ಒಟ್ಟು 5 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(4) ಕೆಂಗಲ್ಲು ಆಂಜನೇಯ ಕೆಂಗಲ್ಲ ಹನುಮಂತರಾಯ ನಮ್ಮ ರಂಗನಾಥಗೆ ಬಹು ಪ್ರಿಯ ಪ ಮಂಗಳಕರ ವಜ್ರಕಾಯ ಉ ತ್ತುಂಗ ವಿಕ್ರಮ ಪೊರೆ ಜೀಯ ಅ.ಪ ಶ್ರಾವಣ ಕಡೆ ಶನಿವಾರ ಬರೆ ಭಾವಿಸಿ ಭಕ್ತರು ಸೇರೆ ಆವಾವೆಡೆ ಜನ ಮೀರೆ ನಿನ್ನ ತೀವಿದ ಮನದಿ ಪಾಡುವರೊ ದೊರೆ 1 ಬಹುಭಜಕರು ಕುಣಿದಾಡಿ ಗುಣ ಸಾಹಸ್ರಗಳ ಕೊಂಡಾಡೀ ಶ್ರೀಹರಿ ವೈಭವ ನೋಡೀ ಮಹದಾನಂದದೊಳಗೋಲಾಡಿ2 ಪರಿ ವ್ಯಾದಗಳಿಂದ ಸಿರಿ ವರನುತ್ಸವ ಬಹುಚಂದ ತಿರುಪತಿ ಯಾತ್ರಿಕರಿಂದ ನೆರೆದೆಸೆವ ಕಲ್ಯಾಣ ಬೃಂದ 3 ತಾಳ ತಂಬೂರಿ ಮದ್ದಳೆಯ ಮೇಳ ತಮ್ಮಟೆಗಳ ಬಹು ಘೋಷ ಭೂಲೋಕದಿಂ ಸ್ವರ್ಗಕೈದಿ ಶ್ರೀ ಲೀಲೆಯ ತೋರ್ಪುದು ನಿಜದಿ 4 ವರಜಾಜಿ ಕೇಶವನ ನಾಮವನು ನಿರುತ ನೆನೆವ ಶರಣ ಪ್ರೇಮ ಕರುಣದಿ ಪೊರೆ ಪುಣ್ಯಧಾಮ ಸಿರಿ ಜಯಚಾಮನೃಪಸ್ತುತ್ಯ ಭೀಮ 5
--------------
ಶಾಮಶರ್ಮರು
ಜಯ ಮಂಗಳೆಂದು ಪಾಡಿರೆ ಶ್ರೀರಂಗನಾಥಗೆ ಲಕ್ಷ್ಮೀರಂಗನಾಥಗೆ ಮಂಗಳಪುರಿ ಜಾಲ ಹಳ್ಳಿರಂಗ ನಿಲಯಗೆ ಬ್ಯಾಗೆ ಪ ಅಂಗನೆಯರು ಶೃಂಗಾರದಿ ಸಂಗೀತಪ್ರಿಯಗೆ ಮಂಗಳಾಂಗ ದೇವಗೆ ಮಾತಂಗವರದಗೆ ಬ್ಯಾಗೆ 1 ಇಂದಿರವರ ಮಂದರೋದ್ಧರ ನಂದಕುವರಗೆ ಹಿಂದಕೆ ಮುದಗಲ್ಲು ಪುರದಿ ಬಂದು ನಿಂದಗೆ ಬ್ಯಾಗೆ 2 ದಾರಿಯೊಳು ಉಪ್ಪಾರಜನರ ಸೇರಿಬಂದವಗೆಸಾರಿದವರ ಪೊರೆವ 'ಕಾರ್ಪರ ನಾರಶಿಂಹಗೆ' ಬ್ಯಾಗೆ 3
--------------
ಕಾರ್ಪರ ನರಹರಿದಾಸರು
ಪವಿತ್ರೋತ್ಸವ ಗೀತೆ ಪವಿತ್ರ ಉತ್ಸವವನ್ನು ನೋಡುವ ಬನ್ನಿ ಭಕ್ತರೆಲ್ಲಾ ಪ ವರಶುಕ್ಲಪಕ್ಷದ ಏಕಾದಶಿಯಲಿ ಅನೇಕಾ ಭರಣವ ಬಿಟ್ಟು ರಂಗ ವೈದೀಕನಂತೆ ವೈಜಯಂತಿ ಜನಿವಾರ ಕೌಸ್ತುಭಮಣಿಯು ಕೊರಳೊಳು ಹೊಳೆಯೆ ಓಲ್ಯಾಡುತಲೆ ಅರಳಿದಪುಷ್ಪದ ಮೇಲೆ ಯಾಗಶಾಲೆಗೆ ಬಂದರಂಗನ 1 ವೇದಘೋಷಗಳನ್ನು ವಿಪ್ರರು