ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಶ್ರೀ ಮಧ್ವಾಚಾರ್ಯರ ಪ್ರಾರ್ಥನೆ) ನಂಬಿರೊ ಸರ್ವಜ್ಞ ಮುನಿಯಾ ವ್ಯರ್ಥ ಹಂಬಲಗೊಳದಿರಿ ಹಲವು ಮೋಹದಲಿ ಪ. ಭೀಮ ವಿಕ್ರಮ ವಾಲಿಯಿಂದ ಬಹು ತಾಮಸಗೊಂಡ ಸೂರ್ಯಜನನು ಬಂದಾ ತಾ ಮಾಡಿದನು ಕೃಪೆಯಿಂದ ರಘು ರಾಮನ ತೋರಿಸಿ ನಲಿಸಿದಾನಂದಾ 1 ಮಾಗಧನುಪಟಳದಿಂದಾ ಶಿವ ಯಾಗ ಮಾಡುವೆನೆಂದು ಗಿರಿಗೂಹ ಬಂದಾ ಸಾಗಿದ ನೃಪವ ವೃಂದಾವೆಲ್ಲ ಬೇಗ ಬಿಡಿಸಿ ಕಾಯ್ದ ಬಹು ಕೃಪೆಯಿಂದಾ 2 ಮಾಯಾವಾದವ ಪೇಳ್ವ ಬಾಯಿ ಕೆಟ್ಟ ನಾಯಿಗಳನು ಸಾಯ ಬಡಿದವರಯಾ ಈಯರಸನ ಮುಖ್ಯ ಪ್ರಿಯ ಯೀತ ನ್ಯಾಯವ ನಡಸುವ ವೆಂಕಟರಾಯ 3
--------------
ತುಪಾಕಿ ವೆಂಕಟರಮಣಾಚಾರ್ಯ
ಎಲೆ ಮನಾ ವ್ಯರ್ಥಗಳೆವರೇ ಜನುಮವನು | ನೆಲಿಯ ನಿನ್ನರುವದಾ ಹೊಲಬು ಮರೆದು ಪ ಇಳಿಯೊಳಗ ನರದೇಹದಲಿ ಜನಿಸಿ ಕೊಡುವದು | ಸುಲಭವಲ್ಲವೊ ಹೋದ ಬಳಿಕ ನಿನಗದು ಮುಂದ ಅ.ಪ ಮೇದಿನಿಯೊಳಗ ಮಿಗಿಲಾದ ಜನ್ಮದಿ ಬಂದು| ಐದಿದಾವರ್ಣ ಕರ್ಮಾಧರಿಸಿ ಮಾಡುತಲಿ | ಗೈದು ನಿತ್ಯಾನಿತ್ಯ ವೈದಿಕ ವಿಚಾರವನು | ಆದಿ ಪುರುಷನ ಕಾಂಬ ಹಾದಿ ಕೂಡಿ | ಖೇದವನು ಕುಡುವ ವಿವಾದ ಗುಣವನೆ ನೀಗಿ | ಮೋದದಲಿ ಶರಣ್ಹೊಕ್ಕು ಸಾಧು ಜನರನು ಸರಿಸಿ | ವೇದಾಂತ ಬ್ರಹ್ಮ ಸೂತ್ರಾದಿ ವಾಕ್ಯಾರ್ಥವನು 1 ಬೋಧೆಯಲಿ ಪಡೆದು ಜ್ಞಾನೋದಯ ಕಾಣದೆ ಭವ ಶರಧಿಯನು ಗೆಲಲಾಗಿ | ಶರಣ ಜನರಿಗೆ ತೆಪ್ಪ ಪರಿಯಂದಾತಾಗಿಹ | ಹರಿನಾಮವ ನೆನೆದು ಹರಿಧ್ಯಾನಗೈವುತಲಿ | ಹರುಷದಲಿ ಪದಿನಾರು ತೆರ ಪೂಜಿಸಿ | ಪರಮ ಸದ್ಭಾವದಲಿ ಗುರುಡಿಂಗರ ಮೇಳದಲಿ | ಭರದಿ ತಾಳದಂಡಿಗೆಯ ಕರದೊಳಗ ತಾ ಪಿಡಿದು | ಶರೀರ ಭಾವನೆ ಮರೆದು ಭರಿತ ಪ್ರೇಮಿತನಾಗಿ | ಇರಳು ಹಗಲು ಪಾಡುತಲಿ ಹರಿಭಕ್ತನಾಗದೇ 