ಒಟ್ಟು 7 ಕಡೆಗಳಲ್ಲಿ , 3 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಜಗನ್ನಾಥದಾಸರು) ಇಂದು ಪ ಕಂಗಳ ಧಣಿ ರಂಗವೊಲಿದ ಮಹಾತ್ಮರ ಅ.ಪ ದ್ವಾಪರದಲ್ಲಿಯ ಶಲ್ಯರು ಇವರಂತೆ ತಪಸಿ ಪ್ರಹ್ಲಾದನ ಅನುಜರು ಇವರಂತೆ ಕಪಟರಹಿತ ಕಲ್ಕೀರ ಭೂಪನ ರೂಪರೇಶೆಯ ನಿರ್ಮಿಸಿ ಮೆರೆದವರ 1 ಎಂಥ ಪುಣ್ಯವಂತರು ನಮ್ಮ ಹಿರಿಯರು ಇಂಥ ಮಹಾತ್ಮರ ಸೇವಿಸಿ ಬದುಕಲು ನಿಂತು ಮನದಿ ಇವರ ನಾಮ ಭ್ರಾಂತಿಯಾಗಲು ಸಂತೋಷದಿ ಶಾಂತ ಹೊಳೆ ಹರಿಸುವರನು 2 ಶಿಷ್ಟ ಸದಾಚಾರ ಸೃಷ್ಟಿಸಿ ಜಗದಲಿ ಶ್ರೇಷ್ಠ ದಾಸರೆಂದು ಖ್ಯಾತರಾಗಿಹರ ಅಷ್ಟಮಾಂಗ ಸಾಷ್ಟಾಂಗದಿ ಎರಗಲು ಸೃಷ್ಟೀಶ ಸಿರಿವತ್ಸಾಂಕಿತನ ತೋರ್ಪರ 3
--------------
ಸಿರಿವತ್ಸಾಂಕಿತರು
ಕರುಣಿಸಿ ಪಿಡಿಯಾ ಕೈಯ್ಯಾ | ಗುರುರಂಗವೊಲಿದರಾಯ ಪ ನಂಬಿದೆ ನಿನ್ನ ಚರಣ | ಬೆಂಬಿಡದೆ ಕಾಯೋ ಸತತ ಸ್ತಂಭದಲಿ ನೆಲಸಿದಂಥ | ಕುಂಭಿಣಿಪ | ದಾಸವರ್ಯ 1 ದೀನರ್ಗೆ ದಿವಿಜಧೇನು | ನೀನೆಂದು ಕ್ಷೋಣಿ ತಳದಿ ಜ್ಞಾನಿಗಳು ಪೇಳಿದಂಥ ವಾಣಿಯನು ಸತ್ಯಮಾಡೊ 2 ನಿನ್ನ ಸ್ಥಳವು ಪುಣ್ಯಕ್ಷೇತ್ರ | ನಿನ್ನಲ್ಲಿ ಸಕಲ ತೀರ್ಥ ನಿನ್ನ ಕವನ ಮಧ್ವಶಾಸ್ತ್ರ | ನಿನ್ನವನು ನಿಜಕೃತಾರ್ಥ3 ಹರಿದಾಡುವಂಥ ಮನಸು | ಹರಿಯಲ್ಲಿ ಸ್ಥಿರವಗೊಳಿಸೊ ಹರಿನಾಮ ಸುಧೆಯ ಕುಡಿಸೊ | ಹರಿವರನ ಮತವ ಪಿಡಿಸೊ 4 ಮತಿಭ್ರಷ್ಟನಾಗಿ ನಿನ್ನ ಕೃತಿಗಳನು ಪಾಡದ್ಹೋಗಿ ಕ್ಷಿತಿ ಭಾರನಾದೆ ಮುಂದೆ ಗತಿ ತೋರಿ ಸಲಹೊ ತಂದೆ 5 ಹೆತ್ತವರು ಸುತನ ದೋಷ | ಕೃತ್ಯಗಳ ಕ್ಷಮಿಸದಿಹರೆ ಚಿತ್ತೈಸು ಎನ್ನ ಮಾತ | ಉತ್ತಮರ ಸಂಗವಿತ್ತು 6 ತಳೆದೇಳು ಜನುಮಗಳಲಿ | ಇಳೆಯೊಳಗೆ ಚರಿಪ ಸಮಯ ಸುಳಿದಾಡು ಮತ್ತೊಮ್ಮೆ ಘೋರ ಕಲಿಬಾಧೆ ತಪ್ಪಿಸಯ್ಯ 7 ಮಾನವಿಯ ಸ್ಥಾನದಲ್ಲಿ | ನೀನಿರಲು ನಿನ್ನ ಮರೆದು ಮೋದ 8 ಕಂದರ್ಪಜನಕ ಶಾಮಸುಂದರ ಮೂರ್ತಿಹೃದಯ ಮಂದಿರದಿ ತೋರೋದಾತ ವಂದಿಸುಎ ನಿನ್ನ ಪದಕೆ 9
--------------
ಶಾಮಸುಂದರ ವಿಠಲ
ದುರಿತ ತ್ಯಜಿಸೋ | ವರ ಮಾನವಿ ಪುರದಿ ಮೆರೆವ ಪ ಆದಿಯಲ್ಲಿ ಪ್ರಹ್ಲಾದನ ಸಹೋದರನೀತ | ಯೋಧ ಶಲ್ಯ ದ್ವಾಪರದಿ ರಾಧೇಯಗೆ ಸೂತ | ಪುರಂದರ ದಾಸಾರ್ಯರ ಪ್ರೀತ | ಸಾಧುರಂಗವೊಲಿದ ಭಾಗವತರತಿ ಖ್ಯಾತ 1 ತ್ವರವಾಟದಿ ಕರುಣಿಕ ನರಸಾರ್ಯರಪುತ್ರ | ಧರೆಸುರ ಪರಿಪಾಲಕ ವರದೇಂದ್ರ ಛಾತ್ರ ತುರ ರಕ್ಷಕ ದಾಸರಾಯರ ಕರುಣಕೆ ಪಾತ್ರ ದುರಿತಾಟವಿ ವೀತಿ ಹೋತ್ರ ಘನ ಸುಚರಿತ್ರ 2 ಸೀಮದಿಂದ ಭಜಿಸುವರ ಕಾಮಿತ ಫಲವಾ | ಪ್ರೇಮದಿಂದ ಗರೆಯಲು ಸ್ತಂಭ ದೊಳಿರುವಾ || ಶಾಮಸುಂದರ ಸ್ವಾಮಿಯ ಕಥೆಪೀಯೂಷರಸವ | ಭೂಮಿ ವಿಬುಧ ಸ್ತೋಮಕೆರೆದ ಮಹಾನುಭಾವ 3
--------------
ಶಾಮಸುಂದರ ವಿಠಲ
ಮಂಗಳಂ ಮಂಗಳಂ ದಯಾಬ್ಧೆ ಜಯ ಮಂಗಳಂ ಶ್ರೀರಂಗವೊಲಿದ ದಾಸಾರ್ಯ ಪ ಪ್ರಹ್ಲಾದನನುಜ ತಾ | ಸಹ್ಲಾದ ವಿಖ್ಯಾತ ಬಲ್ಲಿದ ಬಲ್ಲಾಳು ಶಲ್ಯ ನೃಪಾಲ 1 ನಾರದ ಗುರು ಭಾವಿ | ಮಾರುತ ಭೃಗು ವಿಘ್ನ ದೂರಗೈಸುವ ರತಿ | ಕಾರುಣ್ಯಪಾತ್ರ 2 ಇಂದಿರಾಧವ ಶಾಮಸುಂದರ ಪ್ರಿಯ ಭಕ್ತ ಮಂದಾರ ಮಾನವಿ ಮಂದಿರ ಧೀರ 3
