ಒಟ್ಟು 9 ಕಡೆಗಳಲ್ಲಿ , 5 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಳಬ್ಯಾಡೆಲವೊ ರಂಗಮ್ಮ ನಿನ್ನ ಇಳಿಯಾರ ನೋಡುತಿದೆ ಗುಮ್ಮ ಪ ಒದರಿದರೆ ಕೇಳೆಲೆವೊ ತಮ್ಮಾ | ಅದು ಅದರುತಿದೆ ಬೊಮ್ಮಾಂಡ ತಮ್ಮ ಬೆದರಿ ದಿವಿಜರು ತಮತಮ್ಮ | ನಿಜ ಸದನ ಬಿಡುತಿಹರು ನೋಡಮ್ಮ 1 ಬೆರಳುಗುರು ಗಾಯಗಳಿಂದ | ಆ ದುರುಳರನ್ನ ಜಠರ ತಳದಿಂದ ಕರುಳು ಮಾಲಿಕೆ ಕಿತ್ತಿ ತಂದ | ತನ್ನ ಕೊರಳಲಿ ಹಾಕಿಹ ಚಂದ2 ಏಸು ದೈತ್ಯರಾಸಿಗಳನು | ತಾನು ಮೋಸಗೊಳಿಸಿ ಕೊಲ್ಲುವನು ದಾಸನೆಂದರೆ ಕಾಮಧೇನು ಸುಮ್ಮಗಿ | ರುವ ವಾಸುದೇವವಿಟ್ಠಲ ನೀನು 3
--------------
ವ್ಯಾಸತತ್ವಜ್ಞದಾಸರು
ಕೇಳಮ್ಮ ತಂಗಿ ಕೇಳಮ್ಮ ಪ ಕೇಳಿ ಪುರಾಣದಿ ಪೇಳಿದ ಕೃಷ್ಣನ ಲೀಲೆಯ ಪಾಡುತ ``ಬಾಳಮ್ಮ'' ಅ.ಪ ನಿಷ್ಟೆಯಿಂದಲಿ ಬಲು ಶಿಷ್ಟಳಾಗುತ ದುಷ್ಟರಿಂದ ದೂ``ರಾಗಮ್ಮ'' 1 ಹರಿದಾಸರಪದ ಹರುಷದಿ ಹಾಡುತ ಗುರು ಹಿರಿಯರ ಮನ ``ಕೊಪ್ಪಮ್ಮ'' 2 ಕಾಲ ಕಳೆಯದೆ ಶೀಲಮತಿ ನೀ “ನಾಗಮ್ಮ'' 3 ವಿದ್ಯೆಯ ಕಲಿತು ಬದ್ಧಿವಂತ | ಳಾ | ಗಿದ್ದರೆ ಸುಖ ಶತ “ಸಿದ್ಧಮ್ಮ'' 4 ವಂದಿಸಿ ತುಲಸಿ ವೃಂದಾವನ ಪೂಜಿಸು ಮುಂದೆ ನಿನಗೆ ``ಆನಂದಮ್ಮ'' 5 ಹೀನರ ಬೆರೆಯದೆ ಮೌನವ್ರತದಲಿ | ಜ್ಞಾನಿ ಜನರ ನೀ ``ನರಸಮ್ಮ'' 6 ಮೂಢ ಜನರ ಒಡನಾಡದೆ ಭಕ್ತಿಲಿ ಮಾಡುವ ಸಜ್ಜನರ ``ಸಂಗಮ್ಮ'' 7 ಧರ್ಮದಿಂದ ಸತ್ಕರ್ಮ ಮಾಡುತ ನಿರ್ಮಲಗೊಳಿಸಿ ಸಂತ ``ರಂಗಮ್ಮ'' 8 ಪವನ ಪಿತನ ಕಥಾಶ್ರವಣವೆ ಪುಣ್ಯವು ಭವ ವಿದು ಕತ್ತಲು ``ಕಾಳಮ್ಮಾ'' 9 ಸದನಕೆ ಬಂದಿಹ ಬುಧರಾವರಿಸಲು ಮಂದಬಲು ನಿನಗದ ``ರಿಂದಮ್ಮ'' 10 ಎಂದೆಂದಿಗು ಪರನಿಂದೆಯ ಮಾಡದೆ ಮಂದಿರದಿರುವದೆ ``ಚಂದಮ್ಮ'' 11 ಸಾರಿದ ಜನರಘದೂರಗೈದು ಹರಿ ತೋರುವ ನುಜಗುರು ``ಈರಮ್ಮ'' 12 ಅತ್ತಿಯ ಮನಿಗೆ ಹೆತ್ತವರಿಗೆ ಉತ್ತಮ ಕೀರ್ತಿ ``ತಾರಮ್ಮ'' 13 ಗೋವಿಪ್ರಾಳಿ ಸೇವಿಸುತಿರುವದೆ ಕೋವಿದರಿಗೆ ಬಲು ``ಜೀವಮ್ಮ'' 14 ಭಾವದೊಳಗೆ ಪರದೇವನೆ ಪತಿಯೆಂದು ಪಡಿ ``ಭೋಗಮ್ಮ'' 15 ಭೇದಜ್ಞಾನ ಸಂಪಾದಿಸು ಕ್ಷಮಿಸುವ ಶ್ರೀಧರ ನಿನ್ನಾಪ ``ರಾಧಮ್ಮ'' 16 ಕೋಪದಿ ಪರರಿಗೆ ತಾಪವ ಬಡಿಸಲು ಲೇಪವಾಗುವದು ``ಪಾಪಮ್ಮ'' 17 ಇಂಗಡಲಾತ್ಮಜನಂಘ್ರಿ ಸರೋಜಕೆ ಸತಿ ``ತುಂಗಮ್ಮ'' 18 ದಾಸಜನರ ಸಹವಾಸದೊಳಿರುವದೆ ಕಾಶಿಗಿಂತ ವಿ``ಶೇಷಮ್ಮ'' 19 ಕಲಿಯುಗದಲಿ ಸಿರಿನಿಲಯನ ನೆನೆದರೆ ಸುಲಭ ಮುಕ್ತಿ ತಿಳಿ ``ಕಂದಮ್ಮ'' 20 ಪತಿಯು ಸದ್ಗತಿಗೆ ಗತಿ ಎಂದರಿತಹ ಮತಿಯುತ ಸತಿಯೆ ``ಯವನಮ್ಮ'' 21 ಮಧ್ವಸಿದ್ಧಾಂತದ ಪದ್ಧತಿ ತಪ್ಪದೆ ಇದ್ದರೆ ಹರಿಗತಿ ``ಮುದ್ದಮ್ಮ'' 22 ಸೋಗಿಗೆ ನೀ ಮರುಳಾಗಿ ನಡೆದರೆ ಯೋಗಿ ಜನರ ಮನ ``ಕಲ್ಲಮ್ಮ'' 23 ಶೀಲೆ ಗುಣದಿ ಪಾಂಚಾಲೆಯು ಎಲ್ಲ ಬಾಲೆಯರೊಳು ``ಮೇಲಮ್ಮ'' 24 ನೇಮದಿ ನಡೆದರೆ ಪ್ರೇಮದಿ ಸಲಹುವ ಶಾಮಸುಂದರನು ``ಸತ್ಯಮ್ಮ'' 25
--------------
ಶಾಮಸುಂದರ ವಿಠಲ
ಚಂದಮ್ಮ ಬಲು ಚೆಂದಮ್ಮ ಗೋ ವಿಂದನ ದಾಸರ ಸಂಗಮ್ಮ ಪ ಪಾದ ಪದ್ಮಮ್ಮ ನೀ ನ್ಹೊಂದಿ ಭಜಿಸು ಸದಾನಂದಮ್ಮ ಅ.