ಒಟ್ಟು 34 ಕಡೆಗಳಲ್ಲಿ , 19 ದಾಸರು , 24 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದಿಯಾತಕೋ ಈ ಭವದೊಳು | ನೊಂದಿಯಾತಕೋ ನೀನೊಂದನರಿಯೆ || ಬಂದಿಯಾತನು ನೀ ಮತಿಮಂದನಾಗದೆ | ಗತಿ ಮುಂದೇನೆಂದು ತಿಳಿಯದಲೆ ಪ ನಾ ನಾ ಎನುತಲಿ ನಾನಾ ಯೋನಿಯೊಳು | ಜನಿಸಿ ಬಂದು ನೀ ಹೀನನೆನಿಸಿಕೊಂಡು || ಅಜ್ಞಾನದೊಳಗೆ ಬೆರೆತು ನೀ - | ನಾರೆಂಬದನರಿಯಲಿಲ್ಲವು ಗುರುತು | ಜ್ಞಾನಿ ಪುರುಷರ ಕೇಳುವದನೆ ಮರೆತು | ಇನ್ನು ಸದ್ಗತಿಗೆ ಆದಿಯೊ ಹೊರತು | ನೀ ಇದನರಿತು 1 ಆರರೊಳಗೆ ಬಿದ್ದು ಆರನು ನೋಡದೆ | ಆರು ಚಕ್ರದ ಮೇಲೆ ಏರಿ ಮ್ಯಾಲಕಿನ್ನು | ತೋರುತಿಹುದು ನೋಡು ರೂಪವಲ್ಲೀ | ಧಾರುಣಿಯೊಳಗೆಲ್ಲ ಅದರ ವ್ಯಾಪವು | ತೋರಿದಾಕ್ಷಣ ಅಳಿದ್ಹೋಯ್ತು ಪಾಪ | ಇದನು ಬಿಟ್ಟು ಮೂರ ನೆನಿಸಿ ಕೆಟ್ಟೀ | ಬಯಸಿ ನೊಂದೀ 2 ನರ ತನು ದೊರೆಕೋದು ಬರಿದೇನೊ | ಎರಡಿನ್ನು ಸರಿಯಾಗೊ ತನಕ | ಬರುವದೇನೊ ಸುಮ್ಮನೆ ಮರುಳಾಗ ಬ್ಯಾಡ || ಸರಿಸು ಅಸ್ಥಿರವೆಂದು ನೀ ಬೇಗದಲಿ | ಸಂಚಿತವೆಲ್ಲ ಕೂಡಿ ಬಂದಿತಿನ್ನೇನು | ಗುರು ಭವತಾರಕನ ಭಜಿಸು ನಿನ್ನ | ಮನಸಿನಿಂದಲಿ 3
--------------
ಭಾವತರಕರು
(ಕಂಗಳಿದ್ಯಾತಕೋ........ ಎಂಬಂತೆ) ದಾಸನೆಂದೆನಿಸೊ ಎನ್ನಾ | ಶ್ರೀಶ ಹೇ ಸರ್ವೇಶ ಪ ಹೇಸಿ ವಿಷಯದಿ ಬಹು | ಕ್ಲೇಶಗಳಿಗೊಳಗಾಗಿಘಾಸಿ ಪಟ್ಟಿಹೆನೊ ಹರಿ | ಪೋಷಿಸೂವುದು ಧೊರಿಅ.