ಒಟ್ಟು 8 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ರಂಗಾನಟ್ಟೂಳಿಗೆ | ಇರಲಾರೆವಮ್ಮಾ ನಾವುಬಂದುಪಾಯವ ಕಾಣೆವೆ | ವನಿತೆ ಗೋಪ್ಯಮ್ಮಾ ಕೇಳೆ ಪ ಹಿರಿಯರಾದವರಿಗೆ | ಭರದಿ ಪೇಳೇವೆಂದರೆಸರಸಿಜ ಸಂಭವನಿಗೆ ಹಿರಿಯನೀತ ಕಾಣಮ್ಮ 1 ಮಾಯಗಳ ಮಾಡಿ ನಾವೂ | ಹೊಯಿಲೆಬ್ಬಿಸೇವೆಂದರೆಮಾಯಾದೇವಿಗೆ ಸಿಗದೆ | ಮಾಯಾವ ತೋರುವನಮ್ಮ 2 ಗುಮ್ಮನ ತೋರಿದರೀಗಾ | ಒಮ್ಮೊಮ್ಮೊ ಲೆಕ್ಕಿಸನಮ್ಮ ಅಮ್ಮಮ್ಮ ಶ್ರೀ ನಾರಸಿಂಹ | ಅದ್ಭತಾದ ದೈವ ಕಾಣಮ್ಮ 3 ಅರಿವಿ ಸರ್ಪಾನ ಮಾಡಿ | ಭರದಿ ಅಂಜಿಸೇವೆಂದರೆಖರೆಯವಾಗಿದ್ದ ದೊಡ್ಡಾ | ಉರಗಶಾಯಿ ಕಾಣಮ್ಮ 4 ಅರಸರಿಗ್ಹೇಳಿದರೂ | ಬರಿದಾಗುವುದೇ ನಿಜಧರೆ ಗಗನ ಪಾತಾಳದ | ಅರಸನಲ್ಲವೇನಮ್ಮ 5 ಕಾಸು ವೀಸಾ ಕೈಯ್ಯಾಳಿಟ್ಟೂ | ಕೂಸಿಗೆ ಬುದ್ಧಿ ಹೇಳುವೆಕೋಶ ಭಾಗ್ಯದಭಿಮಾನಿ | ಶ್ರೀಶನೇ ಈಶ ಕಾಣಮ್ಮ 6 ಪಾಪದ ಭೀತಿ ತೊರದು | ಭೂಪ ರಂಗ ಅಂಜಾನಮ್ಮಪಾಪ ರಹಿತರಾದವರ | ತಪಸಿಗಳೊಡೆಯಾನಮ್ಮ 7 ಮ್ಯಾಣದ ಚೇಳು ತೋರುವೆ | ಜಾಣ ರಂಗ ಅಂಜಾನಮ್ಮಮೇಣು ಮೂವತ್ತಾರು ಲಕ್ಷ | ತಾಂ ಶಿಂಶುಮಾರಾನಮ್ಮ 8 ಅನ್ನ ವಸನಗಳಿತ್ತು | ಮನ್ನಿಸೆವೆಂದಾರೆ ಪುಸಿಕನ್ಯೆ ದ್ರೌಪದಿ ದುಮ್ಮಾನ | ಮುನ್ನೆ ಇದಕ್ಕೇ ಸಾಕ್ಷಿಯಲ್ಲೆ 9 ಅಣ್ಣ ತಮ್ಮಾ ಬಂಧೂ ಬಳಗ | ಜನರುಂಟೇನೆ ಹೇಳೇವೆಅನಾದಿ ಕಾಲದಿಂದಾ | ಘನ್ನ ತಾನೇ ಏಕಮೇವ 10 ಚಿಣ್ಣ ನೀ ಅಣ್ಣಾ ಬಾಯೆಂದು | ಮನ್ನಿಸೇವೆಂದಾರೆ ಪುಸಿಅನಂತ ವೇದಗಳಿವನ | ಬಣ್ಣಿಸಿ ಹಿಂದಾಗಲಿಲ್ಲೆ 11 ಊರು ಕೇರಿಗಳಾ ಬಿಟ್ಟು | ದೂರ ಬಾರ ಹೋದೇವೇನೆಸಾರ ವ್ಯಾಪ್ತನಾಗಿ ಇಪ್ಪಾ | ಯಾರಿಗೆ ದೂರುವೆನಮ್ಮಾ 12 ಕದ್ದು ಕದ್ದೋಡುವಾ ನಮ್ಮ | ಲಿದ್ದು ಪಿಡಿಯಾಲೊಶವಲ್ಲೆ ರುದ್ದರನ್ನಾ ಓಡೀಸಿದಾ | ಮುದ್ದು