ಪ ಸಂದೇಹ ಕಡಿಯಂತರಂಗಮ್ಮ ಮು ಕ್ಕುಂದನತಿಳಿ ನಿಜಲಿಂಗಮ್ಮ ನಿಂದೆ ಬಳಸದಿರು ತುಂಗಮ್ಮ ಭವ ಬಂಧವು ನಿನಗಿಲ್ಲ ಗಂಗಮ್ಮ 1 ಸಾಧಿಸು ನಿಜದೃಢ ತುಳಸಮ್ಮ ಸಂ ಪಾದಿಸು ನಿಜಜ್ಞಾನ ಶರಣಮ್ಮ ಸಾಧುಜನಕೆ ಬಾಗು ಸುಶೀಲಮ್ಮ ಪರ ಸಾಧನೆ ನಿನ್ನಗೆ ಸರಸಮ್ಮ2 ಕಾಮಿತಕಳಿ ಭಾಗ್ಯಲಕ್ಷಮ್ಮ ನೀ ತಾಮಸತೊಳಿ ಮನ ಸೀತಮ್ಮ ಸ್ವಾಮಿಧ್ಯಾನಪಿಡಿ ಸತ್ಯಮ್ಮ ಶ್ರೀ ರಾಮನ ನಂಬುನೀ ಮುಕ್ತ್ಯಮ್ಮ 3
--------------
ರಾಮದಾಸರು
ಭಾಗೀರಥಿ ಭಾಗೀರಥೀ ದೇವಿ ಭಯ ನಿವಾರಣ ಗಂಗೆ ಸಾಗರ ನಿಜರಾಣಿ ಸಕಲ ಕಲ್ಯಾಣಿ ಪ ಒಮ್ಮೆ ಶ್ರೀವಿಷ್ಣು ಪಾದದಲಿ ಉದ್ಭವಿಸಿದೇ ಕರ ಪಾತ್ರೆಯಲ್ಲಿ ಬಂದೆ ಪಾದ ತೀರ್ಥವಾದಿ ಬ್ರಹ್ಮಾಂಡವೆಲ್ಲ ಪಾದನ್ನವೆಂದಿನಿಸಿದೆ 1 ದೇವಿ ನೀ ವಿಷ್ಣು ಪಾದದಲಿ ಉದ್ಭವಿಸಿದೆ ದೇವತೆಗಳೆಲ್ಲ ನಿಮ್ಮಾಧೀನವೊ ಆವ ಮಹಾದೇವನು ತಲೆಬಾಗಿರಲಾಗಿ ಮಹ ದೇವ ಶಿರಸಿನಲಿ ಉದ್ಭವಿಸಿದೆ ಜಗವರಿಯೆ 2 ದೃಷ್ಟಿಸಿ ನೋಡಲು ನೂರು ಜನ್ಮದ ಕೃತ್ಪಾಪ ಮುಟ್ಟಿದರೆ ಮುನ್ನೂರು ಜನ್ಮದ ಪಾಪವು ಮುಟ್ಟಿಮಾಡಲಿ ಬಂದು ಸ್ನಾನ ಮಾತ್ರದಿಂದ ಸುಟ್ಟುಹೋಗುವುದು ಸಹಸ್ರ ಜನ್ಮದ ಪಾಪ 3 ಜಹ್ನು ಋಷಿಯಿಂದಲಿ ಬಿದ್ದ ಕಾರಣದಿಂದ ಜಾಹ್ನವಿಯಂತೆಂದು ನೀ ಕರೆಸಿಕೊಂಡೇ ವನ್ನು ನೀ ಪಿಂತೆ ಪಾವನ ಮಾಡಬಂದೆ 4 ವಿಸ್ತಾರದಲಿ ಪೊಳಿವ ಮುತ್ತಿನಾ ಸರಗಳು ಮತ್ತೆ ರಂಗಮ್ಮ ಪವಡಿಸಿದ ನೋಡೀ ಮತ್ತೆ ಮಹಾಲಕ್ಷ್ಮಿಯೆ ಉರಸ್ಥಳದಲಿರಲಾಗಿ ಇತ್ತ ಶ್ರೀದವಿಠಲ ನನರಸಿ ಬಂದೆ 5
--------------
ಶ್ರೀದವಿಠಲರು
