ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಸಾಗರ ಸಂಭೂತೆ ಕೈವಲ್ಯದಾತೆ ಪಾಲಿಸೆನ್ನನು ನಿಜಮಾತೆ ಪ ಆಲಿಸು ನಿನ್ನಯ ಬಾಲನ ನುಡಿ ಈ ಕಾಲದಿ ಮನ್ಮನ ಆಲಯದೊಳು ನಿಂದು ಅ.ಪ ನಿತ್ಯ ನಿರ್ಮಲೆ ಈ ಮಹಾಮಹಿಮ ವಿಶಾಲೆ ಕಾಮನ ಜನನಿ ಸುಲೀಲೆ ಜಲಜಸುಮಾಲೇ ತಾಮರಸಾಂಬಕೆ ಸಾಮಜಭವ ಸು - ತ್ರಾಮ ಪ್ರಮುಖ ಸುರಸ್ತೋಮ ನಮಿತಗುಣ - ಪಾದ ಯಾಮ ಯಾಮಕೆ ನಿತ್ಯ ನೇಮದಿ ಭಜಿಪೆ ಶ್ರೀರಾಮನ ತೋರೆ 1 ವೇದಾಭಿಮಾನಿ ಅಂಬ್ರಾಣಿ ಸುಗಣಸನ್ಮಣಿ ವೇದವತಿಯೆ ರುಕ್ಮಿಣಿ ವೇದವಂದ್ಯಳೆ ಗುಣಪೂರ್ಣೇ ನಿತ್ಯಕಲ್ಯಾಣಿ ಖೇದಗೊಳಿಸುವ ಭವೋದಧಿ ದಾಟಿಸಿ ಮೋದ ಕೊಡುವ ಪಂಚಭೇದಮತಿಯನಿತ್ತು ಯಾದವಗುಣವನುವಾದ ಮಾಡಿಸಿ ನಿತ್ಯ ಮೋದಬಡಿಸು ಶ್ರೀ ಮಾಧವರಾಣಿ 2 ಜಾತರೂಪಾಭಾಶುಭಗಾತ್ರಿ ಈ ಜಗಕೆ ಧಾತ್ರಿ ಸೀತೆ ನೀನೆ ಲೋಕಪವಿತ್ರೆ ಧಾತಾಪ್ರಮುಖಸುರಸ್ತೋತ್ರೇ ನೀರಜನೇತ್ರೆ ವೀತಭಯಳೆ ತ್ರಿನೇತ್ರೇ ಪಾತಕವನಕುಲವಿತಿಹೋತ್ರ ಸುರ - ವಿನುತ ಸುಖವ್ರಾತ ಕೊಡುವ ನಮ್ಮ ದಾತ ಗುರುಜಗನ್ನಾಥವಿಠಲಗೆ ನೀ ನೀತಸತಿಯೆ ಎನ್ನ ಮಾತೆ ವಿಖ್ಯಾತೆ3
--------------
ಗುರುಜಗನ್ನಾಥದಾಸರು
ಮನೆಯ ನಿರ್ಮಲಗೈದು ಮೋದಬಡಿಸುವುದು ವನಜನಾಭನ ಭಕ್ತಿಯಂಬವಳ ಬಿರಿದು ಪ. ಬಾಯಿಮೊದಲಾದೈದು ಬಾಗಿಲುಗಳಲ್ಲಿ ವಾಯುವಂದ್ಯನ ಚರಿತ ವರ್ಣನಾದಿಗಳಾ ಛಾಯಗೊಂಬುವ ತೆರದಿ ಚಿತ್ರಕೃತ್ಯವನೂ ನಿತ್ಯ ನಲಿವುದನು 1 ಬುದ್ಧಿ ದೀಪವನು ಬಹು ಶುದ್ಧಕನು ತಾ ತದ್ದಾರಿ ಮನವ ಮೇಲುದ್ಧರಿಸಿಕೊಳುತಾ ಸಿದ್ಧಗಮ್ಯನ ಪದಕೆ ಸರಿಯಾಗಿಸುತಾ ಬದ್ಧ ಬೊಗಳುತಾ ಜನರ ಬಾಯಿ ಮುಚ್ಚಿಸುತಾ 2 ದೋಷ ದುಷ್ಕøತ ಕೆಸರ ಲೇಶವಿಡಗೊಡಳು ಆಶೆಯೆಂಬುವ ಬಲೆಯ ಕೊೈಸಿ ಬಿಸುಟುವಳು ಈಶ ಮಾನಿತ್ವಕವಕಾಶವೇನಿಡಳು ಕೇಶವನ ಕರತಂದು ಕಾವಲಿರಿಸುವಳು 3 