ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸು ಕರುಣಿಸು ಪರಮ ಪುರುಷ ರಂಗ ಪ ಕರಿಯ ಮೊರೆ ಕೇಳಿ ಹರಿತಂದಂತೆನ್ನಾ ಅ.ಪ ನೀರೊಳು ಮುಳುಗುತ ಗಿರಿಯ ಬೆನ್ನಲಿ ಪೊತ್ತ ಕೋರೆಯ ತೋರುತ ನರಹರಿಯಾದರು ಬಿಡೆನೊ 1 ನೀನೆ ತರಿದುಂಡರು ನಾ ನಿನ್ನ ಬಿಡುವೆನೆ ಮೌನಿ ಕುವರನಾಗಿ ಜನಿಸಿದರು ಬಿಡೆನೊ 2 ಪುರವ ಕಳೆದು ವನಕೆ ತೆರಳಿದರು ಬಿಡೆನೊ ಉರಗನ ಮಡುವಿನೊಳು ಸರಿದರು ನಾ ಬಿಡೆನೊ 3 ದಿಗಂಬರ ನೀನಾಗಿ ಹಗರಣವ ಮಾಡಲು ಮಗುಳೆ ತೇಜಿಯನೇರಿ ಪೋಗಲು ನಾ ಬಿಡೆನೊ 4 ಗರುಡನ ಹೆಗಲೇರಿ ತಿರುಗಿದರು ಬಿಡೆನೊ ಸಿರಿ ರಂಗೇಶವಿಠಲನೀ ಕರೆಕರೆಗೊಳಿಸÀದೆ 5
--------------
ರಂಗೇಶವಿಠಲದಾಸರು