ಪ. ಏಸು ಜನ್ಮದ ಸುಕೃತದಿಂದಲಿಲೇಸಾದ ಮಧ್ವ ಮತದಿ ಬಂದು ||ಭಾಸುರ ತತ್ವ ಪ್ರಕಾಶಿಸಿ ಮಹಿದಾಸ ದಾಸರ ಪ್ರೀಯ ಪಿಡಿಕೈಯ್ಯ 1 ಜ್ಞಾನ ದಾನವ ಬೇಡ್ವೆ | ಭಾವವನಜ್ಞಾನದಿಂದಲೆ ಕಡಿವೆ ಹರಿಯೆ ||ಮೌನಿಕುಲ ಸನ್ಮಾನ್ಯ ಮಾನವಜ್ಞಾನಾನಂದನೆ ವ ಪುಷ ಕಾಯೊ 2 ಬಾದರಾಯಣ ಭವ್ಯ ರೂಪಾಪಾದಕೆ ನಮಿಪೆನೊ ಶ್ರೀಪಾಮೋದಮುನಿಯ ನುತ | ಪ್ರಮೋದನೆಮೋದವೀಯೋ ಗುರು | ಗೋವಿಂದ ವಿಠಲ3
--------------
ಗುರುಗೋವಿಂದವಿಠಲರು
ಆತ್ಮನಿವೇದನೆ ಅಂಬುಜೇಕ್ಷÀಣ ನಂಬಿದೇ ನಿನ್ನ ಪ. ಅಂಬುಜೇಕ್ಷಣ ನಿನ್ನ ನಂಬಿದ ಭಕ್ತರಘ ದ್ಹಂಬನು ಕಡಿದು ನಿನ್ನಿಂಬನು ತೋರುವೆ ಅ.ಪ. ಅನುಪಮ ಚರಿತ ಅಪ್ರಮೇಯನೆ ಕೃಷ್ಣ ತನುಮನಧನಗಳಾ ನಿನಗರ್ಪಿಸುವೆ ಎನ್ನ ಚಿನುಮಯ ರೂಪನೆ ಮನುಮಥ ಪಿತನೆ ನಿನ್ನ ಸರಿಯಾರೋ ಹನುಮದೀಶ ಕೃಷ್ಣ 1 ಉತ್ತಮರುಗಳನು ನಿತ್ಯದಿ ಸೇವಿಪ ಚಿತ್ತವೆನಗೆ ಕೊಡೋ ಉತ್ತಮೋತ್ತಮನೆ ತೆತ್ತೀಸ ಕೋಟಿ ದೇವರ್ಕಳು ನಿನ್ನನು ಸುತ್ತಿ ಸ್ತುತಿಪರೋ ನರ್ತನ ಗೈಯ್ಯುತ 2 ಪದುಮ ಸಂಭವ ಪಿತ ಪದುಮಿಣಿಯರಸನೆ ಒದಗುತ ಭಕ್ತರಾಪ್ತನು ನೀನಲ್ಲೆ ಸದನದಿ ಕಾಯುತ ಮುದವನು ಬೀರುತ ನೀ ಚದುರ ಶ್ರೀ ಶ್ರೀನಿವಾಸ ಕದನವಿನ್ಯಾತಕೋ ರಾಮ 3
--------------
ಸರಸ್ವತಿ ಬಾಯಿ
ಕಂಗಳಿದ್ಯಾತಕೋ ಚಿನುಮಯ ರಂಗನ ನೋಡದಾ ಸಂಗರಹಿತಾತ್ಮನ ನೋಡದಾ ಪ ಶರೀರವೇ ತಾನೆಂದು ನಂಬಿ ಮೆರೆದು ನಿಜಾನಂದವನ್ನು ದೃಷ್ಯಂಗಳನ್ನು ನೋಡುವಾ 1 ತಾನಿದ್ಯಾರು ತನಗೆ ತೋರ್ಪ ತನುವಿದೇನೆಂದರಿವುತಿರ್ಪ ಜ್ಞಾನದೃಷ್ಟಿಯಿಲ್ಲದಂಥ ಆನನಂಗಳನು ನೋಡುವ 2 ಹಂಸ ತಾನಾಗಿ ಚರಿಪ ಹಂಸನ ಪ್ರಕಾಶವನ್ನು ಶುಂಶುಮಾರದಿ ಬೆಳಗುತಿರ್ಪಭ್ರಂಶಿತಾಂ ತನ್ನ ನೋಡದಾ 3 ಸಂತಸಾಧು ಚರಣಕ್ಕೆರಗಿ ಚಿಂತೆಗಳನು ಹರಿದು ಭರದಿ ಶಾಂತಿ ಸುಖವನಿತ್ತ ಗುರು ಶಾಂತಮೂರುತಿ ನೋಡಲಾರದ 4
