ಒಟ್ಟು 9 ಕಡೆಗಳಲ್ಲಿ , 8 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಸಾರ್ಥಕವಾಯಿತು ಎನ್ನ ಜನನಾ ಚಂದ್ರ ಪುಷ್ಕರಣಿಯ ವಾಸ ರಂಗನ್ನ ಕಂಡು ಪ ಸುತ್ತೇಳು ಪ್ರಾಕಾರಗೋಪುರ ಮಹಾದ್ವಾರ ರತ್ನದ ಕವಾಟ ತೋರಣಗಳು ಕತ್ತಲೆ ಹರನಂತೆ ಕಣ್ಣಿಗೆ ತೋರುತಿದೆ ತುತ್ತಿಸಲಳವೆ ಅನಂತ ಜನುಮಕೆ 1 ಸಾಲು ಬೀದಿಗಳು ಒಂದೊಂದರ ಮಧ್ಯದಲಿ ಸಾಲು ಮಂಟಪ ಮುತ್ತಿನ ಚಪ್ಪರಾ ಕೀಲುಮಣಿಗಳಿಂದ ಬಿಗಿದ ಸೊಬಗು ಹೊಂ ಬಾಳೆಸ್ತಂಭಗಳೆಡಬಲದಲ್ಲಿ ಒಪ್ಪಲು 2 ಮುಂದೆ ಗರುಡಗಂಭ ಪವಳದ ಗವಾಕ್ಷಿ ಹಿಂದೆ ನೆರೆದ ಬಲು ಪರಿಯಂಗಡಿ ಸಂದಣಿಯಿಂದ ಭೂಸುರರು ಸ್ತೋತ್ರವ ಪೇಳೆ ಒಂದೊಂದು ಬಗೆಯಲ್ಲಿ ವಂದಿಸುವುದು ಕಂಡು 3 ಚಂದನ್ನನಿಂದೆ ಪೋಗಾಡಿದ ಸರೋವರ ಒಂದು ಸುರವನ್ನೆ ವೃಕ್ಷದಲ್ಲಿ ಮಿಂದು ಸಜ್ಜನರು ಕೈಗಳ ಮುಗಿದು ನಮೊ ಎಂದು ಕೊಂಡಾಡುವರು ವೇಗದಲ್ಲಿ 4 ಪ್ರಣವಾಕಾರವಾದ ವಿಮಾನ ಅದರ ಮೇಲೆ ಮಿನುಗುವ ವಾಸುದೇವಾದಿಗಳ ಮನದಣಿಯ ಕೊಂಡಾಡಿ ಮುದದಿಂದ ಪಾಡುತ್ತಾ ಫಣಿ ತಲ್ಪನಾಥ ಶ್ರೀ ಪರಮಪುರುಷನ ಕಂಡು 5 ಕಮಲಾಕ್ಷ ಕುಳಿರತೆರದಿ ಕದಪು ಕರ್ಣ ಕುಂಡಲ ಉರದಲ್ಲಿ ಕೌಸ್ತುಭ ಹಾರ ಪದಕ ಪಾವನ ಪಾದಾ6 ನಸುನಗೆ ಚತುರ್ದಶ ಲೋಕವ ಬಿಸಜ ಕರಗಳು ಭೂಷಣದಿಂದಲಿ ಬಿಸಜ ಭವನ ಪಡೆದು ನಾಭಿ ವಸನಕಟಿ ಮಿಸುಣಿಪ ವಡ್ಯಾಣ ಸರ್ವ ಲಕ್ಷಣನಾ 7 ಕಾಲ ಕಡಗ ಪೆಂಡೆ ಪೊಂಗೆಜ್ಜೆ ಅಂದಿಗೆ ವಾಲಾಯ ಪದತಳದಲಿ ರೇಖೆ ವಾಲಗ ಸಿರಿದೇವಿ ಪ್ರೀತಿಯಿಂದಲೆ ಮಾಡೆ ಸುರರು ಸಮ್ಮುಖದಲಿ ನುತಿಸೆ 8 ಉಭಯ ಕಾವೇರಿ ನಡುವೆಯಿದ್ದು ದಕ್ಷಿಣ ಅಭಿಮುಖವಾಗಿ ಪವಡಿಸಿದ ವಿ ಭೀಷಣದ ವರದ ರಂಗ ಮಂದಿರ ನಿಲಯಾ ವಿಬುಧೇಶ ವಿಜಯ ವಿಠ್ಠಲ ರಂಗನ ಕಂಡು9
--------------
ವಿಜಯದಾಸ
