ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರಿ ಯಾರೊ ನಿನಗೆ ಪರಮ ಕರುಣಾನಿಧೆ ಪ ಸರಿ ಯಾರೊ ನಿನಗೆ ಗರುಡವಾಹನ ನಿನ್ನ ಸ್ಮರಿಸುತಿರುವರನು ಕರುಣದಿ ಪೊರೆಯುವೆ ಅ.ಪ. ಕರಿರಾಜ ಕೂಗಲು ಭರದಿಂದ ಪೋದೆಯೊ ಸರಸಿಜ ಭವನುತ ಸುರಗಣ ಸೇವಿತ 1 ಕಂದನ ಮಾತನು ಛಂದದಿಂ ಕೇಳುತ ಬಂದು ಸಂತೈಸಿದ ಇಂದಿರ ರಮಣನೆ 2 ದುಷ್ಟರ ಸದೆಯುತ ಶಿಷ್ಟರ ರಕ್ಷಿಸುವ ದಿಟ್ಟ ರಂಗೇಶವಿಠಲರಾಯನೆ 3
--------------
ರಂಗೇಶವಿಠಲದಾಸರು