ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾಳಬೇಕು ಭಕ್ತಿಯೇಳಬೇಕು ಪ ತಾಳಬೇಕಾದವನು ಮೇಳದಲಿ ಬಾಳಬೇಕು ಅ.ಪ ಹಾಡಲು ತಾಳಬೇಕು ಬೇಡಲು ತಾಳಬೇಕು ಓಡಾಡಿ ಕುಳಿತು ಮಾತಾಡಲು ತಾಳಬೇಕು ನೋಡಬೇಕಾದವನು ನೋಡಲು ತಾಳಬೇಕು ಮಾಡಿ ಮುಳುಗುವ ಜನ್ಮಬೇಡೆಂದು ತಾಳಬೇಕು 1 ತಾಳರಿತಮೇಲಂತರಾಳವನು ಕಾಣಬೇಕು ತಾಳದವ ಬಾಳುವನೇ ಮೇಳದೊಳಗೇ ತಾಳ ನೋಡುವರೆಲ್ಲ ಹೂಳನೋಡಲಿಬೇಕು ತಾಳಿ ಮಾಂಗಿರಿರಂಗನೂಳಿಗಕ್ಕೆ ನುಗ್ಗಬೇಕು 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಾವಿನಕೆರೆ 3 ನಮ್ಮೂರ ದ್ಯಾವರೇ ಬೊಮ್ಮನಪ್ಪನು ಎಂದು ಹೊಯ್ಸಿರೋ ಡಂಗುರವನು ಪ ನಿಮ್ಮ ನೆಂಟರಿಗೆಲ್ಲ ನಿಮ್ಮ ಮಕ್ಕಳಿಗೆಲ್ಲಾ ರಂಗಪ್ಪನವನೆಂದು ಸಾರಿಸಾರಿ ಅ.ಪ ಭೋರಪ್ಪನೆಂದರೂ ತಿಮ್ಮಪ್ಪನೆಂದರೂ ಈರಪ್ಪನೆಂದರೂ ಒಬ್ಬನಣ್ಣ ಸಾರಿ ಡಂಗುರವನು ಹೊಯ್ಸಿರಣ್ಣ 1 ಕುರಿಕೋಳಿ ಕೋಣಗಳ ಶಿರವ ತರಿಯಲು ಬೇಡಿ ನರರಂತೆ ಜೀವಿಗಳು ಅವುಗಳಣ್ಣ ಬರಿಯ ಭಕ್ತಿಯೇ ಸಾಕು ಗುರುಡವಾಹನನವನು ಪರಮಾತ್ಮನವನೆಮ್ಮ ಕಾಯ್ವನಣ್ಣ 2 ರಂಗ ನರಶಿಂಗನು ಗಂಗೆಯನು ಹೆತ್ತನೂ ಗಂಗೆಯನು ಹೊತ್ತವನೂ ಒಬ್ಬನಣ್ಣ ಶಿಂಗರದ ಗೋಪಾಲ ಮಾಂಗಿರಿಯ ರಂಗನೂ ಒಬ್ಬನೇ ತಾನೆಂದು ತಿಳಿಯಿರಣ್ಣ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಂಗ ಕೊಳಲನೂದುತ ಬಂದಯಶೋದೆಯ ಕಂದ ಪ ಕೊಳಲ ಧ್ವನಿಗೆ ವಿರಹವು ನಾರಿಯರಿಗೆಕಳಕಳÀವಾಗಲು ಕಳಕಳಿಸುತ ಅ.ಪ. ಶೃಂಗಾರ ಕೊಳಲ ಗಾಯನ ಮಾಡೆಸ್ತ್ರೀಯರು ನೋಡೆ ರಂಗನ ಪಾದದಲಿ ಮನ ಹೂಡೆಭೃಂಗಾಮೃತ ತೈಲದಿಅಂಗನೆಯರು ಝಳಕವ ಮಾಡೆದೇವರ್ಕಳು ನೋಡೆತುಂಗವಿಹಂಗ ಭುಜಂಗ ನವಿಲು ಸಾ -ರಂಗ ಗಿಣಿಯು ಮಾತಂಗ ಮರಿಯು ಕು-ರಂಗ ಮಧ್ಯೆ ಚರಣಂಗಳೆಡೆಗೆ ವೇ-ದಂಗಳೆರಗೆ ಕಾಮಂಗಳಲುಗೆ ನೇ-ತ್ರಂಗಳಿಗತಿ ಚಿತ್ರಂಗಳಾಗೆ ಆರಂಗನೂದ್ವ ಸಾರಂಗ ಕೇಳಿ ಋಷಿಪುಂಗಸಹಿತ ತಾವುಗಳು ಬರೆ ನರ-ಸಿಂಗನೂದಿದ ಜಗಂಗಳ ಮೋಹಿಸಿ1 ಬಂಗಾರ ಬಟ್ಟಲೊಳಗೆ ಅಂದುಕ್ಷೀರವ ತಂದು ರಂಗಗರ್ಪಿಸುವೆವು ನಾವೆಂದುಹರುಷದೊಳಂದು ಅಂಗನೆಯರು ಮೈಮರೆತು ನಿಂದುಒಲಿಯಬೇಕೆಂದು ಮಂಗಳ ಮಹಿಮನು ನೀನೆಂದುಅತಿಭಕುತಿಯೊಳಂದುತುಂಗ ವಿಕ್ರಮನ ಪದಂಗಳಿಗೆರಗಲುರಂಗ ನೆಗಹಿ ಕರಂಗಳ್ಹಿಡಿಯ ಮೋ-ಹಂಗಳಿಂದ ವಿರಹಗಳ್ಹೆಚ್ಚಿ ರವಿಕೆಂಗಳುಡೆಯ ಕುಚಂಗಳು ಬಿಟ್ಟಾ-ಲಿಂಗಿಸುತಿರೆ ಶ್ರೀ ಮಂಗಳಾಂಗಗೆ ಪು-ಷ್ಪಂಗಳಿಂದ ವರುಷಂಗಳು ಮೇಲ್ ಸುರ-ರಂಗಳು ಸುರಿಯೆ ಉತ್ತುಂಗ ಮಹಿಮ ಹರುಷಂಗಳ ಬೀರುತ ಅಂಗನೆಯರಿಗೆ 2 ಮಂದಿರ ಮಾನಿನಿಯರು ಬಿಟ್ಟುಮನದಲಿ ಕಂಗೆಟ್ಟುಮಂದರೋದ್ಧರನಲ್ಲೆ ಮನವಿಟ್ಟುಕರೆಕರೆಯ ಬಿಟ್ಟುಚಂದದಿ ಕರ್ಪೂರ ವೀಳ್ಯವನಿಟ್ಟುಸಡಗರವ ತೊಟ್ಟುಒಂದಾಗಿ ಚೆದರುತ ತೋಷವ ತೊಟ್ಟುತ್ವರೆ ಬರುವರು ಅಷ್ಟುಅಂದದಿಂದಲಾನಂದವೇರಿ ಮು -ಕುಂದನಂಘ್ರಿ ಮುದದಿಂದ ಸ್ಮರಿಸಿ ಬರು-ವಂದ ನೋಡಿ ಗೋವಿಂದ ಕೊಳಲ ಬಹುಅಂದದೊಳಿಡೆ ಈ ಇಂದುವದನೆಯರುಚಂದ್ರನುದಯವಾದಂತೆ ಆಯ್ತು ಮನಗಂಧ ಕಸ್ತೂರಿ ತಂದು ಆಗ ಹರಿಕಂದರದೊಳಗಿಡೆ ರಂಗವಿಠಲ ದಯದಿಂದ ನೋಡ್ದ ಪುರಂಧ್ರಿಯರನ್ನು3
--------------
ಶ್ರೀಪಾದರಾಜರು
ಈತನೀಗ ಶ್ರೀನಿವಾಸನೂ ಶ್ರೀರಂಗನೂಈತನೀಗ ಶ್ರೀನಿವಾಸನೂ ಪಈತನೀಗ ಶ್ರೀನಿವಾಸ ಈತ ಸಕಲಾ ಲೋಕಕೀಶಈತ ಭೂತಪತಿಯ ಪ್ರೀತ ಈತ ಲಕ್ಷ್ಮೀಕಾಂತ ಖ್ಯಾತ ಅ.ಪಕೌಸಲ್ಯಾತ್ಮಜಾತನೆನಿಸಿದ ಶ್ರೀ ರಾಮಚಂದ್ರಕೌಶಿಕನೊಳ್ ವಿದ್ಯ ಪಠಿಸಿದಾ ವೈಶ್ವಾನರನಸಾಕ್ಷಿಯಿಂದ ವಸುಧೆಸುತೆಯ ಒಲಿಸಿ ತಂದಕೀಶಬಲನ ಕೂಡಿ ಬಂದು ಆ ದಶಾಸ್ಯನನ್ನೆ ಗೆಲಿದಾ 1ದೇವಕೀಯ ತನಯನೆನಿಸುತಾ ಶ್ರೀಕೃಷ್ಣವನದಿಗೋವುಗಳನು ಮೇಸಿ ಚಲಿಸುತಾಹಾವಿನ್ಹೆಡೆಯ ತುಳಿದು ನಲಿದುಗೋವರ್ಧನವ ಸೆಳೆದು ಬಡಿದು ಮಾವಕಂಸನ್ನ ಗೆಲಿದು ದೇವಿ ರುಕ್ಮಿಣಿಯನು ತಂದ 2ಬಕುಳದೇವಿದತ್ತಪುತ್ರನೂ ಶ್ರೀ ವೆಂಕಟೇಶಸುಖದಿ ತಿರುಪತಿಯೊಳು ನಿಂತನೂಯುಕುತಿಯಿಂದ ಪದ್ಮಾವತಿಯ ಸಕಲವೈಭವದಲಿ ವರಿಸಿ ಭಕುತರನ್ನ ಪೊರೆವ ಗೋವಿಂದದಾಸನೊಡೆಯನಿವನೂ 3
--------------
ಗೋವಿಂದದಾಸ