ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಂತ ಅಪರಾಧ ಅನುಗಾಲ ಮಾಡುತಿಹೆ ಪ ಸ್ನಾನ ಸಂದ್ಯಾ ಜಪ ಮೌನವೇ ಮೊದಲಾದ ನಾನಾವಿಧದ ವಿಹಿತ ಧರ್ಮತೊರೆದು ನಾನು ನನ್ನದು ಎಂಬೊ ಹೀನ ಬುದ್ಧಿಗಳಿಂದ ಹೀನ ಜನರೊಡಗೂಡಿ ಙÁ್ಞನಿಗಳ ನಿಂದಿಸುವೆ 1 ಶ್ರೀಕಾಂತ ನಿನ್ನ ಸೇವೆಯನು ಮರೆದು ಬೇಕಾದ ವೈಷಿಕವ ಸ್ವೀಕರಿಸಿ ಲೋಕÀದೊಳು ಸಾಕಿದವರನು ನಾ ನಿರಾಕರಿಸಿ ಬಾಳುವೆನು 2 ಎನಗಿಂತ ಅಧಿಕರಾದವರ ಕೂಡ ದ್ವೇಷವನು ಅನುಗಾಲ ಮಾಡುವೆನೊ ಅನಿಮಿಷೇಶಾ ಎನಗೆ ಸರಿಯಾದವರ ಕಂಡು ಮತ್ಸರಿಸುವೆನು ಎನಗಿಂತ ನೀಚರನು ನಾ ನೋಡಿ ನಗುತಿಪ್ಪೆ 3 ಕಾಸಿನಾಸೆಗೆ ಪೋಗಿ ದಾಸವೇಷವÀ ಧರಿಸಿ ಮೋಸಮಾಡುವೆ ಜನರ ಪಾಶದಿಂದಾ ವಾಸುದೇವನೆ ಸರ್ವದೇಶ ಕಾಲಾದಿಗಳಿ ಗೀಶನೆಂದರಿಯದಲೆ ಮೋಸಹೋದೆನು ಸ್ವಾಮಿ 4 ಸಕಲ ದುರ್ಗುಣಕೆ ಆಗಾರ ನಾನವನಿಯೊಳು ಭಕುತಿ ವೈರಾಗ್ಯ ಪ್ರಸಕುತಿಯಿಲ್ಲಾ ಭಕುತವತ್ಸಲ ಗುರುಜಗನ್ನಾಥವಿಠಲನೆ ಅಕಳಂಕಮಹಿಮನೆ ಮುಕುತಾಮುಕುತರೊಡೆಯಾ 5
--------------
ಗುರುಜಗನ್ನಾಥದಾಸರು
ಜ್ಞಾನಾನಂದ ಸ್ವರೂಪ ಭಾನುಕೋಟಿ ಪ್ರದೀಪ ನಾನಾದೋಷ ನೀರ್ಲೇಪ ಮೀನ ರೂಪ ಪ ಏನು ಅರಿಯದ ದೀನ ಭಕುತನಿಗೆ ಸಾನುರಾಗದಿ ಜ್ಞಾನವನೀಯೋ ಅ.ಪ ನಿಗಮಗಳೆಲ್ಲವು ಬಗೆ ಬಗೆಯಿಂದ ನಿನ್ನ ಅಗಣಿತ ಗುಣಗಳ ಪೊಗಳುತಲಿದ್ದರು ಸಿಗದ ನಿನ್ನ ನಾನು ಪೊಗಳಲಳವೆ ಪೇಳೊ ಸಿರಿಯರಸನೆ ನಿನ್ನ ಚರಣಕಮಲದಲಿ ಪರತರ ಭಕುತಿಯ ದೊರಕಿಸೆಲೊ ಸರಸಿಜ ಜನಕನೆ ಮರೆತಪರಾಧವ ಕರುಣದಿಂದಲಿ ಎನ್ನ ಕರಗಳ ಪಿಡಿಯೋ 1 ಒಂದು ದಿನವು ಸುಖ ಗಂಧವನರಿಯದೆ ಭವ ಸಿಂಧುವದನನೆ ತೊಂದರೆ ಪಡುತಿಹೆ ಸುಂದರ ವದನನೆ ತಂದೆ ಎನಗೆ ನೀನೆ ಬಂಧುವೆನಗೆ ನೀನೆ ಮಂದ ಬುದ್ಧಿಯಲಿ ನಿಂದ್ಯನಾದೆನಗೆ ಕುಂದು ಸಹಸ್ರವು ಸಂಧಿಸಿತು ಇಂದು ಮನಕೆ ಆದ ತಂದುಕೊಳ್ಳದೆಲೆ ಮಂದಹಾಸದಲಿ ಬಂದೆನ್ನ ಪೊರೆಯೋ 2 ಹಿತವೆಂದು ಭವವನು ಅತಿ ಮೋಸಹೋದೆನು ಮತಿಗೆಟ್ಟು ನಿನ್ನನು ಸ್ತುತಿಸಲಿಲ್ಲವೊ ನಾನು ಮಿತಿಮೀರುತಿರಲೆನ್ನ ಸ್ಥಿತಿಯ ನೀನರಿಯುತ ಮತಿ ಬೇರೆ ಮಾಡಿ ಮರೆತೆಯೇನೊ ಶ್ರೀಪತೆ ಕ್ಷಿತಿಯೊಳೆನಗೆ ಗತಿ ಇತರರ ಕಾಣೆನÉೂೀ ಪತಿ ನೀನಿರೆ ವಸುಮತಿಯೊಳಗೆ ಪತಿತಪಾವನನೆ ಪ್ರಸನ್ನನಾಗಿ ದಿವ್ಯ ಸತತ ಸುಖಕೆನಗೆ ಪಥವನು ತೋರೊ 3
