ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

Àಥವನೇರಿ ಬರುವ ರಂಗನಾಥನ ನೋಡಿ ಪ ಅತಿಶಯವಾದಂಥ ಪರಗತಿಯನು ಪಡೆಯಿರೊ ಅ.ಪ. ಹಸ್ತಿಗಳು ಚಾಮರ ಹಾಕುತಲಿರೆ ಸ್ವಸ್ತಿವಾಚನಗಳನು ದ್ವಿಜರು ಪೇಳುತಲಿರೆ ಸ್ವಸ್ತಿಲಿ ವಿವಿಧ ವಾದ್ಯತತಿ ಸೂಳೈಸುತಲಿರೆ ಮಸ್ತಕಾಂಜಲಿಪುಟದಿ ಹರಿದಾಸರು ಪೊಗಳುತಿರೆ 1 ಸಾಲು ಪಂಜಿನ ದೀವಟಿಗೆಗಳು ಮೆರೆಯೆ ನಾಲ್ಕು ದಿಕ್ಕಲಿ ಜನರು ನಿಂತು ನೋಡುತ ನಲಿಯೆ ಲೀಲೆಯ ತೋರುತ ಶ್ರೀ ಭೂದೇವಿಯರಿಂದ ಲೋಲುಪ ತಾನಾಗಿ ಬಹು ಸಂಭ್ರಮದಿಂದ 2 ನಭದೊಳು ಸಕಲ ದಿವಿಜರೊಡಗೂಡಿ ತಾ ನಭುಜಭವನು ನಿಂತು ನೋಡಿ ಹಿಗ್ಗುತಿರೆ ಇಭರಾಜವರದ ಶ್ರೀ ರಂಗೇಶವಿಠಲನು ತ್ರಿಭುವನ ಪಾವನ ಮಾಡಿ ಸೊಬಗು ತೋರುತ 3
--------------
ರಂಗೇಶವಿಠಲದಾಸರು
ಗರುಡನೇರಿ ಬಂದ ಸಿರಿರಮಣನು ತಾನು ಪ ಗರುಡನೇರಿ ಬಂದ ಸಿರಿರಮಣನು ತನ್ನ ಶರಣ ಕರುಣದಿ ಪೊರೆಯಲೋಸುಗ ಭರದಿ ಅ.ಪ. ಕರಿರಾಜನು ಅಂದು ಕ್ರೂರ ನಕ್ರಗೆ ಸಿಲ್ಕಿ ತೆರವಿಲ್ಲದೆ ಕೂಗುತ ಚೀರುತಿರಲು ಸುರರು ಮೊದಲಾಗಿ ಸತಿಸುತ ಬಾಂಧವರು ಅರಿತು ಅರಿಯದಂತೆ ತ್ರಾನದಿಂದ್ದಾಗ 1 ಉತ್ತಾನಪಾದನು ಚಿತ್ತದಿ ಮರುಗದೆ ಮತ್ತೆ ಬÁಲನ ಕರೆದು ಮನ್ನಿಸದೆ ಅತ್ತ ಸಾರೆಂದು ಸುರುಚಿ ನೂಕಿದ ಮೇಲೆ ಚಿತ್ತಜನಯ್ಯನ ಸ್ಮರಿಸಿದ ಮಾತ್ರದಿ 2 ನೀಚ ರುಕ್ಮನು ತನ್ನನುಜಾತೆಯನಂದು ಮಾಚಿಸಿ ಶಿಶುಪಾಲಗೀವೆನೆಂದು ಯೋಚಿಸಿ ಮನದೊಳು ಹರಿಯ ದೂರುತಲಿರೆ ತಾ ಚಿಂತೆ ತಾಳಿದ ರುಕ್ಮಿಣಿಯ ಕೈಪಿಡಿಯಲು 3 ಅಕ್ಷಯ ಪಾತ್ರೆಯ ತೊಳೆದು ಪಾಂಚಾಲೆ ಪಕ್ಷಿದೇರನ ಧ್ಯಾನದೊಳು ಕುಳಿತಿರಲು ಭಿಕ್ಷೆ ಬೇಡುತ ಬಂದು ದೂರ್ವಾಸ ಮುನಿಪನು ಶಿಕ್ಷಿಸೆನೆಂದಾಗ ಸತಿಗೆ ಮುಂದೋರದಂದು 4 ಗರುವ ಪಾರ್ಥನು ಅಂದು ಗಂಗಾ ಶಾಪದಲಿ ಅಸುವ ತೊರೆದು ರಣದೊಳು ಬಿದ್ದಿರಲು ಅರಿತು ಮನದೊಳು ಅನಿಲಜನೊಡಗೂಡಿ ಸಿರಿ ರಂಗೇಶವಿಠಲನು 5
--------------
ರಂಗೇಶವಿಠಲದಾಸರು