ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಆ) ಶ್ರೀ ಲಕ್ಷ್ಮೀಸ್ತುತಿಗಳು ಅಂಗನೆ ನಿನ್ನ ಮುಖದಿರುವಿಂತು ನೆರೆ ದಿಂಗಳ ಸೋಲಿಸುವಂತೆ ತೋರುತಿದೆ ಪ ಮಿಸುಪ ಕೆಂಪಿನೊಳಸಿತಗಳೇನೇ ಯೀ ಎಸೆವಚ್ಚಬಿಳಿದರೊಳು ರಾಗವೇಕೇ ಮಿಸುನಿವೋಲೆಯ ಮೇಲೆ ಮುಸುಳಿತೇ ಯೀಗ ಪೊಸತಾವರೆಯ ಮೇಲೆ ಮಳೆ ಸೂಸಿತೇ 1 ಅಂಬರ ಅಳಿದಿಹುದೇನೆ ಮರಿ ದುಂಬಿಯ ಹಂಬಲು ಪೊಸತಾಗಿದೆ ತಂಬೆಲರಳತೆಗೆ ಪೇರ್ಚಿದೆಯೇನು ಪೊಂಬಟ್ಟೆ ಸೋಂಕಲು ಮುನ್ನ ಕಿರಿದಾದುದೇ 2 ಬಾಲೆ ನೀಕರೆಯ ಹೋಗಿ ನೆರದೆಯೇ ಈಗ ಮೂಲೋಕ ಮೋಹನ ಸುರಪುರವ ಪಾಲಿಸುವ ಮಹಾಲಕ್ಷ್ಮೀಪತಿ ಬಂದು ಯೆನ್ನ ಮೇಲಿಕ್ಕಿ ನೆರದುದಾ ಯೇನೆಂಬೆನೇ 3
--------------
ಕವಿ ಲಕ್ಷ್ಮೀಶ
ಕಲಿಪುರುಷನಿಗತಿಹರುಷ ಬಲುಸಜ್ಜನಗಳುಬಾಯ್ಬಾಯ್ಬಿಡುವುದು ಪ ಅಲಕ್ಷ್ಮೀರಮಣ ಅಖಿಲ ದುರ್ಗುಣಂ ಗಳಕೊಟ್ಟೆಲ್ಲರ ಗಾಳಿಗೆ ತೂರುವೆ ಅ.ಪ ರಾವಣಾಸುರಗೆ ಮಗನೆನಿಸಿ ದೇವತೆಗಳ ಸೆರೆಯಲ್ಲಿಡಿಸಿ ಭಾವಜ್ಞರನು ನಿರಾಕರಿಸಿ ಸಭಾಸ್ಥಾನಗಳ ಭಂಗಪಡಿಸಿ ಬಹುದುಃಖ ಪಡಿಸಿ ಪಾಂಡುಕುಮಾರರ ಪಾವನಿಯಿಂತೊಡೆಯೊಡೆದು ಬೀಳುತ ಬಗೆಯ ನೆನದುಯೀಗೆಮ್ಮ ಬಾಧಿಸುವೆ 1 ಆಗಮಗಳು ಸುಳ್ಳೆಂಬುವದು | ನಾ ಯೋಗಿಯೆಂದು ಹಿಗ್ಗುತಲಿಹುದು ಭಾಗವರತ ನಿಂದನೆಗೈದು | ನಿರ್ ಭಾಗ್ಯತನ್ನತಾನೆ ಪೊಗಳುವದು ಸಾಗರದಂತಿಹ ದುರಾಸೆಯೊಳಗಾ ವಾಗಲು ಜನ ಮುಳುಗುತ ತಿಳಿಯದೆ ಹಾಗರ್ವದಿ ನಿಷ್ಫಲವ ಪೊಂದುವರಿದು 2 