ಅಮ್ಮ ಬಾರೊ ರಂಗಮ್ಮ ಬಾರೊ ಪುಟ್ಟತಮ್ಮ ಬಾರೊ ಮುದ್ದಿನುಮ್ಮ ತಾರೊ ಪ.ಅಯ್ಯ ಬಾರೊಅಜನಯ್ಯಬಾರೊ ಚಿನುಮಯ್ಯ ಬಾರೊ ಬೆಣ್ಣೆಗಯ್ಯ ಬಾರೊ 1ಕಂದ ಬಾರೊ ಪೂರ್ಣಾನಂದ ಬಾರೊ ಸುರವಂದ್ಯ ಬಾರೊ ಬಾಲ್ಮುಕುಂದ ಬಾರೊ 2ಅಣ್ಣ ಬಾರೊ ತಾವರೆಗಣ್ಣ ಬಾರೊ ಎನ್ನಚಿನ್ನ ಬಾರೊ ಶಿಶುರನ್ನ ಬಾರೊ 3ನಲಿದು ಬಾರೊ ಕರುಣಾಜಲಧಿ ಬಾರೊ ಆಡಿಬಳಲ್ದೆ ಬಾರೊ ಕರೆದರೊಲಿದು ಬಾರೊ 4ಶ್ರೀಶ ಬಾರೊ ಹಸುಗೂಸೆ ಬಾರೊಪರಿತೋಷ ಬಾರೊ ಪ್ರಸನ್ವೆಂಕಟೇಶ ಬಾರೊ 5
--------------
ಪ್ರಸನ್ನವೆಂಕಟದಾಸರು
ಆವಳಂಜಿಸಿದವಳು ಪೇಳು ರಂಗಮ್ಮ ನಾನವಳಗಾರುಮಾಡುವೆ ನಡೆ ಕೃಷ್ಣಮ್ಮಪ.ದೂರುವಿರಾದರೆ ಮಗನ ದಾರಿಗೆ ಹೋಗದಿರಿ ಎಂದುಸಾರಿ ಕೈಯಕಡ್ಡಿಕೊಟ್ಟೆ ಜಾರೆಯರಿಗೆಸಾರಿ ಸಾರಿಗೆ ನಿನ್ನನು ರಟ್ಟು ಮಾಡುವ ಮಾತೇನುಆರಿಗೆ ಮಕ್ಕಳಿಲ್ಲೇನೊ ನಾನೇ ಹಡೆದವಳೇನೊ 1ಇದ್ದರಿರಲಿ ಕೂಸಿನ ಆಡುವಾಟಕೊಪ್ಪಿದರೆಎದ್ದು ಹೋದರೆ ಹೋಗಲಿ ಆವಪಳ್ಳಿಂದಕದ್ದು ತಿಂದನೆಂದಾವಾಗ ಕೂಗುವ ಕಾರಣವೇನೊಮುದ್ದೆ ಬೆಣ್ಣೆ ಕೈಯಲಿತ್ತರೊಲ್ಲದೆ ಚೆಲ್ಲುವೆ ಕಂದ 2ಏಸುಪುಣ್ಯರಾಶಿ ಕೂಡಿತೆಂದು ನಿನ್ನಾಟವ ನೋಡಿಬೀಸಿ ಬಿಗಿದಪ್ಪುವಂಥ ಭಾಗ್ಯವನುಂಡೆಕೂಸೆ ನಿನ್ನ ಕಂಡಸೂಯೆಬಡುವರಳಿಯಲಮ್ಮದಾಸರಿಗೆ ಲೇಸಾಗಲಿ ಪ್ರಸನ್ವೆಂಕಟ ಕೃಷ್ಣ 3
--------------
ಪ್ರಸನ್ನವೆಂಕಟದಾಸರು
ಇದೆಕೊದಧಿಮಥಿಸಿ ಹೊಸ ಬೆಣ್ಣೆ ಕೊಡುವೆನೊಪದುಮನಾಭನೆ ಗೊಲ್ಲ ಗೋರಸಕೆ ಗೋಳಿಡಬ್ಯಾಡೊ ಪ.ಮಲತ ಹಾಲು ಹುಳಿಮೊಸರು ತಂಗಳ ಬೆಣ್ಣೆನಳಿನಾಕ್ಷ ನಿನಗೇನು ರುಚಿಯೊ ಕಂದಕಳವಿನ ಮಾತ್ಯಾಕೆ ಹಸುಳೆ ಗೋವಳೆಯರಗೆಳತನವ್ಯಾತಕೊ ನಿನಗೆ ರಂಗಮ್ಮ 1ಮನೆ ಮನೆ ತಿರುಗಲು ತಿರುಕರ ಮಗನೇನೊಮನೆಯಲೇನು ಗೋರಸ ಕೊರತ್ಯಾಗಿದೈಅನುದಿನವಿಗಡೆÉೀರು