ಇವಳಾಶ್ರಯವ ಪೊಂದಲ್ಯಾರಭಯವಿಲ್ಲ ನವರೂಪಳನ್ನುಸರಿಸಿ ನಲಿವ ಸಿರಿನಲ್ಲ ತವಕದಿಂದಲಿ ತಾನೆ ಓಡಿ ಬಂದೆಲ್ಲಾ ಯುವತಿಯರ ಕೂಡಿ ತಾ ಪಾಡುವರೆ ಬಲ್ಲಾ 4 ಕಂಜನಾಭನ ಕರುಣ ಪಂಜರದೊಳಿರಿಸಿ ಸಂಜೀವನೌಷಧವ ಸುಲಭದೋಳ್ ಕುಡಿಸಿ ಅಂಜಿಕೆಯ ಬಿಡಿಸಿ ರಿಪು ಪುಂಜವನ ಕಡಿಸಿ ಮಂಜುಳಾತ್ಮಕ ಮಾಧವನ ಮುಂದೆ ಕರಿಸಿ 5 ದಾನ ವ್ರತಾದಿಗಳನೇನ ಮಾಡಿದರು ಶ್ರೀನಿವಾಸನ ಕರುಣ ಸಾಧ್ಯವಾಗಿರದು ನೀನೆ ರಕ್ಷಕನೆಂಬ ಧ್ಯಾನದಲಿ ಮೆರದು ಜ್ಞಾನ ಭಕ್ತಿಗಳಿಂದ ನಲಿವುದೇ ಬಿರುದು 6 ಯುಕ್ತಿಯಿಂದಲಿ ನೋಡಲೆಲ್ಲ ಶಾಸ್ತ್ರದಲಿ ಭಕ್ತಿಯೋಗವ ಪೇಳ್ವವೇಕಮತ್ಯದಲಿ ಭುಕ್ತಿ ಮುಕ್ತಿಯ ಶೇಷ ಭೂಧರೇಶನಲಾ ಸಕ್ತಿಯಿರೆ ಸಕಲಾರ್ಥವೀವನುತ್ಸವದಿ 7
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀ ರಾಘವೇಂದ್ರರು ರಾಘವೇಂದ್ರ ಗುರುರಾಯರ ಸೇವಿಸಿರೊ ಸೌಖ್ಯದಿ ಜೀವಿಸಿರೊ ಪ ವಾಸೋತ್ತುಂಗಾ ತೀರದಲ್ಲೆ ನಿಂತು ವಸುಧೆಯೊಳು ಬಂದು ಅ.ಪ. ಕರ ಸರೋಜ ಸಂಜಾತ ವಸುಧೆಯೊಳು ಪುನೀತಾ ದಾಶರಥಿಯ ದಾಸತ್ವವ ತಾನೂಹಿಸಿ ದುರ್ಮತಿಗಳ ಜಯಿಸಿ ತ್ಯಜಿಸಿ ಈ ಸಮೀರಮತ ಸಂಸ್ಥಾಪಕರಾಗಿ ನಿಂದಕರನು ನೀಗಿ ಭೂಸುರರಿಗೆ ಸಂಸೇವಸಹಾಚರಣೀ ಕಂಗೊಳಿಸುವ ಕರುಣಿ 1 ಕುಂದದೆ ವರ ಮಂತ್ರಾಲಯದಲ್ಲಿರುವಾ ಕರೆದಲ್ಲಿಗೆ ಬರುವಾ ಸಂದರುಶನದಿಂದಲಿ ಮಹತ್ಪಾಪ ಪರಿದೋಡಿಸಲಾಪಾ ವೃಂದಾವನ ಮೃತ್ತಿಕೆ ಜಲಪಾನ ಮುಕ್ತಿಗೆ ಸೋಪಾನ ಮಂದ ಭಾಗ್ಯರಿಗೆ ದೊರೆಯದಿವರ ಸೇವಾ ಶರಣರ ಸಂಜೀವಾ 2 ಶ್ರೀದವಿಠ್ಠಲನ ಸನ್ನಿಧಾನ ಪಾತ್ರಾ ಸಂಸ್ತುತಿಸಿದ ಮಾತ್ರಾ ಮೋದಬಡಿಸುವ ತಾನಿಹಪರದಲ್ಲಿ ಈತಗೆ ಸಮರೆಲ್ಲಿ ಮೇದಿನಿಯೊಳಗಿನ್ನರಸಲು ಕಾಣೆ ಪುಸಿಯಿಲ್ಲೆನ್ನಾಣೆ ಪಾದಸ್ಮರಣೆ ಮಾಡದವನೆ ಪಾಪಿ ನಾ ಪೇಳ್ವೆನು 3
--------------
ಶ್ರೀದವಿಠಲರು