ಬಾರೈ ನಂದನ ಕಂದನೆ ನೀರಜನೇತ್ರ ಪ
ನೀಲಮಣಿ ಮಂಟಪದ ಮೇಲೆ ಮಾಣಿಕ್ಯಕಲಶ
ಜಾಲು ಜಲ್ಲರಿ ರತ್ನ ನೀಲಪೀಠಕೆ ನೀ 1
ಮುತ್ತಿನಾಕ್ಷತೆಗಳ ನೆತ್ತಿಯಲಿಡುವೋಲು
ಸುತ್ತಭೂಸುರರೆಲ್ಲರಸುತ್ತ ಬಾರೆನ್ನುವರು 2
ಶೃಂಗಾರಶೀಲನೆ ಸಂಗೀತಲೋಲನೆ
ರಂಗನಾಯಕಿಸಹಿತ ತುಂಗಪೀಠಕೆ ನೀ 3
ಅಂಗನೆಯರು ಕೂಡಿ ಮಂಗಳಗಾನ ಪಾಡಿ
ರಂಗ ಬಾರೆನ್ನುವರು ಮಾಂಗಿರಿನಿಲಯ4