2 ವನಧಿಯೊಳು ಥೆರೆಸಂಗ ಧನುಮತದಿದೋರ್ವ | ಗುಳ್ಳಿಯ ಪರಿಸೇವೆಯೀತನು ವೆಂದು-ದರಿಯು | ಆನದೊಳಗ ಉತ್ಕ್ರಷ್ಟ ತನದಿ ಮೆರೆಸ್ಯಾಡುತಿಹ | ಕನಕದಧಿದೇವಿ ಕಿವಿಯನು ಬೀಸುವಾಗ | ಅಣುಗ ಕರಿಯಂತೆ ಅರಕ್ಷಣದವಳು ಯಂದು ಅತಿ | ಹೆಣಗುತಿಹ ಸಾಯಾಸವನೆ ತ್ಯಜಿಸಿ ತಾ ದೊರಕಿ | ಧನಿತದರಿಂತುಷ್ಟವನು ಕರಿಸಿ ದೃಢದಿಂದ | ಘನ ನಂಬು ಗುರು ಮಹಿಪತಿ ಚರಣ ಬಿಡದಂತೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಂಬಿಗೆಯೆ ಕಾರಣವು ತಿಳಿಯೊ ಇದ ನುಂಬದೇ ಹಸಿವಲ್ಲೊ ಚೀ ಮಂಕುಮರುಳೇ ಪ ಜಂಭವÀನರಡಿದ ವಿಶ್ವಂಭರನು ಮೂಢಾ 1 ಅಲ್ಲವೆಂದೆನಿಸದೆ ನಿಲ್ಲು ಗುರುಪಾದ ಬಲ್ಲ ಬೆಡಗಿನ ಬೆಳಕು ಅಲ್ಲಿ ಕಾಣುವೆ 2 ಅರಮನೆಯೊಳಿರುತಿಹ ವುರುಗನನು ತೋರಿದಾ ಪರಮಗುರು ಶ್ರೀ ತುಳಶಿರಾಮದಾಸನನು ಯೀತ 3
--------------
ಚನ್ನಪಟ್ಟಣದ ಅಹೋಬಲದಾಸರು
ಭಕ್ತಾರ್ತಿ ಹರ ವಿಠಲ | ತೆತ್ತಿಗನ ಪಾಲಿಸೋ ಪ ಮುಕ್ತೀಶ ಕರುಣಾಳು | ಪ್ರಾರ್ಥಿಸುವೆ ನಿನ್ನಾ ಅ.ಪ. ಕರ ಪಿಡಿದು ಸಲಹೋ 1 ಭವ ತಾಪ | ಕಾರುಣ್ಯನಿಧಿಯೇ 2 ಯತಿಗಳ ಕಾರುಣ್ಯ | ಪಾತ್ರನಿರುವನುಯೀತಅತಿಶಯದ ಸೇವೆಗೆ | ಕಾತುರನು ಇರುವಾಮತಿಯಿತ್ತುಸತ್ಪಥಾ | ಪಥರಲ್ಲಿ ನಡಿಸಿವನರತಿಯು ಶ್ರೀ ಹರಿದಾಸ | ಶತ ಪತ್ರದೊಳಗೆ 3 ಪಾದ | ಅದ್ದೂರಿಯಲಿ ಭಜಿಪಶುದ್ಧ ಬುದ್ಧಿಯನಿತ್ತು | ಉದ್ಧರಿಸೊ ಹರಿಯೇ |ಅದ್ವೈತ ತ್ರಯದರಿಪು | ಬುದ್ಧಿಗೇ ಸಿಲುಕಲೀಶ್ರದ್ಧಾಳುವಿನ ಸಲಹೋ | ಶಬ್ಧ ಗೋಚರನೇ 4 ಕಾಮದಾನತಜನವ | ಶ್ರೀ ವರನೆ ಸರ್ವೇಶ ನೀವೊಲಿಯದಿನ್ನಿಲ್ಲ | ಪಾವನ್ನ ಮೂರ್ತೇಭಾವ ಕೋವಿಯುವ ದೇವ | ಭಾವದಲಿ ಮೈದೊಲೊಗೋವಿಂದಾಂಪತಿ ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಲೋಕ ಭರಿತನೊ ರಂಗಾನೇಕಚರಿತನೊ ಪ. ಕಾಕುಜನರ ಮುರಿದು ತನ್ನಏಕಾಂತಭಕ್ತರ ಪೊರೆವ ಕೃಷ್ಣ ಅ.