ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಡಿಗ ಮಾನವನೆ ಪ ಸೂನು ಹೆಡತಲೆಯಲಿ ನಗುವ ಅ.ಪ. ಬಾಲನು ನಾನು ಭಾಗ್ಯಶಾಲಿಯೆನುತ ನಿತ್ಯ ಲೀಲ ವಿನೋದವೆಂಬ ಜಾಲದೊಳು ಸಿಲುಕಿ ಕಾಲವ ಕಳೆದು ಮಾಲೋಲನ ಮರೆತಂಥ ಮಾನವ ಪಶುಪಾಲನಾದವ ನಿನಗೆ 1 ತಾಸು ತಾಸಿಗೆ ನೀನು ಲೇಸಾಗಿ ಭುಂಜಿಪೆ ಬೇಸರಿಲ್ಲವೊ ನಿನಗೆ ರಾಸಿ ಭೋಗಗಳಲಿ ಕಾಸುವೀಸವ ಕೊಡೆ ಹರಿದಾಸರಾದವರಿಗೆ ದೋಷಕಾರಿಯೆನಿಸಿದ ಹೇಸಿಕೆ ಮನದವನೆ 2 ಕಡುಪ್ರಿಯರೆಂದೆನಿಸುವ ಮಡದಿ ಮಕ್ಕಳು ಎಂಬ ಬೆಡಗು ತೋರುವ ಮೋಹ ಮಡುವಿನೋಳ್ಬಿದ್ದು ಒಡೆಯ ಶ್ರೀ ರಂಗೇಶವಿಠಲರೇಯನ ಪಾದ ಜಡಜವ ನಂಬದೆ ನೀ ಕೆಡಬೇಡ ಮನುಜ 3
--------------
ರಂಗೇಶವಿಠಲದಾಸರು
ಮರೆವೆನೆ ನಾ ನಿನ್ನ ಕರಿಗಿರಿ ದೊರೆ ಕರುಣಾಪೂರ್ಣನ್ನ ಪ ನರಹರಿ ರೂಪದವನ ನಖದೀ ಹಿರಣ್ಯನ ಸೀಳಿದವನ ವರಪ್ರಹ್ಲಾದ ವರದನ ಅಂಕದಿ ಸಿರಿಯ ಧರಿಸಿಕೊಂಡಿಹನ 1 ದಾನವಕುಲ ಸಂಹರನ ತನ್ನ ಧ್ಯಾನಿಸಿದರೆ ಒದಗುವನ ಆನೆಗೊಲಿದು ಬಂದವನ ಭಕ್ತಾಧೀನನಾಗಿ ಇರುತಿಹನ 2 ಶುದ್ಧ ಸತ್ವ ಶರೀರನ ಅಷ್ಟ ಸಿದ್ಧಿಪ್ರದನೆಂಬುವನ ಮದ್ಗುರು ಅಂತರ್ಗತನ ಸ್ತಂಭದಿ ಉದ್ಭವಿಸಿ ಬಂದವನ 3 ಗೀರ್ವಾಣ ಶುಭತಮ ಚರಿತನ 4 ಇಂಗಡಲಸುತೆಯಾಣ್ಮನ ಮುದ್ದು ರಂಗೇಶವಿಠಲರೇಯನ5
--------------
ರಂಗೇಶವಿಠಲದಾಸರು