ಮೋದದಿಂ ಮಾಡುತಿರಲು ವೇದಮೂರುತಿ ರಂಗನಾಥಗೆ ಆ ರಾಧನೆ ಮಾಡಿ ಮುನ್ನೂರುಅರವತ್ತು ಪೂಜೆಯನು ಮಾಡಿ ಮುದ್ದುರಂಗನಿಗೆ ಮಜ್ಜನವ ಮಾಡಿ ನಿಂದು ಹರುಷದಿ ಯಾಗಪೂರ್ತಿಯ ಮಾಡಿದ ರಂಗನ 2 ತಂದ ತಂಡುಲವರವಿಯೆ ಮಧ್ಯದಿ ಭಾಂಡಗಳ ತಂದಿರಿಸಿ ತಂಬಿ ಪವಿತ್ರವನು ಕಲ್ಪೋಕ್ತದಿಂದ ಪ್ರತಿಷ್ಠೆ ಮಾಡಿ ಒಂದು ಪವಿತ್ರವನು ಪ್ರದಕ್ಷಿಣೆಯಿಂದ ತಂದು ಧರಿಸಿ ಚಂದದಿಂ ವೈಯ್ಯಾರ ನಡೆ ಯಿಂದ ಮಂದಿರಕೆ ನಡೆತಂದ ರಂಗನ 3 ದ್ವಾದಶಿ ದಿವಸದಲಿ ಶ್ರೀರಂಗನ ಪೊಗಳೆ ವೇದಪಾಠಕರು ಅನಾದಿಮೂರುತಿ ರಂಗನಾಥಗೆ ಆ ರಾಧನೆ ಮಾಡಿ ಮುನ್ನೂರು ಅರವತ್ತು ಮಂಗಳಾರತಿ ಮು ಕ್ತಿದಾಯಕಗೆತ್ತಿ ಪೂಜೆಗೊಂಡು ಪವಿತ್ರವನು ಧರಿಸಿ ವಿ ನೋದ ಸೇವೆಯ ತೋರಿದ ರಂಗನ 4 ಸಂಧ್ಯಾರಾಗದಿ ಇಂದಿರಾಪತಿ ಬಂದು ಮಂಟಪದಲಿ ಚಂದದಿಂದಲೆ ಪೂಜೆ ನೈವೇದ್ಯವ ಆ ನಂದದಿಂದ ಗ್ರಹಿಸಿ ದಿಂಧಿಮಿತೆಂಬ ವಾದ್ಯದಿ ಗೋ ವಿಂದ ತಾನೆ ಪೊರಟು ಚಂದದಿಂದ ಶಾರ್ದೂಲನಡೆ ಯಿಂದ ಮಂದಹಾಸದಿ ಬಂದ ರಂಗನ 5 ಸಪ್ತದಿವಸದಿ ಪವಿತ್ರದಾಭರಣವಿಟ್ಟು ಭಕ್ತವತ್ಸಲ ಕರ್ಪೂರದ ಚೂರ್ಣಾಭಿಷೇಕವ ಅರ್ಥಿಯಿಂದ ಗ್ರಹಿಸಿ ಪತ್ನಿಯರು ಸಹಜವಾಗಿ ಭತ್ತದಕೊಟ್ಟಿಗೆ ಎದುರೆ ಭತ್ತವಳಿಸಿಯೆ ನಿಂತ ಭಕ್ತವತ್ಸಲ ಮಿತ್ರರಎದುರಲಿ ನಿಂದ ರಂಗನ 6 ಒಂಭತ್ತು ದಿನದಲಿ ಅಂಬುಜನಾಭ ಆನಂದ ದಾಭರಣವಿಟ್ಟು ಕುಂದಣದ ಕೋಳಿಕೆಯನೇರಿ [ತುಂಬು ಚೆಲ್ವನಾ] ಚಂದ್ರಪುಷ್ಕರಿಣಿಯಲಿ ಶುಭ್ರತೀರ್ಥವ ಆನಂದದಿಂದಲಿತ್ತು ಬಂದು ಅವಭೃತ ಮಾಡಿಯೆನಿಂದ ಶ್ರೀನಿವಾಸರಂಗನ 7 ಉತ್ಸವದ ಮರುದಿನದಿ ಶ್ರೀರಂಗನು ತನ್ನ ಏಕಾಂತ ಭಕ್ತರಿಗೆ ಇತ್ತು ಪವಿತ್ರದಾಭರಣ ತೀರ್ಥಪ್ರಸಾದವನ್ನು ಮುಕ್ತಿದಾಯಕ ಮುನಿಗಳ ಮುಂದೆ ಚಂದ್ರನಂತೆ ಬ ರುತ್ತಿರಲು ಸುತ್ತ ತಾರಕೆಯಂತೆ ವೈಷ್ಣವರು ಒತ್ತಿ ಬರುವ ಅಂದಚಂದದ 8
--------------
ಯದುಗಿರಿಯಮ್ಮ