--------------
ಶಾಮಸುಂದರ ವಿಠಲ
ರಂಗವೊಲಿದ ದಾಸರಾಯ | ಸತ್ಕವಿಜನಗೇಯ ಪ ಮಂಗಳಕರ ಕುಲಿಶಾಂಗ ಮತಾಂಬುಧಿ ಮಾನವ ಸಿಂಗಾರ್ಯರ ಸುತ ಅ.ಪ ಶರಣು ಮಂದಾರ ಪರಮೋದಾರ ಪರಿಪಾಲಿಸು ಧೀರ ಮಣಿ ಸುಹಾರ ಶೋಭಿತ ಕಂಧರ ಸಾರ ಸು ರಸಗ್ರಂಥ ಕೃತ ಕರುಣಾನಿಧೆ ಗುರು 1 ಜ್ಞಾನಿಕುಲನಾಥ ಭಾನುಜಸೂತ ಭವವಾರಿಧಿ ಪೋತ ಕ್ಷೋಣಿ ಸುರವ್ರಾತ ನಮಿತ ಸುಖ್ಯಾತ ವರದಾನಿ ಪುನೀತ | ಧೇನುಪಾಲ ದಾಸಾರ್ಯರ ಪದಯುಗ ಧ್ಯಾನಿತ ಮಾನಿತ ಮಾನವಿ ನಿಲಯ 2 ದುರಿತ ವಿದೂರ ಸನ್ಮಹಿಮಾಪಾರ ಪಾಮರ ಹೇಮಶಯ್ಯ ಕುಮಾರ ಕುಮತಾಬ್ಧಿ ಸಮೀರ ಕೋಮಲಾಂಗ ಮಮಸ್ವಾಮಿ ಸೋಮನುತ ಶಾಮಸುಂದರ ಸುಧಾಮ ಪ್ರೇಮ ಸಖ 3
--------------
ಶಾಮಸುಂದರ ವಿಠಲ
ವಾಮನ ವಿಠಲರ ಹಾಡು ಶ್ರೀಶ ಪ್ರಾಣೇಶರಾಯಾ | ದಯದಿ ಎಮ್ಮ |ಪೋಷಿಸು ಶುಭಕಾಯ್ಯಾ ||ಭೂಸುರಾಗ್ರಣಿ ಗುರುಪ್ರಾಣೇಶರಾಯರಿಂದ ಭಾಸುರ ಮಂತ್ರೋಪದೇಶವಕೊಂಡೆ ಪ ಗುರುವೆ ನಿಮ್ಮ ಪಾದಾಯುಗಾ |ಸರಸಿರುಹ ನೆರೆನಂಬಿದೆ ಭಾಗ್ಯ ||ಕರೆಕರಿ ಸಂಸ್ಕøತಿ ಶರಧಿಯೊಳಗೆ ಬಿದ್ದು |ಹೊರಳುವೆ ವೇಗದಿ ಕರಪಿಡಿದುದ್ದರಿಸೊ 1 ಮಂಗಳ ಮಹಿಮ ಸಿರಿವರನವೊಲಿಮಿ |ಸಂಗ ಪಡೆದ ಧೀರರು |ರಂಗವೊಲಿದ ಆರ್ಯಂಘ್ರಿಯ ಕಮಲತೆಭೃಂಗನಂತಿರುಪ್ಪ ಲಿಂಗಸುಗೂರವಾಸ 2 ಸುತ್ರಾಮ ವಂದಿತ ಸು |ನಾಮ ಸುಧೆಯಿತ್ತು ಪ್ರೇಮದಿ ಸಲಹೆಮ್ಮ 3
--------------
ಶ್ರೀಶಪ್ರಾಣೇಶವಿಠಲರು