ರಂಗಾನಿವನಮ್ಮ 13 ಹಗ್ಗದಿ ಕಟ್ಟೀದರಾಗ | ಬಗ್ಗನಮ್ಮಾ ನಿನ್ನ ಮಗಅಗ್ಗಳೀಕೆ ಖಳರ ಉಕ್ಕು | ತಗ್ಗಿಸಿ ಬಂದಿಹಾನಮ್ಮ 14 ಇಂದು ನಿನ್ನಾ ಕಂದನಾಟಾ | ಚಂದಾವೆಂದೂ ವಂದಿಸುವೆವೆತಂದೆ ವ್ಯಾಸಾ ವಿಠಲೆ*ಮಗೆ | ಬಾಂಧವಾನಾದನು ಕಾಣೆ 15
--------------
ವ್ಯಾಸವಿಠ್ಠಲರು
ಗೋಕುಲನಂದಾ ಗೋಪಿಯ ಕಂದಾ ಶ್ರೀಪತಿ ನಿಂದಾಡುವ ಚಂದ ನಮ್ಮ ಪ. ರಿಂದಾವನದಿ ನಿಂದು ಮುಕುಂದಾ ನಂದದಿ ಕೊಳಲೂದುವ ಚಂದಾ, ಕೃಷ್ಣಾ ರಂಗಾನಂದದಿ ಎಮ್ಮಯ ಕರೆವುದು, ಬಲು ಚೆಂದಾ 1 ಅರುಣನ ಕಿರಣ ಸೋಲಿಪ ಚರಣದಿ ಕಿರುಗೆಜ್ಜೆಯ ಧರಿಸುತ ಭರದಿ ರಂಗಾ ವರ ನಾಟ್ಯವ ತೋರುವುದಾನಂದಾ, ಬಲುಚೆಂದಾ 2 ಕಸ್ತೂರಿ ತಿಲಕ ಶಿಸ್ತಿಲಿ ಪೊಳೆಯುತಾ ಭಕ್ತವತ್ಸಲ ಶ್ರೀ ಶ್ರೀನಿವಾಸನ್ನ ನೋಡೆ ರಂಗನ ಭಕ್ತರಿಗೆಲ್ಲ ಆನಂದ, ಬಲು ಚೆಂದಾ 3
--------------
ಸರಸ್ವತಿ ಬಾಯಿ
ಗೌರಿ ಗಜಮುಖನ ಮಾತೆ | ಗುಣಗಣ ಭರಿತೆ ಶೌರಿ ಸಖನಂಗಸಂಗೀ ಸಂಪೂರ್ತೆ ಪ ಶುಭ ತನು ವಾರಿಜನೇತ್ರಳೆ ವೀರಸತಿಯೆ ದಯವಾರಿಧಿ ಪಾಲಿಸು ಅ.ಪ. ತುಂಗ ಮಂಗಳೇ ದೇವಿ | ಕಲಿಗೆ ಭೈರವೀ ರಂಗಾನ ನವವಿಧಿ ಭಕ್ತಿ ಸಂಗ ನೀಡುವಿ ಹಿಂಗದೆ ಪೊರಿಯೆ ತಾಯೇ | ಭಕ್ತ ಸಂಜೀವೆ ತಿಂಗಳ ಮುಖಿವರಗರಿವೆ | ನಮ್ಮ ಶಂಭುವೆ ಭಂಗಬಟ್ಟೇನು ನುಂಗುವ ಭವದೊಳು ಮಂಗಳ ಕರುಣಾಪಾಂಗದಿ ನೋಡೆನ್ನ ಭವ ಭಯ ಗಂಗೆಯ ಧರನಂಘ್ರಿ- ಭೃಂಗಳೆ ಬೋದಯಾಕಂಗಳೆ ಕರುಣಿಸು 1 ಇಂದ್ರಾದಿ ಸುರಗುರುವೆ | ದೇವ ತರುವೆ ಪರಿ ನಿನ್ನ ಬೇಡುವೆ ಕುಂದನೆಣಿಸದಲೆ ಶಿವ ಶಂಕರಿ ಕಾವೆ ಸಂದೇಹ ಕಳಿ ವಿಭುವೆ | ವೀರಜತನುವೆ ನೊಂದವನಾ ಮ್ಯಾಲ್ಹೊಂದಿಸು ಕರುಣವ ಮಂದಸ್ಮಿತೆ ಮುಕುಂದನ ಮನದಲಿ ವಂದಿಸು ಅನಿಮಿತ್ತ ಬಂಧುವೆ ರಕ್ಷಿಸು 2 ಕಸ್ತೂರಿ ಕುಂಕುಮ ಫಾಲೆ | ರನ್ನಾದ ಓಲೆ ವಸ್ತುಗಳಿಟ್ಟ ಹಿಮವಂತನ ಬಾಲೆ ಶಿಸ್ತಿನ ಶುಭ್ರಾಂಬರಧಾರೆ ವನಮಾಲೆ ಮಸ್ತಕದ ಕಿರೀಟ ವದನೆ ತಾಂಬೂಲೆ ಸಿರಿ ಹಸ್ತಗಳಿಟ್ಟೆನ್ನ ದುಸ್ತರದ ಹಾದಿಗಳಸ್ತಮಮಾಳ್ಪುದು ವಿಸ್ತರ ಮಹಿಮ ಜಯೇಶವಿಠಲ ವಸ್ತುವ ನೀಡಮ್ಮ ಹಸ್ತಿಯ ಗಮನೆ 3
