ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಳಲನೂದೋ ಇನ್ನೊಮ್ಮೆ ರಂಗಯ್ಯಾ ಕೊಳಲನೂದೋ ಇನ್ನೊಮ್ಮೆ ಕೃಷ್ಣಯ್ಯಾ ಪ ಕೊಳಲನೂದೋ ದ್ವಾರಕಾ ಪುರನಿಲಯಾ ಅ.ಪ. ಎಡಹೆಗಲಲ್ಲೆಡಗಲ್ಲಂವ ನೀಡೀ ಕುಡಿ ಹುಬ್ಬುಗಳಲ್ಲಾಡಿಸುತ್ತ 1 ಮೃದುತರ ತುದಿ ಬೆರಳಿಂದೊತ್ತುತ ಮಧುರಾಧರದಲ್ಲಿಟ್ಟು ರಂಗಯ್ಯ2 ನಾದ ಮೂರುತಿ ಗೋಪೀಜನಲೋಲಾಶ್ರೀದವಿಠಲ ಗೋಪಾಲಬಾಲ3
--------------
ಶ್ರೀದವಿಠಲರು
ಯಾಕೆನ್ನ ಎದುರಲಿ ನಿಲ್ಲುವುದಿಲ್ಲೋ ಯಾಕೆನ್ನಯ ಕರೆ ಕೇಳುವುದಿಲ್ಲೋ ಪ ಯಾಕೆನ್ನ ಅರ್ಚನೆಗೊಲಿಯುವುದಿಲ್ಲೋ ಯಾಕೆನ್ನೊಳು ದಯಮಾಡುವುದಿಲ್ಲೋ ಅ.ಪ ತರಳ ಧೃವನ ಮೊರೆ ಕೇಳಿಸಿತಲ್ಲ ಕರಿ ಎತ್ತಿದ ಸುಮ ಕಾಣಿಸಿತಲ್ಲ ಅರಿ ಅನುಜನ ಸೇವೆ ಹಿರಿದಾಯ್ತಲ್ಲಾ ಕರುಣ ಎನ್ನೊಳಗೇಕೆ ಬರದೋ ಕೃಷ್ಣಯ್ಯ 1 ಅಗಣಿತ ಗೋಪಿಯರೆಡೆಯಲಿ ನಲಿದೆ ನಗಧರನಾಗಿ ಗೋಪಾಲರ ಪೊರೆದೆ ಖಗನಿದ್ದೆಡೆಗೇ ಭರದಲಿ ನಡೆದೆ ನಗುಮೊಗದರಸ ಮಾಂಗಿರಿಯ ರಂಗಯ್ಯ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಯಾತಕೆ ದಯಮಾಡಲೊಲ್ಲೆ ರಂಗಯ್ಯ - ಜಗ ಪ ನ್ನಾಥ ನಿನ್ನ ನಂಬಿದೆನಲ್ಲೊ ರಂಗಯ್ಯ ಅ ಚಿಕ್ಕಂದು ಮೊದಲೆ ನಾನು ರಂಗಯ್ಯ - ನೀನೆದಿಕ್ಕೆಂದು ನಂಬಿದೆನೊ ರಂಗಯ್ಯ1 ನೆಂಟರಿಷ್ಟರು ನೀನೆ ರಂಗಯ್ಯ - ನೀನೆಬಂಟರಿಗೆ ಬಂಟನಯ್ಯ ರಂಗಯ್ಯ2 ದಾಸರ ದಾಸನಯ್ಯ ರಂಗಯ್ಯ - ಕರ್ಮಪಾಶಗಳ ಮೋಚನೆ ಮಾಡೊ ರಂಗಯ್ಯ3 ಶೇಷಗಿರಿ ವಾಸ ರಂಗಯ್ಯ - ಆದಿಕೇಶವನೆ ರಕ್ಷಿಸೊ ರಂಗಯ್ಯ4
--------------
ಕನಕದಾಸ
ಹಿಡಿದ ಕೈಬಿಡಬೇಡವೋ ರಾಮಾ ಪ ಹಿಡಿದ ಕೈ ಬಿಡಬೇಡ ಕಡಲವಾಸವು ಬೇಡ ತಡಿಗೆ ತಳೆಯದಿರಬೇಡ ಕಡೆಗಣ್ಣಿಡ ಬೇಡ ಅ.ಪ ನುಡಿ ಕೇಳದೆನಬೇಡ ಅಡಿದೋರದಿರ ಬೇಡ ಕುಡುಕ ಹೋಗೆನಬೇಡ ನುಡಿಸದಿರ ಬೇಡ ಕೊಡು ಕೊಡೆನ್ನಿಸಬೇಡ | ಪಡೆಯುವಾಸೆಯು ಬೇಡ ದೃಢವಾಗಿ ನಿನ್ನಡಿಯ ಹಿಡಿಸದಿರ ಬೇಡ 1 ಬಿಗುಮಾನ ಬೇಡಯ್ಯ ನಗುಮೊಗವ ತೋರಯ್ಯ ಬಗೆಯರಿತು ನಡೆಸಯ್ಯ ಸುಗತಿದೋರಯ್ಯ ಬಿಗಿಹಿಡಿದ ಕೈಯ ಜಗುಳಿಸಲು ಬೇಡಯ್ಯ ನಿಗಮ ವಂದಿತಜೀಯ ಮಾಂಗಿರಿಯ ರಂಗಯ್ಯ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್