ಒಟ್ಟು 8 ಕಡೆಗಳಲ್ಲಿ , 4 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನಾಯ್ತು ಹರಿಪಾದ ನೆನೆವಲ್ಲಿ ಮನವೆ ದೀನನೆ ನಿನ್ನ ಬಾಯಿಗ್ಹುಣ್ಣ್ಹುಟ್ಟಿತೇನೋ ಪ ನಿಷ್ಠೆಯಿಂ ಕೈತಾಳವಿಟ್ಟು ಉಲ್ಲಾಸದಿ ಕಷ್ಟಹರನಂಘ್ರಿ ಮನಮುಟ್ಟಿ ಪಾಡುವಲ್ಲಿ ಕೆಟ್ಟಾಸೆಯಿಂ ಪರರಲ್ಹೊಟ್ಟ್ಹೊಟ್ಟ್ಹೊಡಕೊಂಡು ಬೇಡ್ದ ಪೆಟ್ಟಿಗೆ ಕರವರೆಡು ಮುರಿದಿರುವವೇನೋ 1 ವನಜನಾಭನ ದಿವ್ಯ ವನರುಹಂಘ್ರಿಯ ಚರಿತ ಘನವಾಗಿ ಪೊಗಳುತ ಕುಣಿದಾಡವಲ್ಲಿ ಮೊಣಕಾಲು ಕೀಲ್ಮುರಿದು ನೆಲಕಿ ಬಿದ್ದಿಹ್ಯವೆ 2 ನೀಲಶಾಮನ ವಿಮಲಲೀಲೆಗಳು ಶೀಲಮನದಾಲಸಾನಂದೊಳು ಲೋಲ್ಯಾಡವಲ್ಲಿ ಹಾಳು ಸಂಸಾರದ ಗೋಳಾಟ ಕೇಳಿ ಕೇಳಿ ಶೂಲೆಯೆದ್ದೆರಡು ಕಿವಿ ಕಿವುಡಾದವೇನು 3 ಸಾಗರನಿಲಯನ ನೀಗದ ಮಹಿಮೆಗಳ ಜಾಗರದಿಂ ಪಾಡಿ ಭವರೋಗ ಗೆಲಿವಲ್ಲಿ ಸೋಗಿನ ಸೂಳೆಸುದ್ದಿ ರಾಗದ್ಹಾಡ್ಹ್ಯಾಡಿ ಭವ ಜಿಹ್ವೆ ಕಳಕೊಂಡಿದ್ಯೇನೋ 4 ದಾಸನುದಾಸರ ವಾಸದಿಗೂಡಿಯನು ಮೇಷನು ವಿಚಾರದಿಂ ಶ್ರೀಶನ ಚರಣ ಧ್ಯಾಸದೊಳಗಿರ್ದು ಯಮಪಾಶವನು ಗೆಲಿದು ದಯ ಭೂಷ ಶ್ರೀರಾಮನ ಮುಕ್ತಿ ಪಡಿವಲ್ಲಿ 5
--------------
ರಾಮದಾಸರು
ಕಾಡುವ ದುರಿತಗಳನು ಬಿಡಿಸೆಂದುಬೇಡಿಕೊಂಬೆನೊ ದೇವ ನಾ ನಿನ್ನ ಪ ಅಡಿದಾಸನೆಂಬೋ ಎನಗೊಂದು ದೃಢ ಬುದ್ಧಿಯು ಇಲ್ಲದೆಮಡದಿ ಮಕ್ಕಳೆಂಬೊ ಕಡಲೊಳು ಮುಳುಗಿದೆಕಡೆ ಹಾಯಿಸೊ ಎನ್ನೊಡೆಯ ನೀನಾದಡೆ 1 ಆಸೆಗಳ ಆಧಿಕ್ಯದಿಂದೀ ಪರಿಯ ಯಮಪಾಶಕ್ಕೆ ಒಳಗಾದೆನೋಮೀಸಲೂಳಿಗವ ಮಾಡದೆಯೆ ಪರಿಪರಿಯಕ್ಲೇಶದಿಂದಲಿ ಗಾಸಿಗೊಂಡೆನಯ್ಯ 2 ಪಾಡುವೆನು ನಿನ್ನ ನಾಮ ಸೀತಾರಾಮಆಡುವೆನು ಮನದಣಿವ ತನಕಬೇಡಿಕೊಂಬೆನೊ ನಿನ್ನ ಭಕ್ತರ ಸೇವೆಯನುಬಾಡದಾದಿಕೇಶವ ಭಕ್ತವತ್ಸಲನೆ3
--------------
ಕನಕದಾಸ
ಜಯರಾಮ ರಘುರಾಮ ಪುರುಷೋತ್ತಮ ಪ ತವನಾಮ ಸುಖಧಾಮ ಅಮೃತೋಪಮಾ ರಾಮಾ ಅ.ಪ ಘನಶ್ಯಾಮ ಅಭಿರಾಮ ಸಕಲಾಗಮ ರಾಮ 1 ಘಣಿ ಭೂಷ ಸಕಲೇಶ ವರದಾಯಕಾ 2 ಪರಮೇಶ ಯಮಪಾಶ ಭವನಾಯಕಾ ಕಮಲೇಶ ಶ್ರೀಶ ಮಾಂಗಿರಿ ನಾಯಕಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜಾತಿಭ್ರಷ್ಟ ಹೊಲೆಮಾದಿಗರಿವರಲ್ಲವೇನೋ ನೀತಿಬಾಹಿರರಾಗಿ ಆಚರಿಸುವವರು ಪ ಪನ್ನಂಗಶಯನ ಉನ್ನತ ಕತೆ ಕೀರ್ತ ನ್ಯನ್ನು ಕೇಳೆನೆ ಮುಖವನ್ನು ಹಿಂತಿರುವಿ ಭಿನ್ನ ಬೇಸರಿಲ್ಲದೆ ಅನ್ಯಜನ ಸುದ್ದಿಯೊಳು ಕುನ್ನಿಯಂದದಿ ದಿನಗಳನ್ನು ಕಳೆವವರು 1 ಆಲಯದ ಸತಿಯಳ ತಾಳದೆ ತುಸುತಪ್ಪು ತಾಳಿಯನ್ಹರಕೊಂಡು ದಾಳೀಯ ಹೊಡೆದು ಮೇಲುಜಾತಿಲಿ ಹುಟ್ಟಿ ಕೀಳು ಸೂಳೇರಿಗೊಲಿದು ಹೇಳಿದತೆರ ಕುಣಿದು ಬೀಳುಗಳೆವವರು 2 ಸದ್ಧರ್ಮಕಾರ್ಯಕ್ಕೆ ಇದ್ದುದ ಸಲ್ಲಿಸೆನಲು ಕದ್ದು ತಂದುಕೊಡುವೆವೆಂದಬದ್ಧ ನುಡಿಯುವವರು ಬದ್ಧ್ದ........ಬಂದು ಒದ್ದು ಕೂಡ್ರಿಸಲಾಗ ಸದ್ದಿಲ್ಲದೆ ತಂದು ಬೇಡಿದ್ದು ಕೊಡುವವರು 3 ಜ್ಞಾನಿಗಳು ಬಂದರೆ ಗೋಣೆತ್ತಿನೋಡದೆ ಹೀನಜನರಿಗೆ ಬಹುಮಾನ ಕೊಡುವವರು ಧ್ಯಾನ ದಾಸರ ತರದಿ ಜ್ಞಾನದ ಮಾತ್ಹೇಳಿ ಗೇಣ್ಹೊಟ್ಟಿಗೆ ಪರರ ಗೋಣು ಮುರಿವವರು 4 ತಾಸಿನ ಮೋಜೆಂಬ ನಾಶನ ಜಗಮಾಯ ಮೋಸನರಿಯದೆ ಯಮಪಾಶದೊಳು ಬಿದ್ದು ದಾಸಜನಪ್ರಿಯ ಜಗದೀಶ ಶ್ರೀರಾಮನ ಧ್ಯಾಸಮುರಿದು ದು:ಸ್ಸಹವಾಸದಿರುವವರು 5
--------------
ರಾಮದಾಸರು
ನರನಾಗಿ ಜನಿಸಿ ಫಲವೇನು ಜಗದಿ ಹರಿಪಾದ ಸ್ಮರಣೆಯ ಅರಿಯದ ಮನುಜ ಪ ಕಮಲಪೀಠಪಿತನ ವಿಮಲಶ್ರೀಪಾದಗಳ ಅಮಿತ ಮಹಿಮೆ ಪೊಗಳಿ ಯಮಪಾಶ ಗೆಲಿಯುವ 1 ಭುವನವೀರೇಳಕ್ಕೆ ಜೀವಾಳುಯೆನಿಸಿದ ಭವದೂರನರ್ಚಿಸಿ ಭವಮಾಲೆ ಗೆಲಿಯದ 2 ಪಕ್ಷಿಗಮನ ಪರಮಮೋಕ್ಷದಾಯಕ ಭಕ್ತ ಪಕ್ಷ ಶ್ರೀರಾಮನೊಲಿಸಿ ಮೋಕ್ಷವ ಪಡೆಯದ 3
--------------