ಈ ಧರೆಯೊಳಗಿಂಥಾ ಸೊಬಗ ಕಾಣೆನೋ ಪ ಕಂತುಪಿತ ತನ್ನ ಕಾಂತೇಯರೊಡಗೂಡಿ | ನಿಂತು ಮಜ್ಜನಗೊಂಡು ಸಂತಸವಾಂತಪರಿಅ.ಪ ನಂದಾವ್ರಜದಿ ಇಂದ್ರನೂ | ಕುಪಿತನಾಗಿ | ಅಂಧವೃಷ್ಟಿಯ ಕರೆಯಲು | ಸಿಂಧೂಶಯನ ಗಿರಿಯ | ಮಂದಹಾಸದಿ ನೆಗಹಿ | ಸುಂದರ ಗೋವ್ಗಳನೆ | ಚೆಂದಾದಿಂದಲೆ ಪೊರೆಯೆ | ಅಂದು ತೋರಿದುಪಕೃತಿಯ ನೆನೆದು ಗೋ | ವೃಂದಗಳೈ | ತಂದಿಂದಿರೆಯರಸಗೆ | ಮಿಂದು ಮಧುರಕ್ಷೀರಧಾರೆಯ ಕರೆಯಲು | ನಂದಕುವರಾನಂದವ ಬೀರಿದ 1 ಕಿರಿಯರೊಡನೆ ಕೂಡುತ | ಗೋಪಾಲನು | ಮುರಲಿನಾದವ ಗೈಯುತ | ಹರಿಣಾಕ್ಷಿಯರಮನೆ | ಹರುಷದಿಂದಲೇ ಪೊಕ್ಕು | ಪರಿಪರಿ ಲೀಲೆಯಿಂ | ಬೆರಗು ಮಾಡುತಲಿರೆ | ವರ ಧದಿಘೃತ ಭಾಂಡಗಳನೊಡೆದು | ಯದುವರನಾಲೈಸುತ ಬರುವರ ಸುಳಿವನು | ಸರಸದಿ ಕಂಡಾಕ್ಷಣದಿಂದೋಡಲು | ಸುರಿದುದು ಶಿರದಲಿ ದಧೀಘೃತಧಾರೆಯು 2 ಕರುಣಾಸಾಗರ ಹರಿಯು | ಮೋಹದಿ ವರ | ಭೈಷ್ಮಿಭಾಮೇರ ಕೂಡುತಾ | ಭರದಿ ಕುಣಿಯಲವರ ಶಿರದಿ ಮುಡಿದ ಸುರಗೀ | ಅರಳುಮಲ್ಲಿಗೆಯೊಳು | ಸೆರೆಬಿದ್ದ ಮಧುಪಗಳ | ನೆರೆದು ಝೇಂಕರಿಸುತ | ಹರುಷದಿ ಸುರಿಸಲು ಸುರ ಸಂದೋಹವು | ಪರಿ 3 ಅಂಗಳದೊಳು ಆಡುತ | ಮಂಗಳಮೂರ್ತಿ | ಸಂಗಡಿಗರ ಸೇರುತಾ | ಮುಂಗುರುಳ್ಗಳ ಮೇಲೆ | ಕೆಂದೂಳಿಯನೇ ಧರಿಸಿ | ಗೋಪಿ ರಂಗನ್ನಪ್ಪಿದಳು ಮುದದೀ || ಅಂಗನೆ ರುಕ್ಮಿಣಿ ಭಂಗಿಯ ನೋಡಲು | ಅಂಗಜ ಪಿತನನು | ಪಿಂಗದೆ ಬೇಡಲು | ಮಂಗಳಾಂಗಿ ಮನದಿಷ್ಟವ ಸಲಿಸಲು | ಸಿಂಗರಗೊಂಡನು | ಸಕ್ಕರೆ ಸುರಿಸುತೆ 4 ಸುರನದೀ ಜನಕ ತಾನೂ | ಕುಂಜವನದಿ | ಸರಸಿಜಾಕ್ಷೇರ ಕೂಡುತ | ಸರಸವಾಡುತಲಿರೇ | ಪರಮ ಸಂತೋಷದಿ | ತರುಲತೆಗಳು ಹರಿಯ ಚರಣ ಸೇವೆಯಗೈಯ್ದು | ಕದಳಿಗಳುದುರಿಸೆ | ಗಳಿತ ಫಲಂಗಳು | ಸರಸಿಜನಾಭನು ಕರುಣಿಸಿ ಭಕುತರ | ಶಿರಿಯಾಳಪುರದೊಳು ಮೆರೆದನು ವಿಭವದಿ 5 ವ್ಯಾಸರಾಜರ ಪೀಠದೀ | ರಂಜಿಪ ಲಕ್ಷ್ಮೀಶತೀರ್ಥರಿಂ ಸೇವಿಪ ಭವ | ಪರಿಪರಿ ನರಳುವ ದಾಸರ ಸಲಹಲಿನ್ನು | ಸಾಸಿರ ಶಂಖದಿ ಪೂಜೆಯಗೊಳುತಿರೆ | ದೇಶದೇಶದ ಜನರಾಲಿಸಿ ಬರುತಿರೆ | ಶ್ರೀಶಕೇಶವ ತನ್ನ ಮಹಿಮೆಯ ತೋರಿದ 6
--------------
ಶ್ರೀಶ ಕೇಶವದಾಸರು
ಚಿನ್ನದ ಚಾವಡಿ ಮ್ಯಾಲೆ ಪನ್ನಂಗಶಯನರು ಮಾನ್ಯ ಮಾನ್ಯರು ಮುಕ್ತರು ಮುಕ್ತರನೆ ನೋಡುತಲಿಇನ್ಯಾರ ಭಯವು ನಮಗಿಲ್ಲ 1 ಮುತ್ತಿನ ಚಾವಡಿ ಮ್ಯಾಲೆ ಮುಕ್ತರನೆ ನೋಡುತಲಿ ಲಕ್ಷ್ಮಿನಾರಾಯಣರು ಕುಳಿತಾರೆ ಕುಳಿತು ನೋಡುತಲಿರಲು ಮತ್ಯಾರ ಭಯವೂ ನಮಗಿಲ್ಲ 2 ಯಮಧರ್ಮರಾಯಗೆ ನಮೋ ನಮೋ ನಾನೆಂಬೆ ಘನ ಗುಣ ಮಹಿಮ ನೀನೆಂದು ನೀನೆಂದು ಸ್ತುತಿಪೆನೊ ಅನುಮಾನವೇಕೆ ಸಲಹೆನ್ನ 3 ರಂಗ ರಂಗಾಯೆಂದು ರಂಗನ್ನ ನೆನೆದರೆ ಹಿಂಗೋದು ಸಕಲ ದಾರಿದ್ರ್ಯ ದಾರಿದ್ರ್ಯ ಕಳೆವಂಥ ಮಂಗಳಾಂಗಿಯೆ ಶ್ರೀ ಮಾಲಕ್ಷ್ಮಿ 4 ಸಾಮಜವರದನು ಭೀಮೇಶಕೃಷ್ಣನು ಕಾಮಿತಾರ್ಥಗಳ ಕೊಡುವೋನು ಕೊಡುವಂಥ ಶ್ರೀಹರಿಯೆ ಪ್ರೇಮದಲಿ ಎನ್ನ ಸಲಹಲಿ 5
--------------
ಹರಪನಹಳ್ಳಿಭೀಮವ್ವ
ನದೀದೇವತೆಗಳು ಕಂಗಳಿಂದಲಿ ನಿನ್ನ ಕಂಡೆ ನಾನೀಗ ಹಿಂಗಿತೇ ಎನ್ನ ಅಘದ್ಹಿಂಡು ಕಾವೇರಿ ಪ. ಮಂಗಳಾಂಗಿಯೆ ಶ್ರೀ ರಂಗನಾಥನ ಪದ ಭೃಂಗಳೆನಿಸಿ ಜನರ ಪಾವನಗೈವೆ ತುಂಗವಿಕ್ರಮ ಹರಿಗೆ ಮೂಲರೂಪಳಾಗಿ ಅಂಗ ಶುದ್ಧಿಯಗೈವೆ ಪಾಪಿಗಳ ಸತತ 1 ಎಲ್ಲೆಲ್ಲಿ ನೋಡೆ ಶ್ರೀರಂಗನ್ನ ಸೇವಿಸುವೆ ಪುಲ್ಲಲೋಚನೆ ನಿನ್ನ ಬಗೆಯರಿವೆನೆ ಬಲ್ಲ ಭಕ್ತರು ಬಂದು ನಿನ್ನಲ್ಲಿ ಸ್ನಾನವಗೈದು ಉಲ್ಲಾಸದಿಂದ ಆನಂದಪಡುತಿಹರೆ 2 ನೊರೆಸುಳಿಗಳಿಂದ ಭೋರ್ಗರೆಯುತ್ತ ಹರಿ ಇರುವ ಅರಮನೆಯೆ ವೈಕುಂಠವೆಂದು ಸೂಚಿಸುತ ಹರಿಸದನ ಸುತ್ತಿರುವೆ ವಿರಜೆ ನಾನೆಂದೆನುತ ಅರುಹುವಾ ತೆರದಿ ಬಹು ರಭಸದಿಂ ಪರಿವೆ 3 ನಿನ್ನ ಧ್ವನಿ ಇಂಪೆಂದು ಆನಂದದಿಂದಾಲಿಸುತ ಚನ್ನ ಶ್ರೀರಂಗ ತಾ ಪವಡಿಸಿಹನೆ ಘನ್ನ ಮಹಿಮಳೆ ಸಕಲ ಜೀವರಾಶಿಯ ಪೊರೆವೆ ಎನ್ನ ಮನ ಹರಿಪದದಿ ನಲಿವಂತೆ ಮಾಡೆ 4 ನಿನ್ನನೇ ವಿರಜೆ ಎಂತೆಂದು ಭಾವಿಸಿ ಈಗ ಎನ್ನ ಗುರುಗಳ ದಯದಿ ಸ್ನಾನಗೈದೆ ಇನ್ನು ಶ್ರೀ ವೈಕುಂಠದೊಡೆಯನಾ ತೋರಮ್ಮ ಘನ್ನ ಶ್ರೀ ಗೋಪಾಲವಿಠ್ಠಲನ 5
--------------
ಅಂಬಾಬಾಯಿ
ಮುರಳಿಯಧರ ಶ್ರೀ ಕೃಷ್ಣನ ನೋಡಲು ಏನೋ ಸಂತೋಷ ಏನೋ ವಿನೋದ ಪ ಹರಿವಳು ಯಮುನೆಯು ಮೆಲ್ಲನೆ ನೋಡಲು ಗೋವಿಂದನನು ಪರಮಾನಂದದಿ ಅ.ಪ ಕೊಳಲೂದಲು ಶ್ರೀಕೃಷ್ಣನು ನಾದದ ಸುಳಿ ಬಾಡುವುದೆಂಬುವ ಭೀತಿಯಲಿ ಜಲ ಮೂಲನು ಬೆಳದಿಂಗಳ ಕರಗಳ ತಳಿರುಗಳಿಂದಲಿ ತಳ ಸೇರಿಸುವ 1 ಶರಧಿ ತರಂಗಗಳೆದ್ದವು ರಂಗನ್ನ ವದನ ಶಕಾಂಕನ್ನ ನೋಡಿ ಅಂಗನೆಯರು ತಮ್ಮಂಗಗಳಲಿ ಭಂಗವ ಪಡೆದರನಂಗನ ಶರದಿ 2 ಭುವನವ ತುಂಬಿತು ಗಗನವು ತುಂಬಿತು ದಿವಿಜರ ಲೋಕಗಳೆಲ್ಲವು ತುಂಬಿತು ಕವಿಗಳು ಬೆರಗಾದರು ವರ್ಣಿಸಲೀ ಸವಿ ಮುರುಳಿಯು ನಾದದ ಪ್ರವಹನನು 3 ತುರುಗಳ ಪಯಧರ ಸ್ರವಿಸಿತು ಕ್ಷೀರವ ಕರೆದರು ಮೋದದ ಕಂಬನಿಯೆಲ್ಲರು ಮರೆತರು ನರಲೋಕದ ಮಂದಿಗಳು ಅರಿತು ಮೋಕ್ಷದ ಸುಖವೆಂತೆಂಬುದ 4 ಈಶನು ಕೈಲಾಸದಲಿ ಕುಣಿದನು ಶೇಷನು ಸಾಸಿರ ಫಣಿಗಳನಾಡಿದ ದೋಷರಹಿತ ವಾಣೀಶನ ವದನ ವಿ ಕಾಸವು ಬೆಳಗಿತು ನಾಕು ದಿಕ್ಕುಗಳ 5 ಆ ಸಮಯವ ಇತಿಹಾಸಗಳಲಿ ಕವಿ ವ್ಯಾಸರಿಗಲ್ಲದೆ ವರ್ಣಿಸಲಳವೆ ಭಾಸುರ ಸುಂದರ ವದನ ಪ್ರಸನ್ನನು ರಾಸಕ್ರೀಡೆಯ ರಸವನು ಹರಿಸುತ 6
--------------
ವಿದ್ಯಾಪ್ರಸನ್ನತೀರ್ಥರು
