ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ವಿಜಯದಶಮಿ) ಜಯಜಯ ದೇವ ಹರೆ ಜಯಜಯದೇವ ವಿ- ಜಯರಥ ಭೂಷ ಭಯಹರ ಭಕ್ತ ಜನಾಶ್ರಯ ಶ್ರೀಶ ಪ. ಕೀಟಕ ಶಕುನಿಯ ಕೂಟಭಾವನದ ಕಾ- ದಾಟದಿ ಸೋತು ಮಹಾಟವಿಯ ದಾಟಿ ಧರ್ಮಲಿ ವಿರಾಟನಲ್ಲಿ ಸೇರಲು ಕಿ- ರೀಟಿಗೆ ಜಯವಿತ್ತ ಖೇಟಗಮನ ಕೃಷ್ಣ 1 ಸಮಯಬಂಧವ ದಾಟಿ ಶಮಿಯ ಪೂಜಿಸುತ ಸಂ- ಭ್ರಮದೊಳಾಸನವೇರ್ದ ಯಮಸುತನ ನಮಿಸಿದ ನೃಪತಿಯ ಭಯ ಪರಿಹರಿಸಿದ ಸುಮನಸ ಗಣವಂದ್ಯ ಸರ್ವಾಂತರಾತ್ಮಕ 2 ಸಾರಥಿ ತಾನೆಂದು ಸೇರಿ ಪಾಂಡವರಿಗೆ ಕೌರವರನ್ನು ಸಂಹಾರ ಗೈಸಿ ಭಾರತೀಶಗೆ ಭೂಮಿ ಸೇರಿಸಿ ಸಲಹಿದ ವಾರುಧಿಶಯನ ವೆಂಕಟಗಿರಿ ನಾಯಕ 3
--------------
ತುಪಾಕಿ ವೆಂಕಟರಮಣಾಚಾರ್ಯ
ಆದಿಯಲಿ ಕೌರವರ ಪಾಂಡವಮೇದಿನೀಶರ ಜನನ, ವಿದ್ಯವನೋದಿದುದು ಲಾಕ್ಷಾನಿವಾಸದಲಗ್ನಿ ಸಂಬಂಧವೇದವಿದರೂಪದಲ್ಲಿ ಧರ್ಮಸುತಾದಿಗಳು ತಾÀವಿದ್ದು ದ್ರೌಪದಿಗಾದರೈವರು ಪತಿಗಳೆಂಬುದು ಭಾರತಾಖ್ಯಾನ 1ದ್ಯೂತದಲಿ ರಾಜ್ಯವನು ಸ್ತ್ರೀಯನುಸೋತು ವನದಲಿ ನಿಂದು ಗುಪ್ತದಿದೂತರಾದರು ಮತ್ಸ್ಯನೃಪತಿಯ ಮೆರೆವ ನಿಳಯದಲಿಮಾತ ಸಲಿಸೆ ಮಹಾತ್ಮ ಕೃಷ್ಣಪ್ರೀತಿಯಲಿ ಪಾಂಡವರ ಕಾರ್ಯಕ್ಕೀತ ಸಂಧಿಗೆ ನಡೆದನೆಂಬುದು ಭಾರತಾಖ್ಯಾನ 2ಮುರಿದು ಸಂಧಿಯನುಭಯರಾಯರನೆರಹಿ ಪಾರ್ಥಾಸ್ತ್ರದಲಿ ಸರ್ವರತರಿದು ಯಮಸುತನಿರಿಸಿ ರಾಜ್ಯದ ಪರಮ ಪೀಠದಲಿಎರೆದನಭಿಷೇಕವನು ಭಕ್ತರಹೊರೆದ ತಿರುಪತಿ ವೆಂಕಟೇಶನುಮೆರೆದ ಮಹಿಮೆಯನೆಂಬುದಿದು ತಾ ಭಾರತಾಖ್ಯಾನ 3ಓಂ ಅನಂತಾಯ ನಮಃ
--------------
ತಿಮ್ಮಪ್ಪದಾಸರು
