ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇ ಪರಮಸುಖವೆಂದಿರಬೇಡಿ ಮುಂದಿನ ಗತಿ ನೋಡಿ ಪ ಒದಗಿ ಯಮನವರು ಎಳೆಯುವಾಗ ನಿಮ ಗಿದರಿಂದೇನು ಪ್ರಯೋಜನ | ಜನರೇ ಅ.ಪ ಜಿಹ್ವೋಪಸ್ಥಪರಾಯಣರಾಗುತ ಬಹ್ವಾಶನರೆನಿಸಿ ಗತಿಶೂನ್ಯರಾಗಿ 1 ದೈವಕಾಪಾಡುವುದೆನ್ನುತ 2 ಆಟಪಾಟದಲಿ ಕಾಲವ ಕಳೆಯುತ ಪೋಟಿಗಾರರಾಗಿ ಅತಿಗರ್ವದಿನೀವು 3 ಎಷ್ಟು ಜನ್ಮಗಳು ಕಳೆದುಹೋಯಿತು ಈ ಅಜ್ಞಾನದಲೀ ಶಿಷ್ಟರು ಬÉೂೀಧಿಸೆ ಉಪಹಾಸಿಸುತಲಿ ನಷ್ಟಜ್ಞಾನವುಳ್ಳತರಾಗುತ4 ಸೊಬಗಿಗೆ ಹಿಗ್ಗುತ 5
--------------
ಗುರುರಾಮವಿಠಲ
ನರದೇಹ ನಿತ್ಯವಲ್ಲ ನಾಳೆ ಮೃತ್ಯು ಬಿಡುವದಲ್ಲ ಪ ಮರುಳುಮನವೆ ಕೇಳು ಸೊಲ್ಲ ಹರಿಯ ಮರೆವುದುಚಿತವಲ್ಲ ಅ.ಪ ಹಿಂದಿನವರು ಪಟ್ಟಪಾಡು ಇಂದು ನೀನು ತಿಳಿದು ನೋಡು ಸಂದೇಹಗಳೀಡಾಡು ಒಂದೇ ಮನದಿ ಹರಿಯ ಕೊಂಡಾಡು 1 ಹರಿ ನಮಗನಾದಿ ಮಿತ್ರ ವರಶೋಭನ ಚಾರಿತ್ರ ಪೊರೆವದೇನು ನಮ್ಮ ಚಿತ್ರ ಕರುಣಿಸುವನು ಕಮಲನೇತ್ರ 2 ಹೊನ್ನು ಹೆಣ್ಣು ಮಣ್ಣು ಮೂರು ನಿನ್ನದೆಂದು ಹಿಗ್ಗದಿರು ಬೆನ್ನು ಹೊಡೆವರು ಯಮನವರು 3 ಏನು ಸುಖವು ಕಾಣಲೇಶ ಜೋಕೆ ಬಿಡುಬಿಡು ದುರಾಶಾ ಬೇಕು ಸುಜನರ ಸಹವಾಸ 4 ಗುರುರಾಮವಿಠಲ ಮುಕುಂದ 5
--------------
ಗುರುರಾಮವಿಠಲ
ಲೋಕನೀತಿ ಇಳೆಯೊಳಗೆ ದೇಹತಾಳಿ ಬಂದೆಲ್ಲಾ ತಮ್ಮಾ ಗಳಸಿ ಮನೆ ಹೆಂಡಿರು ಮಕ್ಕಳಿಟ್ಟಿಲ್ಲಾ ಬಲಿಸಿ ಹಣ ಹೊನ್ನು ಹೂಳಿಟ್ಟಿಲ್ಲಾ ತಮ್ಮಾ ಒಲಿದು ಉಂಡಿ ವಿಷಯ ಸುಖವಾ ಪೇಳಲ್ಲಾ 1 ತೆರಪೀರಾದೆ ಜನಿಸಿದಾವು ಸುತ್ತಲು ಪರಿಪರಿಯ ಸುಖದುಃಖ ಪಗಲಿರುಳು ತಮ್ಮಾ ಇರದೆಯೊದಗಿ ದಣಿಸಿದಾವು ನಿನ್ನ ಮರುಳೆ 2 ಯಮನವರು ಬರುವದು ಮರೆತೇಯ ತಮ್ಮಾ ರಮಣೀ ಮೋಹಾ ಕೇಳಿರು ನೀನರಿಯಾ ಅಮಿತ ಧನ ಬಳಗ ಇನ್ನೆಲ್ಲಯ್ಯಾ ತಮ್ಮಾ ನಮೋ ನರಸಿಂಹವಿಠಲ ಎನ್ನಯ್ಯ 3
