ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀನಿವಾಸ ಮೂರುತಿಗೆ ಜಯತು ಮಂಗಳಂ ಶೇಷಾಚಲವಾಸನೀಗೆ ಶುಭಮಂಗಳಂ ಪ ರಂಗಮಾಣಿಕದ ದಿವ್ಯ ಕುಂದಣದ ಕಿರೀಟಕ್ಕೆ ಸುಗಂಧವಾದ ಕರ್ಪೂರ ಕಸ್ತೂರಿ ತಿಲಕಕೆ ಕಂದರ್ಪನ ಬಿಲ್ಲಪೋಲ್ವ ಚಂದವಾದ ಪುಬ್ಬುಗಳಿಗೆ ಮಂದಹಾಸದಿಂದ ನೋಳ್ಪ ಅರವಿಂದನಯನಗಳಿಗೆ 1 ನಾಸಿಕಕೆ ಕರ್ಣಕುಂಡಲಕೆ ಸುವಾಸನೆವುಳ್ಳ ಅಧರಕ್ಕೆ ಆಸುಂದರವಾದ ಶ್ರೀವತ್ಸ ಕೌಸ್ತುಭಮಣಿಗೆ ಲಾಸವಾಸಿ ಪಿತನ ಪಡೆದ ನಾಭಿಯ ಕಮಲಕೆ 2 ಶಂಖ ಚಕ್ರ ನಾಗ ಬಾಪುರಿ ತೋರ್ಪಹಸ್ತಪಾದಗಳಿಗ ಲಂಕಾರವಾದ ಪೀತಾಂಬರದ ವಡ್ಯಾಣದಂದಕ್ಕೆ ಅಂದುಗೆ ಗೆಜ್ಜೆಗಳಿಟ್ಟ ಅಂದವಾದ ಪಾದಗಳಿಗೆ ನಖ ಅಂಗುಷ್ಟದ ಬೆಳಕಿಗೆ 3
--------------
ಯದುಗಿರಿಯಮ್ಮ
ನಿನ್ನ ಮಗನೇನೇ ಗೋಪಿ-ಗೋಪಮ್ಮ |ನಿನ್ನ ಮಗನೇನೆ ಗೋಪಿ? ಪಚೆನ್ನಾರ ಚೆಲುವ ಉಡುಪಿಯ ಕೃಷ್ಣ ಬಾಲ |ನಿನ್ನ ಮಗನೇನೆ ಗೋಪಿ? ಅ.ಪಕಟವಾಯ ಬೆಣ್ಣೆ ಕಾಡಿಗೆಗಣ್ಣುಕಟಿಸೂತ್ರ|ಪಟವಾಳಿಕೈಪಕೊರಳೊಳು ಪದಕ ||ಸಟೆಯಲ್ಲ ಬ್ರಹ್ಮಾಂಢ ಹೃದಯದೊಳಿರುತಿರಲು |ಮಿಟಿಮಿಟಿ ನೋಡುವ ಈ ಮುದ್ದು ಕೃಷ್ಣ 1ಮುಂಗುರುಳ ಮುಂಜೆಡೆ ಬಂಗಾರದರಳೆಲೆ |ರಂಗಮಾಣಿಕದ ಉಂಗುರವಿಟ್ಟು ||ಪೊಂಗೆಜ್ಜೆ ಕಾಲಲಂದುಗೆ ಘಿಲ್ಲುಘಿಲ್ಲೆನುತ |ಅಂಗಳದೊಳಗಾಡುತಿಹ ಮುದ್ದು ಕೃಷ್ಣ 2ಹರಿವ ಹಾವನೆ ಕಂಡು ಹೆಡೆಹಿಡಿದು ಆಡುವ |ಕರುವಾಗಿ ಆಕಳ ಮೊಲೆಯುಣ್ಣುವ ||ಅರಿಯದಾಟವ ಬಲ್ಲ ಅಂತರಂಗದ ಸ್ವಾಮಿ |ಧರೆಯೊಳಧಿಕನಾದ ಪುರಂದರವಿಠಲಯ್ಯ 3
--------------
ಪುರಂದರದಾಸರು