ಹಿಗ್ಗಿದಳು ನಂದನ ಸತಿ ಮುಗ್ಧೆ ತನ್ನಯ ಸುತನ ಮುದ್ದು ಮುಖವ ನೋಡಿ ಅ.ಪ ಪಾಲು ಬೆಣ್ಣೆ ಕಳ್ಳ ತಾಳು ಕಟ್ಟುವೆ ನಿನ್ನ ಕಾಲುಗಳನೆಂದು ಕರಗಳಲಿ ಪಿಡಿದು ನೀಲಮೇಘಶ್ಯಾಮ ಶ್ರೀಲಕುಮಿಯರಸನನು ಬಾಲನೆಂದರಿತು ಆಲಿಂಗನದಿ ಮೈ ಮರೆತು1 ಅಂಬುಜೋದ್ಭವನಯ್ಯ ಅಂಬೆಗಾಲಿಡುವುದನು ನಂಬಬಹುದೇ ಮೋಹಜಾಲವಿರಲು ಸಂಭ್ರಮದಿ ಸುತನನ್ನು ಚುಂಬಿಸುತ ರಭಸದಲಿ ಮೋದ ಕಂಬನಿಯ ಸುರಿಸುತ್ತ 2 ಓರೆಗಣ್ಣಿನ ನೋಟ ನಾರಿಯರ ಪೇಚಾಟ ಮೂರು ಲೋಕಕೆ ಹರ್ಷಕರ ಮಂದಹಾಸ ಸೇರಿಸಿದ ಮುಕ್ತಗಳ ಮೀರಿ ಪೊಳೆಯುವ ದಂತ ಚಾರುಮುಖಿ ಸುತನ ಮನಸಾರ ದರುಶನದಿಂದ 3 ಭೃಂಗಗಳ ಧಿಕ್ಕರಿಪ ಮಂಗುರುಳು ಮಸ್ತಕದಿ ರಂಗಿನಾ ಕಸ್ತೂರಿತಿಲಕ ಪಣೆಯಲ್ಲಿ ಸಿಂಧು ಶ್ರೀರಂಗನ್ನ ನೋಡುತಲಿ ಅಂಗನಾಮಣಿ ಅಂತರಂಗ ಪ್ರೇಮದ ಭರದಿ 4 ತನ್ನ ಉದರದಿ ನಳಿÀನಜಾಂಡವನೆ ಪೊತ್ತಿರುವ ಉನ್ನತೋನ್ನತ ಸುಗುಣ ಜ್ಞಾನಮಯನ ತನ್ನ ಮಗನೆಂದರಿತು ಸ್ತನ್ಯಪಾನದಿ ಸುಪ್ರ ಸನ್ನಮುಖಿ ಹರುಷ ಪುಳಕಿತಳಾಗಿ ಹೆಮ್ಮೆಯಲಿ 5
--------------
ವಿದ್ಯಾಪ್ರಸನ್ನತೀರ್ಥರು
139-8ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜಸರಸಿಜಾಸನ ಶಿವಾದ್ಮಮರ ಜನವಿನುತಉರುಗುಣಾರ್ಣವ ಜಗಜ್ಜನ್ಮಾದಿಕರ್ತ ನರ-ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.ಪ್ರಾಣೇಶ ಶ್ರೀಶವಿಠ್ಠಲ ದಾಸರುಗಳಿಗೆಇನ್ನು ಅನೇಕರಿಗೆ ಶಿಷ್ಯತ್ವ ಇತ್ತುಪುನಃ ಶಿಷ್ಯರ ಸಹ ಕ್ಷೇತ್ರಾಟನ ಮಾಡಿಸ್ವರ್ಣಪುರಿಯೈದಿದರು ಸತ್ಯಬೋಧರಲಿ 1ಕರ್ಜಗೀ ದಾಸಪ್ಪಗೆ ಶ್ರೀದಾಂಕಿತ ಕೊಟ್ಟುಶ್ರೀಜಗನ್ನಾಥದಾಸರು ಮುಂದು ಹೊರಟುಕರ್ಜಗೀ ಸಮೀಪದಲಿ ವರದಾತೀರದಲಿತ್ರಿಜಗಖ್ಯಾತ ಧೀರೇಂದ್ರರ ನಮಿಸಿದರು 2ಹರಿಹರ ಕ್ಷೇತ್ರವು