ಗಜಮುಖ ಗಣನಾಥಾ | ಬೇಡುವೆಸುಜನರ ಪೊರೆ ಎಂದೂ ಪ ಅಜನಯ್ಯನು ಶ್ರೀರಾಮನು ನಿನ್ನನುಪೂಜಿಸಿ ಪ್ರಥಮದಿ ಜಗಕೆ ತೋರಿದನುಅ.ಪ. ದಶಮುಖ ರಾವಣನು ನಿನ್ನಹಸನಾಗಿ ಪೂಜಿಸದೇ |ವಶನಾದ ಮರಣಕೆ ರಣರಂಗದೊಳುಬಿಸಜ ಸಂಭವವರ ಬಹುವಾಗಿದ್ದರೂ 1 ಯಮಸುತ ಮೊದಲಾಗಿ ನಿನ್ನನಮಿಸಲು ಅಧ್ವರದೀ |ಅಮಮ ಪಾಪಾತ್ಮಕರ ಮಿತರಸವರುತಸ್ವಾಮಿ ಎನಿಸಿದನು ಅಪಾರ ರಾಜ್ಯಕೆ 2 ಗುರುಗೋವಿಂದ ವಿಠಲನಾ | ಕರುಣಭರಣವಮಿತ ಪಡೆದಾ |ವರದಾಯಕ ವಿಘ್ನವ ಕಳೆಯುತಅರವಿದೂರ ಪದರಜವನೆ ಕಾಣಿಸೋ 3
--------------
ಗುರುಗೋವಿಂದವಿಠಲರು
ನಿಖಿಳ ಯಾದವರೊಳಗೆಮಾನಾಭಿಮಾನವೆಳ್ಳನಿತಿಲ್ಲ ಕೃಷ್ಣ ಪ ದೇವಕೀದೇವಿಯುದರದಿ ಜನಿಸಿ ಬಾಲ್ಯದಲಿಓವಿ ಮೊಲೆ ಕುಡಿಸಿದಳ ಅಸುವ ಸೆಳೆದುಮಾವ ಕಂಸನ ಕೊಂದು ಮನುಜ ವೇಷದಲಿ ಗಾಂ-ಡೀವಿಯ ಮನೆಯ ಬಂಡಿ ಬೋವನಾದೆ1 ಸುರನದಿಯ ಸುತನು ಪಾಂಡವರಿಗಾಪ್ತನು ನಿನಗೆಪರಮಭಕ್ತನು ಸ್ವಯಿಚ್ಛಾ ಮರಣಿಯುಧುರದೊಳಗೆ ಪೂರ್ವ ವೈರದ ಶಿಖಂಡಿಯ ತೋರಿಶರಮಂಚದೊಳುಪಾಯದಲಿ ಮಲಗಿಸಿದೆ 2 ಸೋದರತ್ತೆಯ ಸೊಸೆಯ ಮಗ ನಿನಗೆ ಭಾವಿಸಲುಸೋದರಳಿಯನು ಮೂರು ಲೋಕವರಿಯೆಸಾಧಿಸಿಯೆ ಅಸಮ ಚಕ್ರವ್ಯೂಹವನು ರಚಿಸಿಸೋದರನ ಷಡುರಥರ ಕೈಲಿ ಕೊಲ್ಲಿಸಿದೆ 3 ಕುರುಪತಿಯ ಮೈದುನನ ಕೊಲ್ಲ ಬಗೆದವನ ಸಂ-ಗರದೊಳೇರಿಸಿ ನುಡಿದ ನುಡಿಯ ಕೇಳಿ ಮೈ-ಗರೆಯೆ, ರವಿ ಮಂಡಲಕೆ ಚಕ್ರದಿ ಮರೆಯ ಮಾಡಿನರನ ಕೈಯಿಂದ ಸೈಂಧವನ ಕೊಲ್ಲಿಸಿದೆ 4 ಶಪಥದಲಿ ರಣದೊಳರಸನ ಹಿಡಿವೆನೆಂಬವಗೆತಪಸಿಗಳ ತಂದು ತತ್ತ್ವವ ಬೋಧಿಸಿಕಪಟವರಿಯದ ನೃಪನ ಕೈಯೊಳನೃತವ ನುಡಿಸಿಉಪಮೆಯಲಿ ಶಸ್ತ್ರ ಪಂಡಿತನ ಕೊಲ್ಲಿಸಿದೆ 5 ಯಮಳರನು ಪಡೆದ ತಾಯಿಗೆ ಸಹೋದರನ ಭೂರಮಣರೊಳಗಗ್ಗಳೆಯನತಿ ಧೈರ್ಯನುಸಮರದಲಿ ರವಿಸುತನ ರಥಕೆ ಸೂತನ ಮಾಡಿಯಮಸುತನ ಕೈಲಿ ಮಾವನ ಕೊಲ್ಲಿಸಿದೆ 6 ಜನವರಿಯದಂತೆ ಜೀವನದೊಳಡಗಿರ್ದವಗೆಮನಕೆ ಖತಿಗೊಳಿಸಿ ಬರ ಸೆಳೆದು ನಗುತಅನುವರದೊಳಾಯತದ ತೊಡೆಯ ಸನ್ನೆಯ ತೋರಿಅನಿಲಜನ ಕೈಲಿ ಕೌರವನ ಕೊಲ್ಲಿಸಿದೆ7 ಉರಿಯೊಳಗೆ ಜನಿಸಿದಂಗನೆಯ ನಿಜಸುತರು ಮಂ-ದಿರದೊಳೈವರು