ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದು ಏನೆ ಯಶೋದೆ ಇದು ಏನೆ ಯಶೋದೆ ದಧಿಯ ದಾಮೋದರ ಹೆದರಿಕಿಲ್ಲದೆ ಕುಡಿದೋಡಿ ತಾ ಪೋದ ಪ ಕೊಳಲನೂದುತಲೆ ಆಕಳನೆ ಕಾಯುತಲ್ಹೋಗಿ ಕಳಲ ಗಡಿಗೆಸುತ್ತ ಕುಣಿದಾಡುವುದು 1 ವತ್ಸಕಾಯುತ ವನದೊಳಗೆ ಆಡೆಂದರೆ ಕಿಚ್ಚುನುಂಗಿ ಸರ್ಪವ ತುಳಿಯುವುದು 2 ಚೆಂಡನಾಡುತ ತುರುವ್ಹಿಂಡು ಕಾಯೆಂದರೆ ಗಂಡನುಳ್ಳವರ್ಹಿಂದ್ಹಿಂದೆ ತಿರುಗುವುದು 3 ವಛ(ತ್ಸ?) ನಂದದಲಿ ಬಾಯ್ ಹಚ್ಚ ಗೋವಿನ ಕ್ಷೀರ ಅಷ್ಟು ಕುಡಿದನಾಶ್ಚರ್ಯ ನೋಡಮ್ಮ 4 ಇಂದೆನ್ನ ಮನೆಯಲ್ಲೊಂದಿಷ್ಟು ಕ್ಷೀರಗಳಿಲ್ಲ ಗಂಡ(ಅ?) ತಿ ದುಷ್ಟೆನ್ನ ಕೊಲ್ಲುವನಮ್ಮ 5 ಮೌನಗೌರಿಯ ನೋತು ನೀರೊಳಗಿದ್ದೆವೆ ಮಾನಹೀನರ ಮಾಡಿ ಮರವನೇರುವುದು 6 ಬಟ್ಟೆ ನೀಡೆಂದಾಲ್ಪರಿಯಲು ಜೋಡಿಸಿ ನಿಮ್ಹಸ್ತ ಮುಗಿ(ಯಿ) ರೆಂದಾಡುವುದು7 ಬುದ್ಧಿಹೇಳೆಂದರೆ ಮುದ್ದು ಮಾಡುವರೇನೊ ಕದ್ದು ಬಂದರೆ ಕಾಲು ಕಟ್ಟಿ ಹಾಕಮ್ಮ 8 ದಧಿ ಬೆಣ್ಣೆ ಚಂದ್ರನಂತ್ಹೊಕ್ಕು ತಾ ತಿಂದ ನೋಡಮ್ಮ 9 ಕೇರಿ ಮಕ್ಕಳ ನೋಡೊ ಮಹರಾಯ ಬಲರಾಮ ದೊಡ್ಡಮಗನು ಎಲ್ಲೆ ದೊರಕಿದನಮ್ಮ 10 ಮೀಸಲ್ಹಾಕಿದ ಬೆಣ್ಣೆ ನೀ ಸವಿದೀಯೆಂದು ಲೇಸಾಗಿ ಹೇಳೆ ಭೀಮೇಶಕೃಷ್ಣನಿಗೆ11
--------------
ಹರಪನಹಳ್ಳಿಭೀಮವ್ವ
ಮಾನಾಗ, ಉರಿಯು ಹೆಣ್ಣು ಹೈಕಳ ಕೂಡೆಶ್ರೀನಾಥ ನಿನಗೆ ಸಲ್ಲದು ಮಕ್ಕಳಾಟ ಪ ತರಳ ನೀನೆಮ್ಮ ಸೀರೆಗಳನೆತ್ತಿಕೊಂಡುತರುವನೇರುತ ಕಕ್ಕಳ ಕೆಳೆವೆತರುವಳಿತನ ಸಾಕು ನಿನ್ನ ಪೇರುರದಲಿತರುಣಿ ನಗುತಾಳೆ ಪೊಕ್ಕಾಟ ಸಾಕು 1 ಅರಸಿನ ಮಗನೆಂದು ತಾಳಿದೆವಲ್ಲದೆಸರಸಿಜಾಕ್ಷಿಯ ಮನೆಯ ಮಳಲಲ್ಲಿಸರಸದೊಳಿಹರೆ ನಿನ್ನಂಗದೊಳಿರ್ದಸುರರೋಡಬೇಕು ಸಲ್ಲದು ಮಕ್ಕಳಾಟ2 ಬೊಮ್ಮ ನಿನ್ನುದರದ ಜಗನಿನ್ನ ಅಂಗದೊಳಿದ್ದ ಸುರಮುನಿಗಳುನಿನ್ನನೆ ನಗುವರೊ ನೀನರಿಯದೆ ಎಮ್ಮಚೆನ್ನ ಹೆದ್ದಾಟ ಹೊಕ್ಕಾಟ ಸಾಕು 3 ಕಾಲ ಪೆಂಡೆಯುಹೊಸ ಹೊಸ ಚೆನ್ನಿಗ ಪರಿಹಾಸ ಸಾಕೋ4 ತುತಿಸಿ ತುತಿಸಿ ಕಾಣರು ಬ್ರಹ್ಮರುದ್ರರುಮತಿಗೊಳಗಾಗೆ ಮುನೀಶ್ವರರಶ್ರುತಿಗಳು ನಿನ್ನನು ಪುಡುಕಲರಿಯವು ಬಾಲಸತಿಯರೊಡನೆ ಖೇಳಮೇಳವೆ ಸಾಕು 5 ಸ್ನಾನಮಾಡಲೀಯೆ ಮೌನಗೌರಿಯನೋನಲೀಯದೆ ಮೌನವ ಕೆಡೆಸಿಧ್ಯಾನ ಮಾಡಲೀಯೆ, ನಿನ್ನ ಚೆನ್ನಿಗರುಹಾನಿ ನೀಗುವರು ಎಂಬುದರಿಯೆವೊ 6 ಚೆಲುವರರಸ ಶಿಖರ ಶಿಖಾಮಣಿಯೆಲಲನೆಯರ ಮನ ಸೂರೆಗಾರಫಲಿಸಿತು ವ್ರತ ನಮ್ಮ ಕೃಷ್ಣ ನಿನ್ನೊಲುಮೆಯಬಲೆಗೆ ಸಿಕ್ಕದರಾರೊ ಸೊಬಗು ಸುಗ್ಗುಳಿಯೇ7
--------------
ವ್ಯಾಸರಾಯರು
ವಾಸುದೇವ ನಿನ್ನ ಮರ್ಮಕರ್ಮಂಗಳದೇಶದೇಶದಲ್ಲಿ ಪ್ರಕಟಿಸಲೊ ಪ ಬೇಸರದೆ ಎನ್ನ ಹೃದಯಕಮಲದಲ್ಲಿ ವಾಸವಾಗಿ ಸುಮ್ಮನಿದ್ದೀಯೊ ಅ.ಪ. ತರಳತನದಲಿದ್ದು ದುರುಳನಾಗಿ ಬಂದುಒರಳಿಗೆ ಕಟ್ಟಿಸಿಕೊಂಡುದನುತುರುವ ಕಾಯಲಿ ಹೋಗಿ ಕಲ್ಲಿಯೋಗರವನುಗೊಲ್ಲರ ಕೂಡೆ ನೀ ಉಂಡುದನುನೆರೆಮನೆ ಹೊರಮನೆಗಳ ಪೊಕ್ಕು ಬೆಣ್ಣೆಯಅರಿಯದಂತೆ ಕದ್ದು ಮೆದ್ದುದನುಕೇಳಿಸಿದೆಯಾದರೆ ಒದರುವೆ ಎಲೊ ನರ -ಹರಿ ಎನ್ನ ಬಾಯಿಗೆ ಬಂದುದನು 1 ಕಟ್ಟಿ ಕರೆವ ಏಳುದಿನದ ಮಳೆಗೆ ಪೋಗಿಬೆಟ್ಟವ ಪೊತ್ತದ್ದು ಹೇಳಲೊಅಟ್ಟಿಸಿಕೊಳ್ಳುತ ಯಾಗಶಾಲೆಗೆ ಪೋಗಿಹೊಟ್ಟೆಯ ಹೊರೆದದ್ದು ಹೇಳಲೊದುಷ್ಟ ಹಾವಿನ ಹೆಡೆಯನು ತುಳಿದಾಡಿದದುಷ್ಟತನವನು ಹೇಳಲೊನೆಟ್ಟುನೆ ಅಂಬರಕೆತ್ತಿದನ ಹೊಯ್ದುಹಿಟ್ಟುಕಟ್ಟಿಟ್ಟುದ ಹೇಳಲೊ 2 ಪಿಡಿಯವಲಿಗೆ ಮೆಚ್ಚಿ ಸಂಪದವನು ಕೊಟ್ಟಬೆಡಗತನವನಿಲ್ಲಿ ಹೇಳಲೊಹಿಡಿಯ ಬಂದ ಕಾಲಯವನಿಗಂಜಿ ಕಲ್ಲಪಡೆಯ ಹೊದ್ದುದ ಹೇಳಲೊಮಡಿದ ಮಗನ ಗುರುವಿಗೆ ಕೊಡಬೇಕೆಂಬಸಡಗರತನವಿಲ್ಲಿ ಹೇಳೆಲೊಮಡದಿ ಮಾತಿಗೆ ಪೋಗಿ ನೀ ಪಾರಿಜಾತವತಡೆಯದೆ ತಂದದ್ದು ಹೇಳಲೊ 3 ಮೌನಗೌರಿಯ ನೋಡ ಬಂದ ಹೆಂಗಳನ್ನೆಲ್ಲಮಾನವ ಕೊಂಡದ್ದು ಹೇಳಲೊತಾನಾಗಿ ಮೊಲೆಯನೂಡಿಸ ಬಂದವಳನ್ನುಪ್ರಾಣವ ಕೊಂಡದ್ದು ಹೇಳಲೊಕಾನನದೊಳು ತುರುವಿಂಡುಗಳನು ಕಾಯ್ದಹೀನತನವನಿಲ್ಲಿ ಹೇಳಲೊಮಾನಿನಿಯರ ಮನೆಗಳ ಪೊಕ್ಕು ಬೆಣ್ಣೆಯಹಾನಿಯ ಮಾಡಿದ್ದು ಹೇಳಲೊ 4 ಧರಣಿಮಗನ ಕೊಂದು ತರುಣಿಯರನುದುರುಳತನವನಿಲ್ಲಿ ಹೇಳಲೊಜರೆಯ ಮಗನಿಗಂಜಿ ಪುರವ ಬಿಟ್ಟು ಹೋಗಿಶರಧಿಯ ಪೊಕ್ಕದ್ದು ಹೇಳಲೊಧರೆಯೊಳಧಿಕ ಶ್ರೀರಂಗಪಟ್ಟಣದಲ್ಲಿಸ್ಥಿರವಾಗಿ ನಿಂತದ್ದು ಹೇಳಲೊಶರಣಾಗತರ ಕಾವ ರಂಗವಿಠಲನ್ನಪರಮ ದಯಾಳೆಂದು ಹೇಳಲೊ 5
--------------
ಶ್ರೀಪಾದರಾಜರು