ದೂರುತಲೈದಾರೆದಣಿದೆನಾರೋಪಣೆಯಕೇಳಿಕೃಷ್ಣಮ್ಮ2ಎನ್ನ ಮುದ್ದಿನಮೂರ್ತಿಎನ್ನ ಭಾಗ್ಯದ ನಿಧಿಯೆಎನ್ನ ಚಿತ್ತದ ಚಿಂತಾಮಣಿಯೆಚಿನ್ನರರಸನಾದ ಪ್ರಸನ್ವೆಂಕಟ ಕೃಷ್ಣನನ್ನಾಣೆ ಕಣ್ಣ ಮುಂದಿರೊ ನಮ್ಮಮ್ಮ 3
--------------
ಪ್ರಸನ್ನವೆಂಕಟದಾಸರು
ಚಪ್ಪಾಳೆನಿಕ್ಕೆಲೊ ಕೃಷ್ಣಮ್ಮ ಚಪಲ ಬಾಲ ರಂಗಮ್ಮಕಾಪುರುಷರ ಚಪ್ಪಾಳೆ ಮಾಳ್ಪ ಚಪ್ಪಾಳೆ ಪ.ತುಪ್ಪ ಬೆಣ್ಣೆ ಪಾಲನೊಲ್ಲೆ ಹೆಪ್ಪನಿಟ್ಟ ದಧಿಯೊಲ್ಲೆಗೋಪಿಯರೊಡನೆ ಕೇಳಿಗೊಪ್ಪಿದ ಚಪ್ಪಾಳೆ 1ಪಾಯಸವುಣ್ಣಲೊಲ್ಲೆ ಕಜ್ಜಾಯ ಸಕ್ಕರೆಯನೊಲ್ಲೆಆಯತಾಕ್ಷಿಯರ ಮೇಲೆ ಸ್ನೇಹದ ಚಪ್ಪಾಳೆ 2ತನಿವಣ್ಣ ಮೆಲ್ಲಲೊಲ್ಲೆ ಮನೆಯ ಸೇರಲೊಲ್ಲೆ ಪ್ರಸನ್ನ ವೆಂಕಟಾದ್ರಿಲಿ ಕುಣಿವ ಚಪ್ಪಾಳೆ 3
--------------
ಪ್ರಸನ್ನವೆಂಕಟದಾಸರು
ಪಟ್ಟಸಾಲೆÉ ಮೇಲೆ ರಂಗಮ್ಮ ನಕ್ಕು ನಲಿದುದಟ್ಟಸಾಲಿಕ್ಕಲಿ ಕಲಿತ ಪ.ಕೈಯವಿಡಿದುಗೋಪಿಮುಂಗೈಯ ಮುರಾರಿ ಮಗನಥೈಯ ಥೈಯಯೆಂದು ಕಂದನ ಹಣೆಗೆ ಹಣೆಯೊತ್ತಿಪ್ರಿಯದಿ ಹೊಂಗೆಜ್ಜೆಕಾಲ ಒಯ್ಯನಡಿಯಿಡಿಸೆನೀಲಮೈಯನಜನಯ್ಯನ ಮುದ್ದಿಸಲು ಬಂಗಾರದ 1ಬಾಯ ಜೊಲ್ಲುಂಗುರುಗುರುಳೆಳೆಯ ಪಲ್ಲ್ವಾಧರ ಮದ್ದಿಕಾಯಿ ಅರಳೆಲೆ ಮಾಗಾಯಂದುಗೆ ಒಪ್ಪೆಮಾಯಾರಸವನ್ನೆಶೋದೆ ತಾಯಿಗುಣಿಸುವ ಬಾಲನಾಯಕವೃಂದಾರಕಪಾಲಕ ರತ್ನಮಯದ2ಬಾಳೆಯಂತೆ ಬಳುಕಿ ನಡೆವ ಬಾಲಕೃಷ್ಣ ಬಳಲ್ದನೆಂದುಆಲಂಗಿಸಲೊಲ್ಲದಂಬೆಗಾಲನಿಕ್ಕುವಮೇಲೆ ಪ್ರಸನ್ವೆಂಕಟೇಶನ ಲೀಲೆಗೆಸುರರುಮೆಚ್ಚೆಲಾಲಿಸಿ ನಂದನನ ನಿವಾಳಿಸಿಕೊಂಡಳು ನಿವರ್iಳ 3
--------------
ಪ್ರಸನ್ನವೆಂಕಟದಾಸರು