ರಾಮದಾಸರು
ಶ್ರೀ ಸತ್ಯಬೋಧರು ಭೀಕರ ರೂಪವ ತೋರುವ ಯತಿವರನ್ಯಾರೆ ಪೇಳಮ್ಮಯ್ಯ ಪ. ನಾಕಲೋಕಪತಿ ಪಿತನ ಬಲದಿ ಯಮಪಾಶ ಗೆದ್ದ ಸತ್ಯಬೋಧಕಾಣಮ್ಮ ಅ.ಪ. ಹರಿ ಆಚಾರ್ಯರ ಉದರದಿ ಜನಿಸಿದನ್ಯಾರೇ ಪೇಳಮ್ಮಯ್ಯಮಾರನ ಪೋಲುವ ರೂಪದಿಂದ್ಹೊಳಿಯುವ-ನ್ಯಾರೇ ಪೇಳಮ್ಮಯ್ಯಗುರುಮುಖದಿಮಂದಧ್ಯಯನ ಮಾಡುತಮನಮೋಹಗೊಳಿಪ ಬಾಲಕನಾರಮ್ಮ1 ಸುಂದರರೂಪನ ಸತಿಯನಾಮ ಕಳವರಿಸಿ-ನ್ಯಾರೆ ಪೇಳಮ್ಮಯ್ಯಮುದದಿಂದಲಿ ಸತ್ಪುತ್ರರ ಪಡೆದಿಹನ್ಯಾರೆ ಪೇಳಮ್ಮಯ್ಯಮಿಂದಸಂಸಾರದಿ ಇಂದಿರೇಶನ ಭಜಿಸುವಶ್ರೀರಾಮಾರ್ಯ ಕಾಣಮ್ಮ2 ಸತ್ಯಪ್ರೇಮರ ಪ್ರೀತಿಗೆ ಪಾತ್ರನುದಾರೆ ಪೇಳಮ್ಮಯ್ಯತಂತ್ರಿಣಿ ತಲದಲಿ ಆಶ್ರಯಗೊಂಡವನ್ಯಾರೆ ಪೇಳಮ್ಮಯ್ಯಮತ್ತೆ ಜಗದೊಳಿಹ ಮಿಥ್ಯವಾದಿಗಳೆಂಬಾಮತ್ತಗಜಗಳಂಕುಶನಿವನಮ್ಮಾ 3 ಶ್ರವಣಾಖ್ಯಪುರದಿ ಮಾಡಿಹನ್ಯಾರೆ ಪೇಳಮ್ಮಯ್ಯಶೇಷರೂಪದ ದುಷ್ಟದೈತ್ಯನ ಸುಟ್ಟವನ್ಯಾರೆ ಪೇಳಮ್ಮಯ್ಯಶೇಷಗತಿಯ ಮನ ಭೂಸುರ ವೃಂದಕೆನಿಶಿಯಲಿ ರವಿಯನು ತೋರಿದನಮ್ಮ 4 ತಪದ ಪ್ರಭಾವದಿ ಗಂಗೆಯನೊಲಿಸಿಹನ್ಯಾರೆ ಪೇಳಮ್ಮಯ್ಯಗೋಪಿಯ ಮಗನನು ತೀರ್ಥದ ದಡದಲಿ ನಿಲಿಸಿಹನ್ಯಾರೆ ಪೇಳಮ್ಮಯ್ಯಗೋಪರೊಡೆಯ ತಂದೆವರದವಿಠಲನನ್ನುಸತತ ಭಜಿಸುವ ಯತಿವರನೆ 5
--------------
ಸಿರಿಗುರುತಂದೆವರದವಿಠಲರು
ಹದ್ದೇಹಿ ಭಟರಿಂದ ಯಮನಾಜ್ಞೆಯಂತೆ ಪ ಶರಣಜನನಿಂದಕಗೆ ಪರಮಕುಂಭೀಪಾಕ ಪರಮಭೀಕರಜ್ವಾಲೆ ಕರುಣಶೂನ್ಯರಿಗೆ ಪರನಾರಿಗಳುಕುವಗೆ ಮೂತ್ರ ರಕ್ತಾಮೇಧ್ಯ ಉರುಬಾಧೆ ಕರ್ಮದುರ್ಗಾ ಪರಮ ನೀಚರಿಗೆ 1 ಮಾತಾಪಿತದೂಷಕಗೆ ಪ್ರೇತಕ್ರಿಮಿಕುಂತ ಭಯ ಪಾತಕಗೆ ರಾಕ್ಷಸರ ಭೂತಕ್ರಮಿದೀರ್ಘ ಘಾತಕಗೆ ಉಗ್ರತರ ವ್ಯಾಘ್ರಮುಖ ಭಟ ಶಿಕ್ಷೆ ರೋತು ಮಲತ ಮಜ್ಜ ನೀತಿಬಾಹಿರಗೆ 2 ಕಂಚಿನ್ವಾಯಸ ನರಕ ಕೇಳಾ ಕಪಟರಿಗೆ ಪಂಚಮಹಾಪಾತಕರಿಗುಳಿವಿನ ಉರುನರಕ ಕೂಪ 3 ಕಾದ ಉಕ್ಕಿನ ಪ್ರತಿಮೆ ಕಾಮಾಂಧ ಮೂಢರಿಗೆ ಕಾದು ಉರಿವರಗಿನೂಟ ಕಡುಲೋಭಿಗಳಿಗೆ ಕಾದ ಸೀಸದ ಮಡುವು ಮನೆಮುರುಕ ತುಂಟರಿಗೆ ಕಾದೆಣ್ಣೆಕೊಪ್ಪರಿಗೆ ಕುಟಿಲ ಕುಹಕರಿಗೆ 4 ಪರದ್ರವ್ಯಪಹಾರಿಗೆ ಭೇದಿ ಭೈರವಕೂಪ ನೆರೆನಂಬಿ ಕೊಲ್ಲವಗೆ ಮಸೆದಲಗುಕೊಡಲಿ ಪರರೊಗತನರಿದಗೆ ನರಕ ಚಂದ್ರಾರ್ಕಪರಿ ಗುರು ಹಿರಿಯರ್ಹಳಿದರಿಗೆ ಉರಿಸರಳ ಮಂಚ 5 ಕಾಲಯಮಪಾಶವು ತುಳಸಿದಳ ತುಳಿದವರಿಗೆ ಕಾಲಭೈರವ ಮೃತ್ಯು ಮಾಯಮೋಹಿಗಳಿಗೆ ಕಾಲಕರ ಶೂಲ ಕೊಂಡಿ ಚಾಂಡಾಲಗೆ ಸೂಳೆಯರ ಸೇವಕಗೆ ಕಾಲಯಮದಂಡ 6 ಸಂತ ಸಜ್ಜದಾನಸಂಗರಿಯದಧಮರಿಗೆ ಇಂತು ಎಂಬತ್ತು ಕೋಟಿ ನರಕಯಾತನವು ಅಂತಕಾರಿ ನಿನ್ನಾಜ್ಞೆಯಂತೆ ನಡೆಯುತಿವೆ ಎನ್ನ ಅಂತರದಿ ನಿಂತಿದನು ಗೆಲಿಸು ಶ್ರೀರಾಮ7
--------------
ರಾಮದಾಸರು
ಹರಿಯ ನೆನೆವಲ್ಲಿ ಮನವೆ ನೀ ಪ ಅರಿವು ತಿಳಿವಲ್ಲಿ ಹರಿದುಹೋಗುವ ದುರುಳ ಸಂಸಾರಕೆ ಮರುಳನಾಗಿ ನೀ ನರಕಕ್ಹೋಗುವಿಯಲ್ಲೋ ಅ.ಪ ಖೊಟ್ಟಿಗುಣಳಿವಲ್ಲಿ ಮನಸಿನ ಭ್ರಷ್ಟತ್ವ ಕಳಿವಲ್ಲಿ ಶಿಷ್ಟರಲ್ಲಿ ಮನವಿಟ್ಟು ಉಳಿಯದೆ ನೀ ಕಷ್ಟದೊಳಗೆ ಬಿದ್ದು ಕೆಟ್ಟು ಹೋಗುವಿಯಲ್ಲೋ 1 ಮರವೆ ಮಾಯವನ್ನು ಮರುಳೆ ನೀ ತರಿಯವಲ್ಲಿ ಇನ್ನು ಪರಿ ವಿಚಾರಿಸದೆ ದುರಿತದೊಳಗೆ ಬಿದ್ದು ಮರುಗುವಿಯಲ್ಲೋ 2 ಅಸೆ ನೀಗುವಲ್ಲಿ ಸಂಸಾರ ದ್ವಾಸನೆ ಕಡಿವಲ್ಲಿ ದಾಸರ ನಡೆನುಡಿ ಸೋಸಿಲಿಂ ತಿಳಿಯದೆ ನಾಶನಾಗುವಿ ಯಮಪಾಶದೊಳಗೆ ಬಿದ್ದು 3 ಸತಿಸುತರ ಮಾಯಮೋಹದಿ ಗತಿಸಿ ಪೋಗ್ವುದು ವಯ ಕೃತ್ರಿಮನೆ ಅತಿ ಮಂದಮತಿಯೊಳು ಬಿದ್ದು ಘನ ವ್ಯಥೆಯ ಬಡುವಿ ಮಹಗತಿಮೋಕ್ಷ ಪಡೆಯದೆ 4 ಮಂದಿ ಮಕ್ಕಳ್ಯಾರು ನಿನಗೀ ಬಂಧು ಬಳಗ ಯಾರು ಕುಂದುವ ಜಗಮಾಯದಂದ ತಿಳಿದು ಮಮ ತಂದೆ ಶ್ರೀರಾಮನ ಹೊಂದಿಕೊಳ್ಳವಲ್ಲಿ 5
--------------
ರಾಮದಾಸರು