೆಂದೆನಿಸೊ | ಪತಿತ ಪಾವನ್ನ 1 ಜ್ಞಾನ ಸದ್ಭಕುತಿ ವೈ | ರಾಗ್ಯ ಭಾಗ್ಯಗಳಿತ್ತುನೀನಾಗಿ ಪೊರೆಯೊ ಹರಿ | ವತಾನಿ ಜನವಂದ್ಯವೇಣುಗಾನಪ್ರಿಯನ | ಗಾನಕಲೆ ತಿಳಿಸುತ್ತಾಧ್ಯಾನಾನು ಸಂಧಾನ | ಮಾಣದಲೆ ಈಯೋ 2 ಅದ್ವೈತ | ಭಾವಕ್ರಿಯ ದ್ರವ್ಯಗಳಓವಿ ತಿಳಿಸುತ ಹರಿಯೆ | ಭವಭಂಧ ಕಳೆಯೋ 3 ಕರ್ಮ | ಸಂಚಿತಗಳೆಲ್ಲಾ 4 ಸ್ಮøತಿಯೆ ವಿಧಿಯೆಂತೆಂದು | ವಿಸ್ಮøತಿಯೆ ನಿಷೇಧಮತಿಯ ಅಂಕೆಯ ಕೊಟ್ಟು | ಮಡಿ ಮೈಲಿಗೆಯೊಳುಗತಿಗೋತ್ರ ನೀನಾಗಿ | ಸತತ ಪೊರೆಯಲಿ ಬೇಕೋಹಿತಗುರು ಗೋವಿಂದ | ವಿಠಲ ಬಿನ್ನವಿಪೆ 5
--------------
ಗುರುಗೋವಿಂದವಿಠಲರು
ಅನಂತ ಹರಿ ವಿಠಲ | ಕಾಪಾಡೊ ಇವನಾ ಪ ಅನಘ ಕರುಣಾಳು ಹರಿ | ನಿನಗೆ ಭಿನ್ನೈಪೇ ಅ.ಪ. ಪಿತೃಮಾತೃ ಸೇವೆಯಲಿ | ರತಿಯ ಕರುಣಿಸು ಇವಗೆಹಿತ ವಹಿತ ವೆರಡರಲಿ | ಪ್ರೀತಿ ಸಮ ವಿರಲೀಮತಿ ಮತಾಂವರರಂಘ್ರಿ | ಹಿತದಿಂದ ಸೇವಿಸುವಮತಿಯನೇ ಕರುಣಿಸುತ | ಕಾಪಾಡೋ ಹರಿಯೇ 1 ಭಕುತಿ ಸುಜ್ಞಾನಾದಿ | ವ್ಯಕುತಿಗೈ ಇವನಲ್ಲಿಕಕುಲಾತಿ ಇರದಂತೆ | ಮುಕುತಿ ಸತ್ಪಥದೀಪ್ರಕಟಗೈ ಸ್ಥಿರಬುದ್ಧಿ | ಅಕಳಂಕ ಶ್ರೀಹರಿಯೆನಿಖಿಲಾಗಮ ಸುವೇದ್ಯ | ಭಕುತ ಪರಿಪಾಲಾ2 ಸ್ಮರಣೆ ಸುಖ ಸುಧೆ ಸುರಿದು | ಶರಧಿಭವ ಉತ್ತರಿಸೊಮರುತಾಂತರಾತ್ಮಕನೆ | ಕಾರುಣ್ಯ ಮೂರ್ತೇಆರುಹಲೇನಿಹುದಿನ್ನು | ಸರ್ವಜ್ಞ ನೀನಿರಲುಮೊರೆಇದನ ಸಲಿಸು ಗುರು | ಗೋವಿಂದ ವಿಠಲ3
--------------
ಗುರುಗೋವಿಂದವಿಠಲರು
