ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೋಧ ಸದ್ಗುರು ಜಿತಮದನ ಪ ಬಾದರಾಯಣ ವೈದೇಹಿ ಚರಣಾಬ್ಜಾ ರಾಧಕ ನಮಿಪೆ ಸನ್ಮೋದವಿತ್ತು ಕಾಯೊ ಅ.ಪ. ಶ್ರೀ ಮಧ್ವ ಮತವಾರಿಧಿ ಸೋಮ | ದ್ವಿ ಜ ಸನ್ನುತ ಗುಣಧಾಮಾ ಕಾಮಿತಜನ ಕಲ್ಪಭೂಜ ವಿಬುಧ ಸು ಪ್ರೇಮ ಸಂಯಮಿಕುಲೋದ್ಧಾಮ ದಯಾಂಬುಧೇ ಗೋಮಿನೀವಲ್ಲಭನ ಪದಯುಗ ತಾಮರರಸಗಳನನುದಿನದಿ ಬಿಡ ದೇ ಮನಾಬ್ಜದಿ ಭಜಿಸುತಿಪ್ಪಮ ಹಾ ಮಹಿಮ ತುತಿಸಿಬಲ್ಲನೆ 1 ದೀನಜನರ ಬಂಧು ನಿನ್ನಾ | ಪಾದ ಕಾನೆರಗುವೆ ಸುಪ್ರಸನ್ನಾ ದಾನ ಮಾನಗಳಿಂದ ಜ್ಞಾನಿಜನರಿಗೆ ಮ ಹಾನಂದ ಬಡಿಸುತ ಸಾನುರಾಗದಿ ನಿತ್ಯಾ ಶ್ರೀ ನಿಕೇತನ ಪರಮ ಕಾರು ಣ್ಯ ನಿವಾಸ ಸ್ಥಾನನೆನಿಪ ಮ ಹಾನು ಭಾವ ಭಗವತ್ಪದಾಂಭೋ ಜಾನುಗರೊಳೆನ್ನೆಣಿಸಿ ಪಾಲಿಸು 2 ಸತ್ಯಪ್ರಿಯರ ಕರಕಮಲ | ಜಾತ ನಿತ್ಯ ನಿರ್ಜಿತ ಘೋರ ಶಮಲಾ ಚಿತ್ತಜಪಿತ ಜಗನ್ನಾಥ ವಿಠಲನ ಚಿತ್ತಾನುವರ್ತಿಗಳಾಗಿ ಸಂಚರಿಸುತಾ ಅತ್ಯಧಿಕ ಸಂತೋಷದಲಿ ಪ್ರತ್ಯರ್ಥಿಗಳಿಗುತ್ತರಿಸಿ ಮಿಗೆ ಪುರು ಷೋತ್ತಮನೆ ಪರನೆಂದು ಡಂಗುರ ವೆತ್ತಿ ಹೊಯ್ಸಿ ಕೃತಾರ್ಥನೆನಿಸಿದ 3
--------------
ಜಗನ್ನಾಥದಾಸರು
ಭೂತರಾಜನೆ ಕೇಳು ಯನ್ನ ಭಾವಿ ಲಿಖಿತಾವನ್ನು ಸೂಚಿಸು ಭವದಿ ಬಹು ಭೀತಿಗೊಳಿಪ ಭೌತಿಕ ಜೀವಿಗಳಾ ನೀ ದೂರಮಾಡಿ ಯನ್ನ ಗಾರುಮಾಡದೆ ಸಲಹಾಬೇಕುಕಾರುಣ್ಯ ನಿಧಿಯೇ ನಿನ್ನ ವನಜಪಾದದಲ್ಲಿ ನವವಿಧಾ ಭಕುತಿ ಕೊಟ್ಟು ನವನಿಧಿ ಚರಣ ಸರೋಜವನ್ನು ಹೃತ್ಸರಸೀದಾಲ್ಲ ಪೊಳೆವಂತೆ ಮಾಡೊಪಾಪಿ ಜನರ ತಾಪಾ ಸಹಿಸಲಾರೆನೋ ದೇವಾ ಶ್ವಾಸ ನಿಯಾಮಕ ಪ್ರೀಯಾ ಸ್ವಾದಿ ಪುರವಾಸಿ ತಂದೆವರದಗೋಪಾಲವಿಠ್ಠಲನ ದೂತಾ 1 ತಾಪ ದಾತ ಜನಕೆ ತಂದೆವರದ-ಗೋಪಾಲವಿಠ್ಠಲನ ನಿಲ್ಲಿಸುವಂತೆ ಕೃಪೆ ಮಾಡೈ 2 ನೀವಿ ಶಿಖಾಮಣಿ ತಂದೆವರದಗೋಪಾಲವಿಠಲನ ಆಪ್ತಾ 3 ದೂಷಿಯಾದವನ ನಿರ್ದೋಷ ಮಾಡುವಿ ದಾಸನೆಂದವನ ಪೋಷಿಸುವಿ ದೂಷಿಪರ ಘಾಸಿಗೊಳಿಸುವಿ ಹಂಸವಾಹನ ಪದ ಪೊಂದುವರ ಸಂಶಯಮಾಡದೆ ಸಮ್ಮೋದವಿತ್ತು ಸಲಹುವಿ ಶೂಲಧಾರಿಯೆ ನಿನ್ನ ಹಾಸಕೆ ನಮೋ ನಮೋಪಾಶದಿಂದ ಪಾಶಿಸಾದೆ ಸಲಹೋ ಪಾಶುಧರ ಪಾಲಾ ಪಶುಪತಿಯೋಗ್ಯಾ ಶಿರಹಾರ ಧಾರಿ ಮೃಗರಾಜ ಸೇವಕ ನದಿಧರಲಾಶಾಮಾನಿಲಯಾ ತಂದೆವರದಗೋಪಾಲವಿಠ್ಠಲನ ಪ್ರೀಯಾ 4 ಪರ ಕಾಮಿನೀಯಳ ಕಾಮುಕತನದಿಂದ ಕಾಮಿಸೇ ಕಾಮಾರಿಗಳೆಲ್ಲ ನೋಡಿ ಕಾಮಿಸುವರೈಕಾಮನಯ್ಯನಾ ಪ್ರೇಮದಿ ಕಾಂಬುವ ಯಾಮ ಯಾಮಕೆ ನಿನ್ನ ನಾಮ ಸ್ಮರಿಸುವಂತೆ ಮಾಡು ಕಾಮವಂದಿತ ತಂದೆವರದಗೋಪಾಲವಿಠ್ಠಲನ ತೋರೋ 5 ಜತೆ :ಭೀತಿಯಾ ಬಿಡಿಪಾ ದಾತಾನು ನೀನಯ್ಯ ಭೂತ ವಂದಿತ ತಂದೆವರದಗೋಪಾಲವಿಠಲನ ಭಜಕಾ 6
--------------
ತಂದೆವರದಗೋಪಾಲವಿಠಲರು
ವಾದಿರಾಜ ಅಸ್ಮದ್ಗುರು ವಾದಿರಾಜ ಪ ವಾದಿರಾಜ ತವ ಪಾದಕಮಲಕಭಿ ವಾದನ ಮಾಳ್ಪೆ ಸಮೋದವಿತ್ತು ಕಾಯೊ 1 ಸಾರಿದರಿಗೆ ಕಲ್ಪ ಭೂರುಹ ದಂತೆ ಮ ನೋರಥ ಸಲಿಸುವ ಸೂರಿಗಳರಸೇ 2 ಭೇದ ಪಂಚಕವನು ಸಾಧಿಸಿ ಕುಮತಕು ವಾದಿಗರ್ವಾದ್ರಿ ವಿಭೇದನ ಗೈದೆ 3 ದೇಶಿಕವರ್ಯ ವಾಗೀಶ ಕುವರನೆ ಕ್ಲೇಶ ಹರಿಸು ಅಘನಾಶ ಗೈದು 4 ಸಿರಿ ಜಗನ್ನಾಥವಿಠಲನ ಸುಗುಣಗಳನುದಿನ ಪೊಗಳಿ ಹಿಗ್ಗುವೊ 5
--------------
ಜಗನ್ನಾಥದಾಸರು
ಶರಣು ಗಜಾನನನೆ ಶರಣು ಲಂಬೋದರನೆ ಶರಣು ಪಾರ್ವತಿ ಪುತ್ರ ಶುಭಗಾತ್ರ ಪ ಆದಿಯಲಿ ನಿನ್ನ ಪಾದಭಜನೆಯ ಮಾಡೆ ಸಾದರದಿ ಸಲಹುವೆ ಮೋದವಿತ್ತು ಮೇದಿನಿಯಲಿ ನಿನ್ನಾರಾಧನೆಯ ಮಾಡದವ ನ- ರಾಧಮನೆನಿಸುವನಿದು ಪುಸಿಯಲ್ಲ 1 ಆಖುವಾಹನನೆ ನೀ ಕಳೆ ವಿಘ್ನಗಳ ಸಾಕು ಲಾಲಿಸೆನ್ನ ಏಕದಂತ ಮಣಿ ಭೂಷಣ ಕಾಕುಜನ ಕುಠಾರ ಲೋಕೈಕ ವೀರ 2 ಸಿತಿಕಂಠ ವರಪುತ್ರ ಪ್ರತಿ ವಾಸರವು ನಾ ನುತಿಸಿ ಬೇಡುವೆ ನಿನ್ನ ಸತಿರಹಿತನೇ ಸಿರಿ ರಂಗೇಶವಿಠಲನ ಅತಿಪ್ರೀತಿಯಿಂದ ಭಜಿಪ ಮತಿಯ ನೀಡೋ 3
--------------
ರಂಗೇಶವಿಠಲದಾಸರು