ಶ್ರೀ ಹರಿದಾಸವೃಂದ ಸ್ತೋತ್ರ (ಕೋಲು ಪದ) ಶ್ರೀ ಪುರಂದರದಾಸರು ಪರಮೇಷ್ಟಿ ಪಿತನಾಜ್ಞೆ ಧರಿಸಿ ಬಂದ ವರಸುರ ಮೌನಿಯವತಾರಿ ಕೋಲೆ | ವರಸುರ ಮೌನಿಯವತಾರಿಯಾದ ಪುರಂದರದಾಸರ ಬಲಗೊಂಬೆ ಕೋಲೆ 1 ಶ್ರೀ ವಿಜಯದಾಸರು ಪುಟ್ಟ ಬದರಿಯಲ್ಲಿ ಪುಟ್ಟಿ ಪುರಂದರ ಶ್ರೇಷ್ಟದಾಸರ ದಯಾಪಾತ್ರ ಕೋಲೆ | ಶ್ರೇಷ್ಟದಾಸರ ದಯಪಾತ್ರರಾದ ವಿಜಯ ವಿಠಲದಾಸರ ಬಲಗೊಂಬೆ ಕೋಲೆ 2 ಶ್ರೀ ಗೋಪಾಲದಾಸರು ನಾಗಭೂಷಣಸುತ ನಾಗಾಶ್ಯವಂಶಜ ಭಾಗವತಾಗ್ರಣಿ ಭಾಗಣ್ಣ ಕೋಲೆ | ಭಾಗವತಾಗ್ರಣಿ ಭಾಗಣ್ಣದಾಸರಿಗೆ ಬಾಗಿ ನಮಿಸಿ ಪ್ರಾರ್ಥಿಪೆ ಕೋಲೆ 3 ಶ್ರೀ ಜಗನ್ನಾಥ ದಾಸರು ಬಂದ ಸಹ್ಲಾದನಂಶಜ ಕೋಲೆ | ಬಂದ ಸಹ್ಲಾದನಂಶದ ಮಾನವಿ ಮಂದಿರ ದಾಸರಿಗೆ ವಂದಿಪೆ ಕೋಲೆ 4 ಶ್ರೀ ಪ್ರಾಣೇಶದಾಸರು ಶ್ರೀ ಗುರು ರಂಗವೊಲಿದ ಭಾಗವತರ ಛಾತ್ರ ದಾಗಿ ಶ್ರೀ ಹರಿಯ ಬಣ್ಣಿಸಿ ಕೋಲೆ | ಛಾತ್ರರಾಗಿ ಶ್ರೀಹರಿಯ ಬಣ್ಣಿಸಿದಂಥ ಲಿಂಗ ಸೂಗೂರ ದಾಸರಿಗೆ ವಂದಿಪೆ ಕೋಲೆ 5 ಪ್ರಾಣೇದಾಸರ ಸೂನುವೆನಿಸಿದ ಮಾನವಿ ರಾಯರ ಸೇವಿಸಿ ಕೋಲೆ | ಮಾನವಿ ರಾಯರ ಸೇವಿಸಿದಂಥ ಗುರು ಪ್ರಾಣೇಶದಾಸರ ಬಲಗೊಂಬೆ ಕೋಲೆ 6 ಶ್ರೀ ಶ್ರೀಶಪ್ರಾಣೇಶದಾಸರು ಗಂಧದ ಕೊರಡು ಪೆಟ್ಟು ತಿಂದು ಮಾವಂದಿರಿಂದ ಛಂದಾಗಿ ತತ್ವವರಿದಂಥ ಶ್ರೀ ರಘು | ನಂದನ ದಾಸರಿಗೆ ವಂದಿಪೆ ಕೋಲೆ 7 ಶ್ರೀ ಶೇಷದಾಸರು ಇಳೆಯೊಳು ಚಿಂತರವೇಲಿ ವಾನರೇಂದ್ರನ ಸಲೆ ಸೇವಿಸುತ ವಲಿಸಿದ ಕೋಲೆ | ಸಲೆ ಸೇವಿಸುತ ವಲಿಸಿದ ಗುರು ಪ್ರಥಮ ಶಿಲೆ ಶೇಷದಾಸರ ಬಲಗೊಂಬೆ ಕೋಲೆ 8 ಪಾರ್ಥಿವ ವರ್ಷದಿ ಪಾರ್ಥಸಾರಥಿ ಭವ್ಯ ಮೂರ್ತಿಯ ಮುದದಿ ಸ್ಥಾಪಿಸಿ ಕೋಲೆ | ಮೂರ್ತಿಯ ಮುದದಿ ಸ್ಥಾಪಿಸಿದಂಥ ಪೂರ್ವ ಪಾರ್ಥಾಹಿಪಾರ್ಯರ ಪ್ರಾರ್ಥಿಪೆ ಕೋಲೆ 9 ಪರಿವಾರ ಸಹಿತ ಚರಿಸುತ ಕೋಲೆ | ಪರಿವಾರ ಸಹಿತ ಚರಿಸುತ ಅಸಿಘ್ಯಾಳು ಪುರವಾಸ ದಾಸರಿಗೆ ಶರಣೆಂಬೆ ಕೋಲೆ 10 ಶ್ರೀ ಗುರು ಜಗನ್ನಾಥದಾಸರು ಸ್ವಾಮಿರಾಯರ ವಲಿಸಿ ಸ್ವಾಮಿರಾಯನಿಗೊಲಿದು ಸ್ವಾಮಿ ಶ್ರೀಹರಿಯ ಮಹಿಮೆಯ ಕೋಲೆ ಸ್ವಾಮಿ ಹರಿಯ ಮಹಿಮೆ ಪೇಳಿದ ಕೋಸಿಗಿ ಸ್ವಾಮಿರಾಯಾರ್ಯರ ಬಲಗೊಂಬೆ ಕೋಲೆ 11 ಶ್ರೀ ಇಂದಿರೇಶದಾಸರು (ತಿರುಪತಿ ಶ್ರೀ ಹುಚ್ಚಾಚಾರ್ಯರು) ಅಚ್ಭ ಸದ್ಭಕ್ತಿಯಲಿ ಅಚ್ಯುತಕೃಷ್ಣನ ಅರ್ಚಿಸಿ ವಿಧ ವಿಧ ಮೆಚ್ಚಿಸಿ ಕೋಲೆ | ಅರ್ಚಿಸಿ ವಿಧ ವಿಧ ಮೆಚ್ಚಿಸಿದಂಥ ಜ್ಞಾನಿ ಹುಚ್ಚಾಚಾರ್ಯರನ ಬಲಗೊಂಬೆ ಕೋಲೆ 12 ಶ್ರೀ ಭೀಮಸೇನಾಚಾರ್ಯರು ಕೊಪ್ಪರ ಶ್ರೀಮತ್ ಕಾರ್ಪರಕ್ಷೇತ್ರಧಾಮ ನರಸಿಂಹನ ನೇಮ ಪೂರ್ವಕದಿ ಪೂಜಿಸಿ ಕೋಲೆ | ನೇಮ ಪೂರ್ವಕದಿ ಪೂಜಿಸಿದಂಥ ಪೂಜ್ಯ ಭೀಮಸೇನಾರ್ಯಋ ಬಲಗೊಂಬೆ ಕೋಲೆ 13 ಶ್ರೀ ರಾಘಪ್ಪದಾಸರು ಮರುತನ ಪ್ರತ್ಯಕ್ಷಗೈದು ತನ್ನ ಗುರುತು ತೋರದೆ ಚರಿಸಿದ ಕೋಲೆ | ಗುರುತು ತೋರದೆ ಚರಿಸಿದ ರಘುಪತಿ ಚರಣ ಕಿಂಕರಗೆ ಶರಣೆಂಬೆ ಕೋಲೆ 14 ನೂರಾರು ಶಿಷ್ಯಪರಿವಾರ ಸಹಿತರಾಗಿ ಶೌರಿಕಥಾಮೃತ ಸವಿಯುತ ಕೋಲೆ | ಶೌರಿಕಥಾಮೃತ ಸವಿದಂಥ ಶ್ರೀ ರಘುವೀರನ ದಾಸರಿಗೆ ನಮಿಸುವೆ ಕೋಲೆ 15 ಗೋವಿಂದದಾಸರ ಭಾವಕ್ಕೆ ಮೆಚ್ಚಿ ದೇವನ ಮಹಿಮೆ ತೋರಿದ ರಾಘವಾಖ್ಯ ಕೋವಿದರಾಗ್ರಣಿಯ ಬಲಗೊಂಬೆ ಕೋಲೆ 16 ಶ್ರೀ ಗೋವಿಂಧದಾಸರು ಎಳೆಯತನದಿ ವಿದ್ಯ ಕಲಿಯದೆ ಹರಿನಾಮ ಬಲದಿಂದ ಜ್ಞಾನಿಗಳಿಸಿದ ಕೋಲೆ | ಬಲದಿಂದ ಜ್ಞಾನಗಳಿಸಿ ಅಸಿಷ್ಯಾಳು ನಿಲಯ ದಾಸರಿಗೆ ವಂದಿಪೆ ಕೋಲೆ 17 ಮಾವನ ವೈರಿಯಾದ ಮಾವರನ ಮನದಿ ಮಾವನನಂತೆಂದು ಭಾವಿಸಿ ಕೋಲೆ | ಮಾವನಂತೆಂದು ಭಾವಿಸಿ ಸ್ತನಿಸಿದ ಗೋವಿಂದದಾಸರ ಬಲಗೊಂಬೆ ಕೋಲೆ 18 ಬಂದ ವಿಪ್ರರಿಗೆ ಸಂದರುಶನದಿಂದ ವಂದಿಸಿ ಪರಮಾನಂದವ ಬಡು ಗೋ ವಂದಿಸಿ ದಾಸರಿಗೆ ವಂದಿಪೆ ಕೋಲೆ 19 ಲೇಸು ಭಕ್ತಿಯಿಂದ ದಾಸರ ಕವನ ಸುಧೆ ಪ್ರಾಶನಗೈದು ಸಂತತ ಕೋಲೆ | ಪ್ರಾಶನಗೈದು ಸಂತತ ಅಶಿಷ್ಯಾಳು ವಾಸದಾಸರಿಗೆ ಶರಣೆಂಬೆ ಕೋಲೆ 20 ಜಾಗರ ಶಿಷ್ಯ ಶ್ರೀ ಐಕೂರಾಚಾರ್ಯರು ಏಕಾಂತದಲಿ ಕುಳಿತು ಶ್ರೀಕಾಂತನ್ನ ವಲಿಸಿ ಲೋಕಾಂತರದಲಿ ಚರಿಸಿದ ಕೋಲೆ | ಲೋಕಾಂತರದಲಿ ಚರಿಸಿದ ನಮ್ಮಗುರು ಐಕೂರಾಚಾರ್ಯರಿಗೆ ಶರಣೆಂಬೆ ಕೋಲೆ 21 ಹುಟ್ಟಿದು ಒಂದೂರು ಮೆಟ್ಟಿದ್ದು ಬಹು ಊರು ಕಟ್ಟ ಕಡೆಯಲಿ ಹರಿಯೂರು ಕೋಲೆ | ಕಟ್ಟ ಕಡೆಯಲ್ಲಿ ಹರಿ ಊರು ಸೇರಿದಂಥ ಶ್ರೇಷ್ಟ ಸದ್ಗುರುಗಳ ಬಲಗೊಂಬೆ ಕೋಲೆ 22 ಹಾದಿ ಇದೆಂದು ಬೋಧಿಸಿದಂಥ ನಮ್ಮ ಮಾಧವೇಶಾಚಾರ್ಯರ ಬಲಗೊಂಬೆ ಕೋಲೆ 23 ಚತುರ ವಿಂಶತಿ ವರನುಡಿಗಳಿಂದೆಸೆಯುವ ರತುನ ಹಾರದ ಕೋಲುಪದ ಕೋಲೆ | ರತುನ ಹಾರದ ಕೋಲುತದ ನಿತ್ಯಪರಿಸುವರಿಗೆ ಶಾಮಸುಂದರವಿಠಲ ಮುದವೀವÀ ಕೋಲೆ 24
--------------
ಶಾಮಸುಂದರ ವಿಠಲ