ಆನಂದಾದ್ರಿವಿಠಲ | ನೀನೇ ಪೊರೆ ಇವಳಾ ಪ ಜ್ಞಾನಿಜನವಂದ್ಯ ಹರಿ | ಶ್ರೀನಿವಾಸಾಖ್ಯ ಅ.ಪ. ತರಳೆ ಬಹುನೊಂದಿಹಳೊ | ಕರುಣಾ ಮಾಳ್ಪುದು ದೇವದುರಿತವನ ದಾವಾಗ್ನಿ | ಶರಣಜನರೊಡೆಯಾ | ಮರುತ ಮತದಲ್ಲಿರುತೆ | ನೆರೆ ನಂಬಿಬಂದಿಹಳೊಕರುಣದಿಂ ಕೈಗೊಟ್ಟು | ಪರಿಪಾಲಿಸಿವಳಾ 1 ಅನ್ಯದೇವರ ಪೂಜೆ | ಇನ್ನಾದರು ಬಿಡಿಸಿನನ್ನೆಯಿಂ ನಿನ್ನನ್ನೆ | ಪೂಜಿಸುವ ಭಾಗ್ಯಾಇನ್ನಾದರೂ ಕೊಟ್ಟು | ಪನ್ನಂಗಶಯನಹರಿಮನ್ನಿಸೊ ಇವಳ ಹರಿ | ಅನ್ನಂತ ಮಹಿಮಾ 2 ಸಾಧುಜನ ಸದ್ವಂದ್ಯ | ಸತ್ಸಂಗವನೆ ಕೊಟ್ಟುಮಾಧವನೆ ನೀನಾಗಿ | ಕಾದುಕೊ ಹರಿಯೇಭೇಧಮತ ತತ್ವಗಳ | ಬೋಧಿಸುತ ಇವಳೀಗೆಸಾಧನವ ಗೈಸುವುದೋ | ಬಾದರಾಯಣನೇ 3 ಪತಿಸುತರು ಹಿತರಲ್ಲಿ | ವ್ಯಾಪ್ತ ನೀನೆಂಬಂಥಾಮತಿಯನೇ ಕೊಟ್ಟು ಸ | ದ್ಗತಿಯನೆ ಕರುಣಿಸೋ |ಸತತ ನಿನ್ನಯ ನಾಮ | ರತಿಯನೆ ಕರುಣಿಸುತಮತಿಮತಾಂವರರಂಘ್ರಿ | ಭಕ್ತಿಯನೆ ಈಯೋ 4 ಭಾವಜನಯ್ಯ ಎನೆಓವಿ ಬಿನ್ನವಿಪೆ ಹರಿ | ಸಲಿಸುವುದು ಇವನೇವೆಗುರ್ವಂತ ರಾತ್ಮಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಆವ ರೋಗವೊ ಎನಗೆ ದೇವಧನ್ವಂತ್ರಿ ಪ. ಸಾವಧಾನದಿ ಕೈಯ ಪಿಡಿದು ನೀ ನೋಡಯ್ಯ ಅ.ಪ. ಹರಿಮೂರ್ತಿಗಳು ಕಾಣಿಸವು ಎನ್ನ ಕಂಗಳಿಗೆಹರಿಯ ಕೀರ್ತನೆಯು ಕೇಳಿಸದೆನ್ನ ಕಿವಿಗೆಹರಿ ಮಂತ್ರ ಸ್ತೋತ್ರ ಬಾರದು ಎನ್ನ ನಾಲಿಗೆಗೆಹರಿ ಪ್ರಸಾದವು ಜಿಹ್ವೆಗೆ ಸವಿಯಾಗದಯ್ಯ 1 ಹರಿಪಾದ ಸೇವೆಗೆನ್ನ ಹಸ್ತಗಳು ಚಲಿಸವುಗುರುಹಿರಿಯರಂಘ್ರಿಗೆ ಶಿರ ಬಾಗದುಹರಿಯ ನಿರ್ಮಾಲ್ಯವಾಘ್ರಾಣಿಸದು ನಾಸಿಕವುಹರಿಯಾತ್ರೆಗಳಿಗೆನ್ನ ಕಾಲೇಳದಯ್ಯ 2 ಅನಾಥಬಂಧು ಗೋಪಾಲವಿಠಲರೇಯಎನ್ನ ಭಾಗದ ವೈದ್ಯ ನೀನೆಯಾದೆಅನಾದಿ ಕಾಲದ ಭವರೋಗ ಕಳೆಯಯ್ಯನಾನೆಂದಿಗು ಮರೆಯೆ ನೀ ಮಾಡಿದುಪಕಾರ 3