ನೀತಿ ತಪ್ಪಿತಾವ್ನಡೆಯುವುದು | ದು ರ್ಜಾತಿಗಳುತ್ತಮರೆಂಬುವದು ಆತುರದಲಿಮನವಳುಕುವುದು | ಬಲು ಘಾತಕತನದಲಿತಿರುಗುವದು ಗಾತುರಸುಖವೇ ಮೊಕ್ಷವೆಂದು ವಿಷ ಯಾತಿಶಯದಿಯರಿಷಡ್ವರ್ಗಗಳೊಳು ರಾತಿರಿಪಗಲೆನ್ನದೆ ಬೀಳ್ವುದುನಿ ನ್ನಾತಗಳಿಂಗೆ ಸ್ವಭಾವಗುಣಂಗಳು 3 ಕ್ಷಾಮಡಾಂಬರಗಳ್ಹೆಚ್ಚುವದು | ನಿ- ಷ್ಕಾಮರ ಹಾಸ್ಯವಮಾಡುವದು ಕಾಮದಿಜನಗಳ ಬಾಧಿಪದು ನಿಷ್ಕಾರಣರೋಗದಿ ಸಾಯುವದು ಪಾಮರರೆಲ್ಲರು ಪಂಡಿತರಾವೆಂ- ದೀಮಹಿಯೊಳುಮನಬಂದಂತೆಸದಾ ತಾಮಸಗಳಬೋಧಿಸುತಲಿಜಗದೊಳು ದ್ರವ್ಯಾರ್ಜನೆಮುಖ್ಯಸಾಧನವೆಂಬುದು 4 ವಿಪರೀತ ಫಲಗಳಾಗುವುದು ಚಪಲಹೊಂದಿಚಿಂತಿಸುತಿಹುದು ಜಪಹೋಮಗಳನು ತ್ಯಜಿಸುವದು ಬಲುಜಾಡ್ಯಂಗಳನನುಭವಿಸುವದು ಉಪಕಾರಗಳನುಮಾಳ್ಪರಲ್ಲಿ ಪ್ರ ತ್ಯಪಕಾರಗಳೆಣಿಸುತಲಾವಾಗಲು ಕಾಲಕಳೆಯುತ ವೃಥಾನೋಯುವದು 5 ಶೂದ್ರರುವೇದವ ಪಠಿಸುವದು | ನಿರು ಪದ್ರವನುದಂಡಿಸುತಿಹುದು | ಹರಿ ರುದ್ರವಿಧಿಗಳದೂಷಿಪದು | ಅ- ಬದ್ಧವೆಬಲುರುಚಿಯೆಂಬುವದು ಕ್ಷುದ್ರಕುನಾಸ್ತಿಕಮತವನಂಬಿ ದೇ- ವದ್ರೋಹಗಳನುಮಾಡುತ ಬಾಯಲಿ ಇದ್ದದ್ದಾದರುಯಿಲ್ಲೆಂಬುವದು6 ಪರರೊಡವೆಗಳಪಹರಿಸುವದು | ನೆರೆ- ಹೊರೆಯಂತಿರಬೇಕೆಂಬುವದು ಗುರುವಿನಲ್ಲಿ ದ್ವೇಷವೆಣಿಸುವದು | ಸತಿ- ಯರುಪತಿಯಲಿದ್ವೇಷಿಸುತಿಹುದು ನಿರತವುಜೀವನಕಿಲ್ಲೆಂದುಬಳಲಿ ದುರ್ವಿದ್ಯಗಳಭ್ಯಾಸಿಸಿಕಡೆಯಲಿ ನರಕಂಗಳಿಗೆ ಪ್ರಯಾಣಮಾಡುವದು7
--------------
ಗುರುರಾಮವಿಠಲ