ಮದ್ದೂರು ಅಬ್ಬೂರುಪುರುಷೋತ್ತಮ ಬ್ರಹ್ಮಣ್ಯರ ವಂದಿಸಿಶ್ರೀರಂಗಪಟ್ಟಣದಿ ರಂಗನ್ನ ಸೇವಿಸಿಗರಳುಂಡೇಶ್ವರನÀ ದರ್ಶನ ಮಾಡಿದರು 4ಮಂಡಲೇಶ್ವರರೇನು ರಾಜಪ್ರಮುಖರು ಏನುಪಂಡಿತೋತ್ತಮರೇನು ದಿವಾನುಗಳು ಏನುಅಂಡಕೋಟಿನಾಯಕಹರಿಯ ದಾಸರಿವರನ್ನಕೊಂಡಾಡಿ ಮರ್ಯಾದೆ ಮಾಡಿದರು ಎಲ್ಲೂ 5ಉಡುಗೊರೆಗಳು ಕನಕರತ್ನಾಭರಣಗಳುನಡೆಯಬಾರದು ಎಂದು ಪಲ್ಲಕ್ಕಿ ವಾಹನವುಈಡುಂಟೆ ಜಗನ್ನಾಥದಾಸರಿಗೆ ಮೈಸೂರುಮಾಡಿದ ಮರ್ಯಾದೆ ರಂಗನ ಅನುಗ್ರಹವು 6ಮೈಸೂರು ಕೊಂಗು ಕೇರಳ ಚೋಳ ಪಾಂಡ್ಯದೇಶಗಳಿಗೆ ಪೋಗಿಉಡುಪಿಕಂಚಿಶ್ರೀ ಶ್ರೀನಿವಾಸನ ಕ್ಷೇತ್ರ ಘಟಿಕಾಚಲವುಈಶಾನುಗ್ರಹವು ಮರ್ಯಾದೆ ಎಲ್ಲೆಲ್ಲೂ 7ಜಯಜಯ ಜಗತ್ರಾಣ ಮಧ್ವ ನಾಮಾಭಿದಪದ್ಯಾವಳಿಯು ಶ್ರೀಪಾದರಾಜರದುದಿವ್ಯ ಫಲಶ್ರುತಿ ಇದಕೆ ಜಗನ್ನಾಥದಾಸಆರ್ಯರು ಬರೆದಿಹರು ಸಜ್ಜನರು ಪಠಿಸಿ 8ತೀರ್ಥಾಭಿಮಾನಿಗಳ ತದಂತಸ್ಥ ಹರಿರೂಪಕ್ಷೇತ್ರ ವಾರ್ತೆಗಳನ್ನು ತತ್ವ ಬೋಧಿಸುವಕೀರ್ತನೆಗಳ ಮಾಡಿ ಹರಿಗರ್ಪಿಸಿದರುಓದಿದರೆ ಕೇಳಿದರೆ ಇಹಪರದಿ ಸುಖವು 9ಹರಿವಾಯು ಸುರವೃಂದ ಗುರುವೃಂದ ಪ್ರೀತಿಕರಭಾರಿಶುಭಫಲಪ್ರದವು ತತ್ವ ಸುವ್ವಾಲೆಹರಿಕಥಾಮೃತಸಾರ ವರ್ಣಿಸಲಶಕ್ಯವುಉರುಮಹಾಸೌಭಾಗ್ಯಾಕಾಂಕ್ಷಿಗಳು ಓದಿ 10ಹರಿಸಮೀರರು ತಾವೇ ಶ್ರೀಪಾದರಾಜರಲುಶಿರಿವ್ಯಾಸರಾಜ ಶ್ರೀವಾದಿರಾಜರಲುಪುರುಂದರದಾಸರಲು ನಿಂತು ಸ್ವಪ್ನದಿ ಪ್ರೇರಿಸೆಹರಿಕಥಾಮೃತಸಾರ ಬರೆದ ದಾಸಾರ್ಯ 11ಪ್ರಾರಂಭ ಹರಿಕಥಾಮೃತಸಾರ ಸ್ವಾದಿಯಲಿಶಿರಿವ್ಯಾಸವಾದಿರಾಜ ವೇದವೇದ್ಯರ ಮುಂದೆವರಚಿಪ್ಪಗಿರಿಯಲ್ಲಿ ವಿಜಯದಾಸರ ಮತ್ತುಶಿರಿಕೃಷ್ಣ ಸನ್ನಿಧಿಯಲಿ ಸುಶುಭಮಂಗಳವು 12ಗುರುಶ್ರೀಶವಿಠಲ ದಾಸಾರ್ಯರು ಕುಂಟೋಜಿರಾಯರೆಂಬುವ ಸೂರಿಕುಲ ತಿಲಕಾಗ್ರಣಿಯುಹರಿಕಥಾಮೃತಸಾರ ಮಂಗಳವ ಚಿಪ್ಪಗಿರಿಯಲ್ಲಿ ಮಾಡಿಹರು ನಮೋ ನಮೋ ಇವರ್ಗೆ 13ಹರಿಕಥಾಮೃತಸಾರ ಫಲಶ್ರುತಿ ಅನೇಕವುಸೂರಿವರ್ಯರು ಹರಿದಾಸರು ಹಾಡಿಹರುಭರಿತ ರಚನೆಗಳ ಗ್ರಂಥ ಪದ್ಯಂಗಳಬರೆದಿಹರು ಜಗನ್ನಾಥದಾಸಾರ್ಯಸೂರಿ 14ಶ್ರೀ ದಪ್ರಾಣೇಶಾದಿ ದಾಸಶಿಷ್ಯರ ಕೂಡಿಮೋದಮಯ ನರಹರಿ ಹನುಮಗುರುವೃಂದಆರಾಧಿಸಿ ಬರುವವರ ಉದ್ಧರಿಸುತ್ತಮುದದಿಂ ಕುಳಿತರು ಮಾನವೀಯಲ್ಲಿ 15ವರುಷ ಎಂಭತ್ತೆರಡು ತಿಂಗಳು ಒಂದುಆರುದಿನ ಮೂವತ್ತೇಳು ಘಟಿಕ ಅರ್ಧಧರೆಯಲ್ಲಿಹರಿಇಚ್ಛಾ ಸೇವಾರತರಾಗಿತೆರಳಿದರು ಜಗನ್ನಾಥದಾಸ ಹರಿಪುರಕೆ 16ಶಾಲಿಶಕ ಹದಿನೇಳು ನೂರಮೂವತ್ತೊಂದುಶುಕ್ಲ ಸಂವತ್ಸರ ಭಾದ್ರಪದ ಶುದ್ಧಮೂಲಾನಕ್ಷತ್ರ ರವಿವಾರ ನವಮಿಯಲ್ಲಿಮಾಲೋಲ ಸಹ ಜ್ವಲಿಸುತ್ತ ತೆರಳಿದರು 17ಅಮೃತ ಸೈಷಸೇತುಃ ನರಸಿಂಹ ಸ್ತಂಭದಲಿಇರುತಿಹನು ಅಲ್ಲೊಂದು ಅಂಶದಿ ಇಹರುಶ್ರೀ ರಾಘವೇಂದ್ರ ವೃಂದಾವನ ಶ್ರೀ ಸತ್ಯಬೋಧರ ಸಾನ್ನಿಧ್ಯ ಸ್ತಂಭದ ಮುಂದೆ 18&ಟಜquo;ಜ&ಡಿಜquo; ಯೆನಲು ಜಯ ಸಂಸಾರ ಭಯಹರವು&ಟಜquo;ಗ&ಡಿಜquo; ಯೆನಲು ಸರ್ವಪೀಡೆ ಪರಿಹಾರ&ಟಜquo;ನ್ನಾ&ಡಿಜquo; ಯೆನ್ನೆ ಸರ್ವೋತ್ತಮಸ್ವಾಮಿ ಸುಖವೀವ&ಟಜquo;ಥ&ಡಿಜquo; ಎನಲು ಅನ್ನಧನವಿತ್ತು ರಕ್ಷಿಸುವ 19ಜಯಜಯತು ಶ್ರೀ ಹಂಸವಿಧಿ ಮಧ್ವ ವ್ಯಾಸಮುನಿಜಯಜಯತುಪುರಂದರವಿಜಯದಾಸಾರ್ಯಜಯಜಯತು ಗೋಪಾಲದಾಸಾರ್ಯ ಜಯಜಯತುಜಯಜಗನ್ನಾಥ ದಾಸಾರ್ಯ ಜಯಜಯತು 20ವಾರಿಜಾಸನ ಪಿತನು ಪೂರ್ಣಪ್ರಜÕರ ಹೃತ್‍ಸ್ಥಶಿರಿಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರುಪುರಂದರವಿಜಯಗೋಪಾಲದಾಸಾರ್ಯರಚರಣರತ ಜಗನ್ನಾಥದಾಸಾರ್ಯ ಶರಣು 21- ನವಮ ಕೀರ್ತನೆ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಈ ಕಾರಣ ಹರಿನಾಮವ ನೆನೆಯಲಿಬೇಕಾಲಸ್ಯವಿಲ್ಲದಲೆಭೀಕರ ಯಮಭಟರಂತ್ಯದಿ ಕವಿಯಲಿನೂಕುವುದೀ ಅಸ್ತ್ತ್ರದಲಿ ಪ.