ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಧುರೆಗೆ ಪೋಗಬ್ಯಾಡಾ ರಂಗಯ್ಯ ರಂಗಾ ಪ. ಮಧುರೆಗೆ ಪೋದಾರೆ ಚದುರಿ ನಾರಿಯರು ಬೆದರುತಲಿರುವೆವು ಹರಿಯೇ ಎನ್ನಯ ದೊರೆಯೇ ಅ.ಪ. ಮಧುರಾಪುರದಿಂದ ಅಕ್ರೂರ ಕರಿಲಿಕ್ಕೆ ಬಂದಾನು ಮಲ್ಲನ ಕೊಂದನು ಕೃಷ್ಣ ರಜಕನ ಕೊಂದನು ರಕ್ತಾಲಂಕೃತನಾಗಿ ಕುಬಜಿಯಿಂದ ಗಂಧವಾ ಕೊಂಡನು ಡೊಂಕನು ತಿದ್ದಿದನು 1 ಚಾಣಿಕರ ಮುಷ್ಟಿಕರ ಕೂಡಾ ಮುಷ್ಟಿ ಯುದ್ಧವ ಮಾಡಿ ಕುಟಿಲರ ಕೊಂದು ರಂಗಮಂಟಪಕೆ ಬಂದು ನಾನಾಭರರಣ ಭೂಷಿತನಾಗಿ ರಾಜ ಬೀದಿಯೊಳು ಸಾಗಿ 2 ಮಧುರಾಪುರದ ನಾರಿಯರು ಬಲು ಚೆಲುವಿಯರು ನಿನ್ನನೆ ಮರುಳು ಮಾಡುವೋರು ಯಮ್ಮನಗಲಿಸುವೋರು ಇವರು 3 ಕನಿಕರವಿಲ್ಲವೆ ನಾವು ನಿನ್ನನು ಬಿಟ್ಟು ವೊಂದು ನಿಮಿಷವಾದರು ಕಾಲಹ್ಯಾಗ ಕಳಿಯೋಣ ಘನ ಮಹಿಮನ ಅಧರಾಮೃತ ಪರವಶವಾದೆವು 4 ಮಲ್ಲಯುದ್ಧವ ಮಾಡಿ ಮಾವ ಕಂಸನ ಕೊಂದು ಉಗ್ರಸೇನರಿಗೆ ಅನುಗ್ರಹವ ಮಾಡಿ ಶೀಘ್ರದಿ ಬರಬೇಕೆಂದು ಬೇಡುವೆ ನಾ ಬಂದು ಕಾಳಿಮರ್ಧನಕೃಷ್ಣ ನಿನಗಿಂದು 5
--------------
ಕಳಸದ ಸುಂದರಮ್ಮ
ಯಾಕಣ್ಣಾ ಏನು ಬೇಕಣ್ಣಾ ಬಿಡು ಝೋಕಣ್ಣಾ ಜಗ ಸಾಕಣ್ಣಾ ಪ ಆಕಣ್ಣಿನೊಳಗೇನು ಠೀಕಣ್ಣಾ ಇದು ಪಾರ್ವತಿಗುಸುರಿದ ಮೂಕಣ್ಣಾಅ.ಪ ಅಂತವನುತ್ತು ಎಡೆಯಾಡು ನಿ ಶ್ಚಿಂತೆಯೊಳಿಹ ಸತ್ಯಗುರಿನೋಡು ಪಂಥವು ಮಾಡುವ ಯೆಂಟಾರುಮಂದಿಗ ಳಂತೆ ನೀ ಹೊಗದೆ ಚಿಂತಾಮಣಿಯಾಗೂ 1 ಮಂಗಳಪುರಿವಾಸನಾಗುವೆ ನಿಜ ರಂಗಮಂಟಪಕೆ ನೀಹೋಗುವೆ ಜಂಗಮ ಗುರುಜಾಣಾಲಿಂಗ ತುಲಶೀರಾಮಾ ಮಂಗಳಮೂರುತಿ ಹಿಮಗಿರಿವರನಿಹ 2
--------------
ಚನ್ನಪಟ್ಟಣದ ಅಹೋಬಲದಾಸರು