ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಣಪತಿ ಪ್ರಾರ್ಥನೆ ಅಜ್ಞಾನ ಪರಿಹರಿಸು ಅಂಬರಾಧೀಶಸುಜ್ಞಾನ ಭಕ್ತಿ ಶ್ರೀ ಹರಿಯಲ್ಲಿ ನೀಡೋ ಪ ವಿಘ್ನರಾಜನೆ ನಿನ್ನ ನುತಿಸಿ ಬೇಡುವೆನಯ್ಯಭಗ್ನಗೈಸೆನ್ನ ಮನ ಸಂದೇಹವನ್ನೂ |ತಜ್ಞರೊಡನಾಡಲು ನಿರ್ವಿಘ್ನ ನೀಡಯ್ಯಾಲಗ್ನಗೈಸೆನ್ನ ಮನ ದೋಷಘ್ನನಲ್ಲೀ 1 ಜಲಧಿ ಮೀನನೆನಿಸಯ್ಯಾ 2 ಚಾರುದೇಷ್ಣನು ಎನಿಸಿ ದ್ವಾಪರದಲವತರಿಸಿಶೌರಿಯಾಜ್ಞದಿ ತರಿದೆ ಬಹು ರಕ್ಕಸರನೂ |ಸರ್ವೇಶ ಶ್ರೀ ಗುರು ಗೋವಿಂದ ವಿಠ್ಠಲನಚರಣ ಸರಸಿಜಕಾಂಬ ಮಾರ್ಗವನೆ ತೋರೋ 3
--------------
ಗುರುಗೋವಿಂದವಿಠಲರು
ಪುರಂದರದಾಸರ ಸ್ತೋತ್ರ ಪಾದ ಪದ್ಮಕ್ಕೆ ಎರಗುವೆನು ಸಲಹೆಮ್ಮ ಪ ಸುರಮುನಿಯು ನಾರದರೆ ಹರಿಯಾಜ್ಞದಿಂದ ಶ್ರೀಪುರಂದರಾ ಗಡದಲ್ಲಿ ಅವತರಿಸಿದೆತರುಣಿ ಮಕ್ಕಳು ಕೂಡೆ ಪರಮ ಸೌಖ್ಯದಲಿರುತಹರುಷದಲಿ ಮನೆಧನವ ಭೂಸುರರಿಗರ್ಪಣೆ ಮಾಡ್ದೆ 1 ಆದಿಕಾರಣ ನೀವು ದಾಸಮಾರ್ಗಕೆ ಪ್ರ-ಹ್ಲಾದನವತಾರ ಶ್ರೀ ವ್ಯಾಸಮುನಿಯಾಪಾದಕೆ ನಮಿಸಲುಪದೇಶವನು ಕೈಕೊಂಡುಮೋದತೀರ್ಥರ ಚರಣ ನಾದದಿಂದಲಿ ತುತಿಪೆ 2 ಅದ್ವೈತ ಮತವ ಕಾಲಿಲೊದ್ದು ಶ್ರೀ ಗುರುಮಧ್ವ ಸಿದ್ಧಾಂತವನು ಮಾಡಿದಶುದ್ಧ ಭಕ್ತಿ ಜ್ಞಾನ ವೈರಾಗ್ಯ ಪರರಾಗಿಮಧ್ವ ವಲ್ಲಭನ ಪದ ಹೃದ್ಗುಹದಿ ಪೂಜಿಸುವ 3 ಪಂಚಭೇದ ಸತ್ಯವೆಂದು ಪೇಳಿಹರಿಪುರವ ಸಾರ್ದ ಶ್ರೀ ಪುರಂದರರಾಯ 4 ತತ್ತ್ವ ಶೋಧನ ಮಾಡಿ ತತ್ತ್ವೇಶರನು ತಿಳಿದುತತ್ತತ್ಕಾಲಕೆ ಮಾಳ್ಪ ಕರ್ಮಗಳನಾಉತ್ತಮ ಶ್ಲೋಕ ಪುರುಷೋತ್ತಮನಿಗರ್ಪಿಸಿಮುಕ್ತಿ ಮಾರ್ಗವ ಪಿಡಿದೆ ಅತ್ಯಂತ ಮಹಾಮಹಿಮ 5 ಸಿರಿ ಬ್ರಹ್ಮ ವಾಯುಗರುಡ ಭುಜಂಗ ಮಾರಹರ ಇಂದ್ರ ಸುರರೆಲ್ಲ ತರತಮದಿ ದಾಸರೆಂಬುವ ಜ್ಞಾನ ಕರುಣಿಸುವುದು 6 ದಾಸವರ್ಯರೆ ವಿಜಯದಾಸರಾಯರಿಗುಪದೇಶಿಸಿದ ಪುರಂದರದಾಸರಾಯಶೇಷಗಿರಿವಾಸ ವೆಂಕಟ ವಿಠ್ಠಲನ ನಿಜದಾಸರಾ ದಾಸನೆಂದೆನಿಸೆನ್ನ 7
--------------
ವೆಂಕಟೇಶವಿಟ್ಠಲ
ವಾಯುವೆ ತವಚರಣ | ಸುರಶಿರ ಭೂಷಣಉರು | ಗಾಯನ ದರ್ಶನ | ದಾಯವ ನೀವನೆರಾಯ ರಾಜ್ಯವಾಳ್ದ || ಭೋ ಯತಿವರ ||ಅ|| ಕಾಯ ಶೈಥಿಲ್ಯದಿದಾಯ ವರಿಯದಲೆ | ಮೊರೆ ಹೊಕ್ಕೆ ನಿನ್ನ ಅ.ಪ. ರಾಮರಾಜ್ಞೆಲಿ | ಆ ಮಹಾಬ್ಧಿಯ |ಸೀಮೆ ಮೀರಿ ನಿ | ಸ್ಸೀಮ ಮುದ್ರಿಕೆಭೂಮಿ ಜಾತೆಗೆ | ಇತ್ತು ನಿಶಿಚರಸ್ತೋಮ ಸಂಹರ | ಹೇ ಮಹಾದ್ಭುತ 1 ಪಾಂಡು ಕುವರ ಅ | ಜಾಂಡ ಸೃಜಿಪನೆ |ಹಿಂಡು ಕೌರವ | ದಿಂಡುಗಳ ಶೀಳಿಪಾಂಡುರಂಗಗೆ | ಮಂಡಿಸುತ ಬ್ರ |ಹ್ಮಾಂಡ ಭಾರವ | ಗೊಂಡ ಪ್ರಚಂಡನೆ 2 ಶೌರಿ ಯಾಜ್ಞದಿ | ಕ್ರೂರಿ ಮಾಯ್ಮತ |ಭಾರ ಕಳೆದು ವಿ | ಹಾರ ಗೈದೆಯೊಶೌರಿ ಗುರು ಗೋ | ವಿಂದ ವಿಠಲನ |ಚಾರು ಚರಣವ | ತೋರಿ ನೀ ಪೊರೆ 3
--------------
ಗುರುಗೋವಿಂದವಿಠಲರು