ನಿದ್ರೆಗೈಯುತಿರಲುನರವೃಕೋದರ ಧರ್ಮನಂದನರನಗಲಸಿಯೆಗುರು ಸುತನ ಕೈಲಿ ಬಾಲಕರ ಕೊಲ್ಲಿಸಿದೆ 8 ಈ ವಿಧದೊಳವರ ಸುರಲೋಕದಲಿ ನೆಲೆಗೊಳಿಸಿಭಾವ ಮೈದುನರೈವರನು ರಕ್ಷಿಸಿಭೂವಲಯದೊಳು ಕೀರ್ತಿಯನು ಪಡೆದೆಸೆವ ನಮ್ಮದೇವ ನೆಲೆಯಾದಿಕೇಶವ ವೆಂಕಟೇಶ 9
--------------
ಕನಕದಾಸ
ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೇ ಪ ಪರಮ ಪದದೊಳಗೆ ವಿಷಧರನ ತಲ್ಪದಲಿ ನೀಸಿರಿ ಸಹಿತ ಕ್ಷೀರವಾರಿಧಿಯೊಳಿರಲುಕರಿರಾಜ ಕಷ್ಟದಲಿ ಆದಿಮೂಲಾ ಎಂದುಕರೆಯಲಾಕ್ಷಣ ಬಂದು ಒದಗಿದೆಯೊ ನರಹರಿಯೆ 1 ಕಡುಕೋಪದಿಂ ಖಳನು ಖಡುಗವನು ಪಿಡಿದು ನಿ-ನ್ನೊಡೆಯನೆಲ್ಲಿಹನೆಂದು ಜಡಿದು ನುಡಿಯೆದೃಢ ಭಕುತಿಯಲಿ ಶಿಶುವು ಬಿಡದೆ ನಿನ್ನನು ಭಜಿಸೆಸಡಗರದಿ ಕಂಬದಿಂದೊಡೆದೆ ನರಹರಿಯೆ 2 ಯಮಸುತನ ರಾಣಿಗಕ್ಷಯ ವಸನವನ್ನಿತ್ತೆಸಮಯದಲಿ ಅಜಮಿಳನ ಪೊರೆದೆಸಮಯಾಸಮಯವುಂಟೆ ಭಕ್ತವತ್ಸಲ ನಿನಗೆಕಮಲಾಕ್ಷ ಕಾಗಿನೆಲೆಯಾದಿಕೇಶವನೆ 3
--------------
ಕನಕದಾಸ
ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ ಕೂಗಿಡುವ ಧ್ವನಿಯು ಕೇಳುವುದಿಲ್ಲವೇ ನಿನಗೆ ಪ ಪರಮಪದದೊಳಗೆ ವಿಷಧರನ ತಲ್ಪದೊಳು ಇಂ ದಿರೆಯರಸಿ ಹರುಷವಾರಿಧಿಯೊಳಿರಲೂ ಕರಿ ಗುಪ್ತಕಂಠಧ್ವನಿಯಿಂದಾದಿಮೂಲವೆಂದೊದರೆ ಆಕ್ಷಣ ಕರಿಯ ಕಾಯ್ದೆ ಜಗವರಿಯೆ 1 ಕಡುಮುನಿಸಿನಿಂ ಖಳನು ಖಡ್ಗವನು ಪಿಡಿದು ನಿ ನ್ನೊಡೆಯರಾರೆಂದು ತೋರೆನುತ ಬಡಿಯೆ ದೃಢಭಕುತ ಶಿಶುವು ಕಂಗೆಡದೆ ನಿನ್ನನು ಕರೆಯೆ ಘುಡಿಘುಡಿಸಿಕಂಬದಿಂದೊಡೆದು ಮೂಡಿದೆ ಹರಿಯೆ 2 ಯಮಸುತನರಾಣಿಗಕ್ಷಯ ವಸ್ತ್ರವನಿತ್ತು ಕ್ರಮದಿಂದ ಅಜಮಿಳನ ಪೊರದೆ ಅಂದೂ ಸಮಯಾಸಮಯ ಉಂಟೆ ಭಕುತವತ್ಸಲ ನಿನಗೆ ಕಮಲಾಕ್ಷ ವೈಕುಂಠಚನ್ನಕೇಶವ ಬೇಗ 3
--------------
ಬೇಲೂರು ವೈಕುಂಠದಾಸರು