ಹಸಿವಾಗುತಿದೆಯೆನೆಗೆ ಬಸವಳಿದೆನೆ ಹೀಗೆ ಪ.
ಹಸಿವು ಹೆಚ್ಚಿತು ಅಕಟಾ ತೃಷೆಯಿಂದೆನಗತಿಕಾಟ
ಪುಸಿಯಲ್ಲಿದು ಒಣಗಿದ ಕಾಷ್ಟಂ ಅ.ಪ.
ಅಂಗಜ ಜನಕ ಶ್ರೀರಂಗನಾಯಕ ನಿಮ್ಮ
ಸಂಗತಾಪದಿಂ ತಪಿಸುತಲಿ 1
ವಾಸುದೇವನೆ ನಿಮ್ಮ ಸಾಸಿರ ನಾಮಾಮೃತವ
ಲೇಸಾಗಿ ಕುಡಿಯದೆ ಆಸೆಗೆ ಸಿಲುಕುತ
ಮೋಸವೋದೆನೋ ಮರುಳನಂದದಿ 2
[ಬಂದ] ಅರಿಯದ ಈ ಪಸುಳೆಯನು
ಪರಿಭಾವಿಸಿ ನೋಡಿನ್ನು ವರಶೇಷಗಿರಿದೊರೆ
ವರದ ನಿನ್ನಡಿದಾವರೆಗಾರಡಿಯಂತಿರಿಸೆನ್ನಂ3