ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಲಗಿದನು ಶ್ರೀರಂಗ ಶ್ರೀರಂಗ ಪ ಕಲಿಜನರ ನೋಡುತಲಿ ಅಳುಕಿದಾಮನದಿಂದ ಅ.ಪ ಜೀವ ಜಗಬಿಂಬನಿಗೆ ಯಾವುದೈ ಆಯಾಸ ಕಾವ ಸಚರಾಚರವ ಶ್ರೀವರನಿಗುಂಟೆ ನಿದ್ರೇ ಸಾರ್ವಭೌಮನಿಗೆ ಕ್ಷುದ್ರಜೀವ ಸಮರೆಂತೆಂಬ ಕೋವಿದಾಭಾಸಗಣ ಸೇವೆಕೊಳ್ಳನು ಎಂದು 1 ವೈದೀಕರೆನ್ನುತಲಿ ವೇದಮರ್ಮವ ತಿರುಚಿ ಬೌದ್ಧಮತವನೆ ಮತ್ತೆ ಬೊಧಿಪರೆ ಈ ಜನರು ಸಾಧು ಸಮ್ಮತ ಮಧ್ವವಾದ ನೋಡದೆ ಬರಿದೆ ಸಾಧು ವೇಷದಿ ತಿರಿಪ ಗರ್ದಭರ ಕಂಡಂಜಿ 2 ನಾಮಜಪವೇನಿಲ್ಲ ನೇಮ ನಿಷ್ಠೆಗಳಿಲ್ಲ ನಾಮ ಹಾಕುವ ದೊಡ್ಡ ನೇಮವಂದೇಯಿಹುದೆ ಹೇಮಗೋಸುಗ ತತ್ವ ಹೋಮಮಾಡುವ ಎಲ್ಲ ಕಾಮ ಕಾಮಿನಿ ಜನರ ವಾಮಗುಣಗಣನೆನೆದು 3 ಅನ್ನದೇವನ ತೊರೆದು ಅನ್ನಕೊಂಬರೆ ಕ್ರಯಕೆ ಅನ್ಯರೆನ್ನದೆ ಹರಿಗೆ ಇನ್ನು ಘಳಿಪರೆ ನಿರಯ ಹುಣ್ಣಂತಮವಿಪರೀತ ಕಣ್ಣಿಂದ ನೊಡದವ ಧನ್ಯಧನ್ಯನು ಎಂದು ಕಣ್ಣುಗಳ ಮುಚ್ಚುತಲಿ 4 ಶ್ರೀಲೊಲ ಮಲಗಿದಡೆ ಏಳುವುದು ಜಗವೆಂತು ವ್ಯಾಳಗುರುಹೃಸ್ಥ “ಶ್ರೀ ಕೃಷ್ನವಿಠಲ”ನೆ ತಾಳಿ ಕೃಪೆ ಹೃದಯದಲಿ ಶೀಲರೂಪವ ತೋರೊ ಕಾಲ ವಾಲಗವ ಕೈಕೊಂಡು 5
--------------
ಕೃಷ್ಣವಿಠಲದಾಸರು
ನಾ ಮಾಡಿದಕರ್ಮಬಲವಂತವಾದರೆ |ನೀ ಮಾಡುವುದೇನೊ ದೇವಾ ಪಸಾಮಾನ್ಯವಲ್ಲವಿದು ಬ್ರಹ್ಮಬರೆದ ಬರೆಹ |ನೇಮದಿಂದಲಿ ಎನ್ನ ಹಣೆಯಲ್ಲಿ ಬರೆದುದಕೆ ಅ.ಪಅತಿಥಿಗಳಿಗೆ ಅನ್ನ ಕೊಟ್ಟವನಲ್ಲ -ಪರ -|ಸತಿಯರ ಸಂಗವ ಗಳಿಗೆ ಬಿಟ್ಟವನಲ್ಲ ||ಮತಿಹೀನನಾಗಿ ಮರುಳಾಗಿದ್ದೆನೋ ದೇವ |ಗತಿಯಾವುದೈ ಎನಗೆ ಗರುಡವಾಹನ ಕೃಷ್ಣ1ಅನ್ನಪಾನಂಗಳಿಗೆ ಅಗ್ರಗಣ್ಯನು ಆಗಿ |ಸ್ನಾನ ಸಂಧ್ಯಾದಿ ಕರ್ಮಂಗಳನೀಗಿ||ದಾನವಾಂತಕ ನಿನ್ನ ಧ್ಯಾನವ ಮಾಡದೆ |ಶ್ವಾನನಂತೆ ಮನೆಮನೆ ತಿರುಗುತಲಿದ್ದೆ 2ಇನ್ನಾದರು ನಿನ್ನ ದಾಸ ಸಂಗವನಿತ್ತು |ಮನ್ನಿಸಿ ದಯಮಾಡೊ ಮನ್ಮಥಜನಕ ||ಅನ್ಯರೊಬ್ಬರ ಕಾಣೆ ಆದರಿಸುವರಿಲ್ಲ |ಪನ್ನಂಗಶಯನ ಶ್ರೀಪುರಂದರವಿಠಲ 3
--------------
ಪುರಂದರದಾಸರು