ಶಂಕರ ಗುರುವರ ಮಹದೇವ ಭವ-
ಸಂಕಟ ಪರಿಹರಿಸಯ್ಯ ಶಿವ ಪ.
ಸಂಕಲ್ಪ ವಿಕಲ್ಪಮನೋನಿಯಾಮಕ
ಕಿಂಕರಜನಸಂಜೀವ ಅ.ಪ.
ಭಾಗವತರರಸ ಭಾಗೀರಥೀಧರ
ಬಾಗುವೆ ಶಿರ ಶರಣಾಗುವೆ ಹರ
ಶ್ರೀ ಗೌರೀವರ ಯೋಗಿಜನೋದ್ಧರ
ಸಾಗರಗುಣಗಂಭೀರ 1
ರಾಯ ಲಕ್ಷ್ಮೀನಾರಾಯಣ ಭಕ್ತಿಪ-
ರಾಯಣ ತ್ರಿನಯನ ಪುರಹನ
ಕಾಯಜಮಥನ ಮುನೀಂದ್ರ ಸಿದ್ಧಜನ-
ಗೇಯಸ್ವರೂಪೇಶಾನ 2