ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪುರಾಣವಿಷಯ ಶ್ರೀವೆಂಕಟೇಶ ಕಲ್ಯಾಣ ಇನ್ನೆಂದಿಗೋ ನಿನ್ನದರುಶನ ಶೇಷಾದ್ರಿವಾಸ ಪ ಪನ್ನಂಗಶಯನ ಪ್ರಸನ್ನರ ಪಾಲಿಪ ಘನ್ನಮಹಿಮ ನೀನೆನ್ನನುದ್ಧರಿಸೂಅ.ಪ ವರ ಸುರಮುನಿಗಳ ವೃಂದ ನೆರಹಿದ ಯಾಗಗಳಿಂದ ಪರಮಾದರದಿಂದಿರುವ ಸಮಯದಿ ನಾರದ ಮುನಿ ಬಂದೊದಗಿ ನಿಂದ ಇ- ಸುರಮುನಿವಚನದಿ ಭೃಗುಮುನಿವರ ಪೋಗಿ ಹರುಷದಿ ಶ್ರೀಹರಿ ಉರಗಶಯನನಾಗಿ ಹರುಷದಿ ಮುನಿಪಾದ ಕರದಲಿ ಒತ್ತುತ ಕರುಣದಿ ಸಲಹಿದೆ ದುರಿತವ ಹರಿಸಿ ಹರಿಭಕುತರ ಅಘಹರಿಸಿಕಾಯುವಂಥ ಕರುಣಿಗಳುಂಟೇ ಶ್ರೀಹರಿ ಸರ್ವೋತÀ್ತುಮಾ 1 ಸ್ವಾಮಿ ನೀನಿಜಧಾಮವನೇ ತೊರೆದೂ ಸ್ವಾಮಿಕಾಸಾರ ತೀರದಿ ನಿಂದೂ ಧಾಮವನರಸಿ ವಲ್ಮೀಕವನೆ ನೋಡಿ ಸನ್ಮುದವನ್ನೇ ತೋರುತ ಕಮಲ ಭವಶಿವ ತುರುಕರುರೂಪದಿ ಕಾಮಧೇನು ಪಾಲ್ಗರೆಯುತಾ ಈ ಮಹಿಮೆಯನ್ನೇ ಬೀರುತಾ ಭೂಮಿಗೊಡೆಯ ಚೋಳನೃಪಸೇವಕನು ಧೇನುವನ್ನು ತಾ ಹೊಡೆಯಲು ಕಾಮನಯ್ಯ ನೀನೇಳಲು ಭೀಮವಿಕ್ರಮವ ತೋರಲು ಕ್ಷಮಿಸಿದೆ ನೃಪನ ದಯಾಳು ಅಮಿತ ಸುಗುಣಪೂರ್ಣ ಅಜರಾಮರಣ ನೀ ಮಸ್ತಕಸ್ಪೋಟನ ವ್ಯಾಜವ ತೋರಿ ಪ್ರೇಮದಿ ಗುರುಪೇಳ್ದೌಷಧಕಾಗಿ ನೀ ಮೋಹವ ತೋರಿದೆ ವಿಡಂಬನಮೂರ್ತೇ 2 ಮಾಯಾರಮಣನೆ ಜೀಯಾ ಕಾಯುವೆ ಜೀವನಿಕಾಯಾ ತೋಯಜಾಂಬಕ ಹಯವನೇರಿ ಭರದಿ ತಿರುಗಿತಿರುಗೀ ವನವನೆÀಲ್ಲ ಮೃಗನೆವನದಿ ನಿಂದು ನೋಡಿದೇ ಪ್ರಿಯಸಖಿಯರ ಕೂಡಿ ಪದುಮಾವತಿಯು ತಾ ಹಯದಿ ಕುಳಿತ ನಿನ್ನ ನೋಡಲು ಪ್ರಿಯಳಿವಳೆನಗೆಂದು ಯೋಚಿಸಿ ಕಾಯಜಪಿತ ನಿನ್ನ ಹಯವನೆ ಕಳಕೊಂಡು ಮಾಯದಿಂದ ನೀ ಮಲಗಿದೆ ತೋಯಜಮುಖಿಯಳ ಬೇಡಿದೇ ಆ ಯುವತಿಯನ್ನೇ ಸ್ಮರಿಸುತಾ ಶ್ರೀಯರಸನೆ ನೀನು ಸ್ತ್ರೀರೂಪದಿ ಹೋಗಿ ಶ್ರೀಯಾಗಿಹಳಿನ್ನು ಶ್ರೀಹರಿಗೀಯಲು ಶ್ರೇಯವೆಂದು ಆಕಾಶನನೊಪ್ಪಿಸಿ ತಾಯಿಯಭೀಷ್ಟವನಿತ್ತೆ ಸ್ವರಮಣಾ 3 ಸಕಲಲೋಕೈಕನಾಥಾ ಭಕುತರಭೀಷ್ಟಪ್ರದಾತಾ ಭಕುತನಾದ ಆಕಾಶನೃಪತಿಯು ಬಕುಳೆ ಮಾ- ತ ಕೇಳಿ ಅಭಯವಿತ್ತು ಮನ್ನಿಸಿ ಪದುಮಾವತಿಯ ಪರಿಣಯ ಶುಕರ ಸನ್ಮುಖಹಲ್ಲಿ ಅಕಳಂಕ ಮಹಿಮ- ಗೆ ಕೊಟ್ಟನು ತಾ ಲಗ್ನಪತ್ರಿಕಾ ಸ್ವೀಕರಿಸುವದೀ ಕನ್ನಿಕಾ ಈ ಕಾರ್ಯಕೆ ನೀವೆ ಪ್ರೇ ಸಕಲಸಾಧನವಿಲ್ಲಿನ್ನು ಲೋಕೇಶಗರುಹಬೇಕಿನ್ನು ಲೋಕಪತಿಯೆ ಸುರಕೋಟಿಗಳಿಂದಲಿ ಈ ಕುವಲಯದಿ ನಿನ್ನಯ ಪರಿಣಯವೆಸಗಲು ಭಕುತಜನಪ್ರಿಯ ಶ್ರೀವತ್ಸಾಂಕಿತ 4 ಖಗವರವಾಹನ ದೇವಾ ಅಗಣಿತಮಹಿಮ ಗೋಮಯನೆನಿಸಿ ಸುರರ ಪೊರೆಯುತಾ ಅಗಣಿತ ಸುರಗಣ ಕಿನ್ನರರು ಸಾಧ್ಯರು ತರು ಫಲ ಖಗಮೃಗ ರೂಪವ ಬಗೆಬಗೆ ಇಹೆ ಪೊಗಳಲಳವೇ ಗಿರಿವರವು ಹಗಲು ಇರುಳು ಭಗವಂತನೆ ನಿನ್ನನ್ನು ಪೊಗಳುತಿಹರು ನಿನ್ನ ಭಕುತರು ಮೊಗದಲಿ ನಿನ್ನ ದಾಸರು ಗೋವಿಂದ ಮುಕುಂದ ಎನ್ನುತಾ ಯುಗ ಯುಗದೊಳು ನೀನಗದೊಳು ನೆಲಸಿಹೆ ಜಗದ ದೇವ ರಾಜಿಸುವವನಾಗಿಹೆ ಮಿಗಿಲೆನಿಸಿದ ಶ್ರೀ ವೆಂಕಟೇಶಾ ಸದ್ಗುಣ ಸಚ್ಚಿದಾನಂದ ಮುಕುಂದ ಗೋವಿಂದಾ 5
--------------
ಉರಗಾದ್ರಿವಾಸವಿಠಲದಾಸರು
ಸತ್ಸಂಗವಿನಾ ಏನಸಾಧಿಸುವದೇನರದು ಪ ರಾಜಸೂಯಾಶ್ವಮೇಧಾ | ಮುಖ್ಯಯಾಗಗಳಿಂದಾ | ತ್ಯಾಜ್ಯಾ ಲೋಕಂಗಳ ಪಡೆಯಬಹುದು 1 ಮೆರೆವ ರಾಜಯೋಗದಿ | ಹಲವುಯೋಗಗಳಿಂದಾ | ಪರಿಪರಿ ಸಿದ್ಧಿಯಾ ಪಡಿಯಬಹುದು 2 ಗುರು ಮಹಿಪತಿ ಸುತಪ್ರಭು | ಮಾರ್ಗವರಿಯದೇ ನಿರರ್ಥಕ ಸಾಯಾಸವಾ ಬಡುವುದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾಲಿಸೆನ್ನ ಪಾರ್ವತೀಪತಿ ಪಾಲಿಸೆನ್ನನುಪಾಲಿಸೆನ್ನನು ಚೆಲ್ವ ಕಾಲಕಂದರ ಹರಪಾಲಯಮಾಂ ಶಿವಲೋಲವಿರೂಪಾಕ್ಷಪಶರನಾಮ ಸುರನ ಕುವರಿಯನಾಳಿದವನಹಿರಿಯ ಪಿತನ ಶಿರವ ತರಿದವನ ಸುತನಿಗೆತುರಗವಾದವನ ಜೆಹ್ವೆಯ ತುದಿಗೆ ಸಿಲುಕಿಮರುಳಾಗಿದ್ದವನ ಬಾಯ ತುತ್ತಾಗಿಮರೆಯೊಳಿದ್ದವನ ಕಾಯವಾಧರಿಸಿ ನೀಶಿರದೊಳು ತಾಳಿದೆಯಾ ಎನ್ನೊಡೆಯ1ಬಾಯೊಳಗಿಹ ರಮಣನ ಅನುಜನ ಮಾವನ ದಿನದಮೈಯವನ ಮಗನ ಶಿರದಾಯತವಾಗಿಪ್ಪನ ವೈ-ರಿಯ ನೇರಿದಾಯತಾಕ್ಷಿಯ ಪೆತ್ತನ ವಂಶವ ಮುರಿ-ದಾ ಯಾಗಗಳ ಕಿತ್ತವನ ಆತ್ಮಜನಿಗೆಆಯಾಮಾರ್ಗಣವಿತ್ತವನೆ2ಸರಸಿಜಮಿತ್ರನ ಸೂನುವಿನ ಕಂದನವರಪುರಂಧ್ರಿಯಮಾನವಕಾಯ್ದನಣ್ಣನಕರದೊಳಿದ್ದಾಯುಧವ ಪೆಗಲೊಳಾತುನರರ ರಕ್ಷಿಸಿ ಪೊರೆವ ದೇವನನೇರಿಚರಿಪ ಪಂಪಾಪುರವನಾಳ್ವ ಸದ್ಗುರುಚಿದಾನಂದ ದೇವಭಕ್ತರಕಾವ3
--------------
ಚಿದಾನಂದ ಅವಧೂತರು