ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ಸಲಹುದೋ ರಂಗಾ ಎನ್ನ ಸಲಹು| ನಿನ್ನ ಚರಣ ಕಮಲದೋರಿ| ಗಮನ ರಂಗಾ ಪ ನಷ್ಟ ಪರಮ ಪತಿತ ಗತಿಯ|ಗೆಟ್ಟು ಅಜಮಿಳ ತನ್ನ| ಕಷ್ಟ ಬಡುವ ಕಾಲದಲ್ಲಿ ಸುತನ ಪೆಸರನು| ಮುಟ್ಟಿ ಕರಿಯೇ ತೃಪ್ತನಾಗಿ|ಅಷ್ಟರಿಂದ ಅವಗ ನಿನ್ನ| ಪಟ್ಟಣಕ ನೀ ಅಟ್ಟಿ ಗತಿಯ|ಕೊಟ್ಟು ಸಲುಹಿದೆ ರಂಗಾ 1 ಸಂಧಿಸಿ ಮಧ್ಯರಾತ್ರಿಯೊಳಗ|ಬಂದು ದೂರ್ವಾಸನ್ನವ ಬೇಡ| ಲಂದು ದೃಪದ ನಂದನೆ|ನಿನ್ನೆ ಸ್ಮರಿಸೆ ತ್ವರಿತದಿ| ಬಂದು ನಿಂದು ಬೇಡಿದುದನು|ಛಂದದಿಂದಲಿತ್ತು ದ್ವಿಜರಾಜ| ನಂದ ಬಿಡಿಸಿ ಐವರ ಮಾನ ಕುಂದಂತೆ ಕಾಯ್ದೆ ರಂಗಾ 2 ಐದು ವರುಷ ಹಸುಮಗನಾ|ಬೈದು ಮಲತಾಯಿ ಪೊರಗೆ| ಹಾಕಲಾಗ ಧೃವನು ನಿನ್ನ ಕುರಿತು ಧ್ಯಾನವಾ| ಗೈಯ್ಯಲಾಗಿ ಅಚಲ ಪದಕ|ಒಯ್ದು ಇಟ್ಟು ನೀನು ಅವನ| ಕಾಯ್ದೆ ಮಹಿಪತಿ ನಂದನೊಡೆಯನಾದ ದೇವ ರಂಗಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಯೋ ಕರುಣಿಸಿ ಎನ್ನ ರಂಗಾ | ಬೇಗನೇ ಪಾದವದೋರಿಸಿ | ನಮನಕ ಭವಬಲಿಯನು ಬಿಡಸಿ ರಂಗಾ ಪ ಶರಣೆಂದು ಸಕಲರು ಬಂದು ಪೋಗುವಾ | ನಿನ್ನ ಮಹಾದ್ವಾರದಲಿ | ಇರುತಿಹ ನಿನ್ನಯ ಭಕುತ ಬಲೆಯಲಿ | ಇರಿಸಿ ನೀ ಇಟ್ಟು ಅಚಲದಲಿ ರಂಗಾ | ಸಂಬಳನಿತ್ತಿಹ ಧನವ ನಾನೊಲ್ಲೆ | ಬೇಡುವೆ ಒಂದÀನೋ ರಂಗಾ | ಹಂಬಲ ದಣಿವಂತೆ ನಾಮ ಭಾಂಡಾರವ | ಮಾಡೆನ್ನ ಆಧೀನವ ರಂಗಾ 1 ಕರಿದಲಿಧೃತಿ ಚಿತ್ತವನಿತ್ತು ಅನುದಿನಾ | ಹರಿಪಾದ ಸದ್ಬಕ್ತಿಯಾ ರಂಗಾ | ಮೆರೆವ ಮಂಟಪದೊಳು ನಿಲಿಸೆನ್ನ | ದುರಿತವ ತಟ್ಟದಂದದಿ ಪೊರೆಯೋ ರಂಗಾ2 ಇಹಪರದಲ್ಲಿ ಏಕೋದೇವನೆಂಬ ಮುದ್ರೆಯಾ ಭಾವದ ಬಲದಿಂದಲಿ | ಮಹಿಪತಿ ಸುತ ಪ್ರಭು ಕೊರಳಿಗೆ ಹಾಕಿನ್ನು | ಸಲಹು ನೀ ಕೃಪೆಯಿಂದಾ ರಂಗಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದಿನ ದಿನ ಹರಿಕೃಷ್ಣಯೆನುತಿರೆ ಮನುಜನ ಮನವೆ ವೈಕುಂಠವೆಂದೆನಿಸುವುದು ಪ ನೆನೆಯುವ ಭಕ್ತನ ಕಿವಿಯಲಿ ಕೊಳಲಿನ ದನಿಜನಿಪುದು ಕಂಬನಿ ಮಿನುಗುವುದು ಅ.ಪ ಪೊಡವಿ ಪತಿಯ ಎಡತೊಡೆಯೊಳಿದ್ದಾ ಮುದ್ದು ಹುಡುಗನ ಬಲತಾಯಿ ಪಿಡಿದೆಳೆಯೇ ಕಡು ದುಗುಡದಿ ಶಿಶು ಅಡವಿಯೊಳಗೆ ಸಿರಿ ಯೊಡೆಯನ ಕಂಡು ಕೊಂಡಾಡಿದನು 1 ದ್ಯೂತದೊಳೆಲ್ಲವ ಸೋತರ ಸತಿಯಳ ಘಾತಿಸಿ ಸೀರೆಯ ಸೆಳೆದಾಗ ಭೀತಿಯಿಂದಲಿ ಪರಂಜ್ಯೋತಿ ಕೃಷ್ಣಾಯೆನೆ ಪ್ರೀತಿಯೊಳಕ್ಷಯ ವರವಿತ್ತಾ ಕೃಷ್ಣಾ2 ಕೂಗಿದೊಡನೆ ತ್ವರೆಯಾಗಿ ಬರುವ ನಮ್ಮ ನಾಗಶಯನ ಮಾಂಗಿರಿಪತಿಯ ರಾಗದಿ ಪೂಜಿಸಿ ವಂದಿಸಲವನನು- ರಾಗದಿ ನರ್ತಿಪನೆಡಬಲದಲಿ ರಂಗಾ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್