--------------
ಶಾಂತಿಬಾಯಿ
ಕಂಡ ದೈವಕ್ಕೆ ಕಂಗೆಟ್ಟು ಕೈ ಮುಗಿದು | ದಣಿದಿಯಾತಕೋ ಪ ಶರಧಿ ಗರ್ವ ಪರಿಹರನಸೇರಿ ಹೋದ ದಿವಿಜರ ಬಿಡಿಸಿ ಸಿರಿಯಿತ್ತು ಸಲಹಿದಾತನ 1 ಸುರರು ಪೊಗಳಲು |ಹುರುಳಿಲ್ಲದ ಭವವನಳಿದು ಪರಮ ಪದವಿಯನಿತ್ತನ 2 ವೈರಿ ತಮ್ಮಗೆ |ರುಕ್ಮನಗರ ಧಾರೆಯೆರೆದ ಶ್ರೀ ರಾಮಚಂದ್ರನ 3
--------------
ರುಕ್ಮಾಂಗದರು
ಗರುವವು ನಿನಗ್ಯಾಕೆಲೋ ಎಲೋ ಜರ ನಾಚಿಕೆ ಬಾರದೇನೆಲೋ ಎಲೋ ಪ ಮರುಳನೆ ನಿನಗೀಪರಿ ಗರುವ್ಯಾತಕೋ ಅರಿತು ನೋಡ್ಹಿರಿಯರನೆಲೋ ಎಲೋ ಅ.ಪ ಘನತೆಲೊಸಿಷ್ಠನೇನೆಲೋ ಎಲೋ ಜನಕ ಭಾಗ್ಯದೊಳೆಲೋ ಎಲೋ ಮನುಗಳಲ್ವ್ಯಾಸನೇನೆಲೋ ಎಲೋ ನೀ ಮುನಿಗಳೋಳ್ಯುಕನೇನೆಲೋ ಎಲೋ ಮನೆತನದಲಿ ಘನದಶರಥನೆ ದಿನಮಣಿಯೆ ನೀ ಪ್ರಭೆಯೋಳೆಲೋ ಎಲೋ 1 ಧುರದಿ ಕಾರ್ತರ್ವ್ಯನೇನೆಲೋ ಎಲೋ ನೀ ನರಿವಿನೋಳ್ಪ್ರಹ್ಲಾದನೇನೆಲೋ ಎಲೋ ವಿರಸದಿ ರಾವಣನೇನೆಲೋ ಎಲೋ ನೀ ಸ್ಥಿರತನದ್ವಿಭೀಷಣನೇನೆಲೋ ಎಲೋ ಹರಿ ಒಲುಮೆಲಿವರ ಅಗಸ್ತ್ಯನೇನು ಸುರ ಗುರುವೇ ನೀ ಮತಿಯೋಳೆಲೋ ಎಲೋ 2 ತ್ರಾಣದಿ ವಾಲಿಯೇನಲೋ ಎಲೋ ನೀ ಜಾಣರೋಳ್ಬಲಿಯೇನೆಲೋ ಎಲೋ ಜ್ಞಾನದಿ ವಾಲ್ಮೀಕಿಯೇನೆಲೋ ಎಲೋ ನೀ ಗಾನದಿ ನಾರದನೇನೆಲೋ ಎಲೋ ದಾನದೊಳಗೆ ಹರಿಶ್ಚಂದ್ರನೇನೋ ನಿ ಧಾನದಿ ನಳನೇನೆಲೋ ಎಲೋ 3 ಪದವಿಯೊಳ್ಧ್ರುವನೇನೆಲೋ ಎಲೋ ನೀ ನಿಧಿಯೋಳ್ಕುಬೇರನೆಲೋ ಎಲೋ ಮದನನೆ ಪುರುಷರೋಳೆಲೋ ಎಲೋ ವರ ಮದದಿ ಕಶ್ಯಪನೇನೆಲೋ ಎಲೋ ಸದಮಲ ಕುಲದಲಿ ಗೌತಮ ಮುನಿಯೇ ನೀ ಕದನದಿ ಕುರುಪನೇನಲೋ ಎಲೋ 4 ನುಡಿವಲಿ ನರನೇನೆಲೋ ಎಲೋ ನೀ ಕೊಡುವಲಿ ಕರ್ಣನೇನೆಲೋ ಎಲೋ ಇಡುವಲಿ ಧರ್ಮನೇನಲೋ ಎಲೋ ನೀ ಕೆಡುಕಲಿ ಶಕುನಿಯೇನೆಲೋ ಎಲೋ ಕಡುಗಲಿತನದಲಿ ಕಲಿಭೀಮನೇ ಸಡಗರದಿಂದ್ರನೇನೆಲೋ ಎಲೋ 5 ಯುಕ್ತಿಲಿ ದ್ರೋಣನೇನೆಲೋ ಎಲೋ ನೀ ಶಕ್ತಿಲಿ ನಕುಲನೇನೆಲೋ ಎಲೋ ಭಕ್ತಿಲ್ವಿದುರನೇನೆಲೋ ಎಲೋ ನೀ ವೃತ್ತಿಲಿ ಸಹದೇನವನೇನೆಲೋ ಎಲೋ ಚಿತ್ತಶುದ್ಧಿಯಲಿ ವೀರ ಸುಧನ್ವನೆ ತೃಪ್ತಿಲಿ ಭೀಷ್ಮನೇನೆಲೋ ಎಲೋ 6 ದಿಟ್ಟರೋಳ್ಗರುಡನೇ ನೆಲೋ ಎಲೋ ನೀ ಶಿಷ್ಟರೋಳ್ಹನುಮನೇನೆಲೋ ಎಲೋ ಸೃಷ್ಟಿಯೋಳಾರನ್ಹೋಲ್ವೆಲೋ ಎಲೋ ನೀ ಭ್ರಷ್ಟನಾಗುವಿ ಯಾಕೆಲೋ ಎಲೋ ಬಿಟ್ಟುಗರ್ವಮಂ ಶಿಷ್ಟಶ್ರೀರಾಮನ ಮುಟ್ಟಿಭಜಿಸಿ ಉಳಿಯೆಲೋ ಎಲೋ 7
--------------
ರಾಮದಾಸರು
ಗುರುರಾಜನೇ ಎನ್ನ ಪರಿಪಾಲಿಪುದ ಬಿಟ್ಟು ವರ ಮಂತ್ರಾಲಯದೊಳಿರುವುದುಚಿತವೇನೋ ಪ ಬಡ ಭಕ್ತನನು ಕಷ್ಟ ಕಡಲೊಳಿರಿಸಿ ತುಂಗಾ ದಡದಿನಿಂತೆನ್ನ ಕೈ ಬಿಡುವುದುಚಿತವೇನೋ 1 ಅಡಿ ಸೇವಕನೊಳಿಂಥಾ ಕಡು ಕೋಪವ್ಯಾತಕೋ ನುಡಿ ನುಡಿಗೆನ್ನ ತಪ್ಪು ಹಿಡಿದು ಪೋಗುವರೇನೊ 2 ಒಡೆಯ ಶ್ರೀ ಹನುಮೇಶವಿಠಲನ ದಾಸನೇ ಬಡವನಿರುವೆನೆಂದು ನೋಡದಿರುವರೇನೊ 3
--------------
ಹನುಮೇಶವಿಠಲ
ದೂರಿಗೊಳಗಹುದೇನೆಲೊ ಬರಿ ದೂರಿಗೊಳಗಹುದೇನೆಲೊ ಹರಿಧ್ಯಾನವನು ನೀ ಮಾಡದೇ ಪ ಅಪರೂಪ ಜನ್ಮವು ಬಂದಿದೆ ಕಪಿಚೇಷ್ಟೆಗಳು ನಿನ್ನ ಹೊಂದಿದೆ ಜಪ ಶಾಸ್ತ್ರದೊಳು ಹೀಗೆಂದಿದೆ 1 ಕಟಪತನಗಳದ್ಯಾತಕೋ ಯಿದು ತ್ರಿಪುಟಿಯೊಳಗದು ನೀತಿಕೋರ ನ ಪರನಾಗಲಿದ್ಯಾಕೊ ನೋಡದ ಗುಪಿತದಿಂದಲಿ ಭಜಿಸದೆ 