ಗುರುಸೇವೆ ನಿರತರಿಗೆ ನಮೋ ನಮೋ ಪ ಅರಿವು ನಿಲ್ಲಿಸಿ ಪರಸಾಧನದಿರುತಿಹ್ಯ ಪರಮಪಾವನರಿಗೆ ನಮೋ ನಮೋ ಅ.ಪ ತಾಪಸಾರ್ಯರಿಗೆ ನಮೋ ನಮೋ ಮಹ ಪಾಪ ದೂರರಿಗೆ ನಮೋ ನಮೋ ಕೋಪಲೋಪರಿಗೆ ನಮೋ ನಮೋ ಇಹ ವ್ಯಾಪಾರರಿತವರಿಗೆ ನಮೋ ನಮೋ ತಾಪತ್ರಯವ ನೀಗಿ ಶ್ರೀಪತಿ ಚರಣವ ಗೌಪ್ಯದಿ ನೆನೆವರ್ಗೆ ನಮೋ ನಮೋ 1 ವೇದ ಸಂಪನ್ನರಿಗೆ ನಮೋ ನಮೋ ಭವ ಬಾಧೆ ಗೆಲಿದವರಿಗೆ ನಮೋ ನಮೋ ಸಾಧನ ಚತುಷ್ಟರಿಗೆ ನಮೋ ನಮೋ ಮಹ ಸಾಧುಸಂತರಿಗೆ ನಮೋ ನಮೋ ವಾದಿ ಮೂರ್ಖರೊಳು ವಾದಿಸದಂಥ ಸು ಬೋಧ ಗುರುವರಗೆ ನಮೋ ನಮೋ 2 ಭಾಗವತರಿಗೆ ನಮೋ ನಮೋ ಇಹ ಭೋಗನಿರಾಸ್ಯರಿಗೆ ನಮೋ ನಮೋ ಯೋಗಸಾಧಕರಿಗೆ ನಮೋ ನಮೋ ಮಹ ಯೋಗಿ ಮಹಾತ್ಮರಿಗೆ ನಮೋ ನಮೋ ಆಗಯೀಗೆನ್ನದೆ ಸಾಗರನಿಲಯನನ್ನ ಬಾಗಿಭಜಿಪರಿಗೆ ನಮೋ ನಮೋ 3 ಭಕ್ತಜನರಿಗೆ ನಮೋ ನಮೋ ವಿ ರಕ್ತ ಪುರುಷರಿಗೆ ನಮೋ ನಮೋ ಸತ್ಯಶೀಲರಿಗೆ ನಮೋ ನಮೋ ತಮ್ಮ ಗುರ್ತು ಅರ್ತವರಿಗೆ ನಮೋ ನಮೋ ಭಕ್ತಿಯುಕ್ತಿ ವಹಿಸೆತ್ತಗಲದಂಥ ಚಿತ್ತಶುದ್ಧರಿಗೆ ನಮೋ ನಮೋ 4 ನಿತ್ಯ ನಿರ್ಮಲರಿಗೆ ನಮೋ ನಮೋ ಭವ ಮರ್ತ ನಿರ್ತರಿಗೆ ನಮೋ ನಮೋ ತ ತ್ವರ್ಥಿಕರಿಗೆ ನಮೋ ನಮೋ ಮಹ ಮುಕ್ತಿ ಸಾಧ್ಯರಿಗೆ ನಮೋ ನಮೋ ಮೃತ್ಯುವ ಗೆಲಿದು ಕರ್ತ ಶ್ರೀರಾಮನ ಅರ್ತವರಿಗೆ ಬಹು ನಮೋ ನಮೋ 5
--------------
ರಾಮದಾಸರು
ಜಯ ಜಯ ನಿಮಗೆ ಜಯವಣ್ಣ ಭಯವಿಲ್ಲೀನುಡಿ ಕೇಳ್ ಚಿಣ್ಣ ಪ ಶ್ರೀ ಮನೋಹರನ ಲೀಲೆಯಿದು ಸು ಕ್ಷೇಮವಹುದು ಸತ್ಪುರುಷರಿಗೆ1 ಈ ಜಗತ್ತನೂ ಈಶ್ವರನೂ ತಾ ರಾಜನಾಗಿ ಕಾಪಾಡುವನು 2 ಕುರುಡರು ತಾವ್ ಕೆಡುವರು ಕೊನೆಗೆ 3 ಇದರೊಳುಂಟು ಬಹುವಿಧ ಭೇದ ವದರುತಿಪ್ಪದು ಸಕಲವೇದ4 ಅಂತ್ಯವಿಲ್ಲದಿಹ ಕಾರಣದಿ ಅ ನಂತ್ಯವೆಂದು ಪೇಳ್ವರು ಭರದಿ 5 ಮನುಜ ಜನ್ಮ ಬಹುದುರ್ಲಭವು ಮನನಶೀಲರಿಗಹುದು ಶುಭವು 6 ಮರೆಯಬೇಡಿ ಜನರೆ ನೀವು ಅರಿತು ಅರಿಯದವರಿಗೆ ನೋವು 7 ಕತ್ತಲೆ ಕೊನೆಯಿಲ್ಲದ ಘೋರ 8 ವುಳಿಯದು ನಿಮಗದು ಕೇಳ್ ಜನರೆ 6 ಧರ್ಮವೆಂಬ ಮೂಟೆಯ ಕಟ್ಟೆ ಬಟ್ಟೆ 10 ಗುರುವಾಜ್ಞೆಯ ಮೀರುವುದು ಸಲ್ಲ ಈ ದುರುಳತನ ನಿಮಗೆ ಸರಿಯಲ್ಲ 11 ನಾನೇ ಶ್ರೇಷ್ಠನೆಂಬುವ ಮಾತು ಶಾನೆ ವಡಕು ಗಡಿಗೆಯು ತೂತು 12 ಹಿಂದಿನವರ ಕಷ್ಟವ ನೋಡಿ ಮುಂದಕೆ ಸತ್ ಸಾಧನೆ ಮಾಡಿ 13 ಮೂರು ಕರಣ ಶುದ್ಧಿಯು ಬೇಕು ಧೀರ ಜನರಿಗಿಷ್ಟೇ ಸಾಕು 14 ಜನರ ನೋಡಿ ನಡೆಯಲಿಬೇಡಿ ಕೊನೆಗೆ ನಿಮಗೆ ಕಾಲಿಗೆ ಬೇಡಿ 15 ಹೆಚ್ಚಪೇಕ್ಷಿಸೆ ಬರುವುದಿಲ್ಲ ಮೆಚ್ಚನು ನಿಮಗೆ ಸಿರಿಯನಲ್ಲ 16 ನಿರ್ಮಲ ಮಾರ್ಗ ಹುಡುಕಿದಿರಾ 17 ಜ್ಞಾನರತ್ನ ಸಂಪಾದನೆಯು ಹೀನ ಜನರಿಗಾಗದು ಕೊನೆಯು 18 ದುರಾಸೆಯಲಿ ಕೆಡುವರು ಕೆಲರು ನರಾಧಮರು ಎಂದೆನಿಸುವರು 19 ಪರಿಯಂತ ತಂ ತಮ್ಮಟ್ಟಿಗಿಹುದು ಅಂತ 20 ಗೂಡಿನ ಮೇಲೆ ದುರಭಿಮಾನ ಮಾಡಿ ಮಾಡಿ ಕೆಡುತಿಹರು ಜನ 21 ಯೀಗೂಡಿಗೆವೊಂದಾಧಾರ ಯೋಗಿಗಳರಿವರಿದರಸಾರ 22 ವರ ರಸಗಳು ನಾಲ್ಕು ತೊಗರು 23 ಹಂಚೇಳರಿಂ ಮಾಡಿಹದೇವ 24 ಘಟಿಸಿರುವುದು ಪತ್ತಲೆಯಿದರೊಳ್ 