--------------
ಗೋಪಾಲದಾಸರು
ಆವುದು ಸ್ಥಿರವೆಲೋ ಮನವೆ ಇದು ಮಾಯವು ಕಾಣೆಲೊ ಪ ಆವದು ಸ್ಥಿರವೆಲೋ ಮಾಯವಿದೆಲ್ಲವು ಭಾವದಿ ಕುದಿಯುತ ನೋಯುವಿ ಯಾಕೆಲೊ ಅ.ಪ ಅರ್ಥವೆಂಬುವುದೆಲ್ಲ ವ್ಯರ್ಥವು ಮೃತ್ಯು ತಿಳಿಯೆ ನಿಖಿಲ ಅರ್ತುವಿಚಾರಿಸು ಸಾರ್ಥಕವಾವುದು ಮರ್ತುಕೆಡದೆ ಭವನಿರ್ತದಿಂ ಗೆಲೆಯೆಲೊ 1 ಸತಿಸುತರಿವರೆಲ್ಲ ಹಿತವಿರಲತಿ ಸೇವಿಪರೆಲ್ಲ ಗತಿಸಲು ಭಾಗ್ಯವು ಹಿತದೋರಿದವರೇ ಅತಿಜರೆಯುತ ನಿನ್ನ ವ್ಯಥೆಯ ಬಡಿಪರೆಲೊ 2 ಒಂದಿನ್ಹೋಗ್ವುದಂತು ತಪ್ಪದು ನೋಯುವುದ್ಯಾಕಿಂತು ಇಂದು ನಾಳೆನ್ನದೆ ತಂದೆ ಶ್ರೀರಾಮನ ಬಂಧುರಂಘ್ರಿಗಳಿಗ್ಹೊಂದಿ ನೀ ಸುಖಿಯಾಗೊ 3
--------------
ರಾಮದಾಸರು
ಕಂದ||ಗುರುವಾಸುದೇವರಂಘ್ರಿಸ್ಮರಣೆಗೆ ಸಂತೋಷ'ೀವ ಒಬ್ಬಟ್ಟಿನ ನುತಿವೆರಸಿದ ಕೀರ್ತನೆ ಪೇಳುವೆಹರುಷದಿ ಲಾಲಿಪುದು ಸುಜನರ್ಬಾಲೋಕ್ತಿಯನೂ1ಬೆಲ್ಲವು ಗೋಧಿಯು ತೊಗರಿಯುಒಳ್ಳೆಣ್ಣೆಯು ತುಪ್ಪವೆಂಬೀಯೈದ ನುತಿಯಲುಎಲ್ಲಾ ಲೋಕವ ನಿರ್'ುಸಿಚಲ್ಲಿದಭೂತಗಳು ತತ್ವಾರ್ಥಕ್ಕಾಸ್ಪದ'ಲ್ಲ 2ಹರುಷದಲಿದರೊಳು ಬೆರೆದಿಹಪರಮನು 'ಂಗಡಿಸಿ ದೂಸಿ ಮತ್ತೊಡಗೂಡಿಸಿಕರಗುತ ಪ್ರಮದರಿದರೊಳುನೆರೆಪೊಂದುವನೀಗ ಜೀವನಿದು ತತ್ವಾರ್ಥವೂ 3
--------------
ತಿಮ್ಮಪ್ಪದಾಸರು
ಕಮಲನಾಭ ನಿಮ್ಮ ಪಾದಕಮಲ ನಂಬಿ ಭಜಿಪೆ ಶ್ರೀ ಮಾಧವ ಪ ಪಕ್ಷಿಗಮನ ನಿಮ್ಮ ನಿರ್ಮಲಕ್ಷಯನಾಮ ಎನ್ನ ಜಿಹ್ವೆಗೆ ಲಕ್ಷ್ಯದಿತ್ತು ಪಿಡಿದು ಬಿಡದೆ ರಕ್ಷಿಸ್ಯಾದವ 1 ಮಂದಭಾಗ್ಯ ನಾನು ನಿಮ್ಮ ಬಂಧುರಂಘ್ರಿಕುಸುಮ ಮರೆ ಬಂದು ಬಿದ್ದೆ ದಯದಿ ಕಾಯೋ ಮಂದರೋದ್ಧಾರ 2 ಅರಿಯದೆ ನಾ ಮಾಡಿದಂಥ ಪರಮದುರಿತ ತರಿದು ತವ ಚರಣಸೇವೆ ನೀಡಿ ಪೊರೆಯೈ ಉರಗಶಯನ 3 ನಾನಾ ಬೇನೆಯೊಳಗೆ ಬಿದ್ದು ಹಾನಿಯಾಗಿ ಬಳಲುವಂಥ ಹೀನ ಬವಣೆ ತಪ್ಪಿಸಿನ್ನು ದಾನವಾಂತಕ 4 ಕ್ಷಣಕೆಕ್ಷಣಕೆ ಮಾನವರಿಗೆ ಮಣಿದು ಬೇಡಿ ಜೀವಿಸುವ ಬಿನಗುಕೃತಿ ಗೆಲಿಸು ದಯದಿ ದೀನಮಂದಾರ 5 ಜನಿಸಿದಂದಿನಿಂದ ನಾನು ಘನ ತಾಪತ್ರಯದಿ ನೊಂದೆ ಮನಕೆ ತಂದು ರಕ್ಷಿಸಿನ್ನು ಜನಕಜಾವರ 6 ಬುದ್ಧಿಯಿಲ್ಲದೆ ಕೆಟ್ಟೆನಭವ ಬಧ್ಧಜನರ ಸಂಗದಿ ಬಿದ್ದು ಶುದ್ಧಮತಿಯ ನೀಡಿ ಸಲಹು ಪದ್ಮನಾಭನೆ 7 ವಿಶ್ವ ವಿಶ್ವಾಕಾರ ನಿಮ್ಮ ವಿಶ್ವಾಸೆನಗೆ ಕೃಪೆಯ ಮಾಡಿ ನಶ್ವರೆನಿಪ ಮತಿಯ ಬಿಡಿಸು ವಿಶ್ವರಕ್ಷನೆ 8 ನೀನೆ ಗತಿಯು ಎನಗೆ ದೇವ ನಾನಾದೈವವರಿಯೆ ಸತ್ಯ ಜ್ಞಾನಪಾಲಿಸೊಳಿದು ಬೇಗ ಜ್ಞಾನಸಾಗರ 9 ಕೆಟ್ಟ ಹೊಟ್ಟೆ ಕಷ್ಟಕಡಿದು ದುಷ್ಟ ಭ್ರಷ್ಟ ಸಂಗ ತರಿದು ಶಿಷ್ಟ ಸಂಗ ದೊರಕಿಸೆನಗೆ ಸೃಷ್ಟಿಕರ್ತನೆ 10 ಸುಜನ ಸಹ ವಾಸದಿರಿಸನುಮೇಷ ಎನ್ನ ವಾಸುದೇವನೆ 11 ಹೀನ ಹೀನ ಜಗ ಅಭಿಮಾನ ತೊಲಗಿಸಧಿಕ ನಿಮ್ಮ ಧ್ಯಾನಾನಂದ ಕರುಣಿಸಯ್ಯ ಜನಾರ್ದನ12 ಭಾರವೆನಿಪ ವಿಷಮಸಂಸಾರ ಸುಲಭದಿಂದ ಗೆಲಿಸು ಘೋರ ಭವದ ತಾಪಹರ ನಾರಾಯಣ 13 ದೇಶದೇಶಂಗಳನು ತಿರುಗಿ ಅಸಂಬದ್ಧನಾದೆ ಸ್ವಾಮಿ ದೋಷ ಮನ್ನಿಸಯ್ಯ ಎನ್ನ ಈಶಕೇಶವ 14 ಸಂಚಿತಿಂದೀಗಳಿ( ಯಿ)ಸೆನ್ನ ಮುಂಚಿತಾಗಮ ಗೆಲಿಸು ಜೀಯ ಸಂಚಿತಾಗಮ ರಹಿತ ವಿರಂಚಿತಾತನೆ 15 ಚಾರುವೇದ ಪೊಗಳುವಂಥ ತೋರಿಸಯ್ಯ ನಿನ್ನ ಮೂರ್ತಿ ಮೂರು ಲೋಕ ಸಾರ್ವಭೌಮ ನಾರಸಿಂಹ 16 ಮದನನಯ್ಯ ಮುದದಿ ಬೇಡ್ವೆ ಸದಮಲ ಸಂಪದವ ನೀಡು ಸದಮಲಾಂಗ ಸರ್ವಾಧಾರ ಮಧುಸೂದನ 17 ಸಕಲ ವಿಘ್ನದೂರ ಮಾಡಿ ಮುಕುತಿಪಥಕೆ ಹಚ್ಚು ತ್ವರಿತ ಭಕುತರಿಷ್ಟ ಪೂರ್ಣ ಆದಿಲಕುಮಿನಾಯಕ 18 ದರ್ಜುಮಾಡಿಸೆನ್ನ ನಿಮ್ಮ ಮರ್ಜಿಪಡೆದ ಭಕ್ತರೊಳಗೆ ದುರ್ಜನಾಗಿ ದಯಾರ್ಣವ ನಿರ್ಜರೇಶನೆ 19 ಪೋಷಿಸೆನ್ನನುಮೇಷ ನಿಮ್ಮ ದಾಸನೆನಿಸಿ ವಸುಧೆಯೊಳು ಆಸೆಯಿಂದ ಬೇಡಿಕೊಂಬೆ ಕ್ಲೇಶನಾಶನೆ 20 ನಿರುತ ಮನದಿ ಹರಿಯ ನಾಮ ಬರೆದು ಓದಿ ಕೇಳುವರಿಗೆ ಪರಮ ಮುಕ್ತಿ ಕೊಡುವ ಮಮ ವರದ ಶ್ರೀರಾಮ 21
--------------
ರಾಮದಾಸರು
ಕರೆಕರೆಯಿದು ಸಂಸಾರವತಿ ಘೋರ ಪ ಹರಿಯನು ನೆರೆನಂಬಿ ಪರಮಸುಖವ ಪೊಂದು ಅ.ಪ ದುರಿತವು ಪರಿಹರವಾಗುವದು ಅರಗಿಗೆ ಬೆಂಕಿಯಿಟ್ಟ ತೆರನಾಹುದು ಮುಂದೆ 1 ಎಷ್ಟು ಗಳಿಸಿದರೂ ಸಾಲದು ಎಂದು ಕಷ್ಟವ ಪಡುವೆಯೊ ಅನುದಿನದಿ ಕೃಷ್ಣಗೆ ಪ್ರೀತಿ ಮಾಡು ಶಿಷ್ಟರಂಘ್ರಿಯ ಬೇಡು 2 ಒಂದೇ ಭಕುತಿಯಿಂದ ಕೊಂಡಾಡೊ ಅಂಧ ಪರಂಪರ ನೋಡಿದರೆ ಅಪಾರ 3
--------------
ಗುರುರಾಮವಿಠಲ
ಕಾಯವಿದು ನಿತ್ಯವೆಂದು ನೆಚ್ಚಬೇಡ ಮಾಯಾಕಾರ್ಯನಾಗಿ ಮೆರೆವುದಿದು ತಿಳಿದುನೋಡಾಕಾಯವಳಿವ ಮುನ್ನ ಹರಿಯ ಕೃಪೆಯ ಜೋಡ ತೋಡುನಾಯಬಾಯತುತ್ತ ನಂಬಿ ಬೆರೆಯ ಬೇಡ ಪಮಾತಾಪಿತೃರೇತಸ್ಸಿಂದ ಪತನವಾಗಿ ಪಂಚಭೂತಕಾರ್ಯದಿಂದ ಸ್ಥೂಲಾಕಾರವಾಗಿರೇತಸ್ಸು ರಕ್ತಗಳಾರು ಕೋಶವಾಗಿ ಕರ್ಮಜಾತಕಾಯ ಹೀಗೆ ತೋರುತಿಪ್ಪುದಾಗಿ 1ಹುಟ್ಟಿ ಬೆಳೆದು ನಲಿದು ಮುಪ್ಪಿನಿಂದ ಕ್ಷೈಸಿ ಕಡೆಗೆನಷ್ಡವಾಗಿ ಹೋಗಿ ಮಣ್ಣಿನೊಳಗೆ ಬೆರಸಿಇಷ್ಟೂ ಪರಿಯೊಳಾರು ವಿಕಾರವ ತೋರಿಸಿ ವಂದಿಷ್ಟೂ ಫಲವಿಲ್ಲದಂತೆ ುದಕೆ ಭ್ರಮಿಸಿ 2ಕಾಲಕರ್ಮ ಪಂಚಭೂತ ಮಿಳಿತವಾಗಿ ಇದಕೆಮೂಲವಾದ ಕರ್ಮವೆ ಪ್ರಧಾನವಾಗಿಢಾಳಿಸುವಾತ್ಮನ ತೇಜಾಧಾರವಾಗಿ ಕರ್ಮತೇಲಲಾಗಿ ದೀಪದಂತೆ ಪೋಪುದಾಗಿ 3ಬತ್ತಿಯನ್ನು ಎಣ್ಣೆಮುಗಿವ ಸಮಯಕಾಗಿ ಎಣ್ಣೆಯೂಮತ್ತೆ ತಂದು ತುಂಬೆ ದೀಪ ಪೋಗದಾಗಿಇತ್ತೆರದ ಕರ್ಮದಿಂದ ಚಕ್ರವಾಗಿ ಜನ್ಮಮೃತ್ಯುಗಳೀ ದೇಹಕ್ಕವಧಿುಲ್ಲವಾಗಿ 4ತೈಲಮಿಶ್ರವರ್ತಿಯಗ್ನಿ ಸಮ್ಮೇಳದಿಂದಾ ದೀಪಬಾಳಿಬೆಳಗುವುದು ತೈಲದಾಧಾರದಿಂದಾತೈಲಮುಗಿಯೆ ದೀಪ ಕೆಟ್ಟು ಹೋಹ ಛಂದದಂತೆಕೇಳು ದೇಹವೀಪರಿಯೊಳಿಹುದರಿಂದಾ 5ಹುಟ್ಟಿದಲ್ಲಿ ಸೂತಕವು ಹೊಂದಿದಲ್ಲಿ ಸೂತಕವುಮುಟ್ಟಿವಸ್ತುಗಳುಚ್ಚಿಷ್ಟಂಗಳಹವೂನಟ್ಟನಡುವೆ ಬಂದದೆಂದು ಶಿಷ್ಟರಿದ ಮನ್ನಿಸರುನಷ್ಟವಾಗಿ ಕಡೆಗೆ ತಾನು ಹೋಹ ದೇಹವೂ 6ತಾನು ಬಂದ ಬಗೆಯು ತನಗೆ ತಿಳಿಯದಿದ್ದರೂ ನಿನ್ನಸೂನು ಬಂದ ಬಗೆಯ ನೋಡಿ ತಿಳಿದುಕೊಂಡಾರುಹೀನನಾದ ಕಾಯವಭಿಮಾನಿಸದಿರು ಮುಂದೆಶ್ರೀನಾಥನ ಪದವ ಭಜಿಸಿ ಸುಖದಿಂದಿರುತಿರು 7ಮನವೆ ಮಿಥ್ಯದೇಹದಭಿಮಾನವೇತಕೆ ಬಹುಜನುಮ ಜನುಮದಲ್ಲಿ ದುಃಖದಗೆ ನೂಕೆಕೊನೆಗೂ ಹೀಗೆ ಬಂಧವನ್ನು ಕೊಡುವದಕ್ಕೆ ಮಚ್ಚಿಜಿನುಗುವಿರಿಕೆಯೇನು ಇನ್ನೂ ಬಿಡದೆ ಬಯಕೆ 8ಘೋರರೂಪಾಪಾರಸಂಸಾರಾಂಬುಧಿಯನ್ನೂಮೀರಲೇರು ವೆಂಕಟೇಶನಾಮನಾವೆಯನ್ನುಧೀರಗುರು ವಾಸುದೇವರಂಘ್ರಿಯನ್ನು ಬೇಗಸಾರುವ ವಿವೇಕತನವಂದು ಚೆನ್ನೂ 9ಕಂ|| ಜೀವನು ವಿರತಿಯ ಸಾಧಿಪಭಾವಧಿ ಮನದೊಡನೆ ಕಾಯವ ನೆಚ್ಚದಿರೆನ್ನುತಕೈವಲ್ಯದ ಪಥವ ಪೇಳಲುಜೀವನೊಳಾಡಿದುದು ಕಾಯವಚ್ಚರಿಯೆನ್ನಲೂ
--------------
ತಿಮ್ಮಪ್ಪದಾಸರು
