ಒಟ್ಟು 6 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗರುವವು ನಿನಗ್ಯಾಕೆಲೋ ಎಲೋ ಜರ ನಾಚಿಕೆ ಬಾರದೇನೆಲೋ ಎಲೋ ಪ ಮರುಳನೆ ನಿನಗೀಪರಿ ಗರುವ್ಯಾತಕೋ ಅರಿತು ನೋಡ್ಹಿರಿಯರನೆಲೋ ಎಲೋ ಅ.ಪ ಘನತೆಲೊಸಿಷ್ಠನೇನೆಲೋ ಎಲೋ ಜನಕ ಭಾಗ್ಯದೊಳೆಲೋ ಎಲೋ ಮನುಗಳಲ್ವ್ಯಾಸನೇನೆಲೋ ಎಲೋ ನೀ ಮುನಿಗಳೋಳ್ಯುಕನೇನೆಲೋ ಎಲೋ ಮನೆತನದಲಿ ಘನದಶರಥನೆ ದಿನಮಣಿಯೆ ನೀ ಪ್ರಭೆಯೋಳೆಲೋ ಎಲೋ 1 ಧುರದಿ ಕಾರ್ತರ್ವ್ಯನೇನೆಲೋ ಎಲೋ ನೀ ನರಿವಿನೋಳ್ಪ್ರಹ್ಲಾದನೇನೆಲೋ ಎಲೋ ವಿರಸದಿ ರಾವಣನೇನೆಲೋ ಎಲೋ ನೀ ಸ್ಥಿರತನದ್ವಿಭೀಷಣನೇನೆಲೋ ಎಲೋ ಹರಿ ಒಲುಮೆಲಿವರ ಅಗಸ್ತ್ಯನೇನು ಸುರ ಗುರುವೇ ನೀ ಮತಿಯೋಳೆಲೋ ಎಲೋ 2 ತ್ರಾಣದಿ ವಾಲಿಯೇನಲೋ ಎಲೋ ನೀ ಜಾಣರೋಳ್ಬಲಿಯೇನೆಲೋ ಎಲೋ ಜ್ಞಾನದಿ ವಾಲ್ಮೀಕಿಯೇನೆಲೋ ಎಲೋ ನೀ ಗಾನದಿ ನಾರದನೇನೆಲೋ ಎಲೋ ದಾನದೊಳಗೆ ಹರಿಶ್ಚಂದ್ರನೇನೋ ನಿ ಧಾನದಿ ನಳನೇನೆಲೋ ಎಲೋ 3 ಪದವಿಯೊಳ್ಧ್ರುವನೇನೆಲೋ ಎಲೋ ನೀ ನಿಧಿಯೋಳ್ಕುಬೇರನೆಲೋ ಎಲೋ ಮದನನೆ ಪುರುಷರೋಳೆಲೋ ಎಲೋ ವರ ಮದದಿ ಕಶ್ಯಪನೇನೆಲೋ ಎಲೋ ಸದಮಲ ಕುಲದಲಿ ಗೌತಮ ಮುನಿಯೇ ನೀ ಕದನದಿ ಕುರುಪನೇನಲೋ ಎಲೋ 4 ನುಡಿವಲಿ ನರನೇನೆಲೋ ಎಲೋ ನೀ ಕೊಡುವಲಿ ಕರ್ಣನೇನೆಲೋ ಎಲೋ ಇಡುವಲಿ ಧರ್ಮನೇನಲೋ ಎಲೋ ನೀ ಕೆಡುಕಲಿ ಶಕುನಿಯೇನೆಲೋ ಎಲೋ ಕಡುಗಲಿತನದಲಿ ಕಲಿಭೀಮನೇ ಸಡಗರದಿಂದ್ರನೇನೆಲೋ ಎಲೋ 5 ಯುಕ್ತಿಲಿ ದ್ರೋಣನೇನೆಲೋ ಎಲೋ ನೀ ಶಕ್ತಿಲಿ ನಕುಲನೇನೆಲೋ ಎಲೋ ಭಕ್ತಿಲ್ವಿದುರನೇನೆಲೋ ಎಲೋ ನೀ ವೃತ್ತಿಲಿ ಸಹದೇನವನೇನೆಲೋ ಎಲೋ ಚಿತ್ತಶುದ್ಧಿಯಲಿ ವೀರ ಸುಧನ್ವನೆ ತೃಪ್ತಿಲಿ ಭೀಷ್ಮನೇನೆಲೋ ಎಲೋ 6 ದಿಟ್ಟರೋಳ್ಗರುಡನೇ ನೆಲೋ ಎಲೋ ನೀ ಶಿಷ್ಟರೋಳ್ಹನುಮನೇನೆಲೋ ಎಲೋ ಸೃಷ್ಟಿಯೋಳಾರನ್ಹೋಲ್ವೆಲೋ ಎಲೋ ನೀ ಭ್ರಷ್ಟನಾಗುವಿ ಯಾಕೆಲೋ ಎಲೋ ಬಿಟ್ಟುಗರ್ವಮಂ ಶಿಷ್ಟಶ್ರೀರಾಮನ ಮುಟ್ಟಿಭಜಿಸಿ ಉಳಿಯೆಲೋ ಎಲೋ 7
--------------
ರಾಮದಾಸರು
ಮೂಳಾ ಹರಿದ್ಹಾಕೆಲೋ ಮಾಯದ ಜಾಲ ಹಾಳುಜಗದ ಮಾತಿಗ್ವ್ಯಾಕುಲವ್ಯಾಕೆಲೋ ಪ ಅನ್ಯಗುಣಗಳನು ಅನ್ನಗೇಡಾಗಿ ಬಲು ಭಿನ್ನ ಭೇದದಧೋಪಾತದುರುಳತಿರು ಕುನ್ನಿಮಾನವರ ಭಿನ್ನಭೇದಕಂಡು ನಿನ್ನ ಗುಣವ ಬಿಟ್ಟು ಬನ್ನಬಡಲಿಬೇಡ 1 ಕರ್ಮಿಲೋಭಿಗಳ ಮೋಹದಿಂದ ದು ಷ್ಕರ್ಮದಿ ಬಿದ್ದು ಕುಂಭೀಪಾಕಕ್ಕಿಳಿದರೇನು ಧರ್ಮಕರ್ಮಗಳ ಮರ್ಮ ತಿಳಿದು ಸ ದ್ಧರ್ಮದೊಳಾಡುತ ನಿರ್ಮಲನಾಗಿ ಬಾಳು 2 ಶಿಷ್ಟಪದ್ಧತಿಗಳ ಬಿಟ್ಟುಕೊಟ್ಟು ಮಂದಿ ಕೆಟ್ಟಪದ್ಧತಿ ಸುದ್ದಿಯಾಡುವುದ್ಯಾಕೆಲೋ ಸೃಷ್ಟಿಯೊಳಗೆ ನಮ್ಮ ಶಿಷ್ಟ ಶ್ರೀರಾಮನ ಮುಟ್ಟಿಪೂಜಿಸಿ ಮುಕ್ತಿಪಟ್ಟಕ್ಕೆ ಕೂಡ್ರೆಲೋ 3
--------------
ರಾಮದಾಸರು
ಯಾಕೆಲೋ ಮಾನವಾ ಯಚ್ಚರ ಮರೆದು ಭ್ರಮಿಸುವರೇ | ಲೋಕ ರಕ್ಷಕನಾ ಸ್ಮರಣೆ ಬಿಟ್ಟು ವಿಷಯ ಕೆಳಸುವರೇ ಪ ತುಂಬಿ ಮುಂದೆ ಇದಿರಿಟ್ಟು | ಮುಂದೆ ಇದಿರಿಟ್ಟು | ಕಂಗಳವನು ಮುಚ್ಚಿ ಪೋಗುವಂತೆ ಅದನು ಬಿಟ್ಟು 1 ಸುದತಿ ಮುಗುತಿ ಸುದತಿತಾನು | ಅನ್ಯರ ಬ್ರಾಂತಿಲಿ ಕೇಳುವಂತೆ ನೀನು 2 ಬೊಂಬೆಯಾಟದಲ್ಲಿ ಮಕ್ಕಳು ಆಪ್ತರಾಗುವಂತೆ | ಆಪ್ತರಾಗುವಂತೆ | ನಂಬಬ್ಯಾಡೋ ಇದನು ಸಂಸಾರವೇನು ನಿತ್ಯೆ 3 ಚಿತ್ರ ಬರೆದಿರಲು ಕನಕರಾಶಿ ಸರ್ವವನು | ರಾಶಿ ಸರ್ವವನು | ಆರ್ತುನೋಡಲು ಬಲ್ಲರಿಗದರ ಸುಖ ದುಃಖವೇನು 4 ಗುರು ನರನೆಂದು ಬಗೆಯ ಬ್ಯಾಡಾ ಮರವ್ಹಿಂದಾ | ಬ್ಯಾಡಾ ಮರವ್ಹಿಂದಾ | ಪರವಸ್ತು ಬಂದಿದೆ ನೋಡು ಮನುಜ ವೇಷದಿಂದ 5 ನಮ್ಮ ನಿಮ್ಮ ತೆರದಿಂದಾ ಚರಿಸುತಿಹರು ಖರೆಯಾ | ಚರಿಸುತಿಹರು ಖರೆಯಾ | ರಮ್ಯ ಅಂಗನೆ ರೂಪ ಕೊಂಡಾಡುವ ಪರೋಪರಿಯಾ 6 ಭಾವದಿ ನಂದನಸ್ವಾಮಿ ಮಹಿಪತಿಯ ಬಲಗೊಂಡು | ಮಹಿಪತಿಯ ಬಲಗೊಂಡು | ಭಾವದಿ ತರಿಸೋ ಭಾಗ್ಯ ಆತ್ಮ ಸವಿಸುಖನುಂಡು 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಯಾಕೆಲೋ ರಂಗಾ | ನಿನ್ನರಸಿಯೊಳುಮುನಿದಿರುವೆ | ಲೋಕವೀರೇಳು ರಕ್ಷಿಪ ಮುದ್ದು ರಂಗಾ ಪ ನಾಲ್ಕನೆಯ ಅವತಾರದಲಿ ಉಗ್ರವಾಗಿರೆ | ಆ ಕಮಲಜ ಮುಖ್ಯ ಬೆದರುತಿರಲು | ಲಕುಮಿ ತಾಕಂಡು ತೊಡೆಮೇಲೆ ಕುಳ್ಳಿರಲು | ಈ ಲೋಕದೊಳು ಶಾಂತನೆನಿಸಿದಳೊ ನಿನ್ನರಿಸಿ 1 ಗುಂಜೆಯಮಾಲೆ ಕೊರಳಿಗೆ ಹಾಕಿ ಗೋವಳರ | ಎಂಜಲ ತಿನುತ ಗೋಗಳ ಕಾಯುತಿರಲು | ಕಂಜನಯನೆಯು ಬಂದು ಸಕಲ ಶಿರಿಯಿಂದಲಿ | ರಂಜಿಸಿದಳೊ ಜಗದೊಳಗೆ ನಿನ್ನ ಅರಿಸಿ 2 ಇಂತರಿದು ನಾನಾಪರಿಯಿಂದ ನಿನ್ನ ಮೇಲೇ | ಸಂತತ ಉಪಕಾರ ಮಾಡಿರೆ ನೀನು | ಕಂತುಮಾತೆಯ ತಪ್ಪು ನೋಡುವರೇನೋ | ಆ- ನಂತನೇ ಏಳು ಮಹೀಪತಿನಂದನೊಡೆಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು