ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭೂರಿ ನಿಗಮವ ಕದ್ದ ಚೋರದೈತ್ಯನ ಗೆದ್ದ ಸಾರ ವೇದಗಳ ವಿಧಿಗಿತ್ತ ಸಾರ ವೇದಗಳ ವಿಧಿಗಿತ್ತ ಮತ್ಸ್ಯಾವ- ತಾರಗಾರತಿಯ ಬೆಳಗಿರೆ 1 ವಾರಿಧಿ ಮಥನದಿ ನೀರೊಳು ಗಿರಿ ಮುಳುಗೆ ತೋರಿ ಬೆನ್ನಾಂತ ಸುರನುತ ತೋರಿ ಬೆನ್ನಾಂತ ಸುರನುತ ಕೂರ್ಮಾವ- ತಾರಗಾರತಿಯ ಬೆಳಗಿರೆ 2 ಧಾತ್ರಿಯ ಕದ್ದೊಯ್ದ ದೈತ್ಯನÀ ಮಡುಹಿದ ಎತ್ತಿ ದಾಡೆಯಲಿ ನೆಗಹಿದ ಎತ್ತಿ ದಾಡೆಯಲಿ ನೆಗಹಿದ ವರಾಹ- ಮೂರ್ತಿಗಾರತಿಯ ಬೆಳಗಿರೆ 3 ಕಡು ಬಾಲನ ನುಡಿಗೆ ಒಡೆದು ಕಂಬದೊಳುದಿಸಿ ಒಡಲ ಸೀಳಿದ ಹಿರಣ್ಯಕನ ಒಡಲ ಸೀಳಿದ ಹಿರಣ್ಯಕನ ನರಸಿಂಹ ಒಡೆಯಗಾರತಿಯ ಬೆಳಗಿರೆ 4 ಸೀಮಾಧಿಪತಿ ಬಲಿಯ ಭೂಮಿ ಮೂರಡಿ ಬೇಡಿ ಈ ಮೂರು ಜಗವ ಈರಡಿಯ ಈ ಮೂರು ಜಗವ ಈರಡಿ ಮಾಡಿ ಅಳೆದ ವಾಮನಗಾರತಿಯ ಬೆಳಗಿರೆ 5 ಅಂಬರಕೇಶನ್ನ ನಂಬಿದ ಕತ್ರಿಯರ ಸಂಭ್ರಮ ಕುಲವ ಸವರಿದ ಸಂಭ್ರಮ ಕುಲವ ಸವರಿದ ಪರಶುರಾ- ಮೆಂಬಗಾರತಿಯ ಬೆಳಗಿರೆ 6 ತಂದೆ ಕಳುಹಲು ವನಕೆ ಬಂದಲ್ಲಿ ಸೀತೆಯ ತಂದ ರಾವಣನ ತಲೆಹೊಯ್ದ ತಂದ ರಾವಣನ ತಲೆಹೊಯ್ದ ರಘುರಾಮ- ಚಂದ್ರಗಾರತಿಯ ಬೆಳಗಿರೆ 7 ಶಿಷ್ಟ ಯಮಳಾರ್ಜುನರಭೀಷ್ಟವ ಸಲಿಸಿದ ದುಷ್ಟ ಕಂಸನ್ನ ಕೆಡಹಿದ ದುಷ್ಟ ಕಂಸನ್ನ ಕೆಡಹಿದ ನಮ್ಮ ಶ್ರೀ ಕೃಷ್ಣಗಾರತಿಯ ಬೆಳಗಿರೆ 8 ರುದ್ರನ್ನ ತ್ರಿಪುರದೊಳಿದ್ದ ಸತಿಯರ ಬುದ್ಧಿ ಭೇದಮಾಡಿ ಕೆಡಿಸಿದ ಬುದ್ಧಿ ಭೇದಮಾಡಿ ಕೆಡಿಸಿ ಬತ್ತಲೆ ನಿಂದ ಬೌದ್ಧಗಾರತಿಯ ಬೆಳಗಿರೆ 9 ಪಾಪಿಜನ ಭಾರಕ್ಕೆ ಈ ಪೃಥ್ವಿ ಕುಸಿಯಲು ತಾ ಪಿಡಿದು ಖಡ್ಗ ತುರಗವ ತಾ ಪಿಡಿದು ಖಡ್ಗ ತುರಗವೇರಿದ ಕಲ್ಕಿ- ರೂಪಗಾರತಿಯ ಬೆಳಗಿರೆ 10 ಮುತ್ತೈದೆ ನಾರಿಯರು ಮುತ್ತಿನಾರತಿ ಮಾಡಿ ಹತ್ತವತಾರಿ ಹಯವದನ ಹತ್ತವತಾರಿ ಹಯವದನನ ಪಾಡುತ ಚಿತ್ರದಾರತಿಯ ಬೆಳಗಿರೆ 11
--------------
ವಾದಿರಾಜ