ಕೇಳಿದರೆನಗೇನು ಗೊತ್ತಿಲ್ಲ ಹೇಳುವದ್ಹುಟ್ಟನಾ ಕಲಿತಿಲ್ಲ ಪ ಹೇಳಿದ್ದೆ ಕೇಳಿ ನಾ ಮೂಲತಿಳಿದು ಭವ ಮಾಲನ ಭಜಿಸುವೆನಲ್ಲ ಅ.ಪ ವೇದಮೊದಲು ನಾನೋದಿಲ್ಲ ವೇದಮಂತ್ರ ಗೊತ್ತೆನಗಿಲ್ಲ ಮೇದಿನಿಯೊಳು ಹರಿಪಾದದಾಸರು ನಿ ವೇದಿಸಿದ ತೆರ ಸಾಧಿಪೆನಲ್ಲ 1 ನಿತ್ಯತತ್ತ್ವಗೊತ್ತೆನಗಿಲ್ಲ ಮತ್ತು ಆವಶಾಸ್ತ್ರ ಗತಿಯಿಲ್ಲ ಸತ್ಯರು ಪೇಳಿದ ನಿತ್ಯವಾಕ್ಯಗಳ ಚಿತ್ತವಿಟ್ಟರಿಯುತ್ತ ಸತ್ಯ ನಂಬಿಹೆನಲ್ಲ 2 ಛಂದಸ್ಸು ಲಕ್ಷಣ ನೋಡಿಲ್ಲ ಒಂದು ಪುರಾಣದರ್ಥ ಮಾಡಿಲ್ಲ ಬಂಧುಭಜಕರಾನಂದ ಶ್ರೀರಾಮನ ಬಂಧುರಂಘ್ರಿ ಸ್ಮರಣೊಂದೆ ಬಲ್ಲೆನಲ್ಲ 3
--------------
ರಾಮದಾಸರು
ಕೋಟಿ ಪೂಜೆಗೆ ಸಮವು ಸ್ತೋತ್ರವು ಸಾಟಿಯಿಲ್ಲ ಮನಾಲಯಕ್ಕೆ ಭ ವಾಟವಿಯ ದಾಟುವರು ಸುಲಭದಿ ಪರಮ ವೈಷ್ಣವರು 1 ಕರಿ ಕನಕಕಶಿಪುಸುತಜಾಮಿಳ ನರಪ ರುಕ್ಮಾಂಗದನು ದ್ರೌಪದಿ ದುರುಳ ರಾವಣನನುಜ ಮನು ಪೌತ್ರನು ವಶಿಷ್ಠ ಮುನಿ ಸುರನದೀಸುತ ಶುಕನು ಶೌನುಕ ಬಲಿ ಕಿರೀಟಿಗಳು 2 ಇವರು ಮೊದಲಾದವರು ಭಕ್ತ ತವಕದಲಿ ಸಂಪಾದಿಸಿದರಿವರಂಘ್ರಿಯ ಸ್ಮರಣೆ ತವತವಗೆ ಕೊಡುತಿಹುದು ನಿತ್ಯದಿ ಕವಿವಿನುತ ಗುರುರಾಮ ವಿಠಲನ ದಯೆ ಪಡೆಯಬಹುದು 3
--------------
ಗುರುರಾಮವಿಠಲ
ಗುರುಸತ್ಯವರರೆಂಬ ಕಲ್ಪಭೂಜಾ ಧರೆಯೊಳಗೆಮ್ಮನುದ್ಧರಿಸ ಬಂತಿದಕೊ ಪ ಶ್ರೀಮಧ್ವಮತವೆಂಬೋ ಭೂಮಿಯೊಳಗುದ್ಭವಿಸಿ ರಾಮ ವೇದವಾಸ್ಯರಂಘ್ರಿ ಯುಗಳ ವ್ಯೋಮ ಮಂಡಲವನಾಶ್ರಯಿಸಿ ಸತ್ಕೀರ್ತಿನಿ ಸ್ಸೀಮ ಶಾಖೋಪಶಾಖೆಗಳಿಂದ ಶೋಭಿಸುತ 1 ಭವವೆಂಬ ಭಾಸ್ಕರತಪದಿಂದ ಬೆಂದು ಬಂ ದವರ ಮಂದಸ್ಮಿತ ನೆಳಲಿಂದಲೀ ಪ್ರವಣರಂತಃಸ್ತಾಪ ಕಳೆದು ನಿತ್ಯದಲಿ ಸ ತ್ಕವಿ ದ್ವಿಜಾಳಿಗಲಿಗಾಶ್ರಿತರಾಗಿ ಮೆರೆವ 2 ಕರ್ಮ ಜ್ಞಾನ ಮಾರ್ಗಸ್ಥ ಜನರಿಗಾಗಿ ಲ್ಲಿಹವು ಫಲ ಪುಷ್ಪ ಐಹಿಕಾಮುಷ್ಮಿಕಾ ಭುಜಗ ಹೃ ದ್ಗುಹದೊಳಿಪ್ಪದು ಮಾಯಿಮೂಷಕಗಳೋಡಿಸುತ 3