2 ನಾನು ನನ್ನದು ಎಂಬುವೇ ಅಲ್ಲಿ ಗೇನು ಬಂದರು ತಿಂಬುವೇ ಹಾನಿಗೊಳಗಾಗಿ ನಮ್ಮಯ ಶ್ರೀನಿವಾಸನ ಭಜಿಸದೆ 3 ಎಂಟುಗೇಣಿನ ದೇಹವು ಅದು [ಕುಂಟು]ಸೋಹಮಸ್ಮಿಯ ಭಾವವು ಕಂಟಕಾಂತಕ ತಲಸಿಮದ್ಗುರು ವುಂಟು ನಿನ್ನೊಳಗರಿಯದೆ 4
--------------
ಚನ್ನಪಟ್ಟಣದ ಅಹೋಬಲದಾಸರು
ನಾನಾ ವೇಷಗಳಿನ್ನು ನಿನಗ್ಯಾಕೊ ಹರಿಯೆ ನಿನ್ನ ಭಕ್ತರು ನಿನ್ನ ತಿಳಿಯದೆ ಬಿಡರು ಪ ಮೀನಾಗಿ ಜಲದೊಳು ತಿರುಗುವದ್ಯಾಕೊ ಚಾರಣನೆಂದೆನಿಸಿ ಭಾರವ ಪೊತ್ತುದ್ಯಾಕೊ 1 ಹಂದ್ಯಾಗಿ ದಿತಿಜನ ಬಡಿದೆ ನೀನ್ಯಾತಕೋ ಕಂದನ ಪೊರೆಯೆ ಕಂಬದಿ ತೋರಿದ್ಯಾಕೊ 2 ವಟುವಾಗಿ ಭೂಮಿಯ ಬೇಡಿದೆ ಏತಕೊ ಹಟವು ರಾಯರ ಮೇಲೆ ನಿನಗ್ಯಾಕೆ ಬೇಕೋ 3 ಮಲತಾಯಿ ನುಡಿಗಾಗಿ ವನವಾಸ ನಿನಗ್ಯಾಕೊ ಬಲದಿ ತಂದೆಯ ಬಂಧ ಬಿಡಿಸಿದ್ದು ಸಾಕೊ 4 ರಾಜೇಶ ಹಯಮುಖ ಬತ್ತಲೆ ನಿಂತೆ ಏಕೊ ತೇಜಿಯನೇರ್ದು ತೋರುವ ಶೌರ್ಯ ಸಾಕೊ 5
--------------
ವಿಶ್ವೇಂದ್ರತೀರ್ಥ
ನಿಂದೆ ಮಾಡುವಿ ಯಾತಕೋ | ಮಂದಮಾನವ ಶ್ರೀಗೋವಿಂದ ದಾಸಾರ್ಯರನ್ನ ಎಂದೆಂದಿಗೀಮಾತು | ಇಂದಿರೇಶನ ಭಕುತ ವೃಂದ ಮೆಚ್ಚುವದಿಲ್ಲವೋ ಮೂಢ ಪ ಬಾಲತನದಾರಭ್ಯ ಶೀಲ ಸದ್ಭಕುತಿಯಲಿ ತಾಳ ತಂಬೂರಿ ಪಿಡೆದು | ಶ್ರೀಲೋಲ ಹರಿನಾಮ ಹೇಳುತಲಿ ಸತತ | ಗೋಪಾಳ ವೃತ್ತಿಯ ಮಾಡಿ ಕಾಲವನು ಕಳೆದವರು 1 ಕುಸುಮಶರನಟ್ಟುಳಿಗೆ ವಶವಾಗದಿರಿ ಎಂದು ಉಸುರುತಲಿ ಶಿಷ್ಯಗಣಕೆ | ಅಸುರಾರಿ ಮಹಿಮೆಯನು ರಸವತ್ ಕವಿತೆಯಲಿಂದ ನಿಶಿ ಹಗಲು ವರ್ಣಿಸಿದ ಅಸಿಫ್ಯಾಳು ನಿಲಯರನು 2 ಕ್ಲೇಶ ಸುಖ ಸಮ ತಿಳಿದು ಲೇಸಾಗಿ ಗುರುಸೇವೆಗೈದು ವಾಸಸ್ಥಾನಕೆ ತೆರಳಿದೀ ಸುಗುಣರನು ವ್ಯರ್ಥ ನಿಂದೆ ಮಾಡುವಿ ಯಾಕೋ 3
