ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧ್ಯಾಯ ಮೂರು ಪದ ಸಾವಿರ ಬುಧರÀರನೆಲ್ಲ ಮೀರಿ ಪರಮೇಶ್ವರಗೆ ಹಾರ ಹಾಕುವೆನೆಂದು ಪಾರಿಜಾತದ ಕುಸುಮ ಪಾರ್ವತಿಯು ತಾತರಿಸಿ ಪೂರ್ವದಲಿ ಮಾಡಿದಳ ಪೂರ್ವ ಮಾಲೆಯ ಭಕ್ತಿಪೂರ್ವಕವಾಗಿ ಚಾರುತರವಾಗಿಹ ಅಲಂಕಾರಗಳ ನಿಟ್ಟು ಶೃಂಗಾರ ಭರಿತಳು ಆಗಿ ಪಾರಿಜಾತದ ಹೂವಿನ ಹಾರಕೈಯಲಿ ಪಿಡಿದು ಚಾರು ಸಖಿಯಲ್ಲಿ 1 ಚಂದ್ರವದನೆಯ ಬಹಳ ಛಂದಾದ ಮುಖನೋಡಿ ಚಂದ್ರಮನು ಇದುಕಾಂತಿ ನಂದು ಒಯ್ದಳು ಈಕೆ ಮುಂದಿವಳನೊಯ್ಯಬೇಕೆಂದು ಕುಚಗಳ ಕಂಡು ಇಂದ್ರ ತಾ ಯನ ನಾ ಗೇಂದ್ರನ ಶಿರವೆಂದ ಮುಂದದರ ಸೊಂಡೆ ಇದು ಯೆಂದು ಕರಗಳಿಗೆಂದಾ ಮಂದಗತಿ ಮತ್ತಾದರರಿಂದ ನಡಗಿಯ ಕಂಡು ಸುಂದರಿಯ ಆಹುಬ್ಬು ಕರಿದರ್ಪ ತಾ ಕಂಡು 2 ಎರಳೆ ನೋಟವ ಕಂಡು ಎರಳೆವಾಹನ ನುಡಿದ ಯರವಿಂದವಯವಕ್ಹಿಗ್ಗಿ ಹೊರಳು ವಳು ಯಂತೆಂದು ಕೊರಳವನು ಕಂಡು ಹರಿ ಕರದಲೊಪ್ಪುವಯೆನ್ನ ವರಪಾಂಚಜನ್ಯವಿದು ಸರಿಯೆಂದು ನುಡಿದಾ ಗುರುಳು ಗೂದಲದವಳ ಹೆರಳವನು ನೋಡಿಹರಿ ಇರುಳ ಮಲಗುವಯನ್ನ ಸರಳ ಹಾಸಿಗೆಯೆಂದು ಸುರರು ಎಲ್ಲರು ಪರಿ ಪರಿಯಿಂದ ನುಡಿದರನುಸರಿಸಿಯಿದರಂತೆ 3 ಪದ ಮುಂದೆ ಆ ಪಾರ್ವತಿ ಬಂದು ಕುಳಿತಳಲ್ಲೆ ಬಂದ ಶಿವನು ತಾ ಬಾಲಕನಾಗಿ 1 ಲೀಲೆಯಿಂದಲಿ ತೊಡೆಯ ಮೇಲೆ ಮಲಗಿದನಾಗ ಬಾಲೆ ಹೀಗೆಂದಳು ಎಲ್ಲರಿಗೆ 2 ಮುನ್ನೆತ್ತಿದವರಿಗ್ಹಾಕುವೆ ಮಾಲೆ 3 ಅಂದಮಾತನು ಕೇಳಿ ಇಂದ್ರ ಬಂದನು ಆಗ ಮುಂದೆ ಆ ಬಾಲನೆತ್ತುವೆನೆಂದು4 ಚನ್ನಿಗನಂತಾದ್ರೀಶನ ಹಿಂದಕೆ ಮಾಡಿ ಸಣ್ಣ ಬಾಲನ ತಾ ಮುಂದಕೆ ಕರೆದಾ 5 ಪದ ಸಣ್ಣಬಾಲನೇ ಬಾರೋ ಹಣ್ಣು ಕೊಡುವೆ ನಿನಗಿನ್ನು ಕೈತಾರೋ ಪ ಚಂಡು ಬೊಗರಿ ಗೋಲಿಗುಂಡು ನಾ ಕೊಡುವೆ ಬೆಂಡು ಬತ್ತಾಸವ ಕೊಂಡು ನಾ ಕೊಡುವೆ 1 ಚಿಣಿಕೋಲು ಮತ್ತೆ ಈಕ್ಷಣ ತಂದು ಕೊಡುವೆ ಮನಸಿಗೊಪ್ಪುವ ಚಿಂತಾಮಣಿ ತಂದು ಕೊಡುವೆ 2 ನಡಿಯೋ ನಿನಗೆ ದೊಡ್ಡ ಗುಡಿಯ ತೋರಿಸುವೆ ಒಡೆಯ ನಂತಾದ್ರೀಶನಡಿಯ ತೋರಿಸುವೆ 3 ಪದ್ಯ ಮತ್ತೇ ಮತ್ತೀಪರಿಯ ಒತ್ತಿ ಒದರಿದರೇನು ವ್ಯರ್ಥ ಬಾಲನು ಕಣ್ಣೆತ್ತಿ ನೋಡಲುವಲ್ಲ ಒತ್ತಿ ತೋಳುಗಳ್ಹಿಡಿದು ಎತ್ತಿನೋಡಿದನಾಗ ಯತ್ನದಿಂದಲ್ಲಿಯೆ ತಿತ್ತಿದಮ್ಮನೆ ದಣಿದು ಮತ್ತ ದೇವೇಂದ್ರ ಬಲು ಮೆತ್ತಗಾದ ವ್ಯರ್ಥ ಈ ಬಾಲಕನ ಎತ್ತಿ ನಗೆಗೀಡು ಈವತ್ತು ಆಯಿತು ಎಂದು ವೃತ್ರಾರಿ ತಾ ಮುಂದೆ ಅತ್ಯಂತ ಕೋಪದಲಿ ಎತ್ತಿದನು ವಜ್ರವನು ಎತ್ತಿದಾ ಕೈಬರದೆ ಮತ್ತಲ್ಲಿ ನಿಂತಿಹುದು ಚಿತ್ರದಲ್ಲಿಯ ಗೊಂಬೆ ಹಸ್ತದಂತೆ 1 ಪದ ಆಯಿತು ಈ ಪರಿಯು ದೇಹಕೆ ಆಯಾಸವೇ ಸರಿಯ ಪ ಮತ್ತೆ ಅಗ್ನಿಯು ಅಲ್ಲೆ ಬಾಲನ ಎತ್ತದೆ ದಣಿವುತಲೆ ಶಕ್ತಿ ಎತ್ತಿದ ಮೇಲೆ ಮತ್ತಾ ಶಕ್ತಿ ನಿಂತಿತು ಅಲ್ಲೆ1 ದಂಡಧರನು ಆಗ ಯೆತ್ತದೆ ಭಂಡಾದನು ಬೇಗ ದಂಡ ನೆತ್ತಿದನಾಗ ಎತ್ತಿದ ದಂಡ ನಿಂತಿತುಹಾಗೆ 2 ಮತ್ತೆ ನೈರತಿ ಅಲ್ಲೆ ಬಾಲನ ಎತ್ತದೆ ದಣಿವುತಲೆ ಕತ್ತಿಯೆತ್ತಿದ ಮೇಲೆ ಮುಂದಾ ಕತ್ತಿನಿಂತಿತು ಅಲ್ಲೆ 3 ಪಾಶಧರನು ಆಗ ಬಹು ಕಾಸೋಸಿ ಬಿಟ್ಟು ಬೇಗ ಪಾಶವೆತ್ತಿದನಾಗ ಮುಂದಾ ಪಾಶನಿಂತಿತು ಹಾಗೆ 4 ವಾಯು ಬಂದನಲ್ಲೆ ಬಳಲಿದ ಕಾಯಕ್ಲೇಶದಲ್ಲೆ ಕಯ್ಯನೆತ್ತಿದ ಮೇಲೆ ಮತ್ತಾಕೈಯು ನಿಂತಿತು ಅಲ್ಲೆ 5 ಸತ್ವರ ಬರವುತಲೆ ಕುಬೇರ ನಿಸ್ಸತ್ವನಾದನಲ್ಲೆ ಶಸ್ತ್ರಯೆತ್ತಿದ ಮೇಲೆ ಮುಂದಾ ಶಸ್ತ್ರ ನಿಂತಿತು ಅಲ್ಲೆ 6 ಶೂಲಧರನು ಅಲ್ಲೆ ಮತ್ತಾ ಬಾಲನಯೆತ್ತದಲೆ ಶೂಲನೆತ್ತಿದ ಮೇಲೆ ಮುಂದಾಶೂಲ ನಿಂತಿತು ಅಲ್ಲೆ7 ಬುಧಜನಕನು ಅಲ್ಲೆಬರವುತ ಗದಗದ ನಡುಗುತಲೆ ಗದೆಯನೆತ್ತಿದ ಮೇಲೆ ಮುಂದಾಗದೆಯು ನಿಂತಿತು ಅಲ್ಲೆ8 ಗೋಣನಲ್ಲಾಡುವ ತಲೆಯತ್ತಿದ ಹರಿ ತಾನು ಚಕ್ರವು ಮೇಲೆಖೂನದಿ ಅದು ಅಲ್ಲೆ ಆಯಿತು ಗೋಣವು ತಿರುವುತಲೆ 9 ಅಲ್ಲೆ ಪೂಷಣ ಬೇಗ ಕರಕರ ಹಲ್ಲು ತಿಂದನಾಗ ಹಲ್ಲು ಬಿದ್ದವಾಗ ತೋರಿದ ಎಲ್ಲ ದೇವತೆಗಳಿಗೆ 10 ಕೂಸನೆತ್ತದಾಗಿ ಎಲ್ಲರು ಮೋಸವಾದರು ಹೋಗಿ ಆ ಸ್ವಯಂವರಕಾಗಿ ಅನಂತಾದ್ರೀಶನ ಸಹಿತಾಗಿ 11 ಪದ್ಯ ಅಂಬುಜೋದ್ಭವ ತಾನು ಸ್ತಂಭಿತಾಗಿಸುರ ಕ ದಂಬವನು ಕಾಣುತಲೆ ಸಾಂಬನ ಮಹಿಮೆಯಿದು ಅಂಬಿಕೆಯ ತೊಡೆಯ ತಲೆಗಿಂಬು ಮಾಡಿಹ ಬಾಲ ಸಾಂಬನಿವನಹದೆಂದು ಸಂಭವಿಸಿದಾಗ ನಂಬಿ ಸ್ತುತಿ ಮಾಡಿದನು ಸ್ತಂಭೀತರು ಎಂದೆನಿಸಿ ಕೊಂಬುವರು ಎಲ್ಲಾರು ನಂಬಿ ಸ್ತುತಿಸಿದರು ಆ ಸಾಂಬಗೀಪರಿಯು ಪದ ಸಾಂಬಸದಾಸಿವನೆ ರಕ್ಷಿಸು ಬಾಲಕನೇ ಸಾಂಬಸದಾಶಿವನೆಂಬುವ ಬಾಲಕ ನೆಂಬುವದರಿಯದೆ ಸ್ತಂಭಿತರಾದೆವು ನಂಬಿಗೆ ತಿಳಿಯದೆ ನಂಬಿದೆವೋ ಜಗ ದಂಬೆಯ ತೊಡೆ ತಲೆ ಗಿಂಬು ಇಟ್ಟವನೆ ಪ ಪಟುತರನಾದಂಥವನೆ ತಿಳಿಯದೋ ನಿನ್ನ ಘಟಿತ ಘಟನೆ ಹರನೆ ಸ್ಫಟಿಕ ಸನ್ನಿಭ ಧೂರ್ಜಟಿಯೆ ನಿನಗೆ ಸಂ ಘಟಿತಳಾದ ಈ ಕುಟಿಲ ಕುಂತಳೆಯು ಹಟದಲಿ ಗೆಲವುದುವ ಹಟವೊಂದಿದು ಈ ಸ್ಪುಟವಾಯಿತು ಸಂಕಟ ಪರಿಹರಿಸು 1 ಸರ್ವರನೆಲ್ಲಾ ತರಿಸಿ ಸರಸ ಮಾಡಿದೆಯೊ ಗರ್ವವ ಪರಿಹರಿಸಿ ಉರ್ವಿಯೊಳಗೆ ನಿನಗಿರ್ವರಾರು ಸರಿ ಸರ್ವರನ್ನು ಮೀರಿರುವ ದೇವನೆ ಸರ್ವಪ್ರಕಾರದಿ ಸರ್ವರ ಅವಯವ ಪೂರ್ವದಂತಾಗಲಿ ಪಾರ್ವತಿಪ್ರಿಯನೇ 2 ಭೋ ಶಿಶುವರ ರೂಪ ಬೇಗನೆ ಬಿಡು ಈ ಸಮಯಕ್ಕೆ ಕೋಪ ಈ ಶಶಿವದನೆಯ ಆಶೆಗೆ ವ್ಯರ್ಥದಿ ಮೋಸಹೋಗಿ ಕಾಸೋಸಿ ಬಟ್ಟೆವು ಘಾತಿ ಮಾಡಬೇಡಾಸೆಯ ಪೂರಿಸು ಶ್ರೀ ಅನಂತಾದ್ರೀಶ ಪ್ರಿಯನೆ 3 ಪದ್ಯ ವಿರಳಾಟ ಈ ಸ್ತುತಿಗೆ ಮರುಳಾಗಿ ತಾನು ಗರಳ ಗೊರಲಿಸಾ ಮೂರುತಿಯ ಸರಳ ಮಾಡೆಲ್ಲವರು ಗುರುಳು ಗೂದಲದವ ಸರಳಾದವ ತೊಡೆಯಲ್ಲಿ ಹೊರಳೆದ್ದು ತೋರಿಸಿದ ಸರಳ ನಿಜರೂಪ ವಿರಳೆ ನೋಟದಲಿರುವ ತರಳೆ ಆ ಪಾರ್ವತಿಯು ಹೊರಳಿ ನೋಡುತಲೆದ್ದು ಹರಳಿನುಂಗರ ಕೈಯ್ಯ ಹೆರಳಿನೊಳಗಿರುವಂಥ ಅರಳಿದ್ಹೂವಿನ ದಿವ್ಯ ಸರಳ ಮಾಲೆಯ ಅವನ ಕೊರಳಿಗ್ಹಾಕಿದಳು 1 ಗಂಭೀರ ವಾದ್ಯಗಳೇಳು ಸಾರಿ ನುಡಿದವು ಆಗ ಸಾವಿರಬುಧರ ಎಲ್ಲ ವೃಷ್ಟಿಸೂರಿಮಾಡಿದರು ಚಾರ್ವನಂತಾದ್ರಿಯಲ್ಲಿರುವ ದೇವನ ಬಿಟ್ಟು ಸಾರ ಪರಮೇಶ್ವರಗೆ ಹಾರ ಹಾಕುವೆನೆಂಬ ಪಾರ್ವತಿಯ ಅಭಿಲಾಷೆ ಪೂರ್ಣವಾದಲ್ಲೆ ಸಂಪೂರ್ಣ ಸಾಂಬ ಮೂರುತಿಯ ದಯೆಯಿಂದ ಮೂರು ಅಧ್ಯಾಯ
--------------
ಅನಂತಾದ್ರೀಶ - ಕಥನಕಾವ್ಯಗಳು
ಏಕೆ ಮರೆದಿದ್ದೆನಯ್ಯಾ ಎನ್ನೊಳು ನಾ ಗೋಪಾಲಶ್ರೀಕಾಂತ ನಿನ್ನ ಪಾದದ ಚಿಂತೆಯ ಬಿಟ್ಟಜ್ಞನಾಗಿ ಪಕಾಯವೆ ಸತ್ಯವಿದೆಂದು ಕಾಣದೆ ನಾನಿಲ್ಲಿ ಬಂದುಮಾಯೆಗೊಳಗಾಗಿ ನಿಂದು ಮತ್ತರ ಸಂಗದಿನೊಂದುಜಾಯೆ ಸುತರ್ಗತಿಯೆಂದು ಧ್ಯಾನಿಸಿ ದುಃಖದಿನೊಂದುಬಾಯ ಬಡುಕರೊಳ್ನಿಂದು ಬನ್ನಬಟ್ಟುಳಿಸೆಂದು 1ಆಶೆಗಳಿಗೊಳಗಾಗಿ ಆನಂದಮಾರ್ಗವ ನೀಗಿವಾಸನೆಗಳಿಂದ ಪೋಗಿ ವಾದಿಸುತಲಿ ಚೆನ್ನಾಗಿಮೋಸಹೋಗಿ ಮುಖಬಾಗಿ ಘಾಸಿಯಾಗಿ ಗುಣಪೋಗಿಕಾಸು ವೀಸಾ ಧಾನ್ಯಕಾಗಿ ದಾಸನಾಗಿ ಪರರಿಗೆ 2ಎಲ್ಲರೊಳುವಾದಗಳವಾಡಿ ಬಲ್ಲವನಂದದಿ ಕಾಡಿಖುಲ್ಲರಾ ಮಾರ್ಗವ ಕೂಡಿ ಕೂಳಿಲ್ಲದಿಲ್ಲಿಗೆ ಬಾಡಿತಲ್ಲಣದೊಳಗೋಲಾಡಿ ತಬ್ಬಿಬ್ಬೊ ಕರ್ಮವ ಮಾಡಿಕಲ್ಲೆದೆಯನನೆನ್ನನು ಕಾಯಬೇಕು ಗೋಪಾಲಾರ್ಯ 3