--------------
ಜಗನ್ನಾಥದಾಸರು
ತೆರಳಿದರು ವೈಕುಂಠ ಪುರದರಸನ ಚರಣಾಬ್ಜ ಸೇವಿಸಲು ನರಸಿಂಹದಾಸರು ಪ ಜವಹರುಷದಿಂದ ಪಾರ್ಥಿವ ಮರುಷ ಮಾರ್ಗಶಿರ ಅಪರ ಪಕ್ಷದ ಪಪ್ಠಿ ಭೌಮವಾರ ದಿವದಿ ಪ್ರಾತಃಕಾಲ ಸಮಯದಲಿ ಶ್ರೀ ಲಕ್ಷ್ಮೀ ಕಮಲ ಧೇನಿಸುತ ಸಂತೋಷದಲಿ 1 ವರಹತನಯಾತೀರ ಪ್ರಾಚಿದಿಗ್ಬಾಗದಲಿ ಸುಕೃತ ಛಾಗಿಯೆಂಬಾ ಪುರವರದಿ ತತ್ವ ತತ್ವೇಶರೊಳು ಲಯವರಿತು ಪರಮ ಪುರುಷನ ದಿವ್ಯ ನಾಮಗಳ ಸ್ಮರಿಸುತಲಿ 2 ಭವ ಅನಂ ತರಸನ ಜಠರದಿ ಜನಿಸಿ ಬಂದೂ ಪುರಂದರ ದಾಸರಂಘ್ರಿಗಳ ಸ್ಮರಿಸುತ ಜಗನ್ನಾಥ ವಿಠಲನೊಲುಮೆಯ ಪಡೆದು 3
--------------
ಜಗನ್ನಾಥದಾಸರು
ತೇಲಿದೆ ಅಯ್ಯಾ ತೇಲಿದೆ ಪ ತೇಲಿಬಾರದಂಥ ಸುಳಿಯ ಮಡುವುಮುಳುಗಿ ನೀಲಶಾಮನ ಪಾದಕಮಲಕರುಣದಿಂದ ಅ.ಪ ಪಾರಾವಾರಿಲ್ಲದ ಮಡುವು ಕಾಲು ಜಾರಿ ಬಿದ್ದಿದ್ದೆ ತಪ್ಪಿದಡವು ಬಲು ಮೇರೆದಪ್ಪಿದ ತೆರೆ ಸೆಳವು ಉಲಿ ದ್ಹಾರಿಬರುವ ಜಲಚರವು ಆಹ ಮೀರಿದಂಧಕಾರ ನೀರಿನ ಸುಳಿಯೊಳು ಘೋರಬಡುತಲಿರ್ದೆ ಮುಳುಮುಳುಗೇಳುತ 1 ತಂಡತಂಡದಿ ಒದಗುವ ಬಲು ಗಂಡಸುಳಿಯು ತಿರುಗುವ ಒಳ ಗೊಂಡ ಮತ್ಸ್ಯಮಕರಿಭಯವ ಆಹ ಕಂಡು ಕಾಣದೆ ಬಿದ್ದು ಗುಂಡಿಗೊಡೆದು ನಾನು ಬೆಂಡಾದೆ ಕಂಗೆಟ್ಟು ಮುಳುಮುಳುಗೇಳುತ 2 ಹಿಂದಕ್ಕೆ ಏನಾದದ್ದಾಯ್ತು ಶ್ರೀಶ ಮುಂದೆ ಎನ್ನಗೆ ಇಂಥ ಹೊತ್ತು ಈಶ ಎಂದೆಂದು ತರದಿರು ಮತ್ತು ಕೇಶ ಕಂದನ ಸನ್ಮಾರ್ಗಕ್ಹೊತ್ತು ಆಹ ಸಿಂಧುಶಯನ ಎನ್ನ ತಂದೆ ಶ್ರೀರಾಮ ನಿನ್ನ ಬಂಧುರಂಘ್ರಿಯ ಕೃಪೆಯಿಂದ ನಾ ಉಳಕೊಂಡೆ 3
--------------
ರಾಮದಾಸರು