--------------
ಶಾಮಸುಂದರ ವಿಠಲ
ಪಾಲಿಸೆನ್ನನೂ ರಾಮ ಪಂಥವ್ಯಾತಕೋ ಪ ಕಾಲವೈರಿ ಕಪಟನಾಟಕ | ಆಲಿಸೆನ್ನ ಬಿನ್ನಪವಂ ಚಾಲನೆ ಶ್ರೀಲೋಲನೇ ನೀಂ ಅ.ಪ ರಕ್ಷಕಾಮಣಿ ಸಾಧುಜನ ರಕ್ಷಾಮಣಿ ಅಕ್ಷಯ ಸುಜನರಾಶ್ರಿತÀ ನಿನ್ನ ಭಿಕ್ಷವನಾಂಬೇಡುವೆನೈ ಪಕ್ಷಿವಾಹನ ಜಗದಧ್ಯಕ್ಷನೇ ಸೀತಾರಾಮ 1 ಪಂಡಿತಾಮಣಿ ಜ್ಞಾನಕುಂಡಲಿನಗರೀಶ ನೀ ನಂಡಜ ವಾಹನನಹುದೊ ಪಂಡರಿಪುರನಾಯಕ ಚಾ ಮುಂಡಿ ವರದಾಯಕ ನೀಂ [ಶ್ರೀರಾಮ] 2 ಶಾಶ್ವತ ಜನಭಾಷಾ ಭಾಸ್ಕರಕೋಟಿ ತೇಜಾ ಈಶ್ವರ ಮತ್‍ಗುರು ತುಲಶೀರಾಮಾ 3
--------------
ಚನ್ನಪಟ್ಟಣದ ಅಹೋಬಲದಾಸರು
ಮಾನಹೀನನಿಗೆ ಇಲ್ಲದ ಅಭಿಮಾನವ್ಯಾತಕೋ ನಾನೇ ಬ್ರಹ್ಮನೆನ್ವನ ಮುಖ ನೊಡ್ವದ್ಯಾತಕೋ ಪ ಹರಿಯೇ ಸರ್ವಪರಾ ಎನ್ನದವನ ಜ್ಞಾನವ್ಯಾತಕೋ ತಾರತಮ್ಯವರಿಯದವನಾಚಾರ್ಯವ್ಯಾತಕೋ 1 ಆಶೆಯನು ಬಿಡದವಗೆ ಸನ್ಯಾಸವ್ಯಾತಕೋ ಭಾಷೆ ಹೀನನಾದವನ ವಿಶ್ವಾಸವ್ಯಾತಕೋ 2 ವರದ ಶ್ರೀ ಹನುಮೇಶ ವಿಠಲ ಒಲಿವನ್ಯಾತಕೋ 3
--------------
ಹನುಮೇಶವಿಠಲ
ಮಾಯಾವ್ಯಾತಕೋ ಮಾಧವನೆ ಮಾಯಾವ್ಯಾತಕೋ ಪ ಮಾಯವ್ಯಾತಕೆ ಎನ್ನ | ಪ್ರೀಯ ಸಖನೆ ಲೋಕನಾಯಕ ನೀನಿರೆ ಕಾಯೆ ಕಂಡವರಾ ಅ.ಪ. ಆರು ವರ್ಗಗಳೆಂಬ ಕ್ರೂರರಿಗೊಪ್ಪಿಸಿದೂರಾ ನೋಡುವದು ಉದಾರ ಉಚಿತವೆ 1 ಇಂದಿರೆಯರಸ ಗೋವಿಂದ ನಿನ್ನಯ ಪಾದದ್ವಂದ್ವ ನಂಬಿದವನ ಕುಂದೆಣಿಸುವರೇ 2 ಸುಪರ್ಣ ವಾಹನ ಮೋಹನ್ನ ವಿಠ್ಠಲನೇ 3
--------------
ಮೋಹನದಾಸರು
