ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಲ್ಲೆ ಉಂಟು ಮುಕುತಿ ನೋಡಿ ನೋಡಿ ಒಂದೆ ಮನದಲಿ ಸುಲಭವಾಗಿ ದೋರುತಿಹ್ಯದು ಗುರುಕರುಣದಲಿ ಧ್ರುವ ಏನುಹೇಳಲಿ ಸ್ವಾನುಭವ ಸುಖದ ಸಿದ್ಧಿಯ ಜ್ಞಾನಿಬಲ್ಲ ಭಾಸುತಿಹ್ಯ ಸ್ವಕೀಲ ಸಿದ್ಧಿಯ ಮನವ ಬಲಿದು ಮಾಡಿಕೊಳ್ಳಿ ಜ್ಞಾನಸಿದ್ಧಿಯ ತನುವಿನೊಳು ದೋರುತೀಹ್ಯ ಶ್ರೀಗುರು ಸುಧೆಯ 1 ನಿಟಿಲ ಭ್ರೂಮಧ್ಯ ದಾಟಿನೋಡಿ ಮುಕ್ತಿಯ ದಿಟವಾಗಿ ಕೂಡಿ ಪ್ರಭಯ ಜ್ಞಾನ ಶಕ್ತಿಯ ಕುಟಿಲವಲ್ಲ ಕೇಳಿ ಮಾತು ನಿಜಯುಕ್ತಿಯ ನಟನೆ ತನ್ನೊಳು ದೋರುವ ಗುರುಭಕ್ತಿಯ 2 ಲೇಸು ಲೇಸಾಯಿತು ಎನಗೆ ಭಾಸ್ಕರ ಕರುಣವು ಭಾಸುತಿಹ್ಯದು ವಾಸುದೇವನ ಪುಣ್ಯಚರಣವು ಮೋಸವಿಲ್ಲದೆ ನೀಗಿತು ಜೀವನ ಜನ್ಮಮರಣವುದಾಸ ಮಹಿಪತಿಗಾಯಿತು ಘನಸ್ಫುರಣವು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪರಸಿರಿಗೆ ಕರಗುತಿಹುದು ಸರಿಯೇ ಯೋಚಿಸು ಪ ಹರಿಯು ಕರುಣದಿಂದ ಕೊಟ್ಟ ಸಿರಿಗೆ ತೃಪ್ತನಾಗದÀಂತೆ ಅ.ಪ ಉರಗನ ನೆರಳಲ್ಲಿ ಕಪ್ಪೆಯು ಚಿರಕಾಲ ಜೀವಿಸುವುದೇ ಧರೆತಲದಲಿ ನರರ ಸಿರಿಯು ಸ್ಥಿರವಲ್ಲವೆಂದರಿಯದಂತೆ 1 ಹಲವು ಜನುಮಗಳ ಕರ್ಮದ ಫಲವನರಿತು ಮೋಸವಿಲ್ಲದೆ ನಳಿನನಾಭ ನಾರಾಯಣನೊಲಿದು ಕೊಡುವನೆಂದರಿಯದೆ 2 ಎನ್ನದೆಂದು ನಿನ್ನದೆಂದು ಖಿನ್ನನಾಗುವುದು ಸರಿಯೆ ಸನ್ನುತ ಪ್ರಸನ್ನ ಹರಿಯು ತನ್ನ ಭಾಗ್ಯವನರಿತು ನೀಡಲು 3
--------------
ವಿದ್ಯಾಪ್ರಸನ್ನತೀರ್ಥರು