25 ಮರನಿದೆಂದು ಶಾಸ್ತ್ರದ ಮೂಲ ಅರಿಯದೆ ನಾನೆಂಬೆನು ಬಾಲ 26 ಪಕ್ಷಿಗಳೆರಡೀ ಮರದಲ್ಲಿ ಸಾಕ್ಷಿ ಒಂದು ಒಂದಕೆ ಅಲ್ಲಿ 27 ಮರದ ಪಣ್ಣು ತಿಂಬುವದೊಂದು ನಿರುತವು ನೋಡುತಿರುವದೊಂದು 28 ದ್ವಾಸುಪರ್ಣ ಶೃತಿ ಇದರರ್ಥ ದಾಸನಾಗದಿರುವನು ವ್ಯರ್ಥ 29 ಅಧ್ಯಾತ್ಮ ವಿದ್ಯದಲಿ ತೋರುವುದೇ 30 ಜೀವನಾಮ ಆತ್ಮನಿಗುಂಟು ದೇವತಾನು ತಬ್ಬಿದ ಗಂಟು 31 ಅಭೇದ ಶೃತಿಗಳೇನಕ ವಿಧ ಸ್ವಭಾವದಿರುನಡೆ ತೋರುವದ32 ಸುರರುತ್ತಮರು ನರರಾನಿತ್ಯ ಸುರೇತರರು ನೀಚರು ಸತ್ಯ 33 ನೂರು ವರುಷ ಬದುಕುವರೆಂದು ಮೀರಿ ಮನದಿ ಯೋಚಿಸಿ ಮುಂದು 34 ಬಹು ಧನಾರ್ಜನೆಯ ವೂಹೆಯಲಿ 35 ಮೊದಲು ಅನ್ನಕಿಲ್ಲೆಂದು ಮತಿ ವಿಧ ವಿಧ ವಸ್ತ್ರಗಳಲಿ ಪ್ರೀತಿ 36 ನಾಬಡವನು ಎಂದಗಲಿರುಳು 37 ತನಗೆ ಬೇಕಂತ ಚಿಂತೆಯೊಳು 38 ಇತರರ ನೋಡಿ ತನಗಪೇಕ್ಷೆ ಗತಿ ಇಲ್ಲದೆ ಇರುವುದೆ ಶಿಕ್ಷೆ 39 ತಾವ್ ಸಮಂಜಸದಿ ಪೇಳಿದರು 40 ಪ್ರವೃತ್ತಿ ಮಾರ್ಗದ ಸಂಪತ್ತು ಭವಾಂಬುಧಿ ಸುಳಿಯು ವಿಪತ್ತು 41 ಫಲವ ಕೋರಿ ಕರ್ಮವ ಮಾಡಿ ಹಲವು ಯೋನಿಗಳೊಳೋಡಾಡಿ42 ಮರಳಿ ಮರಳಿ ಜನನ ಮರಣದೆ ದರಿಯ ಕಾಂಬ ಬಗೆ ದಾರಿಯದೆ 43 ಇದುವೆ ದೊಡ್ಡ ಸಂಸೃತಿ ವೃಕ್ಷ ತುದಿ ಮೊದಲಿಗು ದೊರಕದು ಮೋಕ್ಷ 44 ಇನ್ನು ಅಕ್ಕ ತಂಗಿಯು ಮೊದಲು 45 ಸತಿ ಸುತರು ಬಳಗಗಳು 46 ಇವರು ತನ್ನವರಿತರರಲ್ಲ ಭವ ಜಲಧಿಯ ಜಂತುಗಳೆಲ್ಲ 47 ಕೊಡದಿದ್ದರೆ ಕೋಪವು ಬಹಳ 48 ವಿತ್ತವಿರಲು ಬಂಧುಗಳೆಲ್ಲ ಹತ್ತಿ ಇವನ ಬಾಧಿಪರೆಲ್ಲ 49 ಸುಳ್ಳುಹೇಳಿದರೆ ಬಹುನಂಬಿಕೆ 50 ಹಿತೋಪದೇಶದಿ ಬಹುಕೋಪ ಪತಿತ ಜನರಿಗೆ ಇದು ಪಾಪ 51 ಒಬ್ಬ ದೈವಲೋಕಕೆ ಸತ್ಯ ಹಬ್ಬವವನ ಭಜಿಪುದಗತ್ಯ 52 ಕಾಮುಕರಿಗೆ ಕಡೆಗೂ ದುಃಖ ನೇಮವದಕೆ ಮೂಲವುರೊಕ್ಕ 53 ಸ್ಪøಹದಿಂದಲೆ ಕೋಪವು ಬಹುದು ವಿಹಿತವೆಂದು ನಗುವನೆ ಸಾಧು 54 ಲೋಭದಿಂದ ಮೂಲಕೆ ನಾಶ ಸ್ವಾಭಾವ್ಯದಿ ದುರ್ಜನಕಾಶಾ 55 ರಾಶಿ ಧನವ ಕೊಳ್ಳೆಯು ಕೊಡುವ 56 ದಾನಕೆಂದರಿಲ್ಲವು ಕಾಸು ದಂಡಕೊಡುವುದಕೆ ಬಹುಲೇಸು 57 ನಷ್ಟವಾದರೂ ಮನಕಿಷ್ಟ ದುಷ್ಟಾತ್ಮರು ಪಡುವರು ಕಷ್ಟ 58 ಆರ್ಯರುಕ್ತಿ ಕೇಳುವುದಿಲ್ಲ ಕಾರ್ಯದಲಿ ವಿಘಾತವೆ ಎಲ್ಲ 59 ಧನವಿದ್ದರು ಸೌಖ್ಯವು ಕಾಣೆ ಘನದುರಾಸೆ ಕುಜನರಿಗೆ ಆಣೆ 60 ಭೂಮಿ ಉಂಟು ತನಗೆಂಬುವರು ನೇಮದಿ ದಂಡವ ತೆರುತಿಹರು 61 ಮಳೆಬೆಳೆಯನು ನಿಂದಿಪರು ಕೆಲರು ಖಳರು ಸುಮನಸರ ದೂಷಿಪರು62 ಮೊದಲು ತುದಿಯಲಿ ದುರಭಿಮಾನ 63 ವ್ಯಾಪಾರದಿ ಧನ ಕಳಕೊಂಡು ಕೋಪ ವ್ಯಾಜ್ಯಕೆಳೆವದೆ ಫಂಡು 64 ಬಲುಧನವ ಕೂಡಿಸುತಲಿ ಮುಂದು 65 ಮುಖದಾಕ್ಷಿಣ್ಯದಿ ಮಾತಾಡಿ ವಿಕಲರನರ ಸ್ನೇಹದಿ ಕೂಡಿ66 ದೊಡ್ಡದಾಗಿ ಮನೆಯನು ಕಟ್ಟಿ ದುಷ್ಟತನದಿ ವಾದಿಸಿ ಬಿಟ್ಟಿ 67 ಕೂಲಿಯವರ ಹೊಟ್ಟೆಗೆ ಕೊಡದೆ ಲೋಲನಾಗಿ ವಂಚನೆ ಬಿಡದೆ 68 ಸಂಸಾರವಿದೆ ಸ್ಥಿರವೆಂದು ಹಿಂಸೆಪಡುತಲಿ ಸದಾನೊಂದು 69 ಚತುರ ಶೀತಿ ಲಕ್ಷಯೋನಿಗಳೊಳ್ ಮತಿಹೀನರಾಗಿ ಜನಿಸುತಲೂ 70 ಭದ್ರವು ತಮಗೆಂದು