ಯಾಕೆ ಜೀವನವೆ ನೀ ಶ್ರೀಕಾಂತನನು ಮರೆವಿ | ವಿವೇಕವೇ ನಿನಗಿದು ? ಪ ಜೋಕೆಯಿಂದಲಿ ನಿನ್ನ ಸಾಕುವ ಶ್ರೀ ಹರಿಯು | ಬೇಕಾದ ವರವೀವ ಭಕ್ತವತ್ಸಲ ದೊರೆಯಾಅ.ಪ ಲೇಸಾದರು ವಿಷಯದಾಸೆಯ ಬಿಡಲೊಲ್ಲಿ | ಏಸು ಜನ್ಮಂಗಳಾದರು ಈ ಶರೀರವು ನಿನ್ನದೆಂದು ತಿಳಿದು || ಪೋಷಿಸುವಿಯೊ ಬರಿದೆ ದೋಷರಹಿತ ಶ್ರೀನಿ- | ವಾಸನ್ನ ನೆನೆದು ನಿರ್ದೋಷವ ಕಳೆದೆನ್ನ ಪೋಷಿಸು ಎನ್ನದಲೆ 1 ಸತಿ-ಸುತರನು ನೀನು ಸಲಹುವೆನೆನುತಲಿ | ಅತಿ ಚಿಂತೆ ನಿನಗ್ಯಾತಕೊ ಗತಿ ನಿನಗಾಗುವ || ಹಿತಚಂತನೆ ಮಾಡೊ ಸದ್ಗತಿಯಾಗುವ ತನಕ | ರತಿಪತಿ ಪಿತನ ನೆನೆದು ನೀ ಪ್ರತಿಕ್ಷಣ ಹರಿಕಥೆ ಕೇಳದಲೆ2 ಪೊಟ್ಟೆಗೋಸುಗ ಭ್ರಷ್ಟರ ಸ್ತುತಿಸಿ ನೀ | ಕೆಟ್ಟು ಪೋಗುವಿ ಯಾತಕೋ ಜೀವನವೆ || ಪುಟ್ಟಿಸಿದವ ನಿನ್ನ ಪೊಟ್ಟೆಗೆ ಕೊಡನೇನೋ | ಕೆಟ್ಟುಹೋಗದೆ ವಿಜಯವಿಠ್ಠಲನ್ನ ನೆನೆದು ಸುಖಿಯಾಗು3
--------------
ವಿಜಯದಾಸ
ಯಾಕೆ ಬಳಲಿಸುವಿ ಗುರುರಾಯಾ ಇನ್ನು ಸಾಕು ಮಾಡಿ ಸಲಹೋ ಕಡು ಬೇಗ ಜೀಯಾ ಭಕ್ತ ಕೇಳಿದರೆ ಕೊಡವಲ್ಲಿ ಉಪ- ಯುಕ್ತವಲ್ಲದ ಮಾಯವನು ಬಿಡಿಸಲೊಲ್ಲಿ ಶಕ್ತಿ ನಿನಗಿಹುದೋ ಕರದಲ್ಲಿ ವಿ- ರಕ್ತನೇ ಕೋಪವ್ಯಾತಕೋ ದಾಸನಲ್ಲಿ 1 ತ್ರಾಹಿ ತ್ರಾಹಿ ಗುರುರಾಯಾ ಈಗ ದೇಹಿ ಎಂಬಗೆ ನಾಸ್ತಿ ಎನಬ್ಯಾಡೋ ಜೀಯಾ ದೇಹ ನಿನಗೊಪ್ಪಿಸಿದೆನಯ್ಯಾ ಮುದ್ದು ಮೋಹದಾ ಹರಿಕಂದಾ ಪ್ರಹ್ಲಾದರಾಯಾ 2 ಇಷ್ಟಕ್ಕೆ ನಾ ಬಿಡುವುದಿಲ್ಲ ನೀನು ಥಟ್ಟನೆ ಕೊರಳ ಕೊಯ್ದರೆ ಯತ್ನವಿಲ್ಲಾ ಕೊಟ್ಟು ಕಾಯ್ದರೇ ಅಹಿತವಲ್ಲಾ ನಮ್ಮ ಧಿಟ್ಟ ಶ್ರೀ ಹನುಮೇಶವಿಠಲನ ಜಾಲಾ 3
--------------
ಹನುಮೇಶವಿಠಲ