ಮಗುವು ಕಾಣಯ್ಯ ಮಾಯದ ಮಗುವು ಕಾಣಯ್ಯ ಸುಗುಣಾ ವಾದಿರಾಜರೆ ಮೂಜಗವಾನುದರದೊಳಿಟ್ಟ ಪ ಏಕಾರ್ಣವಾಗಿ ಸಕಲ ಲೋಕವಾಕಾರವಳಿಯಲೂ ಏಕಮೇವಾದ್ವಿತೀಯವೆಂಬಾಗಮಕೆ ಸಮವಾಗೀ ಶ್ರೀಕರಾಂಬುಜದಿಂ ಪಾದಾಂಗುಲಿಯ ಪಿಡಿದು ಬಾಯೊಳಿಟ್ಟು ಶ್ರೀಕಾಂತ ವಟದೆಲೆಯ ಮೇಲ್ಮಲಗಿ ಬ್ರಹ್ಮನ ಪಡೆದಾ 1 ಮಾಯಾಪೂತನೀಯ ಕೊಂದು ಕಾಯವ ಕೆಡಹಿ ಶಕಟನನು ಸಾಯಬಡಿದು ವತ್ಸನ ಧೇನುಕನ ವೃಷಭನ ನೊಯ್ಯನೊದ್ದು ಯಮಳಾರ್ಜುನರಿಗೆ ಸಾಯುಜ್ಯವನಿತ್ತು ತನ್ನ ತಾಯಿಗೆ ತಾ ಮಣ್ಣುಮೆದ್ದು ಬಾಯಿ ಬಿಚ್ಚಿ ತೋರಿಸಿದಾ 2 ಕಡಹದಾ ಮರವನೇರಿ ಸಂಗಡಿಗರೊಂದಿಗೆ ಕಾಳಂದಿಯ ಮಡುವಲಿ ಧುಮುಕಿ ಕಲಕಿ ಜಲವಾ ಆ ಕಾಳಿಂಗನಾ ಪೆಡೆಯ ತುಳಿದು ಜಡಿಯಲವನಾ ಮಡದಿಯರು ಬೇಡಿಕೊಳ್ಳೆ ಕಡಲಿಗಟ್ಟಿ ಬಂದು ಎನ್ನ ತೊಡೆಯ ಮೇಲೆ ಮಂಡಿಸಿದ 3 ಬಳ್ಳಿಗಟ್ಟದುಡಿಯಲ್ಲಿ ಗುಲ್ಲಿಯ ಚೀಲಾವ ಸಿಕ್ಕಿಸಿ ಕಲ್ಲಿಗಟ್ಟ್ಯೊಗರ ಕಂಬಳಿಯ ಕೋಲು ತುದಿಯೊಳು ನಿಲ್ಲಿಸಿ ಹೆಗಲೊಳು ಕೊಂಬು ಕೊಳಲನು ಪಿಡಿದೂದುತ್ತ ಗೊಲ್ಲರೊಡಗೂಡಿ ಆಡುತೆಲ್ಲ ಗೋವುಗಳ ಕಾಯ್ದಾ 4 ಶ್ರುತಿತತಿಗಗೋಚರನು ಚುತಿದೂರನಾದಿಮೂರ್ತಿ ಚತುರ್ಮುಖಾದಿಶೇಷ ದೇವಾರಾಧ್ಯ ದೇವನು ಪತಿ ವೈಕುಂಠಕೇಶವನು ಯತಿಯೆ ನೀ ನೋಡಲು ಶರಣಾಗತನ ತೊಡೆಯೊಳು 5
--------------
ಬೇಲೂರು ವೈಕುಂಠದಾಸರು
ಇಂದಿರೇಶ ನಿನ್ನದೊಂದೆ ಕ್ರಿಯಾ ದ್ವಂದ್ವವಾಯಿತೋಜನನ ಕ್ರಿಯವೆ ದೇವಕಿ ಮನೋಜಯವಾಯಿತೊಬಾಲಕ್ರೀಡೆ ಯಮಳಾರ್ಜುನರ ಪಾಲಿಸಿತೊ ಕರುಣದಿಒಂದೆ ವಚನವೆ ಇಂದ್ರಾದ್ಯರಿಗಾನಂದಕರವಾಯಿತೊನರವಿಶ್ವರೂಪ ನೋಡೆ ಹರುಷೋದ್ರೇಕವಾಯಿತೊನಿನ್ನ ಗುಣರೂಪಕ್ರಿಯಾ ಬಲದ ಕೊನೆಯಾವನು ಬಲ್ಲನೊ
--------------
ಗೋಪಾಲದಾಸರು
ಎಂತಹ ಸಣ್ಣವನೆ-ನಿನ್ನ ಮಗನಂತಹರೆಲ್ಲಿಲ್ಲವೆ |ಹೊಂತಕಾರಿಬಲವಂತರಿಗಧಿಕನುಪತರಳನಂತಿಪ್ಪನು ತರಳೆಯರೊಡನಾಡುವ |ಕಿರುಬೆರಳುಗುರಲಿ ಗಿರಿಯನೆತ್ತಿದವ 1ಕಾಳಿಯ ಸರ್ಪನ ಕಾಲಲ್ಲಿ ತುಳಿದವ |ಪಲಾಯನ ಮಾಡಿ ಕಾಲಯವನನ ಸುಟ್ಟ 2ಕಿಚ್ಚು ಪಾನವ ಮಾಡಿ ಅಚ್ಚರಿ ತೋರಿದ |ರಚ್ಚೆಮಾಡುವಿರೆಂದು ಮುಚ್ಚಿಕೊಂಬುವಿಯಲ್ಲೆ3ಬಾಯಿ ತೆರೆದನಲ್ಲೆ ನೀನಂಜುವಂದದಿ |ಆಯಮಳಾರ್ಜುನರಾಯಾಸ ಬಿಡಿಸಿದ 4ದಿಟ್ಟತನದಿ ಮೊಲೆಗೊಟ್ಟವಳನು ಕೊಂದ |ಪುಟ್ಟ ಪುರಂದರವಿಠಲರಾಯನು 5
--------------
ಪುರಂದರದಾಸರು