--------------
ನರಸಿಂಹವಿಠಲರು
ಗೋವಿಂದ ನಮೋ ಗೋವಿಂದ ನಮೋ ಗೋವಿಂದ - ನಾರಾಯಣ |ಗೋವರ್ಧನ ಗಿರಿಯೆತ್ತಿದ ಗೋವಿಂದ - ನಮ್ಮ ರಕ್ಷಿಸೊ ಪ.ಅರ್ಥವಾರಿಗೆ ಪುತ್ರರಾರಿಗೆ ಮಿತ್ರಬಾಂಧವರಾರಿಗೆ |ಕರ್ತು ಯಮನವರೆಳೆದು ಒಯ್ಯಲು ಅರ್ಥ- ಪುತ್ರರು ಕಾಯ್ವರೆ 1ಮಂಚ ಬಾರದು ಮಡದಿ ಬಾರಳು ಕಂಚುಗನ್ನಡಿ ಬಾರದು |ಸಂಚಿತಾರ್ಥವ ದ್ರವ್ಯಬಾರದು ಮುಂಚೆ ಮಾಡಿರಿ ಧರ್ಮವ 2ಒಡವೆಯಾಸೆಗೆ ಒಡಲ ಕಿಚ್ಚಿಗೆ ಮಡದಿ ಬೆನ್ನಲ್ಲಿ ಬಾಹಳು |ಬಿಡದೆ ಯಮನವರೆಳದು ಒಯ್ಯಲು ಎಡವಿಬಿದ್ದಿತು ನಾಲಗೆ 3ಪ್ರಾಣವಲ್ಲಭೆ ತನ್ನ ಪುರುಷನ ಕಾಣದೆಯೆ ನಿಲಲಾರಳು |ಪ್ರಾಣ ಹೋಗಲು ಮುಟ್ಟಲಂಜುವಳುಜಾಣೆ ಕರೆದರೆ ಬಾರಳು 4ತಂದು ಬಂದರೆ ತನ್ನ ಪುರುಷಗೆ ಬನ್ನಿ ಬಳಲಿದಿರೆಂಬಳು |ಒಂದು ದಿನದಲಿ ತಾರದಿದ್ದರೆ ಹಂದಿನಾಯಂತೆ ಕೆಲೆವಳು 5ಉಂಟುಕಾಲಕೆ ನಂಟರಿಷ್ಟರು ಬಂಟರಾಗಿಯೆ ಕಾಯ್ವರು |ಕಂಟಕರು ಯಮನವರು ಎಳೆವಾಗ ನಂಟರಿಷ್ಟರು ಬಾರರು 6ದಿಟ್ಟತನದಲಿ ಪಟ್ಟವಾಳಿದ ಮೆಟ್ಟಿ ದಿತಿಜರಸೀಳಿದ |ಮುಟ್ಟಿ ಭಜಿಸಿರೊ ಶ್ರೀ ಪುರಂದರವಿಠಲೇಶನ ಚರಣವ 7
--------------
ಪುರಂದರದಾಸರು
ಬಲ್ಲಿದ ನೀನೆಂದು ಬಡವರ ಬಾಯನು ಬಡಿಯದಿರೆಚ್ಚರಿಕೆ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಎಳ್ಳಷ್ಟು ತಪ್ಪಿದರೆ ಯಮನವರೆಳೆದೊಯ್ವರು ಎಚ್ಚರಿಕೆಚ್ಚರಿಕೆ ಪ.ಮಾಡು ದಾನ - ಧರ್ಮಪರ ಉಪಕಾರವ ಮರೆಯದಿರೆಚ್ಚರಿಕೆಕೇಡ ನೆಣಿಸಬೇಡ ನಂಬಿದ ಠಾವಿಗೆ ಕೆಡುವೆ ಮತ್ತೆಚ್ಚರಿಕೆಮೂಢರ ಒಡನಾಡಿ ಮುಂದರಿಯದೆ ನೀನು ಮುನಿಯದಿರೆಚ್ಚರಿಕೆನೋಡಿ ನಡೆವ ಸುಗುಣರ ನೋಡಿ ನಡೆಯೊನೀ ನಟನೆ ಬೇಡಚ್ಚರಿಕೆ 1ಹೊನ್ನ - ಹೆಣ್ಣು - ಮಣ್ಣು ತನ್ನನೆಅಣಕಿಸಿ ಹೋಹುವು ಎಚ್ಚರಿಕೆಮುನ್ನ ಮಾಡಿದ ಫಲದಿಂದಲಿ ಬಂದೆಯೊ ಮುಂದೆ ಇನ್ನಚ್ಚರಿಕೆಚೆನ್ನಾಗಿ ತಾ ಬಾಳಿ ಬದುಕುವೆನೆಂತೆಂಬ ಚೇಷ್ಟೆ ಬೇಡೆಚ್ಚರಿಕೆಬೆನ್ನನು ಬಡಿಯದೆ ಬಿಡುವರೆ ಯಮನವರು ಮರೆಯದಿರೆಚ್ಚರಿಕೆ 2ಬಾಳಿ ಬದುಕಿ ಸಿರಿವಾಹಗೆ ಟವಳಿಯಬಣಗು ಬೇಡದೆಚ್ಚರಿಕೆಹಾಳು ಬದುಕಿಗಾಗಿ ಹಲವರ ಕೂಡಣ ಹಗಣ ಬೇಡಚ್ಚರಿಕೆಕಾಲನವರು ಬಂದುಆವಾಗ ಕರೆವರೊ ಕಾಣದು ಎಚ್ಚರಿಕೆಶ್ರೀಲೋಲ ಪುರಂದರವಿಠಲರಾಯನ ಮರೆಯದಿರೆಚ್ಚರಿಕೆ 3
--------------
ಪುರಂದರದಾಸರು
ಸರಿಸರಿದೋಡುತಿವೆಲವತ್ರುಟಿಗಳುತಿರುಗದಲಿಟ್ಟಡಿಯಹರಿಗುರು ಪ್ರೀತಿಯ ದೊರಕಿಸು ಪ್ರಾಣಿಕಿರಿಯರಲ್ಲ್ಲ್ಯಮನವರು ಪ್ರಾಣಿ ಪ.ಪರದಾರ ಪರಸಿರಿ ಪರನಿಂದೆ ನಿರುತದಿಚಿರರತಿ ಬೆರತ್ಯಲ್ಲೊಪರಉಪಕಾರ ದಾರಿಯರಿಯದೆ ಬರಿ ಒಣಗರುವಿನಲಿರುವ್ಯಲ್ಲೊನರಹರಿ ಚರಣವಾದರಿಸದೆ ಸ್ಮರಿಸದೆನರರನುಸರಿಪ್ಯಲ್ಲೊಶರೀರ ಸಿಂಗರಿಸಿ ಸತ್ಕಾರ್ಯಬಾಹಿರನಾಗಿನಿರಯಕೆ ಗುರಿಯಾದ್ಯಲ್ಲೊ ಪ್ರಾಣಿ 1ಸುಖಗಳ ಕಕುಲತೆಗಖಿಳ ಸಾಧಕನಾದೆಭಕುತಿಗಳಿಕೆ ತೊರೆದುಬಕವೃತ್ತಿಯ ಕಲಿತು ಮುಖವ ಮುಸುಕಿದೆ ವಿರಕ್ತಿಸರಕುದೋರೈಲೋಕದ ಮೋಹಕ ಜ್ಞಾನಾಧಿಕನಾದೆ ಅಕಳಂಕಸುಖತೀರ್ಥವಾಕುದೋರೈಸಕಲಕಲೆ ಕಲಿತು ಸ್ತ್ರೀಕದಂಬ ಸಖನಾದೆಮುಕುತಿ ಹೊಂದಿಕೆ ತೋರೈ ಪ್ರಾಣಿ 2ಅಶನದುವ್ರ್ಯಸನಕೆ ನಿಶಿದಿನ ವಶನಾದೆಶ್ರೀಶ ಭೃತ್ಯೆನಿಸಿಕೊಳ್ಳೊಹುಸಿಉಪದೇಶಧ್ಯಾತ್ಮ ವೇಷದೊಳು ಘಾಸಿಯಾದೆದಶವ ವರಿಸಿಕೊಳ್ಳೈವಿಷಯ ಬಯಸಿ ವೃಥ ಮಸಿವರ್ಣೆನಿಸದೆ ನೀನ್ಯಶಸ ಕೂಡಿಸಿಕೊಳ್ಳೈಹಸಿತೃಷೆಗಸಣೆಗೆ ಬೇಸರದೆ ಪ್ರಸನ್ವೆಂಕಟೇಶನ ಒಲಿಸಿಕೊಳ್ಳೈ ಪ್ರಾಣಿ 3
--------------
ಪ್ರಸನ್ನವೆಂಕಟದಾಸರು