--------------
ವಿದ್ಯಾಪ್ರಸನ್ನತೀರ್ಥರು
ಮರೆಯೊಕ್ಕೆ ನಿನ್ನನು ಮರುಗಿ ರಕ್ಷಿಸಬೇಕು ಶಂಕರೇಶಾಗಿರಿಜೆಯಾಣ್ಮನೆದೇವ ಕೆರೆಗೋಡಿಪುರದೀಶ ಶಂಕರೇಶಾ ಪಮರಳಿ ಮರಳಿ ಗರ್ಭಕುರುಳಿ ನಾನೊಂದೆನುಪರಿಪರಿ ಕರ್ಮದ ಫಲಗಳನುಣಲಾಗಿದುರಿತ ತೊಲಗದೀವರೆಗು ನಾನೇಗೈವೆಕರುಣಾರಸ ನಿನಗೇತಕುದಿಸದಿದೆ 1ಸೂತ್ರಧಾರಕ ನೀನು ಸಕಲಜೀವರಿಗೆಲ್ಲಪಾತ್ರ ಕೃಪೆಗೆ ನಾನು ಪ್ರೇಮದಿಂ ನೋಡಿನ್ನುಗೋತ್ರಾರಾತಿ ವಂದಿತ ಪಾದಕಮಲನೆಸ್ತೋತ್ರವ ಮಾಳ್ಪುದ ಮೊದಲೆ ನಾನರಿಯೆನು2ಮರತಿ ಪುಟ್ಟದು ನಾನಾವಿಧ ಭವಸುಖದಲಿವರೆತರಿತೆನೆನಿಸಿದ ಕರ್ಮದ ಬಲುಹಿನಿಂಬೆರೆತು ಬಯಲ ಮೋಹದಲಿ ಮೋಸಹೋದೆನುಕುರಿತು ಕಾಮ್ಯವ ಭಜಿಸಿದೆನೊ ನಿನ್ನನು3ಉರಿಗಣ್ಣ ದೃಷ್ಟಿಯಿಂ ದುರಿತವ ದಹಿಸಿನ್ನುವರಶಶಿನೇತ್ರದಿಂ ನೋಡಿ ತಾಪವ ಪರಿಹರಿದಶ್ವನೇತ್ರದಿ ಜ್ಞಾನವನರುಹಿಸುಶರಣಾಗತನಪರಾಧವನೆಣಿಸದೆ 4 ಪರಾಕು ಶಂಕರೇಶಾ5
--------------
ತಿಮ್ಮಪ್ಪದಾಸರು
ಏನು ಕೌತಕ ಕೃಷ್ಣ ತಾನೆ ಕನಸಿನೊಳು |ಮಾನವರ ತೆರನಂತೆ ಮುರುಳಾಡಿಸಿದನೆನ್ನ ಪಹಿಂದೆ ಮಾಡಿದ ಪದವ ಒಂದು ಹೇಳೆಂದೆನುತ |ಮುಂದೆ ಅದರಂದವನು ಎಲ್ಲ ತಾಪೇಳ್ದ ||ಒಂದು ದೋಸೆಯ ತನಗೆ ತಂದುಕೊಡು ಎಂದೆನಲು |ತಿಂದ ಮೀಸಲಕೊಡೆನು ಎಂದು ಹೇಳಿದೆನು 1ಮೋಸಹೋದೆನು ನಾನು ದೋಸೆಯನು ಹರಿಗೆ-ಆ-ಪೋಶನವನಿಕ್ಕದೇ ಪೋಷಿಸಿದೆನು ||ಮಿಸಲಾದರು ಅಹುದು ದೋಷವಿಲ್ಲೆಂದೆನುತ |ಆಸುರದ ಮಾತುಗಳ ವಾಸಿತೋರಿಸಿದನು 2ಎಳೆಯ ಪ್ರಾಯದೊಳಿರುವ ಚೆಲುವೆಯೊರ್ವಳು ಬಂದು |ಹೊಳೆಯೊಳಗೆ ಈಸಾಡಿ ನಲಿವುದನು ನೋಡಿ ||ನಳಿನಮುಖಿಯನು ಮೇಲೆ ಕರೆಸಲಾ ಮೈಲಿಗೆಯ |ತೊಳಕೊಂಡು ಒಳಯಿಂಕೆ ಬಂದುದನು ಕಂಡೆ 3ಈ ರೀತಿ ಸಿರಿಸಹಿತ ವಾರಿಜಾಕ್ಷನು ಕೃಷ್ಣ |ತೋರಿದನು ಸ್ವಪ್ನ ಕಣ್ಣಾರೆ ನೋಡಿದೆನು ||ಹಾರಿಹೋಯಿತು ಕಷ್ಟ ಸೂರೆಗೊಂಡೆನು ಸಿರಿಯ |ಏರಿ ಬಂದುದು ಶುಭದ ವಾರಿಧಿಯು ಮುಂದೆ.................... 4ಈ ಮಹಾಮೂರ್ತಿಯನು ಜಾವಪರ್ಯಂತರದಿ |ಕಾಮಿಸಿಯೆ ನೋಡಿದೆನು ಸೌಮ್ಯನಸ್ಯದಲಿ ||ಆ ಮಹಾ ಹರಿಯು ಪರಧಾಮವನು ಕೈಕೊಂಡು |ಭೂಮಿಪತಿಯಾಗಿರ್ದ ಪುರಂದರವಿಠಲ........................... 5
--------------
ಪುರಂದರದಾಸರು