ಪ. ರಾಜಸೂಯ ಯಾಗದಲ್ಲಿ ರಾಜರಾಜರಿರಲು ಧರ್ಮ-ರಾಜಸುತನುಯೀತನೇ ಸಭಾಪೂಜ್ಯನೆಂದು ಮನ್ನಿಸಿದನಾಗ 1 ಮಿಕ್ಕನೃಪರ ಜರಿದು ಅಮಿತವಿಕ್ರಮ ಯದುವರನೆ ತನಗೆತಕ್ಕ ರಮಣನೆಂದು ರುಕ್ಮಿಣಿ ಉಕ್ಕಿ ಮಾಲೆಯಿಕ್ಕಿದಳಾಗ2 ಜ್ಞಾನಶೂನ್ಯನಾಗಿ ಸೊಕ್ಕಿ ತಾನೆ ವಾಸುದೇವನೆನಲುಹೀನ ಪೌಂಡ್ರಕನ ಶಿರವ ಜಾಣರಾಯ ತರಿದನಾಗ 3 ಉತ್ತರೆಯ ಗರ್ಭದಲ್ಲಿ ಸುತ್ತಮುತ್ತಿದಸ್ತ್ರವನ್ನುಒತ್ತಿ ಚಕ್ರದಿಂದ ನಿಜಭಕ್ತ ಪರೀಕ್ಷಿತನ ಕಾಯ್ದ4 ತನ್ನ ಸೇವಕಜನರಿಗೊಲಿದು ಉನ್ನಂತ ಉಡುಪಿಯಲ್ಲಿ ನಿಂತುಘನ್ನಮಂದಿರ ಮಾಡಿಕೊಂಡ ಪ್ರಸನ್ನ ಹಯವದನ ಕೃಷ್ಣ 5
--------------
ವಾದಿರಾಜ
ಸಾಸಿರ ನಾಮವ ಹಾಡೆ | ತಂಗಿ ಪ ದಾಸರು ಬಂದರೆ ಕೈ ಜೋಡಿಸಿ ವಂದಿಸೆ ತೋಷದಿ ವರಗಳ ಸೀಡುವರಮ್ಮ ಅ.ಪ ಪರಿಮಳ ಭರದಲಿ ಮೆರೆಯುವ ಹೂಗಳ ಅರಸಿ ತಂದಿರುವಳು ನೀನಲ್ಲವೇ ಪರಮ ಮಂಗಳಕರ ಸರಸಿಜಪಾದಕೆ ಹರುಷದೊಳರ್ಪಿಸೆ ಮರೆಯದಿರಮ್ಮ 1 ಮಂದರಧರ ಗೋವಿಂದನು ಮನದಲಿ ನಿಂದಿರುವನು ತಾನೆಂದೆಣಿಸಮ್ಮ ಬಂಧಿಸಿ ಪಂಚೇಂದ್ರಿಯಗಳನೆಲ್ಲ ವಂದಿಸಿ ಕೈಪಿಡಿ ಎಂದು ಬೇಡಮ್ಮ 2 ಅಂಗನೆಯರ ಭಾವಭಂಗಿಗೆ ನಲಿಯುವ ಮಾಂಗಿರಿಯರಸನು ನಿಜವಮ್ಮ ಇಂಗಿತವರಿತು ಗೋಪಾಂಗನೆಯರಿಗಾ- ಲಿಂಗನವಿತ್ತವನಿವನಮ್ಮ 3 ಇವನಮ್ಮ ಮನದೈವ ಗೋಪಾಲನು ಇವನಮ್ಮ ಪರದೈವ ನೀಲಾಂಗನು ಭವದೂರ ಸುಕುಮಾರ ಸಿರಿಲೋಲನು ನವನೀತ ದಧಿಚೋರ ಸುವಿಲಾಸನು 4 ಪರಮಾರ್ಥ ಚರಿತಾರ್ಥ ವರದಾತನು ಪರತತ್ವ ಚಿರತತ್ವ ಗುರುವೀತನು ದುರಿತಾರಿ ಉಪಕಾರಿ ಪರಮಾತ್ಮನು ಸಿರಿರಂಗ ಮಾಂಗಿರಿಯ ದೊರೆಯೀತನು 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್