--------------
ಜಯೇಶವಿಠಲ
ನೀನೆ ಬಲ್ಲಿದನೋ ರಂಗಾನಿನ್ನ ದಾಸರು ಬಲ್ಲಿದರೋ ಪ ನಾನಾ ತೆರದಿ ನಿಧಾನಿಸಿ ನೋಡಲುನೀನೆ ಭಕ್ತರಾಧೀನನಾದ ಮ್ಯಾಲೆ ಅ.ಪ ಪರಮ ಪುರುಷ ಪರಬೊಮ್ಮನೆಂದೆನುತಲಿನಿರುತದಿ ಶ್ರುತಿಯು ಕೊಂಡಾಡಲು ನಿನ್ನನುನರ ಧರ್ಮಜನರ ಮನೆಯ ಒಳಗೆ ನಿಂ-ದ್ಹರುಷದಿಂದ ಕರೆದಲ್ಲಿ ಪೋದ ಮ್ಯಾಲೆ 1 ಪುರುಹೂತ ಸಹಿತ ಸುರ-ವ್ರತವು ನಿನ್ನನು ವಾಲೈಸುತಿರೆಭೂತಳದೊಳು ಸಂಪ್ರೀತಿಯಿಂದಪಾರ್ಥನ ರಥಕೆ ನೀ ಸೂತನಾದ ಮ್ಯಾಲೆ 2 ಜಲಜಭವಾಂಡದೊಡೆಯನೆಂದೆನಿಸುವಬಲು ಬಲು ದೊಡ್ಡವನಹುದಾದಡೆಒಲಿದು ಸದ್ಗತಿಯೀವೆ ಅನುದಿನದಲಿ ನೀಬಲಿಯ ಮನೆಯ ಬಾಗಿಲ ಕಾಯ್ದ ಮ್ಯಾಲೆ 3 ಧುರದೊಳು ಪಣೆಯನೆಚ್ಚೊಡೆದ ಭೀಷ್ಮನಮರಳಿಪುದೆನುತಲಿ ಚಕ್ರವ ಪಿಡಿಯಲುಹರಿ ನಿನ್ನ ಕರುಣದ ಜೋಡÀು ತೊಟ್ಟರಲವ -ನಿರವ ಕಂಡು ಸುಮ್ಮನೆ ತಿರುಗಿದ ಮ್ಯಾಲೆ 4 ತರಳನು ಕರೆಯಲು ಒಡೆದು ಕಂಬದಿ ಬಂದುನರಮೃಗ ವೇಷದಿ ಭಕುತರ ತೆತ್ತಿಗನಾದೆಕರುಣದಿ ಸಲಹೋ ಶ್ರೀರಂಗವಿಠಲ ನಿನ್ನಸ್ಮರಿಪರ ಮನದಲಿ ಸೆರೆಯ ಸಿಕ್ಕಿದ ಮ್ಯಾಲೆ 5
--------------
ಶ್ರೀಪಾದರಾಜರು
ಮಾನಸಾಂಡದಿ ಕಾಂಬೊನ್ಯಾರೇ | ನಮ್ಮಮೌನಿ ಧ್ಯಾನಾಗಮ್ಯ ಕೃಷ್ಣಮೂರುತಿಯೇ ಪ ಗುಂಗುರು ಕುಂತಲ ಶೋಭಾನೇ | ನಮ್ಮಗಂಗಾ ಜನಕ ಗೋಪಿರಂಗಾನೇ |ಮಂಗಳ ಮಹಿಮ ಶುಭಾಂಗಾನೇ | ಹೃದ-ಯಾಂಗಣದಲಿ ನಿಂತು ಕುಣಿವಾನೇ 1 ಕೊಳಲ ಕೈಯಲಿ ಧರಿಸ್ಯಾನೇ | ಚಂದ್ರಬೆಳಕಾಮಿತದಲಿ ಕುಣಿದಾನೇ |ಕಲಕುತ್ತಲೆನ್ನಯ ಮನವಾನೇ | ಹರಿಚಳಕದಿ ಕುಣಿವಂತೆ ಮಾಡ್ಯಾನೇ 2 ಅಗಣಿತ ಮಹಿಮ ಲಾವಣ್ಯಾನೇ | ಹರಿಸುಗುಣಿ ಕಾಲಲಿ ಗೆಜ್ಜೆ ಕಟ್ಯಾನೇಝಗಿ ಝಗಿಸುವ ಹಾರ ಪದಕಾನೇ | ಕೃಷ್ಣಮಘವನಾರ್ಚಿತ ದಿವ್ಯ ಚರಣಾನೇ 3 ಯಾದವರೊಡೆಯನು ಬಂದಾನೇ | ಗುರುವಾದಿರಾಜರ ಮಾತು ಸಲಿಸ್ಯಾನೇಸಾದರದಲಿ ಕೈಯ್ಯ ಪಿಡಿದಾನೇ | ಎನ್ನಮೋದದಿ ಕುಣಿವಂತೆ ಮಾಡ್ಯಾನೇ 4 ಗೋವಳರೊಡಯನು ನಗುತಾನೇ | ಹೃದಯನೋವನು ಕಳೆಯಲು ಬಂದಾನೇಸಾವನೀಪರಿ ಕರುಣಿ ಕಳೆದಾನೇ | ಗುರುಗೋವಿಂದ ವಿಠಲ ಹಯಾಸ್ಯಾನೇ 5
--------------
ಗುರುಗೋವಿಂದವಿಠಲರು
ಲೋಕ ಭರಿತನೊ ರಂಗಾನೇಕಚರಿತನೊ ಪ. ಕಾಕುಜನರ ಮುರಿದು ತನ್ನಏಕಾಂತಭಕ್ತರ ಪೊರೆವ ಕೃಷ್ಣ ಅ.ಪ. ರಾಜಸೂಯ ಯಾಗದಲ್ಲಿ ರಾಜರಾಜರಿರಲು ಧರ್ಮ-ರಾಜಸುತನುಯೀತನೇ ಸಭಾಪೂಜ್ಯನೆಂದು ಮನ್ನಿಸಿದನಾಗ 1 ಮಿಕ್ಕನೃಪರ ಜರಿದು ಅಮಿತವಿಕ್ರಮ ಯದುವರನೆ ತನಗೆತಕ್ಕ ರಮಣನೆಂದು ರುಕ್ಮಿಣಿ ಉಕ್ಕಿ ಮಾಲೆಯಿಕ್ಕಿದಳಾಗ2 ಜ್ಞಾನಶೂನ್ಯನಾಗಿ ಸೊಕ್ಕಿ ತಾನೆ ವಾಸುದೇವನೆನಲುಹೀನ ಪೌಂಡ್ರಕನ ಶಿರವ ಜಾಣರಾಯ ತರಿದನಾಗ 3 ಉತ್ತರೆಯ ಗರ್ಭದಲ್ಲಿ ಸುತ್ತಮುತ್ತಿದಸ್ತ್ರವನ್ನುಒತ್ತಿ ಚಕ್ರದಿಂದ ನಿಜಭಕ್ತ ಪರೀಕ್ಷಿತನ ಕಾಯ್ದ4 ತನ್ನ ಸೇವಕಜನರಿಗೊಲಿದು ಉನ್ನಂತ ಉಡುಪಿಯಲ್ಲಿ ನಿಂತುಘನ್ನಮಂದಿರ ಮಾಡಿಕೊಂಡ ಪ್ರಸನ್ನ ಹಯವದನ ಕೃಷ್ಣ 5
--------------
ವಾದಿರಾಜ
ಶಿವ ಮೋಹಿನಿ ವನಮಾಲಿನಿ ಲಲನಾಮಣೀ ಜನನೀ ಪ ಜಯತು ಜಯತು ಜಯತು ಅ.ಪ ಅಂಬಾ ಶಶಿಬಿಂಬಾ ಜಗದಂಬಾ ಮೃದುಳಾಂಬಾ ಲಂಬೋನ್ನತ ಕುಂಭಸ್ಥಲೇ ಶುಂಭಾಸುರ ಡಿಂಬಾ 1 ಸ್ವರ್ಣಾಂಬಿಕೆ ಸ್ವರ್ಣೇಶ್ವರಿ ಸ್ವರ್ಣೋಪಮವದನೆ ಸ್ವರ್ಣಗೌರಿ ಸ್ವರ್ಣಶಿವೆ ಸ್ವರ್ಣಪ್ರಿಯೆ ದಯಾಕರೆ2 ಮಂಗಳಕರ ಮಾಂಗಿರೀಶ ರಂಗಾನುಜೆ ಲಲಿತೇ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್