--------------
ಗೋಪಾಲಾರ್ಯರು
ಕಾಮನುಜ ಸುರಸೋಮ ಶತ್ರುವಿನಾಯಕ ಪರಿಪಾಲಿಸೊ ಪ ಕಾಲ ಎನಗೊಂದು ಕ್ವಾರಿ ಕರಿಮುಖ ತೋರಿದಿ ನೀಅ.ಪ. ಪಾದ ಹೊಂದಿಸಿ 1 ಭಾಸದಿಂದಲಿ ವಿಷ ಧರಿಸಿ ಆ-ಭಾಸತನದಲಿ ದಾಸನೆನಿಸಿ ಕಾಸು ಕಾಸಿಗೆ ಮೋಸಹೋಗಿ ವಿಶೇಷ ಮಮಕರ ಪಾಶ ಕ್ಷಳಿಸಿದೆ 2 ಚಾರು ಇಂದು ಪೊರೆಯೋಕಂಬುಕಂಧರ ಶಾಮಸುಂದರ ತಾತನೆನಿಸುವ ತಂದೆವರದಗೋಪಾಲವಿಠಲನ ಪ್ರೇಮ ಪಾತ್ರನೆ 3
--------------
ತಂದೆವರದಗೋಪಾಲವಿಠಲರು
ಯುಕ್ತಿಯಿಂದ ಭಕ್ತಿ ಮಾಡಲಿಕ್ಕೆ ಶಕ್ತನಲ್ಲ ನಾ ಮುಕ್ತಿಯೋಗ್ಯ ಮಾಡೊ ಭಾವಭೋಕ್ತ ಕೃಪಾನಿಧೆ ಧ್ರುವ ಧ್ಯಾನ ಮೌನ ಸ್ನಾನ ಸಂಧ್ಯಾಖೂನ ಗುರುತು ಅರಿಯೆ ನಾ ನ್ಯೂನ ಪೂರ್ಣ ನೋಡದೆನ್ನ ರಕ್ಷಿಸೋ ದಯಾನಿಧೆ 1 ಹೀನ ದೀನ ಜ್ಞಾನಶೂನ್ಯ ದಾನ ಧರ್ಮ ಅರಿಯೆ ನಾ ನೀನೆ ಕಾಯಬೇಕು ಎನ್ನ ಕರುಣಾ ಕೃಪಾನಿಧೆ 2 ದುರುಳ ದುರ್ವಾಸನೆಯ ದುರಾಚಾರಿ ದುರಾತ್ಮ ನಾ ತರಣೋಪಾಯ ದೋರಿಸೆನ್ನ ಹೊರಿಯೊ ದಯಾನಿಧೆ 3 ಅರುಹು ಕುರುಹು ನರಿಯ ದೀಹ್ಯ ಮರುಳಮಂಕ ತರಳನಾ ಕರವ ಪಿಡಿಯ ಧರೆಯೊಳಿನ್ನು ತಾರಿಸೊ ದಯಾನಿಧೆ 4 ಆಶಾಪಾಶದೊಳು ವಾಸವಾದ ದೋಷ ರಾಶಿ ನಾ ಭಾಸಿ ಪಾಲಿಸು ಪುಣ್ಯ ಪ್ರಕಾಶಿಸೊ ದಯಾನಿಧೆ 5 ಏಸು ಜನ್ಮ ಮೋಸಹೋಗಿ ಘಾಸಿಯಾದ ಜೀವ ನಾ ದಾಸರೊಡನೆ ಕೂಡಿಸೊ ಭಾಸ್ಕರ ದಯಾನಿಧೆ 6
--------------
ಕಾಖಂಡಕಿ ಶ್ರೀ ಮಹಿಪತಿರಾಯರು