ಷೋಡಶ ಉಪಚಾರದ ಪೂಜಾವಿಧಿಮಾಡುವ ಪಕ್ವಗೆ ಸಾಧ್ಯ ತಾಮಾಡೇನೆಂದರಗಾಧಮಾತಾಡಿದರೇನದಸಾಧ್ಯರೂಢಿಲಿ ಶ್ರೀಹರಿಗುಣ ಸಂಕೀರ್ತನೆಪಾಡಿದರತಿ ಆಹ್ಲಾದ 1ಸುಜ್ಞಾನಿಗಳ್ಹರಿ ಮೆಚ್ಚಿಸಿದರೆ ಅನಭಿಜÕರಿಗೆಲ್ಲಿಯ ಜ್ಞಾನಭವಸುಗ್ಗಿಯೊಳೆಲ್ಲಿ ಧ್ಯಾನ ವೈರಾಗ್ಯದ ನಡೆಯು ಕಠಿಣ ಅನಘ್ರ್ಯದ ಭೋಜನ ದೊರೆತಿದೆ ಹರಿನಾಮಂಗಳೆ ಅಮೃತದ ಪಾನ 2ಈ ಜನುಮವು ಜಗುಳುವ ಮುನ್ನಖಗರಾಜಗಮನ ರಂಗನ್ನ ಸರ್ವದಾ ಜಪಿಸುವನೆ ಧನ್ಯ ಸುಖಬೀಜವಿದೆನ್ನಿತ್ರಿಜಗತ್ಪತಿ ಪ್ರಸನ್ವೆಂಕಟರಾಯನಸೋಜಿಗನಾಮಂಗಳಣ್ಣ3
--------------
ಪ್ರಸನ್ನವೆಂಕಟದಾಸರು
ತೂಗಿರೆ ರಂಗನ್ನ ತೂಗಿರೆ ಕೃಷ್ಣನತೂಗಿರೆ ಅಚ್ಯುತಾನಂತನ ಪ.ತೂಗಿರೆ ವರಗಿರಿ ಅಪ್ಪ ತಿಮ್ಮಪ್ಪನತೂಗಿರೆ ಕಾವೇರಿ ರಂಗಯ್ಯನ ಅಪಇಂದ್ರಲೋಕದೊಳುಪೇಂದ್ರ ಮಲಗಿಹನೆಬಂದೊಮ್ಮೆ ತೊಟ್ಟಿಲ ತೂಗಿರೆಮಂದಗಮನೆಯರು ಚೆಂದದಿ ಪಾಡುತನಂದನ ಕಂದನ ತೂಗಿರೆ 1ನಾಗಲೋಕದಲ್ಲಿ ನಾರಾಯಣ ಮಲಗಿಹನೆಹೋಗಿ ನೀವ್ ತೊಟ್ಟಿಲ ತೂಗಿರೆನಾಗವೇಣಿಯರು ನಾಲ್ಕು ನೇಣನು ಪಿಡಿದುಭಾಗ್ಯವಂತನೆಂದು ತೂಗಿರೆ 2ಜಲಧಿಯೊಳಾಲದ ಎಲೆಯಲ್ಲಿ ಮಲಗಿದಚೆಲುವನ ತೊಟ್ಟಿಲ ತೊಗಿರೆಸುಲಭ ದೇವರ ದೇವ ಬಲಿಬಂಧಮೋಚಕಎಳೆಯನ ತೊಟ್ಟಿಲ ತೂಗಿರೆ 3ಸೂಸುವ ಮಡುವಿನೊಳ್ ಕಾಳಿಯನ ತುಳಿದಿಟ್ಟದೋಷವಿದೂರನ ತೂಗಿರೆಸಾಸಿರ ನಾಮದ ಸರ್ವೋತ್ತಮನೆಂದುಲೇಸಾಗಿ ತೊಟ್ಟಿಲ ತೂಗಿರೆ 4ಅರಳೆಲೆ ಮಾಗಾಯಿ ಕೊರಳ ಪದಕ ಸರತರಳನ ತೊಟ್ಟಿಲ ತೂಗಿರೆಉರಗಾದ್ರಿವಾಸ ಶ್ರೀ ಪುರಂದರವಿಠಲನಹರುಷದಿ ಪಾಡುತ ತೂಗಿರೆ 5
--------------
ಪುರಂದರದಾಸರು