ಪ್ರಾಣಿಗಳು 71 ಇದಕ್ಕಾಗಿ ಪರಾಧೀನದಲಿ ಪದೇ ಪದೆಗೆ ತಾವು ನೋಯುತಲಿ 72 ಮನುಜ ಜನ್ಮ ಬರುವುದೆ ಕಷ್ಟ ಮಾನಿತನಾದವನೆ ಅತಿ ಶ್ರೇಷ್ಠ 73 ಭೋಧಿಸುವಾತನೆ ಶುಭತಮನು 74 ಸುಜನರಿಲ್ಲವವರದೆ ಪಂಥ 75 ಕರ್ಮಾರ್ಥ ಶೃತಿ ಗಹನದಲಿ ನಿರ್ಮಲರಾಗದೆ ಚಿಂತೆಯಲಿ&ಟಿbsಠಿ
--------------
ಗುರುರಾಮವಿಠಲ
ದುಃಖವನೆಷ್ಟೆಂದು ಹೇಳಲಿ ಸಂಸಾರ ಶರಧಿಯಿದುದುಃಖದ ಶರಧಿಯಿಂದ ಪರಮಾತ್ಮನ ಸ್ಮರಣೆಗೆ ವಿಘ್ನವಹುದು ಪ ಮಗ ಬುದ್ಧಿವಂತನಾಗಲಿಲ್ಲವೆಂದೆಂಬಮಗಳಿಗೊದಗಲಿಲ್ಲ ಅಳಿಯ ಎಂದೆಂಬಹಗರಣವಾಯಿತು ಮನೆಯೀಗ ಎಂದೆಂಬ ದುಃಖವೊಂದುಜಗಳಗಂಟಿಯು ಎನ್ನ ಹಿರಿಯ ಸೊಸೆ ಎಂದೆಂಬ ದುಃಖವೊಂದು1 ಹೆಂಡತಿ ವ್ಯಭಿಚಾರಿಯಾದಳು ಎಂದೆಂಬ ದುಃಖವೊಂದುಉಂಡೆನೆಂದರೆ ಅನ್ನವಿಲ್ಲ ಎಂದೆಂಬ ದುಃಖವೊಂದುಕಂಡಕಡೆಗೆ ಹೋಗೆ ಕೈ ಹತ್ತದೆಂದೆಂಬ ದುಃಖವೊಂದುಮುಂಡೆಯಾದಳು ಎನ್ನ ಮೊಮ್ಮಗಳು ಎಂದೆಂಬ ದುಃಖವೊಂದು 2 ನೆಂಟರಿಗೆ ಮಾಡಲೆನ್ನೊಳಿಲ್ಲವೆಂದೆಂಬ ದುಃಖವೊಂದುಒಂಟಿ ಬಯಲಿನ ಹೊಲವು ಬೆಳೆಯದು ಎಂದೆಂಬ ದುಃಖವೊಂದುಕಂಟಕಿ ನಾದಿನಿ ಹಡೆಯಲಾರಳು ಎಂದೆಂಬ ದುಃಖವೊಂದುಎಂಟು ವರಹ ಎಮ್ಮೆ ಸತ್ತಿತು ಎಂದೆಂಬ ದುಃಖವೊಂದು3 ಎದೆ ಮೇಲೆ ಕುಳಿತಿಹರು ದಾಯಾದಿಗಳೆಂದೆಂಬ ದುಃಖವೊಂದುಮುದುಕಿಗೆ ಗೆಲುವು ತಾನಿಲ್ಲವೆಂದೆಂಬ ದುಃಖವೊಂದು ಮದುವೆಗೆ ಹಾದಿಲ್ಲ ಹಾವಳಿ ಎಂದೆಂಬ ದುಃಖವೊಂದುಸದನ ಒಳ್ಳೇದಲ್ಲ ಏಳು ಮಕ್ಕಳ ತಾಯಿ ಎಂಬ ದುಃಖವೊಂದು 4 ಜೋಡಿಪೆ ಧೈರ್ಯವೆಂದರೆ ನಿಶ್ಚಯಾಗಲಿಕೆ ಕೊಡದು ಒಂದುನೋಡುವೆ ಚಿಂತಿಸಿ ಎನೆ ಚಿಂತೆ ಹರಿಯಲು ಕೊಡದು ಒಂದುಮಾಡುವೆ ಮಂತ್ರ ಪೂಜನ ಪೂಜೆ ಮಾಡಲು ಕೊಡದು ಒಂದುಕೊಡುವೆ ಗುರು ಚಿದಾನಂದನೆನೆ ಕೂಡಗೊಡದು ಎಂದು 5
--------------
ಚಿದಾನಂದ ಅವಧೂತರು
ಹ್ಯಾಗೆ ದೊರಕೀತು ನಿನ್ನ ಚರಣವು ನಾಗಶಯನನೆನ್ನಂಥ ಪಾಪಿಗೆ ಪ ನೀಗಿ ಹೋಯಿತು ಅರ್ಧವಯವು ಆಗಯೀಗಯಾ ವಾಗಲೋ ಹೋಗುವುದು ದೇಹ ಭೋಗದಾಸೆಯು ನೀಗವಲ್ಲದು ಎನಗೆ ಇನ್ನು ಅ.ಪ ಮನದಕ್ಲೇಶವು ಕಡಿಯವಲ್ಲದು ನೀಚತನದ ನೆನವು ಎನ್ನೊಳಳಿಯವಲ್ಲದು ಸಾಚನಾಗಿ ನಿನ್ನ ಧ್ಯಾನದಿ ಮನವುಯೆಂಬುದು ಕ್ಷಣವು ನಿಲ್ಲದು ಕ್ಷಣವು ಬಿಡದೆ ಅನ್ಯರೊಡವೆಯ ಮನದೊಳನುದಿನ ನೆನೆದು ನೆನೆದು ಘನ ಪಾಪಾತ್ಮನಾಗಿ ಚರಿಸುವೆ ಜ್ಞಾನ ಬಾರದು ಎನಗೆ ಇನ್ನು 1 ಒಡವೆವಸ್ತ್ರದ ಆಸೆ ಬಿಡವಲ್ಲದು ಪಾಪಿಮನವು ಮಡದಿ ಮಕ್ಕಳ ಮಮತೆ ತೊರೀವಲ್ಲದು ಒಡನೆ ತಿಳಿದು ಕೆಡುವ ಕಾಯದ ಮೋಹ ಮರೀವಲ್ಲದು ಜಡಮತಿಯು ಬಿಡದು ಎಡರು ಪ್ರಪಂಚ ತೊಡರಿನೊಳು ಮನ ವಡರಿ ಬಿಡದಲೆ ಮಿಡುಕಿ ಮಿಡುಕಿ ಕಡೆಯುಗಾಣದೆ ಕಷ್ಟಬಡುತಿಹೆ ಬಿಡದು ವಿಷಯದಾಸೆ ಎನಗೆ 2 ದಾಸಜನ ವ್ಯಾಸಂಗ ಮೊದಲಿಲ್ಲ ಪಾಪಿಜನುಮ ದೋಷಗುಣಗಳು ಒಂದುಬಿಟ್ಟಿಲ್ಲ ಒಡನೆನುಡಿದ ಭಾಷೆಗಳನು ತಿಳಿದು ನಡೆಸಿಲ್ಲ ಆಸೆ ಹರಿದಿಲ್ಲ ನಾಶಮಾಡಿತು ಹೇಸದಲೆ ಇನ್ನು ಮೋಸಗಾರನ ಪೋಷಿಸುವುದು ಶ್ರೀಶ ಶ್ರೀರಾಮ ನಿನಗೆ ಕೂಡಿತು 3
--------------
ರಾಮದಾಸರು